ಕಲ್ಸಂಕದಲ್ಲಿ ಫ್ರೀಲೆಫ್ಟ್ ಕಾಮಗಾರಿಗೆ ಚಾಲನೆ

Team Udayavani, Oct 21, 2022, 10:33 AM IST

7

ಉಡುಪಿ: ಉಡುಪಿ-ಮಣಿಪಾಲ ಮುಖ್ಯ ರಸ್ತೆ (169ಎ) ವಿಸ್ತರಣೆಯಾದರೂ ನಗರ ಹೃದಯ ಮಾರ್ಗದಲ್ಲಿರುವ ಕಲ್ಸಂಕ ವೃತ್ತದಲ್ಲಿ ಹಲವಾರು ವರ್ಷಗಳಿಂದ ಟ್ರಾಫಿಕ್‌ ಜಾಮ್‌ ದೊಡ್ಡ ತಲೆನೋವಿಗೆ ಕಾರಣವಾಗಿತ್ತು. ಇದೀಗ ಫ್ರೀಲೆಫ್ಟ್ ಮಾಡುವ ಮೂಲಕ ಒಂದಿಷ್ಟು ಟ್ರಾಫಿಕ್‌ ಸಮಸ್ಯೆ ನಿಯಂತ್ರಣಕ್ಕೆ ಪ್ರಯತ್ನಿಸಲಾಗುತ್ತಿದೆ.

ವಾರಾಂತ್ಯ, ರಜೆ ದಿನಗಳು, ಹಬ್ಬ, ಉತ್ಸವದ ಸಂದರ್ಭಗಳಲ್ಲಿ ಸಾಕಷ್ಟು ವಾಹನಗಳ ಸಂಚಾರ ಇರುವುದರಿಂದ ದೊಡ್ಡ ಪ್ರಮಾಣದಲ್ಲಿ ಟ್ರಾಫಿಕ್‌ ಜಾಮ್‌ ಸಂಭವಿಸಿ ಸಮಸ್ಯೆಗೆ ಕಾರಣವಾಗುತ್ತಿತ್ತು. ಸಂಚಾರ ಪೊಲೀಸರು, ಹೋಂಗಾರ್ಡ್ಸ್‌ ಟ್ರಾಫಿಕ್‌ ನಿರ್ವಹಣೆಯಲ್ಲಿ ಹೈರಾಣಾಗಿದ್ದರು. ಸಮೀಪದ ರಿಕ್ಷಾ ನಿಲ್ದಾಣದ ಚಾಲಕರು ಸಂಚಾರ ನಿಯಂತ್ರಣದಲ್ಲಿ ಪೊಲೀಸರಿಗೆ ಸಹಕಾರ ನೀಡುತ್ತಿದ್ದರು. ಅಂಬಾಗಿಲಿನಿಂದ ಉಡುಪಿ ಕಡೆಗೆ ಆಗಮಿಸುವ ಮತ್ತು ಉಡುಪಿ ಕಡೆಯಿಂದ ಗುಂಡಿಬೈಲು, ದೊಡ್ಡಣಗುಡ್ಡೆ ಕಡೆಗೆ ಹೋಗುವ, ಉಡುಪಿ ಸಿಟಿ ಬಸ್‌ ನಿಲ್ದಾಣ ಕಡೆಯಿಂದ ಮಣಿಪಾಲ, ಕೃಷ್ಣಮಠ ಕಡೆಗೆ ಸಾಗುವ-ಮಣಿಪಾಲದಿಂದ ಉಡುಪಿ ಸಿಟಿ ಬಸ್‌ ನಿಲ್ದಾಣ, ಅಂಬಾಗಿಲು -ಕೃಷ್ಣಮಠ ಕಡೆಗೆ ಸಾಗುವ ಪ್ರಮುಖ ವೃತ್ತವಾಗಿರುವುದು ಕಲ್ಸಂಕ ಜಂಕ್ಷನ್‌ ಇತ್ತೀಚೆಗೆ ಇಂದ್ರಾಣಿ ನದಿಯ ಸೇತುವೆ ವಿಸ್ತರಣೆಗೊಳಿಸಿದ್ದರೂ, ಸಂಚಾರ ದಟ್ಟಣೆಗೆ ಮಾತ್ರ ಪರಿಹಾರ ಸಿಕ್ಕಿರಲಿಲ್ಲ.

