ಟಿ20 ವಿಶ್ವಕಪ್‌ನಲ್ಲಿ ಅಡಗಿದೆ ರೋಹಿತ್, ಕೊಹ್ಲಿ, ಅಶ್ವಿನ್ ಭವಿಷ್ಯ
Team Udayavani, Oct 21, 2022, 6:00 AM IST
ಅ.23ರಂದು ಭಾರತ ಕ್ರಿಕೆಟ್ ತಂಡ ಪಾಕಿಸ್ತಾನವನ್ನು ಮೆಲ್ಬರ್ನ್ ಮೈದಾನದಲ್ಲಿ ಎದುರಿಸಲಿದೆ. 2007ರ ನಂತರ ಮತ್ತೂಮ್ಮೆ ಟಿ20 ವಿಶ್ವಕಪ್ ಗೆಲ್ಲಲು ರೋಹಿತ್ ಶರ್ಮ ನಾಯಕತ್ವದ ಭಾರತ ಇಲ್ಲಿಂದ ಯತ್ನ ಆರಂ ಭಿಸಲಿದೆ. ಒಂದು ವೇಳೆ ಇಲ್ಲಿ ಭಾರತ ಶುಭಾರಂಭ ಮಾಡಿದರೆ, ವಿಶ್ವಕಪ್ ಗೆಲ್ಲುವ ಉಮೇದಿಗೆ ಭರ್ಜರಿ ಶಕ್ತಿ ಸಿಗುತ್ತದೆ. ಸೂಪರ್ 12 ಹಂತ ಅ.22ರಿಂದ ಶುರುವಾಗಲಿದೆ. ಈ ಹಂತದಲ್ಲಿ ಭಾರತ ತಂಡ ಪಾಕಿಸ್ತಾನವಲ್ಲದೇ, ದ.ಆಫ್ರಿಕಾ, ಬಾಂಗ್ಲಾದೇಶ ಮತ್ತು ಮೊದಲ ಹಂತದಿಂದ ಮೇಲೇರಿ ಬಂದ ಎರಡು ತಂಡಗಳೊಂದಿಗೆ ಸೆಣೆಸಲಿದೆ. ಸದ್ಯ ಭಾರತಕ್ಕೆ ಪಾಕ್, ಆಫ್ರಿಕಾ, ಬಾಂಗ್ಲಾಗಳಿಂದ ಪ್ರಬಲ ಪ್ರತಿಸ್ಪರ್ಧೆಯಿದೆ.
ಹಾಗೆ ನೋಡಿದರೆ ಈ ಗುಂಪಿನಲ್ಲಿ ಭಾರತವೇ ಬಲಿಷ್ಠ ತಂಡ. ಉಳಿದ ಸ್ಥಾನಗಳಲ್ಲಿ ಪಾಕಿಸ್ತಾನ, ದ.ಆಫ್ರಿಕಾ ಇವೆ. ಇದು ಈಗಿನ ಲೆಕ್ಕಾಚಾರ ಮಾತ್ರ. ವಿಶ್ವಕಪ್ ಶುರುವಾದ ನಂತರ ಎಲ್ಲ ತಂಡಗಳು ಬೇರೆಯದ್ದೇ ಆದ ರೂಪ, ಚೈತನ್ಯವನ್ನು ಪಡೆಯುತ್ತವೆ. ಆ ಲೆಕ್ಕಾಚಾರಗಳನ್ನು ನಾವಿಲ್ಲಿ ಊಹಿ ಸಲೂ ಸಾಧ್ಯವಿಲ್ಲ. ಯಾವುದೋ ಸಂಗತಿ ನಿರ್ದಿಷ್ಟ ತಂಡವೊಂದಕ್ಕೆ ಪ್ರೋತ್ಸಾ ಹಕ ವಾಗಿ ಬದಲಾಗಿರುತ್ತದೆ. ಆದ್ದರಿಂದ ಭಾರತ ಪೂರ್ಣ ಎಚ್ಚರ ವಾಗಿಯೇ ಪ್ರತೀ ಪಂದ್ಯದಲ್ಲಿ ಕಣಕ್ಕಿಳಿಯಬೇಕು. ಎದುರಾಳಿಯನ್ನು ಒಮ್ಮೆಯೂ ಕಡೆಗಣಿಸುವುದು ಸಾಧ್ಯವೇ ಇಲ್ಲ. ಯಾರು ನೆಲಕ್ಕೆ ಬೀಳಿಸು ತ್ತಾರೆಂದು ಟಿ20 ಮಾದರಿಯಲ್ಲಿ ಅಂದಾಜಿಸುವುದಕ್ಕೆ ಸಾಧ್ಯವಿಲ್ಲ. ಕೆಲವೇ ಓವರ್‌ಗಳಲ್ಲಿ ಪಂದ್ಯದ ಚಿತ್ರಣವೇ ಬದಲಾಗುವುದು ಟಿ20 ಪಂದ್ಯಗಳ ಶಕ್ತಿ.
ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಸೂರ್ಯ ಕುಮಾರ್, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ ಇರುವ ಭಾರತ ತಂಡ ವನ್ನು ಬಲಿಷ್ಠ ಎನ್ನಲೇಬೇಕು. ಹಾಗೆಯೇ ಇಲ್ಲಿರುವ ಸಮಸ್ಯೆಗಳನ್ನೂ ನಾವು ಮನಗಾಣಬೇಕು. ಕೊಹ್ಲಿ, ರೋಹಿತ್, ರಾಹುಲ್ ಇತ್ತೀಚೆಗೆ ಲಯಕ್ಕೆ ಮರಳಿದ್ದರೂ, ಅವರು ಹಿಂದಿನಂತೆ ಆರ್ಭಟಿಸುತ್ತಿಲ್ಲ ಎನ್ನುವು ದಂತೂ ಸ್ಪಷ್ಟ. ಈ ಪೈಕಿ ನವೋತ್ಸಾಹದಿಂದ ಪುಟಿಯುತ್ತಿರುವುದು ಸೂ ರ್ಯ ಕುಮಾರ್ ಮಾತ್ರ. ವೇಗಿ ಜಸಿøàತ್ ಬುಮ್ರಾ ಗೈರಿನಲ್ಲಿ ಮೊಹ ಮ್ಮದ್ ಶಮಿ ಬೌಲಿಂಗ್ ಮೇಲೆ ಇಡೀ ತಂಡ ಅವಲಂಬಿತವಾಗಿದೆ! ಹಾಗಾಗಿ ಶಮಿ ಬೌಲಿಂಗ್‌ನಲ್ಲಿ ಪೂರ್ಣ ಭಾರವನ್ನು ಹೊರಲೇಬೇಕಾಗಿದೆ. ಇವರಿಗೆ ವೇಗಿ ಭುವನೇಶ್ವರ್, ಸ್ಪಿನ್ನರ್‌ಗಳಾದ ಚಹಲ್, ಅಶ್ವಿನ್ ನೆರವು ನೀಡಬೇಕಾಗಿದೆ.
ಇವರೆಲ್ಲ ಒಂದಾಗಿ ತಮ್ಮ ಸಾಮರ್ಥ್ಯವನ್ನು ತೋರಿದರೆ ಭಾರತದ ಅಶ್ವಮೇಧವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಅದಾಗ ಬೇಕಿರುವುದು ಜರೂರು. ಇನ್ನು ಟಿ20 ವಿಶ್ವಕಪ್ ಎಷ್ಟರಮಟ್ಟಿಗೆ ಪ್ರೇಕ್ಷಕರನ್ನು ಸೆಳೆಯಲಿದೆ ಎಂದು ನೋಡಬೇಕಿದೆ. ಇತ್ತೀಚೆಗೆ ಕ್ರಿಕೆಟ್ ದಿನಂಪ್ರತೀ ನಡೆಯುತ್ತಿರುವುದರಿಂದ, ಹಿಂದಿನ ರೋಚಕತೆ, ನಿರೀಕ್ಷೆ, ಕಾತುರ ಉಳಿದುಕೊಂಡಿಲ್ಲ. ಹಾಗೆಯೇ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸು ವುದು ಈಗ ಬಹಳ ಸುಲಭ. ಅದಕ್ಕಾಗಿ ಟೀವಿಯನ್ನೇ ಕಾಯಬೇಕು ಎಂದೇನಿಲ್ಲ. ಆ್ಯಪ್‌ಗಳಲ್ಲೂ ನೇರಪ್ರಸಾರವಾಗುವುದರಿಂದ ನಾವು ಕೂತಲ್ಲಿ, ಬೇಕಾದಲ್ಲಿ ನೋಡಬಹುದು. ಹಿಂದಿನಂತೆ ಕ್ರಿಕೆಟ್ ಪಂದ್ಯವಿದ್ದಾಗ ಜನ ಗುಂಪಾಗಿ ರಾಶಿಬೀಳುವ ದೃಶ್ಯಗಳು ಈಗ ಕಾಣುವುದಿಲ್ಲ.
ಅದೇನೇ ಇರಲಿ. ಈ ಕೂಟದಲ್ಲಿ ಭಾರತ ನೀಡುವ ಪ್ರದರ್ಶನದ ಮೇಲೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಆರ್.ಅಶ್ವಿನ್‌ರಂತಹವರ ಟಿ20 ಭವಿಷ್ಯ ಅಡಗಿದೆ. ಈ ಕೂಟ ಮುಗಿದ ಮೇಲೆ ಯಾರ್ಯಾರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ಪ್ರಶ್ನೆಗಳೂ ಇವೆ. ಹೀಗಾಗಿ ಭಾರತದ ಮಟ್ಟಿಗೆ ಇದೊಂದು ಮಹತ್ವದ ಕೂಟ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
ICC World Rankings: ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್ ಬುಮ್ರಾ ಮರಳಿ ನಂ.1
Brand Value: ಬಾಲಿವುಡ್ ತಾರೆಯರನ್ನು ಮೀರಿಸಿದ ಕ್ರಿಕೆಟಿಗರ ಬ್ರ್ಯಾಂಡ್ ಮೌಲ್ಯ!
IPL Auction: 27 ಕೋ. ರೂ. ಒಡೆಯ ರಿಷಭ್ ಪಂತ್‌ಗೆ ಸಿಗುವುದು 18.90 ಕೋಟಿ ಮಾತ್ರ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.