ಮರೆಯಲಾಗದ, ಮರೆಯಬಾರದ ನೆನಪುಗಳು
Team Udayavani, Oct 21, 2022, 9:00 AM IST
2016-ಕೊಹ್ಲಿಯ ಆ 82 ರನ್‌ಗಳು :
ಅಂತಾರಾಷ್ಟ್ರೀಯ ಟಿ20 ಇತಿಹಾಸದ ಅತ್ಯಂತ ಶ್ರೇಷ್ಠ ಇನಿಂಗ್ಸ್‌ಗಳಲ್ಲಿ ಒಂದು ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. 2016ರಲ್ಲಿ ಭಾರತದ ಮೊಹಾಲಿಯಲ್ಲಿ ನಡೆದ ಆಸೀಸ್-ಭಾರತದ ನಡುವಿನ ವಿಶ್ವಕಪ್ ಪಂದ್ಯ ಸೆಮಿಫೈನಲ್ ಮಹತ್ವ ಪಡೆದಿತ್ತು. ಅಲ್ಲಿ ಭಾರತಕ್ಕೆ 20 ಓವರ್‌ಗಳಲ್ಲಿ 161 ರನ್ ಬಾರಿಸುವ ಗುರಿಯಿತ್ತು. ಭಾರತ 94 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಚಡಪಡಿಸುತ್ತಿದ್ದಾಗ ಕೊಹ್ಲಿ ತಂಡದ ಕೈಹಿಡಿದರು. ಅವರು ಕೇವಲ 51 ಎಸೆತಗಳಲ್ಲಿ ಅಜೇಯ 82 ರನ್ ಬಾರಿಸಿ, ತಂಡವನ್ನು ಸುಲಭವಾಗಿ ಗುರಿ ಮುಟ್ಟಿಸಿದರು. ಆ ಇನಿಂಗ್ಸ್ ಅತ್ಯಂತ ಒತ್ತಡದ ಸನ್ನಿವೇಶದಲ್ಲಿ ದಾಖಲಾಯಿತು ಎನ್ನುವುದೇ ಇಲ್ಲಿನ ಗಮನಾರ್ಹ ಸಂಗತಿ.
2007-ಮಿಸ್ಬಾ ಹೊಡೆತ, ಶ್ರೀಶಾಂತ್ ಕ್ಯಾಚ್, ಭಾರತಕ್ಕೆ ವಿಶ್ವಕಪ್ :
2007ರ ಟಿ20 ವಿಶ್ವಕಪ್ ಫೈನಲ್ ಸೆ.24ರಂದು ಜೊಹಾನ್ಸ್‌ಬರ್ಗ್‌ನಲ್ಲಿ ನಡೆದಿತ್ತು. ಅಲ್ಲಿ ಭಾರತ ರೋಚಕವಾಗಿ 5 ರನ್‌ಗಳಿಂದ ಗೆದ್ದಿದ್ದು ಮಾತ್ರವಲ್ಲ, ಟಿ20 ಇತಿಹಾಸದ ಮೊದಲ ವಿಶ್ವಕಪ್ಪನ್ನು ಜೈಸಿತು. ಕೊನೆಯ ಓವರ್‌ನಲ್ಲಿ ಪಾಕಿಸ್ತಾನಕ್ಕೆ 13 ರನ್ ಬೇಕಿತ್ತು. ಆ ಓವರ್ ಎಸೆದಿದ್ದು ಜೋಗಿಂದರ್ ಶರ್ಮ ಎಂಬ ಅನಾಮಿಕ ಬೌಲರ್. ಪಾಕಿಸ್ತಾನದ ಒಂದು ವಿಕೆಟ್ ಮಾತ್ರ ಬಾಕಿಯುಳಿದಿತ್ತು. 3ನೇ ಎಸೆತದಲ್ಲಿ ಪಾಕ್ ನಾಯಕ ಮಿಸ್ಬಾ ಉಲ್ ಹಖ್ ಬಾರಿಸಿದ ಹೊಡೆತವೊಂದು ನೇರವಾಗಿ ಹೋಗಿ ಶ್ರೀಶಾಂತ್ ಕೈಸೇರಿತು. ಅಲ್ಲಿಗೆ ಪಾಕ್ ಆಲೌಟ್. ಧೋನಿ ನಾಯಕತ್ವದ ಯಶಸ್ಸಿನ ಪರ್ವ ಆರಂಭವಾಗಿದ್ದೇ ಇಲ್ಲಿಂದ.