ಕಲ್ಸಂಕ ವೃತ್ತದಲ್ಲಿ ಸಂಭವಿಸುವ ಟ್ರಾಫಿಕ್‌ ಜಾಮ್‌ ಸಮಸ್ಯೆ ನಿವಾರಣೆಗೆ ಸಾರ್ವಜನಿಕ ವಲಯದಿಂದ ಸಾಕಷ್ಟು ದೂರುಗಳು ಕೇಳಿ ಬಂದಿತ್ತು. ಸಿಗ್ನಲ್‌ ಅಳವಡಿಕೆ ಸಹಿತ ಮೊದಲಾದ ಸಲಹೆಗಳು ವ್ಯಕ್ತವಾಗಿದ್ದರೂ, ಯಾವುದೂ ಅನುಷ್ಠಾನಕ್ಕೆ ಬಂದಿಲ್ಲ. ನಗರ ಸಂಚಾರ ಠಾಣೆ ಪೊಲೀಸ್‌ ಅಧಿಕಾರಿಗಳು ನಗರದ ವೃತ್ತದಲ್ಲಿ ಫ್ರೀಲೆಫ್ಟ್ ಕ್ರಮಗಳನ್ನು ಅನುಸರಿಸಿದಲ್ಲಿ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸ್ಥಳೀಯಡಳಿತಕ್ಕೆ ಸಲಹೆ ನೀಡಿದ್ದರು. ಈ ಬಗ್ಗೆ ಶಾಸಕ ಕೆ. ರಘುಪತಿ ಭಟ್‌ ಅವರು, ಜಿಲ್ಲಾಧಿಕಾರಿ ಹಾಗೂ ನಗರಸಭೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಲ್ಸಂಕದಲ್ಲಿ ಫ್ರೀ-ಲೆಫ್ಟ್ಗೆ ಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದರು. ಕಲ್ಸಂಕ ವೃತ್ತದಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಿ, ಮಾಂಡವಿ ಬಿಲ್ಡರ್ì ಜೆರ್ರಿ ವಿನ್ಸೆಂಟ್‌ ಡಯಾಸ್‌ ಅವರೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ರಸ್ತೆಗೆ ಬೇಕಾದ ಜಾಗವನ್ನು ನೀಡುವುದಾಗಿ ಹೇಳಿ, ಅದರಂತೆ ನಡೆದುಕೊಂಡಿದ್ದಾರೆ. 10 ದಿನದ ಒಳಗೆ ಫ್ರೀಲೆಫ್ಟ್ ಪೂರ್ಣಗೊಳ್ಳಲಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ಇದರಿಂದ ಅಂಬಾಗಿಲಿನಿಂದ ಬರುವ ವಾಹನಗಳು ಮುಕ್ತವಾಗಿ ಎಡಗಡೆಗೆ ತಿರುಗಿ ಕಡಿಯಾಳಿ, ಕುಂಜಿಬೆಟ್ಟು, ಎಂಜಿಎಂ, ಮಣಿಪಾಲ ಕಡೆಗೆ ಸಾಗಬಹುದು.

ʼಉದಯವಾಣಿ ನಿರಂತರ ವರದಿ’

ಕಲ್ಸಂಕ ವೃತ್ತದಲ್ಲಿ ಟ್ರಾಫಿಕ್‌ ಸಮಸ್ಯೆ ಬಗ್ಗೆ ಇದರಿಂದಾಗಿ ಸವಾರರಿಗೆ ತೊಂದರೆಯಾಗುತ್ತಿರುವ ರೀತಿ, ಅವೈಜ್ಞಾ ನಿಕ ವೃತ್ತ ನಿರ್ಮಾಣಕ್ಕೆ ಸಂಬಂಧಿಸಿ ವಿಸ್ತೃತ ವರದಿಯನ್ನು ಉದಯವಾಣಿ ಸರಣಿರೂಪದಲ್ಲಿ ಪ್ರಕಟಿಸಿ ಗಮನ ಸೆಳೆದಿತ್ತು. ಸಂಚಾರ ಪೊಲೀಸ್‌ ಠಾಣೆ ಉಪ ನಿರೀಕ್ಷಕ ಖಾದರ್‌ ಅವರು ಸಲಹೆ ನೀಡಿದ್ದ ಪ್ರಮುಖ ವೃತ್ತಗಳಲ್ಲಿ ಫ್ರೀ-ಲೆಫ್ಟ್ ನಿಂದಾಗುವ ಅನುಕೂಲಗಳ ಬಗ್ಗೆಯೂ ವರದಿಯಲ್ಲಿ ಉಲ್ಲೇಖೀಸಲಾಗಿತ್ತು. ಫ್ರೀಲೆಫ್ಟ್ ನಿರ್ಮಾಣಗೊಂಡ ಬಳಿಕ ಸ್ವಲ್ಪ ಪ್ರಮಾಣದಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆ ತಗ್ಗಲಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಸರಕು ತುಂಬಿದ ವಾಹನಗಳ ಕಿರಿಕಿರಿ

