ರಾಣಾ ಪ್ರತಾಪ್ ವೃತ್ತದ ಹೈಮಾಸ್ಟ್ ಲೈಟ್ ಆನ್ ಮಾಡಿದ ಶಾಸಕ ಮುನವಳ್ಳಿ
ನಗರಸಭೆ ನಿರ್ಲಕ್ಷ್ಯ; ಸಾರ್ವಜನಿಕರ ದೂರು ಹಿನ್ನೆಲೆ
Team Udayavani, Oct 23, 2022, 10:37 PM IST
ಗಂಗಾವತಿ :ನಗರದ ಜೂನಿಯರ್ ಕಾಲೇಜು ಹಾಗೂ ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವ ಹೈಮಾಸ್ಟ್ ಲೈಟ್ ಗಳನ್ನು ಪ್ರತಿನಿತ್ಯ ಆನ್ ಮತ್ತು ಆಫ್ ಮಾಡುವಲ್ಲಿ ನಗರಸಭೆಯ ಸಿಬ್ಬಂದಿಗಳ ನಿರ್ಲಕ್ಷ್ಯದ ಪರಿಣಾಮ ರಾತ್ರಿ ವೇಳೆ ಕತ್ತಲು ಆವರಿಸುತ್ತಿತ್ತು . ಈ ಕುರಿತು ಸಾರ್ವಜನಿಕರು ಗಮನಕ್ಕೆ ತಂದಿದ್ದ ಹಿನ್ನೆಲೆ ಸ್ವತಃ ಶಾಸಕ ಪರಣ್ಣ ಮನವಳ್ಳಿ ತಮ್ಮ ಆಪ್ತರೊಂದಿಗೆ ನಗರದ ರಾಯಚೂರು ರಸ್ತೆಯ ರಾಣಾ ಪ್ರತಾಪ್ ಸಿಂಗ್ ವೃತ್ತದಲ್ಲಿ ರವಿವಾರ ಸಂಜೆ ಹೈಮಾಸ್ಟ್ ದೀಪದ ಬಟನ್ ಆನ್ ಮಾಡುವ ಮೂಲಕ ಲೈಟ್ ಹಾಕಿದರು.
ಈ ಸಂದರ್ಭದಲ್ಲಿ ಅವರು ಉದಯವಾಣಿ ಜತೆ ಮಾತನಾಡಿ ಹಲವು ದಿನಗಳಿಂದ ನಗರಸಭೆಯ ಬೀದಿ ದೀಪಗಳನ್ನು ಆನ್ ಆಫ್ ಮಾಡುವ ವಿಭಾಗದ ನೌಕರರು ನಿರ್ಲಕ್ಷ್ಯದ ಪರಿಣಾಮ ಹೈಮಾಸ್ಟ್ ಲೈಟ್ ಗಳನ್ನು ಹಾಕದೆ ನಿರ್ಲಕ್ಷ್ಯ ವಹಿಸಲಾಗಿದೆ ಇದನ್ನು ಗಮನಿಸಿ ಸ್ವತಃ ನಾನೇ ತೆರಳಿ ರಾಣಾಪ್ರತಾಪ್ ಸಿಂಗ್ ವೃತ್ತದ ಹೈಮಾಸ್ಟ್ ದೀಪವನ್ನು ಆನ್ ಮಾಡಿ ನಗರಸಭೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿ ನಗರದ ಪ್ರತಿಯೊಂದು ಬೀದಿ ದೀಪ ಮತ್ತು ಹೈಮಾಸ್ಟ್ ದೀಪಗಳನ್ನು ಸಂಜೆ ಆನ್ ಮಾಡುವುದು ಮತ್ತು ಬೆಳಗಿನ ಜಾವ ಆಫ್ ಮಾಡುವಂತೆ ಸೂಚನೆ ನೀಡಿದ್ದೇನೆ .ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೆಳಕಿನ ಅವಶ್ಯಕತೆ ಇರುತ್ತದೆ ಆದ್ದರಿಂದ ನಗರಸಭೆಯವರು ಕರ್ತವ್ಯ ನಿಷ್ಠೆಯಿಂದ ಕಾರ್ಯ ನಿರ್ವಹಿಸಲು ಸೂಚನೆ ನೀಡಲಾಗಿದೆ ತಪ್ಪಿದ್ದಲ್ಲಿ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪೌರಾಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಉಮೇಶ್ ಸಿಂಗನಾಳ್ ,ಬಿಜೆಪಿ ಮುಖಂಡ ರಾಚಪ್ಪ ಸಿದ್ದಾಪುರ ಸೇರಿದಂತೆ ಸ್ಥಳೀಯ ನಿವಾಸಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ
ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು
Gangavathi: ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
MUST WATCH
ಹೊಸ ಸೇರ್ಪಡೆ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.