ಗ್ರಾಮ ಪಂಚಾಯತ್‌ಗಳಲ್ಲಿ ಇನ್ನು “ಜನರ ಯೋಜನೆ’!
Team Udayavani, Oct 24, 2022, 7:40 AM IST
ಕುಂದಾಪುರ: ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗುವಂತೆ ಎಲ್ಲ ದತ್ತಾಂಶಗಳನ್ನು ಸಂಗ್ರಹಿಸಲು ಸರಕಾರ ಮುಂದಾಗಿದೆ. “ಜನರ ಯೋಜನೆ’ ಹೆಸರಿನಲ್ಲಿ ಪ್ರತೀ ಪಂಚಾಯತ್‌ಗಳಲ್ಲೂ ದೂರದೃಷ್ಟಿ ಯೋಜನೆ ಮೂಲಕ ಮಾಹಿತಿ ಸಂಗ್ರಹ ನಡೆಸಲು ತರಬೇತಿ ಆರಂಭವಾಗಿದೆ.
ಏನಿದು ದೂರದೃಷ್ಟಿ ಯೋಜನೆ?
ಗ್ರಾ.ಪಂ. ಆಡಳಿತ ಅಸ್ತಿತ್ವಕ್ಕೆ ಬಂದಾಗ ಮುಂದಿನ 5 ವರ್ಷಗಳಲ್ಲಿ ಏನೆಲ್ಲ ಅಭಿವೃದ್ಧಿ ನಡೆಸಬೇಕು ಎನ್ನುವ ಯೋಜನೆಯೇ ದೂರದೃಷ್ಟಿ ಯೋಜನೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂ.ರಾಜ್ ಅಧಿನಿಯಮ, 1993 ಪ್ರಕರಣ 309-ಬಿ ಅನ್ವಯ ಗ್ರಾ.ಪಂ.ಗಳು ಹೊಸದಾಗಿ ರಚನೆಯಾದ ಕೂಡಲೇ 3 ತಿಂಗಳಲ್ಲಿ 5 ವರ್ಷಗಳ ದೂರದೃಷ್ಟಿ ಯೋಜನೆ ತಯಾರಿಸುವುದು ಕಡ್ಡಾಯ. ಸರ್ವತೋಮುಖ ಅಭಿವೃದ್ಧಿಗೆ, ಸಾಮಾಜಿಕ ನ್ಯಾಯ ಸ್ಥಾಪನೆಗೆ, ಸುರಕ್ಷಿತವಲ್ಲದ ವರ್ಗಗಳ ಹಿತಾಸಕ್ತಿಗೆ ಒತ್ತು ನೀಡಿ, ಎಲ್ಲ ವರ್ಗಗಳ ಜನರ ಅಗತ್ಯಗಳನ್ನು ನಿರ್ಧರಿಸಿ, ಅವುಗಳಿಗೆ ಆದ್ಯತೆ ನೀಡಿ ಅಭಿವೃದ್ಧಿಯಾಗುವಂತೆ ಯೋಜನೆಗಳನ್ನು ಸಿದ್ಧಪಡಿಸಬೇಕು.
ವೆಬ್ ಗ್ರಾ.ಪಂ. ವ್ಯಾಪ್ತಿಯ ಸಮಗ್ರ ಮಾಹಿತಿ ಗಳನ್ನು ಸಂಗ್ರಹಿಸಿ ಪಂಚತಂತ್ರ ತಂತ್ರಾಶದಲ್ಲಿ ದಾಖಲಿಸಬೇಕು. ಇದು ಮುಂದಿನ ದಿನ ಗಳಲ್ಲಿ ಕೇಂದ್ರ, ರಾಜ್ಯ ಸರಕಾರ ಯಾವುದೇ ಯೋಜನೆಗಳನ್ನು ಸುಲಭವಾಗಿ ಅನುಷ್ಠಾನಗೊಳಿಸಲು ಸಹ ಕಾರಿಯಾಗಲಿದೆ. ಎಲ್ಲಿಗೆ ಏನು ಆದ್ಯತೆ ಎನ್ನುವುದು ಸಾರ್ವಜನಿಕರು ಹಾಗೂ ಸರಕಾರಕ್ಕೆ ತಿಳಿಯಲಿದೆ. ಅಷ್ಟಲ್ಲದೆ ಕೆಲವು ವರ್ಷಗಳ ಹಿಂದೆ ಹೇಗಿತ್ತು, ಇಷ್ಟು ವರ್ಷಗಳ ಅನಂತರ ಗ್ರಾಮಕ್ಕೆ ಏನೆಲ್ಲ ಲಭಿಸಿದೆ ಎನ್ನುವ ಮಾಹಿತಿ ಸುಲಭದಲ್ಲಿ ಲಭ್ಯವಾಗಲಿದೆ.
