ಬಾಂಗ್ಲಾದೇಶದಲ್ಲಿ ಸಿತ್ರಂಗ್ ಚಂಡಮಾರುತದ ಹಾವಳಿ: 9 ಮಂದಿ ಬಲಿ; ಭಾರತದ ಹಲವೆಡೆ ಭಾರೀ ಮಳೆ
Team Udayavani, Oct 25, 2022, 10:24 AM IST
ಢಾಕಾ: ಇತ್ತ ಭಾರತ ದೀಪಾವಳಿ ಸಂಭ್ರಮದಲ್ಲಿದ್ದರೆ, ಅತ್ತ ನೆರೆಯ ಬಾಂಗ್ಲಾ ದೇಶವು ಚಂಡಮಾರುತದಿಂದ ತತ್ತರಿಸುತ್ತಿದೆ. ಸಿತ್ರಂಗ್ ಚಂಡಮಾರುತವು ಬಾಂಗ್ಲಾ ದೇಶದಲ್ಲಿ ಇದುವರೆಗೆ 9 ಬಲಿ ಪಡೆದಿದೆ.
ಕುಮಿಲ್ಲಾದಲ್ಲಿ ಒಂದು ಕುಟುಂಬದ ಮೂವರು, ಭೋಲಾದಲ್ಲಿ ಇಬ್ಬರು ಮತ್ತು ನರೈಲ್, ಶರಿಯತ್‌ಪುರ, ಬರ್ಗುನಾ ಮತ್ತು ಢಾಕಾದಲ್ಲಿ ತಲಾ ಒಬ್ಬರು ಸೇರಿದಂತೆ9 ಮಂದಿ ಅಸುನೀಗಿದ್ದಾರೆ. ಭಾರೀ ಗಾಳಿಗೆ ಬೇರು ಸಮೇತ ಮರಗಳು ನೆಲಕ್ಕುರುಳಿದಿವೆ. ರಸ್ತೆಗಳ ಮೇಲೆ ಮರಗಳು ಬಿದ್ದಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.
ಚಂಡಮಾರುತದ ಪರಿಣಾಮ ಕರಾವಳಿ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್‌ಗಳು ಮತ್ತು ಇಂಟರ್ನೆಟ್ ಸೇವೆಗಳ ಮೇಲೂ ಪರಿಣಾಮ ಬೀರಿದೆ. ನೆಟ್‌ವರ್ಕ್ ಪುನಃಸ್ಥಾಪಿಸಲಾಗಿದ್ದು, ಪಿರೋಜ್ ಪುರ ಮತ್ತು ಮದರಿಪುರ ಜಿಲ್ಲೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ಇದನ್ನೂ ಓದಿ:ಕಾಂತಾರಕ್ಕೆ ಸಂಕಷ್ಟ; ‘ವರಾಹಂ ರೂಪಂ’ ಟ್ಯೂನ್ ನಮ್ಮಿಂದ ಕದ್ದಿದ್ದು ಎಂದ ‘ನವರಸಂ’ ತಂಡ
ಬಾಂಗ್ಲಾ ಸರ್ಕಾರವು 15 ಕರಾವಳಿ ಜಿಲ್ಲೆಗಳಲ್ಲಿ 7,030 ಆಶ್ರಯ ಕೇಂದ್ರಗಳನ್ನು ತೆರೆದಿದೆ. ಕಡಲ ತೀರದ ಜನರನ್ನು ಸ್ಥಳಾಂತರಿಸಿ ಈ ಆಶ್ರಯ ಕೇಂದ್ರಗಳಿಗೆ ಕಳುಹಿಸಲಾಗಿದೆ. ಎರಡು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಇದುವರೆಗೆ ಈ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವರದಿ ತಿಳಿಸಿದೆ.
ಸದ್ಯ ಚಂಡಮಾರುತದ ಅಬ್ಬರ ಸದ್ಯ ಕಡಿಮೆಯಾಗಿದೆ. ಆದರೆ ಕರಾವಳಿ ಭಾಗಗಳಲ್ಲಿ ಮಳೆ ಮುಂದುವರಿದಿದೆ.
‘ಸಿತ್ರಂಗ್’ ಚಂಡಮಾರುತದ ಪ್ರಭಾವದ ಅಡಿಯಲ್ಲಿ, ಸೋಮವಾರ ಅಸ್ಸಾಂ, ಮೇಘಾಲಯ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಭಾರೀ ಮಳೆಯನ್ನು ಸೂಚಿಸುವ ರೆಡ್ ಅಲರ್ಟ್ ಘೋಷಿಸಲಾಗಿದೆ.
Deep Depression over Bangladesh (Remnant of Cyclonic Storm “SITRANG”) further weakened into a Depression and lay centered at 0530 hrs IST of over northeast Bangladesh and neighborhood about 90 km north-northeast of Agartala, and 100 km south-southwest of Shillong. pic.twitter.com/vCukmXmUFe
— India Meteorological Department (@Indiametdept) October 25, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.