ನ. 7: ಬೈಂದೂರಿಗೆ ಸಿಎಂ ಬೊಮ್ಮಾಯಿ: ಸಾವಿರ ಕೋ.ರೂ.ಗೂ ಮಿಕ್ಕಿ ಅನುದಾನದ ಕಾಮಗಾರಿಗೆ ಚಾಲನೆ
Team Udayavani, Oct 24, 2022, 12:17 PM IST
ಕುಂದಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನ. 7 ರಂದು ಬೈಂದೂರಿಗೆ ಆಗಮಿಸಲಿದ್ದು, ಮನೆ-ಮನೆಗೆ ಕುಡಿಯುವ ನೀರು ಸಹಿತ ಸಾವಿರ ಕೋ.ರೂ. ಗೂ ಮಿಕ್ಕಿದ ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಬೈಂದೂರು ಕ್ಷೇತ್ರ ವ್ಯಾಪ್ತಿಯ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ಶಾಸಕ ಬಿ.ಎಂ. ಸುಕುಮಾರ್‌ಶೆಟ್ಟಿ ನೇತೃತ್ವದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದ್ದು, ಈ ವೇಳೆ ಮುಖ್ಯ ಮಂತ್ರಿಗಳು ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಯಾವೆಲ್ಲ ಕಾಮಗಾರಿ?
ಕ್ಷೇತ್ರದ ಪ್ರತಿ ಮನೆಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಜಲಜೀವನ್ ಸೇರಿದಂತೆ ಒಟ್ಟು ಅಂದಾಜು 750 ಕೋ.ರೂ. ಅನುದಾನ, 165 ಕೋ.ರೂ. ವೆಚ್ಚದ ಸಿದ್ದಾಪುರ ಏತ ನೀರಾವರಿ ಯೋಜನೆ, 80 ಕೋ.ರೂ. ವೆಚ್ಚದ ಮರವಂತೆ ಹೊರ ಬಂದರು ಕಾಮಗಾರಿಗಳಿಗೆ ಗುದ್ದಲಿ ನೆರವೇರಿಸಲಿದ್ದು, ಇದರೊಂದಿಗೆ 85 ಕೋ.ರೂ. ವೆಚ್ಚದ ಸೌಕೂರು ಏತ ನೀರಾವರಿ ಯೋಜನೆ, ಕೊಡೇರಿ ಬಂದರು ಕಾಮಗಾರಿಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಬಿಎಸ್‌ವೈ ಭಾಗಿ
ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಬಿ. ವೈ. ರಾಘವೇಂದ್ರ ಅವರು ಸಹ ಭಾಗವಹಿಸಲಿದ್ದಾರೆ.
ಸಿದ್ಧತೆ ನಡೆಯುತ್ತಿದೆ
ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು, ಸಿಎಂ ಬೊಮ್ಮಾಯಿ ಅವರು ನ. 7ರಂದು ಆಗಮಿಸಲಿದ್ದು, ಯಡಿಯೂರಪ್ಪ ಅವರು ಸಹ ಭಾಗವಹಿಸಲಿದ್ದಾರೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳು ನಡೆಯುತ್ತಿದೆ.
– ಬಿ.ಎಂ. ಸುಕುಮಾರ್‌ಶೆಟ್ಟಿ, ಶಾಸಕರು
ಇದನ್ನೂ ಓದಿ : ಸಿತ್ರಾಂಗ್ ಚಂಡಮಾರುತ: ಒಡಿಶಾ, ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆ ನಿರೀಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.