12 ಕೋ.ರೂ.ವೆಚ್ಚದ ಕೆಎಸ್‌ಆರ್‌ಟಿಸಿ ತಂಗುದಾಣ;ನವ ಬೆಳ್ತಂಗಡಿ ಕಲ್ಪನೆಗೆ ಸಾರಿಗೆ ಸುವ್ಯವಸ್ಥೆ


Team Udayavani, Oct 21, 2022, 3:13 PM IST

17

ಬೆಳ್ತಂಗಡಿ: ಧಾರ್ಮಿಕ ಕ್ಷೇತ್ರ ಸಹಿತ ಪ್ರವಾಸಿ ತಾಣಗಳನ್ನು ಹೊಂದಿರುವ ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿ ದೂರದೃಷ್ಟಿ ಯೋಜನೆಯಾಗಿ ಇದೀಗ ಮತ್ತೂಂದು ಮೈಲಿಗಲ್ಲನ್ನೇ ಸಾಧಿಸಿದ್ದು, ಬೆಳ್ತಂಗಡಿ ಹೃದಯಭಾಗವಾದ ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ಸ್ಥಾಪನೆಗೆ ರಾಜ್ಯ ಸರಕಾರ ಈಗಾಗಲೇ 12 ಕೋ. ರೂ. ಅನುದಾನ ಮಂಜೂರುಗೊಳಿಸಿದೆ.

ಬೆಳ್ತಂಗಡಿ ಪಟ್ಟಣಕ್ಕೆ ಒಳಪಟ್ಟಂತೆ ಈಗಾಗಲೇ ಇರುವ ಬಸ್‌ ತಂಗುದಾಣ ಬಹಳಷ್ಟು ಕಿರಿದಾಗಿದೆ. ಪ್ರಸ್ತುತ ಇರುವ ಬಸ್‌ ನಿಲ್ದಾಣದ ಹಿಂದಿನ ಭಾಗ ಸೇರಿಸಿ ಒಟ್ಟು 1.20 ಎಕ್ರೆ ಜಾಗದಲ್ಲಿ ಬಸ್‌ ತಂಗುದಾಣ ನಿರ್ಮಾಣ ವಾಗಲಿದೆ. ಬೆಳ್ತಂಗಡಿ ತಾಲೂಕಿನ 81 ಗ್ರಾ.ಪಂ. ಗೆ ಒಳಪಟ್ಟಂತೆ ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗಕ್ಕೆ ಒಳಪಟ್ಟ ಧರ್ಮಸ್ಥಳ ಕೇಂದ್ರವಾಗಿಸಿ ಕೆಎಸ್‌ಆರ್‌ಟಿಸಿ ಡಿಪೋ ಸಹಿತ ಬಸ್‌ ನಿಲ್ದಾಣ ವ್ಯವಸ್ಥೆ ಈ ಹಿಂದೆಯೇ ನಿರ್ಮಾಣವಾಗಿದೆ. ರಾಜ್ಯದ ಮೂಲೆ ಮೂಲೆಗೂ ಇಲ್ಲಿಂದ ಬಸ್‌ ಸಂಚರಿಸುತ್ತಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಸಾವಿರಾರು ವಿದ್ಯಾರ್ಥಿಗಳು, ಉದ್ಯೋಗ ನಿರತರು, ಜನಸಾಮಾನ್ಯರು ನಿತ್ಯ ಸಂಚರಿಸುವ ಬೆಳ್ತಂಗಡಿ ಬಸ್‌ ನಿಲ್ದಾಣದಲ್ಲಿ ಯಾವುದೇ ಅಗತ್ಯ ಸೌಲಭ್ಯಗಳಿಲ್ಲ. ಈ ಎಲ್ಲ ಯೋಜನೆಗಳೊಂದಿಗೆ ಭವಿಷ್ಯದ ಬಸ್‌ ನಿಲ್ದಾಣವಾಗಿ 12 ಕೋ. ರೂ. ವೆಚ್ಚದ ಆಧುನಿಕ ಶೈಲಿಯ ಕಟ್ಟಡ ಮುಕುಟಪ್ರಾಯವಾಗಲಿದೆ.

ಕಂದಾಯ, ಪ.ಪಂ. ಜಮೀನು ಬಳಕೆ

ರಾಜ್ಯದಲ್ಲೇ ಪ್ರಥಮ ಬಾರಿಗೆ ಕಂದಾಯ, ಪ.ಪಂ. ಜಮೀನು ಬಳಸಿ ಕೆ.ಎಸ್‌.ಆರ್‌.ಟಿ.ಸಿ. ಬಸ್‌ ನಿಲ್ದಾಣಕ್ಕೆ ಜಾಗ ಹಸ್ತಾಂತರಿಸಿದ್ದು, ಇಲ್ಲಿವರೆಗೆ ಈ ಉದಾಹರಣೆಯಿಲ್ಲ. ಆದರೆ ಬೆಳ್ತಂಗಡಿ ತಾಲೂಕಿನಲ್ಲಿ ಮೊದಲ ಬಾರಿಗೆ ಎರಡು ಇಲಾಖೆಗೆ ಒಳಪಟ್ಟಂತೆ ಜಮೀನು ಒಟ್ಟುಗೂಡಿಸಿ 1.20 ಎಕ್ರೆ ಭೂಮಿ ಈಗಾಗಲೇ ಕೆ.ಎಸ್‌.ಆರ್‌.ಟಿ.ಸಿ.ಗೆ ಹಸ್ತಾಂತರಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನೇನು ಅನುದಾನವೂ ಸರಕಾರ ಮಂಜೂರುಗೊಳಿಸಿದ್ದರಿಂದ ಕಾಮಗಾರಿಗೆ ಶೀಘ್ರವೇ ಶಿಲಾನ್ಯಾಸದ ಭಾಗ್ಯವೂ ದೊರೆಯಲಿದೆ.

