ಇಬ್ಬರು ಪೊಲೀಸರ ಅಮಾನತು ಸಾಧ್ಯತೆ; ಪೊಲೀಸ್‌ ನಿರ್ಲಕ್ಷ್ಯ: ಮೊಬೈಲ್‌ ಕಳವು ಆರೋಪಿ ಪರಾರಿ


Team Udayavani, Oct 22, 2022, 1:00 AM IST

ಇಬ್ಬರು ಪೊಲೀಸರ ಅಮಾನತು ಸಾಧ್ಯತೆ; ಪೊಲೀಸ್‌ ನಿರ್ಲಕ್ಷ್ಯ: ಮೊಬೈಲ್‌ ಕಳವು ಆರೋಪಿ ಪರಾರಿ

ಉಡುಪಿ: ಮೊಬೈಲ್‌ ಅಂಗಡಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಭಟ್ಕಳ ಮೂಲದ ಮೊಹಮ್ಮದ್‌ ರಾಹಿಕ್‌ (22) ನನ್ನು ಜೈಲಿಗೆ ಕರೆದೊಯ್ಯುವಾಗ ತಪ್ಪಿಸಿಕೊಂಡ ಘಟನೆ ಗುರುವಾರ ನಡೆದಿದೆ.

ಪ್ರಕರಣದ ವಿವರ: ಕೆಲವು ತಿಂಗಳ ಹಿಂದೆ ಬೀಜಾಡಿ ಸಮೀಪ ನಡೆದ ಮೊಬೈಲ್‌ ಕಳ್ಳತನ ಪ್ರಕರಣದಲ್ಲಿ ಪೊಲೀಸರು ರಾಹಿಕ್‌ನನ್ನು ಬಂಧಿಸಿದ್ದರು. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದಾಖಲಾದ ದೂರಿನಂತೆ ಪ್ರಕರಣದ ತನಿಖಾಧಿಕಾರಿಯವರು ಅ. 20ರಂದು ಆರೋಪಿಯನ್ನು ಕುಂದಾಪುರದ ಎ.ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಬಳಿಕ ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸುವಂತೆ ಆದೇಶಿಸಿದ್ದರು.

ಅದರಂತೆ ಕುಂದಾಪುರದಿಂದ ಹೊರಟು ಗುರುವಾರ ರಾತ್ರಿ ಸುಮಾರು 7.30ಕ್ಕೆ ಜಿಲ್ಲಾ ಕಾರಾಗೃಹ ಕಾಜರಗುತ್ತು ಮುಖ್ಯದ್ವಾರದ ಬಳಿ ತಲುಪಿ ವಾಹನ ನಿಲ್ಲಿಸಿ ಆರೋಪಿಯನ್ನು ಇಳಿಸುತ್ತಿದ್ದಂತೆ ಅರೋಪಿ ಪೊಲೀಸ್‌ ಸಿಬಂದಿಯನ್ನು ತಳ್ಳಿ ಅವರ ಹೊಟ್ಟೆಗೆ ಹೊಡೆದು ದೂಡಿ ಹಾಕಿ ಕಾಡಿನ ಕಡೆ ಓಡಿ ಹೋಗಿ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದಾನೆ. ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಬಂದಿ ನಿರ್ಲಕ್ಷ್ಯ
ಆರೋಪಿಗಳನ್ನು ಜೈಲಿಗೆ ಕಳುಹಿಸುವ ವೇಳೆ ಬೇಡಿ (ಕೋಳ) ಹಾಕಬೇಕೆಂದು ಕಾನೂನು ತಿಳಿಸುತ್ತದೆ. ಆದರೆ ಪೊಲೀಸರು ಈ ನಿಯಮವನ್ನು ಉಲ್ಲಂಘಿ ಸಿದ್ದಾರೆ. ಖಾಸಗಿ ವಾಹನದಲ್ಲಿ ಹೆಡ್‌ಕಾನ್‌ಸ್ಟೆಬಲ್‌ ಮಂಜುನಾಥ್‌ ಹಾಗೂ ಪಿಸಿ ಬಸವನಗೌಡ ಅವರು ಆರೋಪಿಯನ್ನು ಕರೆದುಕೊಂಡು ಬಂದಿದ್ದರು. ಮೇಲ್ನೋಟಕ್ಕೆ ಪೊಲೀಸರ ನಿರ್ಲಕ್ಷ್ಯವೇ ಆರೋಪಿ ತಪ್ಪಿಸಿಕೊಳ್ಳಲು ಕಾರಣ ಎನ್ನಲಾಗಿದೆ. ಆರೋಪಿಯ ಮೇಲೆ ಈ ಹಿಂದೆಯೂ ಕುಂದಾಪುರ ಠಾಣೆಯಲ್ಲಿ ಕಳ್ಳತನಕ್ಕೆ ಸಂಬಂಧಿಸಿ ಹಲವು ಪ್ರಕರಣಗಳು ದಾಖಲಾಗಿದ್ದವು. ಇಬ್ಬರು ಪೊಲೀಸರನ್ನು ಅಮಾನತು ಮಾಡುವ ಸಾಧ್ಯತೆಗಳಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಇನ್ನಷ್ಟೇ ಆದೇಶ ಹೊರಡಿಸಬೇಕಿದೆ.

ಟಾಪ್ ನ್ಯೂಸ್

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

man-a

Udupi: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

10

Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ

9

Udupi: ಬಿಎಸ್ಸೆನ್ನೆಲ್‌ ಟವರ್‌ ನಿರ್ವಹಣೆ ಹೊಣೆ ಪಂಚಾಯತ್‌ ಹೆಗಲಿಗೆ

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Chhattisgarh: 20 coaches of goods train derail

Chhattisgarh: ಹಳಿ ತಪ್ಪಿದ  ಗೂಡ್ಸ್‌ ರೈಲಿನ 20 ಬೋಗಿಗಳು

accident

Bantwal: ಕೆಎಸ್‌ಆರ್‌ಟಿಸಿ ಬಸ್‌-ಬೈಕ್‌ ಢಿಕ್ಕಿ; ದಂಪತಿಗೆ ಗಾಯ

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ

Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ

14-uv-fusion

Bamboo: ಬಿದಿರು ಎಂದು ಮೂಗು ಮುರಿಯದಿರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.