ಮಂಗಳವಾರದ ರಾಶಿ ಫಲ : ಉತ್ತಮ ಧನಾರ್ಜನೆ ಇದ್ದರೂ ವಿಚಾರಿಸಿ ಕಾರ್ಯನಿರ್ವಹಿಸಿ
Team Udayavani, Oct 25, 2022, 7:30 AM IST
ಮೇಷ: ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಕಾರ್ಯನಿರ್ವಹಿಸಿದರೆ ಯಶಸ್ಸು. ಉದ್ಯೋಗ ದಲ್ಲಿ ಶ್ರಮ ಅಧಿಕ. ಧನಾರ್ಜನೆಗೆ ಕೊರತೆ ಇರದು. ಗೃಹೋಪಕರಣ ವಸ್ತು ಸಂಗ್ರಹದಲ್ಲಿ ಅನುಕೂಲ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗುವ ಕಾಲ.
ವೃಷಭ: ಬರಹಗಾರರಿಗೆ, ಆಹಾರೋಧ್ಯಮಿ ಗಳಿಗೆ, ಪಾಲುದಾರಿಕಾ ವ್ಯವಹಾರಸ್ಥರಿಗೆ ಅನುಕೂಲಕರ ಸಮಯ. ದೂರ ಪ್ರದೇಶದ ಭೂ. ಕಟ್ಟಡ ವಾಹನಾದಿ ವಿಚಾರದಲ್ಲಿ ಬದಲಾವಣೆ. ಉನ್ನತ ಅಧಿಕಾರಕ್ಕಾಗಿ ಶ್ರಮ. ದಾಂಪತ್ಯ ಸುಖಕರ.
ಮಿಥುನ: ಸಂಶಯಕ್ಕೆ ಅವಕಾಶ. ಮಾಡದೇ ಕಾರ್ಯ ಕ್ಷೇತ್ರದಲ್ಲಿ ಯಶಸ್ಸಿಗೆ ಪ್ರಯತ್ನಿಸಿ ಸ್ಥಿರವಾದ ಧನಸಂಪತ್ತು. ಆರೋಗ್ಯದಲ್ಲಿ ಗಮನಹರಿಸಿ. ಸಾಂಸಾರಿಕ ವಿಚಾರದಲ್ಲಿ ಸಮಾಧಾನದಿಂದ ಕಾರ್ಯನಿರ್ವಹಿಸಿ. ಪ್ರಯಾಣ ಲಾಭಕರ. ಉದ್ಯೋಗದಲ್ಲಿ ಬದಲಾವಣೆ.
ಕರ್ಕ: ಆರೋಗ್ಯದ ಬಗ್ಗೆ ಗಮನಿಸಿ. ಅಧಿಕ ದೈಹಿಕ ಶ್ರಮ. ಧನಾರ್ಜನೆ, ಮಿತ್ರರ ವಿಚಾರ, ಅಧ್ಯಯನ ವಿಚಾರ, ಉದ್ಯೋಗ, ಸ್ಥಾನ ಗೌರವ ಅಭಿವೃದ್ಧಿ. ಮಾತನಾಡುವಾಗ ಚರ್ಚೆಗೆ ಅವಕಾಶ ನೀಡದಿರಿ. ಗುರುಹಿರಿಯರೊಂದಿಗೆ ಸಂಯಮದಿಂದಿರಿ.
ಸಿಂಹ: ದೈಹಿಕ ಮಾನಸಿಕ ಒತ್ತಡವಿದ್ದರೂ ಸಹೋದರಾದಿಗಳಿಂದಲೂ ಕಾರ್ಮಿಕ ವರ್ಗದವರಿಂದ ಸಹಾಯ ಲಭಿಸಿ ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ಮುನ್ನಡೆ. ಧನಾರ್ಜನೆಗೆ ಕೊರತೆ ಆಗದು. ಪರರ ವಿಚಾರದಲ್ಲಿ ಜಾಗ್ರತೆಯಿಂದ ವ್ಯವಹರಿಸಿ.
ಕನ್ಯಾ: ಉತ್ತಮ ಧನಾರ್ಜನೆ ಇದ್ದರೂ ವಿಚಾರಿಸಿ ಕಾರ್ಯನಿರ್ವಹಿಸಿ. ದಾಕ್ಷಿಣ್ಯ ಪ್ರವೃತ್ತಿ ಸಲ್ಲದು. ಪಾಲುದಾರಿಕಾ ಕ್ಷೇತ್ರದಲ್ಲಿ ಬದಲಾವಣೆ. ವಿದ್ಯಾರ್ಥಿಗಳು ಶ್ರಮ ವಹಿಸಿದರೆ ಉತ್ತಮ ಫಲ. ದಾಂಪತ್ಯದಲ್ಲಿ ಸಹಕಾರ ಪ್ರೋತ್ಸಾಹ ಅಗತ್ಯ. ಧಾರ್ಮಿಕ ಕಾರ್ಯಗಳಲ್ಲಿ ತಲ್ಲೀನತೆ.