2016-ಬಾಂಗ್ಲಾ ವಿರುದ್ಧದ 1 ರನ್ ಜಯ :
2016ರ ಟಿ20 ವಿಶ್ವಕಪ್‌ನಲ್ಲೇ ಭಾರತ, ಬಾಂಗ್ಲಾದೇಶ ವಿರುದ್ಧ ಅತ್ಯಂತ ರೋಚಕವಾಗಿ 1 ರನ್‌ಗಳಿಂದ ಜಯ ಸಾಧಿಸಿತು. ಇದನ್ನು ಮರೆಯಲು ಸಾಧ್ಯವೇ ಇಲ್ಲ. ಗೆಲುವಿಗೆ 147 ರನ್ ಗಳಿಸಬೇಕಿದ್ದ ಬಾಂಗ್ಲಾದೇಶ 19.3 ಓವರ್‌ಗಳಲ್ಲಿ 145 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಆರಾಮಾಗಿತ್ತು. ಆದರೆ ಮುಂದಿನೆರಡು ಎಸೆತಗಳಲ್ಲಿ ಹಾರ್ದಿಕ್ ಪಾಂಡ್ಯ ಬಾಂಗ್ಲಾದ ಸತತ 2 ವಿಕೆಟ್ ಎಗರಿಸಿದರು. ಆಗದಕ್ಕೆ ಕೊನೆಯ ಎಸೆತದಲ್ಲಿ ಎರಡು ರನ್ ಗಳಿಸಬೇಕಾದ ಒತ್ತಡ ಎದುರಾಗಿತ್ತು. ಹಾರ್ದಿಕ್‌ರ ಕೊನೆಯ ಎಸೆತವನ್ನು ಬಾಂಗ್ಲಾ ಬ್ಯಾಟಿಗ ಶುವಗತಗೆ ಬಾರಿಸಲು ಆಗಲಿಲ್ಲ. ಆದರೂ ಇನ್ನೊಂದು ತುದಿಯಲ್ಲಿದ್ದ ಮುಸ್ತಫಿಜುರ್ ರೆಹಮಾನ್ ರನ್ ಗಳಿಸಲು ಓಡಿದರು. ಈ ಸಂದರ್ಭದಲ್ಲಿ ಧೋನಿ ತೆಗೆದುಕೊಂಡ ನಿರ್ಧಾರ ಅತ್ಯಂತ ಅಚ್ಚರಿಯದ್ದಾಗಿದೆ. ಅವರು ದೂರದಿಂದಲೇ ಚೆಂಡನ್ನು ವಿಕೆಟ್‌ನತ್ತ ಎಸೆಯದೇ, ಅತಿ ವೇಗವಾಗಿ ಓಡಿಬಂದು ನೇರವಾಗಿ ಬೇಲ್ಸ್ ಎಗರಿಸಿದರು. ಕೂದಲೆಳೆ ಅಂತರದಲ್ಲಿ ಮುಸ್ತಫಿಜುರ್ ರನೌಟಾದರು. ಭಾರತಕ್ಕೆ 1 ರನ್ ಜಯ ಲಭಿಸಿತು.
2010- ಸುರೇಶ್ ರೈನಾ ಶತಕದ ಮೈಲುಗಲ್ಲು :
2010ರ ಟಿ20 ವಿಶ್ವಕಪ್ ವೆಸ್ಟ್ ಇಂಡೀಸ್‌ನಲ್ಲಿ ನಡೆದಿತ್ತು. ಅಲ್ಲಿ ಭಾರತ, ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಿತ್ತು. ಇಲ್ಲಿ ಸುರೇಶ್ ರೈನಾ ಅದ್ಭುತ ಇನಿಂಗ್ಸ್ ಒಂದನ್ನು ಆಡಿದರು. ಅವರು ಕೇವಲ 60 ಎಸೆತಗಳಲ್ಲಿ 101 ರನ್ ಚಚ್ಚಿದರು. ಇದರಲ್ಲಿ 9 ಬೌಂಡರಿ, 5 ಸಿಕ್ಸರ್‌ಗಳಿದ್ದವು. ಭಾರತ 20 ಓವರ್‌ಗಳಲ್ಲಿ 186 ರನ್‌ಗಳ ಬೃಹತ್ ಮೊತ್ತ ಗಳಿಸಿತು. ಜೊತೆಗೆ 14 ರನ್‌ಗಳಿಂದ ಜಯವನ್ನೂ ಸಾಧಿಸಿತು. ರೈನಾ ಬಾರಿಸಿದ ಈ ಶತಕ ಒಂದು ಮೈಲುಗಲ್ಲು. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಎನಿಸಿಕೊಂಡರು.
2007- ಯುವರಾಜ್ ಸಿಂಗ್‌ರ ಸತತ 6 ಸಿಕ್ಸರ್‌ಗಳು :
ಟಿ20 ಇತಿಹಾಸದ ಮೊದಲ ವಿಶ್ವಕಪ್ ನಡೆದಿದ್ದು 2007ರಲ್ಲಿ. ಈ ಕೂಟದಲ್ಲಿ ಹಲವು ಅಚ್ಚರಿಗಳು, ಮರೆಯಲಾಗದ ಘಟನೆಗಳು ನಡೆದವು. ಅದರಲ್ಲಿ ಯುವರಾಜ್ ಸಿಂಗ್ ಸತತ 6 ಸಿಕ್ಸರ್‌ಗಳನ್ನು ಬಾರಿಸಿದ್ದು ಅತ್ಯಂತ ಮಹತ್ವದ್ದು. ಇಂಗ್ಲೆಂಡ್ ವಿರುದ್ಧ ಅತ್ಯಂತ ಮಹತ್ವದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತದ ಪರ 19ನೇ ಓವರ್‌ನಲ್ಲಿ ಯುವರಾಜ್ ಸಿಡಿದರು. ಸ್ಟುವರ್ಟ್ ಬ್ರಾಡ್ ಅವರ ಓವರ್‌ನಲ್ಲಿ ಯುವಿ ನಂಬಲಸಾಧ್ಯ ರೀತಿಯಲ್ಲಿ ಸತತ 6 ಸಿಕ್ಸರ್ ಬಾರಿಸಿದರು. ಇದು ಅಂತಾರಾಷ್ಟ್ರೀಯ ಟಿ20ಯಲ್ಲಿ ಬಾರಿಸಲ್ಪಟ್ಟ ಮೊದಲ ಸತತ 6 ಸಿಕ್ಸರ್‌ಗಳ ದಾಖಲೆ. ಯುವಿ ಇಲ್ಲಿ ಕೇವಲ 16 ಎಸೆತಗಳಲ್ಲಿ 58 ರನ್ ಚಚ್ಚಿದ್ದರು. ಈ ಇನಿಂಗ್ಸ್ ಯಾವಾಗಲೂ ಎಲ್ಲರಿಂದಲೂ ಸ್ಮರಿಸಲ್ಪಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ
Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ
Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.