ರಿಷಿ ನಾಯಕತ್ವದಲ್ಲಿ ಬ್ರಿಟನ್‌ ಮುನ್ನಡೆಯಲಿ


Team Udayavani, Oct 25, 2022, 6:00 AM IST

ರಿಷಿ ನಾಯಕತ್ವದಲ್ಲಿ ಬ್ರಿಟನ್‌ ಮುನ್ನಡೆಯಲಿ

ಬ್ರಿಟನ್‌ನ ಪ್ರಧಾನಿ ಹುದ್ದೆಗೆ ರಿಷಿ ಸುನಕ್‌ ನಿಯೋಜನೆಗೊಂಡಿರುವುದು ಭಾರತೀಯರಲ್ಲಿ ಹರ್ಷ, ಹೆಮ್ಮೆ ಇಮ್ಮಡಿಗೊಳಿಸಿವೆ. ಈ ಹಿಂದೆ ಅಮೆರಿಕದ ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್‌ ಆಯ್ಕೆಯಾದಾಗ ಉಂಟಾದ ಸಂತೋಷಕ್ಕಿಂತ ಇದು ಹೆಚ್ಚಿನದು. ಅದಕ್ಕೆ ಕಾರಣಗಳಿವೆ.

ಬ್ರಿಟನ್‌ ಒಂದು ಕಾಲದಲ್ಲಿ “ಸೂರ್ಯ ಮುಳುಗದ ನಾಡು’ ಎಂಬ ಉಪಾಧಿ ಹೊಂದಿತ್ತು. ಜಗತ್ತಿನೆಲ್ಲೆಡೆ ಅದು ವಸಾಹತುಗಳನ್ನು ಹೊಂದಿ ದ್ದುದೇ ಇದರ ಹಿಂದಿದ್ದ ಕಾರಣ. ಭಾರತವೂ ಅವುಗಳ ಪೈಕಿ ಒಂದಾಗಿದ್ದನ್ನು ಮರೆಯುವಂತಿಲ್ಲ. ಸರಿಸುಮಾರು 1858ರಲ್ಲಿ ಆರಂಭಗೊಂಡಿದ್ದ ವಸಾಹತುಶಾಹಿ ಆಳ್ವಿಕೆ ಕೊನೆಗೊಂಡುದು 1947ರಲ್ಲಿ. ಸುಮಾರು ಒಂದು ಶತಮಾನದಷ್ಟು ಕಾಲ ಭಾರತವು ಬ್ರಿಟನ್‌ನ ಅಧೀನದಲ್ಲಿತ್ತು.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ಈ 75 ವರ್ಷಗಳಲ್ಲಿ ಜಾಗತಿಕ ರಾಜಕೀಯ, ಆರ್ಥಿಕ ಆಗುಹೋಗುಗಳಲ್ಲಿ ಅನೂಹ್ಯ ಎಂಬಂತಹ ಬದಲಾವಣೆಗಳಾಗಿವೆ. ಬ್ರಿಟನ್‌ನ “ಸೂರ್ಯ ಮುಳುಗದ ನಾಡು’ ಎಂಬ ಬಿರುದು ಜೀರ್ಣವಾಗಿದೆ. ಇಷ್ಟು ಮಾತ್ರ ಅಲ್ಲ; ನಿರ್ದಿಷ್ಟವಾಗಿ ಹೇಳಬೇಕೆಂದರೆ ಕೊರೊನೋತ್ತರ ಕಾಲಘಟ್ಟ ಮತ್ತು ಅದಕ್ಕೆ ಹಿಂದಿನ ಕೆಲವು ವರ್ಷಗಳಿಂದ ಈಚೆಗೆ ಬ್ರಿಟನ್‌ ಸ್ವತಃ ಭಾರೀ ಆರ್ಥಿಕ ಹಿನ್ನಡೆ – ಬಿಕ್ಕಟ್ಟನ್ನು ಅನುಭವಿಸಿದೆ. ಅನುಭವಿಸುತ್ತಿದೆ.