ಜಿಲ್ಲೆ, ಹೊರ ಜಿಲ್ಲೆಗೆ ಬಸ್‌ ಸಂಚಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹಲವಾರು ಭಾಗಗಳಿಂದ ಲಕ್ಷಾಂತರ ಭಕ್ತರು ಸಂದರ್ಶಿಸುತ್ತಾರೆ. ಹಾಗಾಗಿ ಜಿಲ್ಲೆ, ಹೊರ ಜಿಲ್ಲೆ, ರಾಜ್ಯದ ನಾನಾ ಊರುಗಳಿಗೆ ಸಂಪರ್ಕಿಸುವ ಬಸ್‌ಗಳು ಬೆಳ್ತಂಗಡಿಯಾಗಿ ಹಾದು ಹೋಗುತ್ತವೆ. ಇಲ್ಲಿನ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳಾದ ಮಹಿಳಾ ವಿಶ್ರಾಂತಿ ಕೊಠಡಿ, ತುರ್ತು ಚಿಕಿತ್ಸಾ ಸೌಲಭ್ಯ, ಪೊಲೀಸ್‌ ರಕ್ಷಣ ವ್ಯವಸ್ಥೆ, ಫೈರ್‌ ಸೇಫ್ಟಿ, ಸುಸಜ್ಜಿತ ಶೌಚಾಲಯ ಇವೆಲ್ಲದರ ಆವಶ್ಯಕತೆ ಮನಗಂಡು ನೂತನ ನಿಲ್ದಾಣ ರಚನೆಯಾಗಲಿದೆ.

ಪ್ರಸಕ್ತ ಬಸ್‌ ನಿಲ್ದಾಣದ ಜಾಗವು ಪ.ಪಂ. ಸೇರಿದ್ದಾಗಿದ್ದು ಇಲ್ಲಿ ಹಲವು ಬಾಡಿಗೆ ಅಂಗಡಿಕೋಣೆಗಳಿವೆ. ಅವುಗಳ ಸ್ಥಳಾಂತರಕ್ಕೆ ಮಾಲಕರಿಗೆ ನೋಟಿಸ್‌ ನೀಡಲಾಗಿದೆ. ಇವರಿಗೂ ಅಗತ್ಯ ಸೌಲಭ್ಯ ಒದಗಿಸುವ ಭರವಸೆಯನ್ನು ಶಾಸಕರು ನೀಡಿದ್ದಾರೆ.

ಸುಸಜ್ಜಿತ ನಿಲ್ದಾಣ: ಬೆಳ್ತಂಗಡಿಯ ದೂರದೃಷ್ಟಿ ಅಭಿವೃದ್ಧಿ ಚಿಂತನೆ ಇಟ್ಟುಕೊಂಡು ನೂತನ ಬಸ್‌ ನಿಲ್ದಾಣ ರಚನೆಗೆ ಸರಕಾರದ ಮುಂದೆ ಪ್ರಸ್ತಾವನೆ ಇಡಲಾಗಿತ್ತು. ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಶ್ರೀರಾಮುಲು ಅವರು 12 ಕೋ.ರೂ. ಅನುದಾನ ಒದಗಿಸಿದ್ದಾರೆ. ನವ ಬೆಳ್ತಂಗಡಿ ಕಲ್ಪನೆಗೆ ಪಟ್ಟಣದ ಹೃದಯ ಭಾಗದಲ್ಲಿ ಸುಸಜ್ಜಿತ ಹಾಗೂ ಭವ್ಯ ಬಸ್‌ ನಿಲ್ದಾಣ ಮುಕುಟಪ್ರಾಯವಾಗಲಿದೆ. –ಹರೀಶ್‌ ಪೂಂಜ, ಶಾಸಕರು

ಟಾಪ್ ನ್ಯೂಸ್

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

3-kadaba

Kadaba: ಕರ್ತವ್ಯದ ಬಿಡುವಿನಲ್ಲಿ ಮೊಬೈಲ್‌ನಲ್ಲೇ ಓದಿ ಎಸ್‌ಐ ಆದ ಪೊಲೀಸ್‌ ಚಾಲಕ!

1

Puttur: ನಳಿನ್‌ಗೆ ನಿಂದನೆ; ದೂರು ದಾಖಲು

1-asdaaasdasd

Kadaba; ಪ್ರೀತಿಸುವ ನಾಟಕವಾಡಿ ಬಾಲಕಿಯ ಮೇಲೆ ಅತ್ಯಾಚಾರ:ಯುವಕ ಸೆರೆ

1aaaane

Sullia: ತೋಟದಲ್ಲಿ ಮೂರು ಕಾಡಾನೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Mulki: ಗಾಂಜಾ ಮಾರಾಟ ಯತ್ನ; ಇಬ್ಬರ ಬಂಧನ

accident

Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.