ತರಬೇತಿ ಮೊದಲ ಹಂತವಾಗಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉಪಕಾರ್ಯದರ್ಶಿ ಗಳಿಗೆ ಬೆಂಗಳೂರಿನಲ್ಲಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಮೈಸೂರಿನಲ್ಲಿ ತರಬೇತಿ ನಡೆದಿದ್ದು, ಗ್ರಾ.ಪಂ. ಅಧ್ಯಕ್ಷ, ಸದಸ್ಯರಿಗೆ ಆಯಾ ತಾಲೂಕಿನಲ್ಲಿ ತರಬೇತಿ ನಡೆಯುತ್ತಿದೆ.
ಕೋಟ್ಯಂತರ ರೂ.ತರಬೇತಿಗಾಗಿಯೇ ಸರಕಾರ ಕೋಟ್ಯಂತರ ರೂ. ವ್ಯಯಿಸಿದೆ. ಹಾಜರಾದ 5,963 ಗ್ರಾ.ಪಂ.ಗಳ
68 ಸಾವಿರ ಸದಸ್ಯರಿಗೂ ದಿನಕ್ಕೆ 300 ರೂಗಳಂತೆ ಭತ್ತೆಯಿದ್ದು, 3 ದಿನಗಳ ತರಬೇತಿ ಆಯೋಜಿಸಲಾಗಿದೆ. ತರಬೇತಿ ನೀಡುವವರಿಗೆ 1,750 ರೂ. ದೊರೆಯಲಿದೆ. ಉಪಗ್ರಹ ಆಧಾರಿತ ತರಬೇತಿಯೂ ಒಳಗೊಂಡಿದ್ದು, ಉಪಗ್ರಹ ಬಾಡಿಗೆಯೇ ಗಂಟೆಗೆ ಅಂದಾಜು 3 ಲಕ್ಷ ರೂ. ಇದೆ.
ಸಮಿತಿ
ಯೋಜನ ತಂಡದಲ್ಲಿ ಗ್ರಾ.ಪಂ. ಸದಸ್ಯರು, ಪಿಡಿಒ, ಸಿಬಂದಿ, ನಿವೃತ್ತ ನೌಕರರು, ಸ್ಥಳೀಯ ವಿಷಯ ತಜ್ಞರು, ಸ್ಥಳೀಯ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳು, ಜಿಪಿಎಲ್‌ಎಫ್ ಪ್ರತಿನಿಧಿಗಳು, ಮಹಿಳಾ ಸ್ವಸಹಾಯ ಸಂಘಗಳ ಗುಂಪಿನ ಪ್ರತಿನಿ ಧಿ ಹಾಗೂ ಪಂಚಾಯತ್‌ಗೆ ಅವಶ್ಯ ಎನಿಸುವ ಇತರರು ಸದಸ್ಯರಾಗಿರುತ್ತಾರೆ. ಯೋಜನ ತಂಡದ ನೆರವಿನಿಂದ ವಾರ್ಡ್ ಸಭೆ, ಗ್ರಾಮ ಸಭೆ ಮಾಡುವುದು.
ಗ್ರಾಮವಾರು ಸಾಮಾಜಿಕ ಮತ್ತು ಸಂಪನ್ಮೂಲ ನಕ್ಷೆ ತಯಾರಿ, ಗ್ರಾಮ ಸಭೆಗಳಲ್ಲಿ ಜನರ ಸಹಭಾಗಿತ್ವದೊಡನೆ ಪ್ರಾಥಮಿಕ ಮತ್ತು ದ್ವಿತೀಯ ಅಂಕಿ-ಅಂಶಗಳ ಸಂಗ್ರಹಣೆ, ವಾಸ್ತವ ಸ್ಥಿತಿಯ ವಿಶ್ಲೇಷಣೆ ಮಾಡಿ, ಸಂಬಂಧಿ ಸಿದ ವಲಯಗಳ ಸಮನ್ವಯತೆಯಿಂದ ಆದ್ಯತೆಯಲ್ಲಿ ಗುರಿಗಳನ್ನು ನಿರ್ಧರಿಸುವುದು. ಪಂ. ಅನುಮೋದಿಸಿದ ಯೋಜನೆ ವೆಬ್‌ಸೈಟ್‌ನಲ್ಲಿ ಲಭ್ಯ.
ಈ ತಿಂಗಳಾತ್ಯಕ್ಕೆ ಸದಸ್ಯರ ತರಬೇತಿ ಪೂರ್ಣಗೊಳ್ಳಲಿದ್ದು, ಬಳಿಕ ಸ್ಥಳೀಯ ಸಮಿತಿ ರಚಿಸಿ ದೂರದೃಷ್ಟಿ ಯೋಜನೆ ತಯಾರಿಸಬೇಕು.
– ಶ್ರೀನಿವಾಸ ರಾವ್,
ಮುಖ್ಯ ಯೋಜನಾಧಿಕಾರಿ,
ಜಿ.ಪಂ. ಉಡುಪಿ
-ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Dandeli: ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದೊಳಗೆ ಹಾವು ಪ್ರತ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.