ಕಲ್ಸಂಕ ವೃತ್ತದಲ್ಲಿ ತೆಂಕಪೇಟೆ ರಸ್ತೆಯಲ್ಲಿ ಘನ ವಾಹನಗಳು, ಸಣ್ಣ ಟ್ರಕ್‌ಗಳು ಬೆಳಗ್ಗೆ, ಸಂಜೆ ಹೊತ್ತಿನಲ್ಲಿ ಸಂಚಾರ ಸಮಸ್ಯೆ ಉಂಟು ಮಾಡುತ್ತಿರುತ್ತವೆ. ಕೆಲವು ಟ್ರಕ್‌, ಲಾರಿಗಳು ಪಾದಚಾರಿ ಮಾರ್ಗದಲ್ಲಿ ನಿಲ್ಲಿಸಿ ಸರಕು ಸಾಮಗ್ರಿಗಳನ್ನು ಲೋಡ್‌, ಅನ್‌ ಲೋಡ್‌ ಮಾಡುವುದರಿಂದ ಪಾದಚಾರಿಗಳಿಗೆ ದ್ವಿಚಕ್ರವಾಹನ ಸಾವರರಿಗೆ ಕಿರಿಕಿರಿ ಉಂಟುಮಾಡುತ್ತಿವೆ ಎಂಬ ಆರೋಪ ಕೇಳಿಬರುತ್ತಿವೆ.

ಟಾಪ್ ನ್ಯೂಸ್

Darshan: ಜೈಲಿನಿಂದ ಹೊರಬರುತ್ತಿದ್ದಂತೆ ದರ್ಶನ್‌ ಕಾರು ಅಡ್ಡಗಟ್ಟಿ ಜೈಕಾರ ಕೂಗಿದ ಫ್ಯಾನ್ಸ್

Darshan: ಜೈಲಿನಿಂದ ಹೊರಬರುತ್ತಿದ್ದಂತೆ ದರ್ಶನ್‌ ಕಾರು ಅಡ್ಡಗಟ್ಟಿ ಜೈಕಾರ ಕೂಗಿದ ಫ್ಯಾನ್ಸ್

ನಿರಾಶ್ರಿತ ರೋಹಿಂಗ್ಯಾ ಮಕ್ಕಳ ಶಾಲೆ ಪ್ರವೇಶಕ್ಕೆ ಅನುಮತಿ ಕೊಡಿ: PIL ವಜಾಗೊಳಿಸಿದ ಹೈಕೋರ್ಟ್

ನಿರಾಶ್ರಿತ ರೋಹಿಂಗ್ಯಾ ಮಕ್ಕಳ ಶಾಲೆ ಪ್ರವೇಶಕ್ಕೆ ಅನುಮತಿ ಕೊಡಿ: PIL ವಜಾಗೊಳಿಸಿದ ಹೈಕೋರ್ಟ್

Tollywood: ಚಳಿಗಾಲದಲ್ಲಿ ಈ ದಿನ ನೆರವೇರಲಿದೆ ನಾಗಚೈತನ್ಯ – ಶೋಭಿತಾ ವಿವಾಹ

Tollywood: ಚಳಿಗಾಲದಲ್ಲಿ ಈ ದಿನ ನೆರವೇರಲಿದೆ ನಾಗಚೈತನ್ಯ – ಶೋಭಿತಾ ವಿವಾಹ

6

Home made food ನಿಜವಾಗಿಯೂ ಪೋಷಕಾಂಶದಿಂದ ತುಂಬಿದೆಯೇ…?

