ಮಲ್ಪೆ: 66 ರ ಹರೆಯದ ಈಜುಪಟುವಿನಿಂದ ಒಂದೇ ಬಾರಿಗೆ ಎರಡು ವಿಶ್ವದಾಖಲೆ
Team Udayavani, Oct 21, 2022, 8:10 AM IST
ಮಲ್ಪೆ: ರಾಷ್ಟ್ರೀಯ ಈಜುಪಟು 66ರ ಹರೆಯದ ಗಂಗಾಧರ ಜಿ. ಕಡೆಕಾರು ಅವರು ಒಂದೇ ಬಾರಿಗೆ ಎರಡು ವಿಶ್ವದಾಖಲೆಗಳ ಸಾಧನೆಗೆ ಪಾತ್ರರಾಗಿದ್ದಾರೆ.
2022ರ ಜನವರಿ 24ರಂದು ಕಿದಿಯೂರು ಪಡುಕರೆ ಸಮುದ್ರದಲ್ಲಿ ಕೈಗಳನ್ನು ಹಿಂದಕ್ಕೆ ಮಡಚಿ ಕೋಳ ತೊಟ್ಟು 3.5 ಕಿ.ಮೀ. ದೂರವನ್ನು ಕ್ರಮಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದರು. ಪ್ರಕ್ಷುಬ್ಧವಾಗಿದ್ದ ಕಡಲಿನಲ್ಲಿ 5.35 ಗಂಟೆಗಳ ಕಾಲ ನಿರಂತರವಾಗಿ ಈಜಿರುವುದು ಅವರ ಇನ್ನೊಂದು ದಾಖಲೆ.
ಬೆಳಗ್ಗೆ 7.50ಕ್ಕೆ ಸಮುದ್ರಕ್ಕೆ ಧುಮುಕಿದ ಅವರು ದಡ ತಲುಪುವಾಗ ಮಧ್ಯಾಹ್ನ 1.25 ಕಳೆದಿತ್ತು. ಆ ದಿನ ಬೆಳಗ್ಗಿನಿಂದಲೇ ಪ್ರಕ್ಷುಬ್ಧವಾಗಿದ್ದ ಕಡಲಿನಲ್ಲಿ ನಿರಂತರ 5 ಗಂಟೆ 35 ನಿಮಿಷ ಈಜಿದ್ದರು.
ಗೋಲ್ಡನ್ ಬುಕ್ ಆಫ್ ವರ್ಲ್ಡ್ :
ರೆಕಾರ್ಡ್ ತೀರ್ಪುಗಾರ ಮನೀಷ್ ವೈಷ್ಣೋಯ್ ಅವರು ಅಂದು ಮೊದಲ ದಾಖಲೆಯ ಪರಿಶೀಲನೆಗೆ ಮಾತ್ರ ಬಂದಿದ್ದರು. ಆದರಂತೆ 3.5 ಕಿ.ಮೀ. ದೂರದ ದಾಖಲೆಯನ್ನು ಮಾತ್ರ ಘೋಷಿಸಿ ತಾತ್ಕಾಲಿಕ ಪ್ರಮಾಣ ಪತ್ರ ನೀಡಿದ್ದರು. ಪ್ರಕ್ಷುಬ್ಧ ಕಡಲಿನಲ್ಲಿ 5.35 ಗಂಟೆ ಈಜಿರುವುದೂ ಅವರ ಇನ್ನೊಂದು ದಾಖಲೆ ಆಗಿದ್ದರೂ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಪ್ರಮಾಣಪತ್ರ ಕಳುಹಿಸಿಕೊಡಲಾಗುವುದು ಎಂದು ಹೇಳಿದ್ದರು. ಪ್ರಸ್ತುತ ಪ್ರಮಾಣಪತ್ರ ಗಂಗಾಧರ ಅವರ ಕೈಸೇರಿದೆ.
ಅವರು ಕಳೆದ ವರ್ಷ 2021ರ ಜನವರಿ 23ರಂದು ಪ್ರದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು 1.40 ಕಿ.ಮೀ. ಬ್ರೆಸ್ಟ್ ಸ್ಟ್ರೋಕ್ ಶೈಲಿಯಲ್ಲಿ ಸಮುದ್ರದಲ್ಲಿ ಈಜಿ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿದ್ದರು. ದೇವರ ಅನುಗ್ರಹ, ಜನರ ಸಹಕಾರ ಹಾಗೂ ನನ್ನ ಛಲದಿಂದ ಈ ಹರೆಯದಲ್ಲಿ 3 ದಾಖಲೆಗಳನ್ನು ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಗಂಗಾಧರ್.
ಸಮುದ್ರದಲ್ಲಿ ಪ್ರಕ್ಷುಬ್ಧವಾಗಿದ್ದರೂ 66ರ ಹರೆಯದಲ್ಲಿ ಒಂದೇ ಬಾರಿಗೆ ಎರಡು ವಿಶ್ವದಾಖಲೆ ಮಾಡಿರುವುದು ನಿಜಕ್ಕೂ ಸಾಧನೆಯೇ. ಎರಡೂ ದಾಖಲೆಗಳ ಪ್ರಮಾಣ ಪತ್ರವನ್ನು ಅವರಿಗೆ ಕಳುಹಿಸಿ ಕೊಡಲಾಗಿದೆ.– ಮನೀಶ್ ವೈಷ್ಣೋಯ್, ಗೋಲ್ಡನ್ ಬುಕ್ ಆಫ್ ರೆಕಾರ್ಡ್ನ ತೀರ್ಪುಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
MUST WATCH
ಹೊಸ ಸೇರ್ಪಡೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.