ಬದಲಾವಣೆ ತಂದ ಆವಾಸ್ : 4.51 ಲಕ್ಷ ಮನೆಗಳ ಗೃಹ ಪ್ರವೇಶ ನೆರವೇರಿಸಿದ ಪ್ರಧಾನಿ ಮೋದಿ
Team Udayavani, Oct 23, 2022, 7:15 AM IST
ಸತ್ನಾ: ಪ್ರಧಾನಮಂತ್ರಿ ಆವಾಸ್ ಯೋಜನೆಯು(ವಸತಿ ಯೋಜನೆ) ದೇಶದಲ್ಲಿ ಸಾಮಾಜಿಕ, ಆರ್ಥಿಕ ಬದಲಾವಣೆ ತರುವಲ್ಲಿ ಪ್ರಮುಖ ಸಾಧನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.
ವರ್ಚುವಲ್ ಮೂಲಕ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಮಧ್ಯಪ್ರದೇಶದಲ್ಲಿ ನಿರ್ಮಿಸಲಾದ 4.51 ಲಕ್ಷ ಮನೆಗಳ ಗೃಹ ಪ್ರವೇಶ ನೆರವೇರಿಸಿ ಮಾತನಾಡಿದ ಅವರು, “ಹಿಂದಿನ ಸರಕಾರಗಳು ಕೇವಲ ಹುಸಿ ಭರವಸೆಗಳನ್ನು ನೀಡುತ್ತಿದ್ದವು. ಕೇವಲ ಪುಕ್ಕಟೆ ಘೋಷಣೆಗಳನ್ನು ಮಾಡುತ್ತಿದ್ದವು. “ಗರೀಬಿ ಹಠಾವೋ’ ಎಂಬುದು ಕೇವಲ ರಾಜಕೀಯ ಗಿಮಿಕ್ ಆಗಿದೆ,’ ಎಂದು ತರಾಟೆಗೆ ತೆಗೆದುಕೊಂಡರು.
“ದೇಶದ ಪ್ರತಿಯೊಬ್ಬ ತೆರಿಗೆದಾರರು ಯೋಚಿಸುತ್ತಿರಬಹುದು, ನಾನು ಇಂದು ದೀಪಾವಳಿ ಆಚರಿಸುತ್ತಿದ್ದೇನೆ. ನನ್ನಂತೆ ನನ್ನ ಬಡ ಸಹೋದರರು ಖುಷಿಯಿಂದ ಹಬ್ಬ ಆಚರಿಸುವಂತಾಗಲಿ ಎಂದು. ಈಗ ಆತನಿಗೆ ಸೂರು ಸಿಕ್ಕಿದೆ. ಆತನ ಮಗಳ ಜೀವನ ಸುಧಾರಣೆಯಾಗಲಿದೆ. ಅದೇ ಕೇವಲ ಪುಕ್ಕಟೆ ಘೋಷಣೆ ಮಾಡಿದರೆ ತೆರಿಗೆದಾರನ ಮನಸ್ಸಿಗೂ ನೋವಾಗಲಿದೆ,’ ಎಂದರು.
“ಕಳೆದ ಎಂಟು ವರ್ಷಗಳಲ್ಲಿ ದೇಶದ 3.5 ಕೋಟಿ ಬಡ ಕುಟುಂಬಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಶೌಚಾಲಯ, ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ ಮತ್ತು ಅನಿಲ ಸಂಪರ್ಕ ಕಲ್ಪಿಸಲಾಗಿದೆ. ಈ ಸೌಲಭ್ಯಗಳು ಅವರ ಆಕಾಂಕ್ಷೆಗಳು ಪೂರೈಕೆಯಾಗುವ ನಿಟ್ಟಿನಲ್ಲಿ ಬಲ ತುಂಬಿವೆ,’ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.