1-eqwew

Rajyotsava Award: ಅರುಣ್‌ ಯೋಗಿರಾಜ್‌ ಸೇರಿ 69 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ

ದರ್ಶನ್ ಗೆ ಜಾಮೀನು… ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ವಿಜಯಲಕ್ಷ್ಮೀ

ದರ್ಶನ್ ಗೆ ಜಾಮೀನು… ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ವಿಜಯಲಕ್ಷ್ಮೀ

firing

Amritsar; ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಗ್ಯಾಂಗ್ ಸ್ಟರ್ ಗುಂಡಿಗೆ ಬಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8(2)

Udupi: ನಗರದ ಎಲ್ಲೆಡೆ ಖರೀದಿ ಭರಾಟೆ; ಬೆಳಕಿನ ಹಬ್ಬ ದೀಪಾವಳಿಗೆ ಇನ್ನು ಒಂದೇ ದಿನ ಬಾಕಿ

5

Udupi: ಸಿಗುತ್ತಿಲ್ಲ ಡಾಮರು ಮಿಶ್ರಣ!; ಹಾನಿಗೊಂಡ ರಸ್ತೆಗಳ ದುರಸ್ತಿಗೆ ಕೂಡಿಬರದ ಕಾಲ

1-sports

Sports; ಕುಚ್ಚೂರು: ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

Ajekar:ಪ್ರಿಯಕರನೊಂದಿಗೆ ಸೇರಿ ಪತಿಯ ಹ*ತ್ಯೆ ಪ್ರಕರಣ:ಪೊಲೀಸರ ತಂಡದಿಂದ ಸಾಕ್ಷ್ಯಗಳ ಹುಡುಕಾಟ

Ajekar:ಪ್ರಿಯಕರನೊಂದಿಗೆ ಸೇರಿ ಪತಿಯ ಹ*ತ್ಯೆ ಪ್ರಕರಣ:ಪೊಲೀಸರ ತಂಡದಿಂದ ಸಾಕ್ಷ್ಯಗಳ ಹುಡುಕಾಟ

Udupi: ಇಂದ್ರಾಳಿ ಮೇಲ್ಸೇತುವೆ: ಜ. 15 ರೊಳಗೆ ಮುಗಿಸಲು ಗಡುವು

Udupi: ಇಂದ್ರಾಳಿ ಮೇಲ್ಸೇತುವೆ: ಜ. 15 ರೊಳಗೆ ಮುಗಿಸಲು ಗಡುವು

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Darshan: ಜೈಲಿನಿಂದ ಹೊರಬರುತ್ತಿದ್ದಂತೆ ದರ್ಶನ್‌ ಕಾರು ಅಡ್ಡಗಟ್ಟಿ ಜೈಕಾರ ಕೂಗಿದ ಫ್ಯಾನ್ಸ್

Darshan: ಜೈಲಿನಿಂದ ಹೊರಬರುತ್ತಿದ್ದಂತೆ ದರ್ಶನ್‌ ಕಾರು ಅಡ್ಡಗಟ್ಟಿ ಜೈಕಾರ ಕೂಗಿದ ಫ್ಯಾನ್ಸ್

10

Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು

ನಿರಾಶ್ರಿತ ರೋಹಿಂಗ್ಯಾ ಮಕ್ಕಳ ಶಾಲೆ ಪ್ರವೇಶಕ್ಕೆ ಅನುಮತಿ ಕೊಡಿ: PIL ವಜಾಗೊಳಿಸಿದ ಹೈಕೋರ್ಟ್

ನಿರಾಶ್ರಿತ ರೋಹಿಂಗ್ಯಾ ಮಕ್ಕಳ ಶಾಲೆ ಪ್ರವೇಶಕ್ಕೆ ಅನುಮತಿ ಕೊಡಿ: PIL ವಜಾಗೊಳಿಸಿದ ಹೈಕೋರ್ಟ್

Gundlupete: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಸವಾರ ಸಾವು

Gundlupete: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಸವಾರ ಸಾವು

ಕೃಷಿ ಭೂಮಿ ಉಳಿಸುವ ಪ್ರಯತ್ನವಾಗಲಿ: ರಾಮಕೃಷ್ಣ ಶ್ರೀಪಾದ ಹೆಗಡೆ

ಕೃಷಿ ಭೂಮಿ ಉಳಿಸುವ ಪ್ರಯತ್ನವಾಗಲಿ: ರಾಮಕೃಷ್ಣ ಶ್ರೀಪಾದ ಹೆಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.