ತುಲಾ: ಸುಖ ಸಂತೋಷದಿಂದ ಕೂಡಿದ ದಿನ. ಬಂಧು ಮಿತ್ರರ ಸಹಕಾರ ಪ್ರೋತ್ಸಾಹ. ವಾಹನ ಆಸ್ತಿ ವಿಚಾರದಲ್ಲಿ ಮುನ್ನಡೆ. ನಿರಂತರ ಧನಾರ್ಜನೆ. ಉತ್ತಮ ವಾಕ್‌ಚತುರತೆಯಿಂದಲೂ ಜವಾಬ್ದಾರಿಯಿಂದ ಕೂಡಿದ ಕಾರ್ಯ ವೈಖರಿ. ದಾಂಪತ್ಯ ಸುಖ ವೃದ್ಧಿ.
ವೃಶ್ಚಿಕ: ದೂರ ಸಂಚಾರ ಸಂಭವ. ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಒತ್ತಡ ಜವಾಬ್ದಾರಿ. ಧನಾರ್ಜನೆಗೆ ಕೊರತೆ ಆಗದು. ಅನ್ಯರಿಂದ ಸಹಾಯ ನಿರೀಕ್ಷಿಸದಿರಿ. ಗೃಹದಲ್ಲಿ ಶಾಂತಿ ಕಾಪಾಡಿ. ಅನಾವಶ್ಯಕ ಚರ್ಚೆಗೆ ಆಸ್ಪದ ನೀಡದಿರಿ.
ಧನು: ಕೆಲಸ ಕಾರ್ಯಗಳಲ್ಲಿ ಗೌರವ ಕೀರ್ತಿ ಸಂಪಾದನೆ ಪ್ರಗತಿ. ಹೆಚ್ಚಿದ ಸ್ಥಾನ ಧನ ಲಾಭ. ಉತ್ತಮ ವಾಕ್‌ಚತುರತೆ. ಗುರುಹಿರಿಯರ ಸಹಕಾರ ಪ್ರೋತ್ಸಾಹ. ಆರೋಗ್ಯ ವೃದ್ಧಿ. ಮಕ್ಕಳಿಂದ ಸರ್ವ ವಿಧದ ಸೌಲಭ್ಯ ಪ್ರಾಪ್ತಿ.
ಮಕರ: ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಸಮಯ ಸಂದರ್ಭಕ್ಕೆ ಸರಿಯಾಗಿ ನಿಪುಣತೆ ಪ್ರದರ್ಶನ. ಬಂಧು ಮಿತ್ರರ ಸಹಕಾರ ಸಂತೋಷ. ದಂಪತಿಗಳಲ್ಲಿ ಅನ್ಯೂನ್ಯತೆಗೆ ಕೊರತೆಯಾಗ ದಂತೆ ವ್ಯವಹರಿಸಿ. ಮಕ್ಕಳ ಸಂತೋಷ ವೃದ್ಧಿ.
ಕುಂಭ: ಸಣ್ಣ ಪ್ರಯಾಣ ಸಂಭವ. ಸಹೋದರ ಸಮಾನರಿಂದಲೂ ಸಹೋದ್ಯೋಗಿ ಗಳಿಂದಲೂ ಸಹಕಾರ ಪ್ರಾಪ್ತಿ. ಉದ್ಯೋಗ ವ್ಯವಹಾರ ಗಳಲ್ಲಿ ಪರಿಶ್ರಮದಿಂದ ಯಶಸ್ಸು ಲಭ್ಯ. ಗೃಹೋಪಕರಣ ವಸ್ತುಗಳಿಗಾಗಿ ಧನ ವ್ಯಯ. ದಾಂಪತ್ಯ ತೃಪ್ತಿದಾಯಕ.
ಮೀನ: ಆರೋಗ್ಯ ವೃದ್ದಿ. ದೀರ್ಘ ಪ್ರಯಾಣ ಸಂಭವ. ನೂತನ ಮಿತ್ರರ ಭೇಟಿ. ಕೆಲಸ ಕಾರ್ಯಗಳಲ್ಲಿ ಸರಿಯಾದ ನಿರ್ಣಯದಿಂದ ತೃಪ್ತಿ. ಪರರಿಂದ ಬರಬೇಕಾದ ಧನ ಪ್ರಾಪ್ತಿ. ಮಕ್ಕಳಿಂದ ಸಂತೋಷ. ಬಂಧು ಮಿತ್ರರಲ್ಲಿ ಸಂಯಮದಿಂದ ವ್ಯವಹರಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.