ರಿಷಿ ಸುನಕ್‌ ಪ್ರಧಾನಿ ಪಟ್ಟಕ್ಕೇರುವ ಮುನ್ನುಡಿ ಬರೆದದ್ದು ಪ್ರಧಾನಿ ಬೋರಿಸ್‌ ಜಾನ್ಸನ್‌ ರಾಜೀನಾಮೆ. ಅದಾಗಿ ಭಾರತೀಯ ಮೂಲ ಮತ್ತು ಭಾರತದ ಜತೆಗಿನ ಸಂಬಂಧವನ್ನು ವಿವಾಹದ ಮೂಲಕ ಮತ್ತಷ್ಟು ಗಟ್ಟಿಗೊಳಿಸಿಕೊಂಡಿರುವ ರಿಷಿ ಪ್ರಧಾನಿ ಹುದ್ದೆಯ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದರು. ಬೋರಿಸ್‌ ಜಾನ್ಸನ್‌ ಸಂಫ‌ುಟದಲ್ಲಿ ರಿಷಿ ವಿತ್ತ ಸಚಿವರಾಗಿದ್ದವರು. ಕೊರೊನಾ ವೇಳೆ ಅವರ ವಿತ್ತೀಯ ನೀತಿ ಮತ್ತು ನಿರ್ವಹಣೆ ಜಗಮೆಚ್ಚುಗೆ ಗಳಿಸಿ ಬ್ರಿಟಿಷ್‌ ಆರ್ಥಿಕತೆ ಯನ್ನು ಸರಿಯಾದ ದಾರಿಯತ್ತ ಕೊಂಡೊಯ್ದಿತ್ತು. ಆದರೂ ಪ್ರಧಾನಿ ಹುದ್ದೆಗೆ ಸ್ಪರ್ಧೆ ವೇಳೆ ಅಪಪ್ರಚಾರದಿಂದ ಹಿನ್ನಡೆಯಾಯಿತು. ಆರಂಭದಲ್ಲಿ ಅವರು ಮುಂಚೂಣಿಯಲ್ಲಿದ್ದರೂ ಬಳಿಕ ಲಿಜ್‌ ಟ್ರಸ್‌ ಮುನ್ನೆಲೆಗೆ ಬಂದು ಅವರೇ ಆಯ್ಕೆಯಾಗಿದ್ದರು. ಮುಂದಿನ ನಾಟಕೀಯ ನಡೆಯಲ್ಲಿ ಲಿಜ್‌ ಪದತ್ಯಾಗ ಮಾಡಿದರು. ಅದಕ್ಕೆ ಮುನ್ನ ಪ್ರಚಾರದ ಸಂದರ್ಭದಲ್ಲಿ ಇದೇ ರಿಷಿ ಸುನಕ್‌ ಅವರು ಬಿಂಬಿಸಿದ್ದ ಆರ್ಥಿಕ ನೀತಿಗಳ ವೈಫ‌ಲ್ಯದ ಬಗ್ಗೆ ಭವಿಷ್ಯ ನುಡಿದಿದ್ದರು ಟ್ರಸ್‌. ರಿಷಿ ಸುನಕ್‌ ಪುನರಾಗಮನ ಅವರ ವಿತ್ತೀಯ ದೂರದೃಷ್ಟಿ, ವಿತ್ತೀಯ ನೀತಿಗಳು ಸರಿಯಾಗಿವೆ ಎಂಬುದನ್ನು ಶ್ರುತಪಡಿಸುವಂತಿದೆ. ಆರಂಭದಲ್ಲಿ ಹೇಳಿದ ಹಾಗೆ ಯಾವ ದೇಶದ ವಸಾಹತುವಾಗಿ ನಾವಿದ್ದೆವೋ ಅದೇ ದೇಶದ ಪ್ರಧಾನಿಯಾಗಿ ಭಾರತೀಯ ಮೂಲದವರೊಬ್ಬರು ಆಯ್ಕೆಯಾ ಗಲಿದ್ದಾರೆ ಎಂಬ ಸಂಗತಿ ಹರ್ಷ ಮತ್ತು ಹೆಮ್ಮೆ ತಂದಿರುವುದು ಸಹಜ.

ರಿಷಿ ಆಯ್ಕೆ ಇತಿಹಾಸಕ್ಕೆ ಉತ್ತರ ಎಂಬ ಹರ್ಷದ ನಡುವೆ ವರ್ತಮಾನವನ್ನು ಮರೆಯಲಾಗದು. ಪ್ರಧಾನಿಯಾಗಿ ಭಾರತದ ಜತೆಗಿನ ಸಂಬಂಧದ ವಿಚಾರದಲ್ಲಿ ರಿಷಿ ಪೂರಕ ಹೆಜ್ಜೆಗಳನ್ನು ಇರಿಸುತ್ತಾರೆಂಬ ನಿರೀಕ್ಷೆ ಭಾರತದ್ದೂ ಸಹ. ಭಾರತದಿಂದ ಕಲಿಕೆ ಮತ್ತು ಉದ್ಯೋಗಕ್ಕಾಗಿ ತೆರಳುವ ಅನಿವಾಸಿ ಭಾರತೀಯರ ಸಂಖ್ಯೆ ಚಿಕ್ಕದಿಲ್ಲ. ಅವರ ಹಿತಕ್ಕೆ ಪೂರಕವಾದ ನೀತಿಗಳು ರೂಪುಗೊಳ್ಳಲಿ ಎಂಬ ಒತ್ತಾಸೆಯೂ ಇದೆ. ಕರ್ನಾಟಕದ ಮಟ್ಟಿಗೆ ಹೆಚ್ಚು ನಿಕಟ ಸಂಬಂಧ ಹೊಂದಿರುವ ರಿಷಿ ಸುನಕ್‌ ಈ ಅಭಿಮತಕ್ಕೆ ಪೂರಕವಾಗಿ ನಡೆದುಕೊಳ್ಳಲಿ. ಶುಭ ಹಾರೈಕೆಗಳು.

ಟಾಪ್ ನ್ಯೂಸ್

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.