ಮೂಡಬೆಟ್ಟು: ಸಿಡಿಲು ಬಡಿದು ಮನೆ, ವಿದ್ಯುತ್ ಪರಿಕರಗಳಿಗೆ ಹಾನಿ
Team Udayavani, Oct 24, 2022, 12:39 AM IST
ಕಟಪಾಡಿ: ಮೂಡಬೆಟ್ಟು ಗ್ರಾಮದ ಶಂಕರಪುರ ಬಳಿಯ ಮನೆಯೊಂದಕ್ಕೆ ಸಿಡಿಲು ಬಡಿದು ಮನೆಯೊಡತಿ ಮೂರ್ಛೆ ತಪ್ಪಿದ್ದು, ಸುಮಾರು 2 ಲಕ್ಷ ರೂ.ಗೂ ಅಧಿಕ ನಷ್ಟ ಸಂಭವಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ಶನಿವಾರ ರಾತ್ರಿಯ ವೇಳೆ ಏಕಾಏಕಿ ಸುರಿದ ಭಾರೀ ಮಳೆ ಜತೆ ಗುಡುಗು, ಸಿಡಿಲು ಮಿಂಚು ಜತೆ ಭಾರೀ ಮಳೆ ಸುರಿಯಿತು. ಈ ವೇಳೆ ಪ್ರಾರ್ಥನೆ ಪೂರೈಸಿ ಮನೆಯೊಳಗೆ ಪ್ರವೇಶಿಸಿದ ಕೆಲವೇ ಹೊತ್ತಿನಲ್ಲಿ ಲೀನಾ ಡಿ’ಸೋಜಾ ಅವರ ತಾರಸಿ ಮನೆಗೆ ಸಿಡಿಲು ಬಡಿದಿತ್ತು. ಇದರಿಂದ ಆಕೆ ಮೂಛೆì ತಪ್ಪಿಬಿದ್ದರು.
ಮನೆಯೊಳಗೆ ಬಡಿದ ಸಿಡಿಲು
ಆರಂಭದಲ್ಲಿ ಮನೆಯ ಮುಂಭಾಗದ ತೆಂಗಿನ ಮರಕ್ಕೆ ಬಡಿದ ಸಿಡಿಲು ಬಳಿಕ ವಾಸ್ತವ್ಯವಿದ್ದ ತಾರಸಿ ಮನೆಯ ವಿದ್ಯುತ್ ಸಂಪರ್ಕವನ್ನು ಹಾನಿಗೊಳಿಸಿದೆ. ತಮ್ಮದೇ ಪಕ್ಕದ ಹಂಚಿನ ಮನೆಯ ವಿದ್ಯುತ್ ಸಂಪರ್ಕವೂ ಸುಟ್ಟು ಕರಕಲಾಗಿದೆ.
ಸಿಡಿಲು ಬಡಿದ ಕೂಡಲೇ ದೊಡ್ಡ ಶಬ್ಧ ಉಂಟಾಗಿತ್ತು. ಮನೆಯೊಳಗೆ ಕತ್ತಲು ಆವರಿಸಿತ್ತು. ಈ ಸಂದರ್ಭ ಮನೆಯೊಡತಿ ಸುಮಾರು 15-20 ನಿಮಿಷ ಕಾಲ ಮೂರ್ಛೆ ತಪ್ಪಿದ್ದು, ಪತಿ ಅನಿಲ್ ಗ್ಲ್ಯಾಡ್ಸನ್ ಡಿ’ಸೋಜಾ ಕೂಡ ಸಾವರಿಸಿಕೊಳ್ಳುವಲ್ಲಿ ಅಸಹಾ ಯಕರಾಗಿದ್ದರು.
ಮನೆಯಂಗಳದಲ್ಲಿದ್ದ ತೆಂಗಿನ ಮರದ ಸಿಪ್ಪೆ ಎದ್ದು ಹೋಗಿದ್ದು, ಮಿಂಚು ಇಳಿದು ಬಂದ ಭಾಗವು ಸ್ಪಷ್ಟವಾಗಿ ಗೋಚರಿಸುತ್ತಿದೆ. ನೆರೆಯ ಕೆಲವು ಮನೆಗಳಿಗೂ ಅಲ್ಪ ಸ್ವಲ್ಪ ಹಾನಿ ಸಂಭವಿಸಿದೆ. ಈ ಘಟನೆಯಿಂದ ಮನೆಯೊಡತಿ ತನ್ನ ದೇಹದ ಒಂದು ಪಾರ್ಶ್ವದಲ್ಲಿ ತಲೆಯಿಂದ ಕಾಲಿನವರೆಗೆ ಬಲಹೀನತೆಯನ್ನು ಅನುಭವಿಸುವಂತಾಗಿದ್ದು, ವೈದ್ಯಕೀಯ ಶುಶ್ರೂಷೆ ಪಡೆಯಬೇಕಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಕಟಪಾಡಿ ಗ್ರಾಮ ಲೆಕ್ಕಿಗ ಡೇನಿಯಲ್ ಡೊಮ್ನಿಕ್ ಡಿ’ಸೋಜಾ ತೆರಳಿ ಪರಿಶೀಲನೆ ನಡೆಸಿದ್ದಾರೆ
ತಾರಸಿ ಮನೆಯ ಗೋಡೆ ಸಿಡಿದು ಕಂದಕ
ತಾರಸಿ ಮನೆಯ ಗೋಡೆ ಕೆಲವು ಭಾಗಗಳಲ್ಲಿ ಒಡೆದು ಹೋಗಿದೆ. ಮನೆಯ ಫ್ಯಾನ್, ಫ್ರಿಡ್ಜ್, ಬಲುºಗಳು, ವಿದ್ಯುತ್ ಸಂಪರ್ಕ, ಮಿಕ್ಸಿ ಸುಟ್ಟು ಹೋಗಿದ್ದು, ಅಸ್ತ್ರ ಒಲೆ ಒಡೆದು ಹೋಗಿದೆ. ಮನೆಯ ಗೋಡೆಯಲ್ಲಿ ಎರಡು ಮೂರು ಕಡೆ ಕಂದಕ ಸೃಷ್ಟಿಯಾಗಿದೆ. ವಿದ್ಯುತ್ ಸಂಪರ್ಕದ ಸ್ವಿಚ್ ಬೋರ್ಡ್, ಮೀಟರ್ ಬೋರ್ಡ್, ಪಂಪ್ ಸೆಟ್‌ನ ಸ್ವಿಚ್ ಬೋರ್ಡ್, ಬಲ್ಬ್, ವಯರಿಂಗ್ ಸಹಿತ ಎಲ್ಲವೂ ಸುಟ್ಟು ಕರಕಲಾಗಿದ್ದು ಒಂದೂವರೆ ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.