ಟಿ20 ವಿಶ್ವಕಪ್: ಆಸೀಸ್‌ಗೆ ಕಾದಿದೆ ಲಂಕಾ ಸ್ಪಿನ್ ಚಾಲೆಂಜ್
Team Udayavani, Oct 25, 2022, 8:00 AM IST
ಪರ್ತ್: ಸೂಪರ್-12 ಹಂತದಲ್ಲಿ ಸೋಲಿನ ಆರಂಭ ಕಂಡ ಹಾಲಿ ಚಾಂಪಿಯನ್ ಆಸ್ಟ್ರೇಲಿ ಯಕ್ಕೆ ಶ್ರೀಲಂಕಾದ ಸ್ಪಿನ್ ಸವಾಲು ಎದುರಾ ಗುವ ಸಾಧ್ಯತೆ ದಟ್ಟವಾಗಿದೆ. ಮಂಗಳ ವಾರದ ಏಕೈಕ ಮುಖಾಮುಖಿಯಲ್ಲಿ ಇತ್ತಂಡಗಳು ಎದುರಾಗಲಿವೆ.
ಕಪ್ ಉಳಿಸಿಕೊಳ್ಳುವ ಸಾಧ್ಯತೆಯನ್ನು ಹೊಂದಿರುವ ಕಾಂಗರೂ ಪಡೆಗೆ ಕಿವೀಸ್ 89 ರನ್ನುಗಳ ಬಲವಾದ ಆಘಾತವಿಕ್ಕಿತ್ತು. 17.1 ಓವರ್‌ಗಳಲ್ಲಿ ಆಸೀಸ್ 111 ರನ್ನಿಗೆ ಉದುರಿತ್ತು. ಇಂಥದೊಂದು ದೊಡ್ಡ ಸೋಲನ್ನು ಆರನ್ ಫಿಂಚ್ ಬಳಗ ನಿರೀಕ್ಷಿಸಿಯೇ ಇರಲಿಲ್ಲ. ಈ ಸೋಲಿನಿಂದ ಒಮ್ಮೆಲೇ ಹೊರಬರುವುದು ಸುಲಭವಲ್ಲ, ಹೊರಬರದ್ದಿರೆ ಉಳಿಗಾಲವಿಲ್ಲ. ಇದು ಆಸ್ಟ್ರೇಲಿಯದ ಸ್ಥಿತಿ.
ಇನ್ನೊಂದೆಡೆ ಶ್ರೀಲಂಕಾದ ಆತ್ಮವಿಶ್ವಾಸ ಬಹಳ ಎತ್ತರದಲ್ಲಿದೆ. ಅದೇನೂ ದೊಡ್ಡ ತಂಡವನ್ನು ಉರುಳಿಸಿಲ್ಲ. ಸೋಲಿಸಿದ್ದು ಅಷ್ಟೇನೂ ಅನುಭವಿಯಲ್ಲದ ಐರ್ಲೆಂಡ್ ಪಡೆಯನ್ನು. ಅಂತರ ಮಾತ್ರ ದೊಡ್ಡದು, 9 ವಿಕೆಟ್.
ಉರುಳಿದ 8 ಐರಿಷ್ ವಿಕೆಟ್‌ಗಳಲ್ಲಿ 5 ಸ್ಪಿನ್ನರ್‌ಗಳ ಪಾಲಾಗಿದ್ದವು. ಹೀಗಾಗಿ ಆಸೀಸ್ ವಿರುದ್ಧವೂ ಲಂಕಾ ಸ್ಪಿನ್ ಬಲವನ್ನೇ ಹೆಚ್ಚು ನೆಚ್ಚಿಕೊಂಡಿದೆ.
ವನಿಂದು ಹಸರಂಗ ಟ್ರಂಪ್‌ಕಾರ್ಡ್ ಆದಾರು ಎಂಬ ನಂಬಿಕೆ ಹೊಂದಿದೆ. ಈ ವಿಶ್ವಕಪ್‌ನಲ್ಲಿ ಅವರು ಸರ್ವಾಧಿಕ 9 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ ಆಫ್ಸ್ಪಿನ್ನರ್ ಮಹೀಶ್ ತೀಕ್ಷಣ ಕೂಡ ಅಪಾಯಕಾರಿ. ಇವರಿಬ್ಬರನ್ನು ಟಾರ್ಗೆಟ್ ಮಾಡುವುದು ತಮ್ಮ ಯೋಜನೆ ಎಂದು ಮಿಚೆಲ್ ಮಾರ್ಷ್ ಹೇಳಿದ್ದರಲ್ಲಿ ತಪ್ಪೇನಿಲ್ಲ.
ದಾಖಲೆಗಳಲ್ಲಿ ಆಸ್ಟ್ರೇಲಿಯ ತುಸು ಮುಂದಿದೆ. ಕಾಂಗರೂ ನೆಲದಲ್ಲಿ ಶ್ರೀಲಂಕಾ ಒಟ್ಟು 14 ಟಿ20 ಪಂದ್ಯಗಳನ್ನಾಡಿದ್ದು, ಆಸ್ಟ್ರೇಲಿಯ 7ರಲ್ಲಿ, ಲಂಕಾ 6ರಲ್ಲಿ ಗೆದ್ದಿದೆ. ಒಂದು ಪಂದ್ಯ ಟೈ ಆಗಿದೆ. ಇತ್ತಂಡಗಳ 4 ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಆಸೀಸ್ ಮೂರನ್ನು ಗೆದ್ದಿದೆ. ಉಳಿದೊಂದು ಪಂದ್ಯ ಲಂಕಾ ಪಾಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.