ರಿಷಿ ಸುನಕ್ ಕುರಿತ ಆನಂದ್ ಮಹೀಂದ್ರ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್…
ಹಾಸ್ಯದ ಮತ್ತು ವ್ಯಂಗ್ಯ ಸಂದೇಶಗಳು ಯಾವಾಗಲೂ ನೆಟ್ಟಿಗರ ಹೃದಯವನ್ನು ಗೆಲ್ಲುತ್ತವೆ.
Team Udayavani, Oct 25, 2022, 1:29 PM IST
ಹೊಸದಿಲ್ಲಿ: ಯುನೈಟೆಡ್ ಕಿಂಗ್‌ಡಂನ ಭಾರತೀಯ ಮೂಲದ ಮೊದಲ ಪ್ರಧಾನ ಮಂತ್ರಿಯಾದ ರಿಷಿ ಸುನಕ್ ಅವರನ್ನು ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಶ್ಲಾಘಿಸಿದ್ದಾರೆ.
ಆದರೆ ಬಿಲಿಯನೇರ್ ಕೈಗಾರಿಕೋದ್ಯಮಿ ಯುನೈಟೆಡ್ ಕಿಂಗ್‌ಡಂನ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅವರನ್ನು ಉಲ್ಲೇಖಿಸಿ ಮಾಡಿದ ಟ್ವೀಟ್ ಇಂಟರ್ನೆಟ್‌ನಲ್ಲಿ ಹಲವರ ಹೃದಯಗಳನ್ನು ಗೆಲ್ಲುತ್ತಿದೆ.
“…ಎಲ್ಲಾ ಭಾರತೀಯ ನಾಯಕರು ಅಲ್ಪ ಸಾಮರ್ಥ್ಯ ಉಳ್ಳವರು ಮತ್ತು ತೇಜೋಹೀನ ಪುರುಷರಾಗಿರುತ್ತಾರೆ” ಎಂದು ಚರ್ಚಿಲ್ ಹೇಳಿದ್ದಾರೆ. ಆದರೆ ಇಂದು, ನಮ್ಮ ಸ್ವಾತಂತ್ರ್ಯದ 75 ನೇ ವರ್ಷದಲ್ಲಿ, ನಾವು ಭಾರತೀಯ ಮೂಲದ ವ್ಯಕ್ತಿಯೊಬ್ಬರು ಯುಕೆ ಪ್ರಧಾನಿಯಾಗಿ ಪಟ್ಟಾಭಿಷೇಕಗೊಳ್ಳುವುದನ್ನು ನಾವು ಉತ್ಸುಕರಾಗಿದ್ದೇವೆ” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಕೊನೆಗೆ ಜೀವನವೇ ಸುಂದರ.., ಎಂದು ಅವರು ಟ್ವಿಟರ್‌ನಲ್ಲಿ ಉಲ್ಲೇಖಿಸಿದ್ದಾರೆ.
In 1947 on the cusp of Indian Independence, Winston Churchill supposedly said “…all Indian leaders will be of low calibre & men of straw.” Today, during the 75th year of our Independence, we’re poised to see a man of Indian origin anointed as PM of the UK. Life is beautiful…
— anand mahindra (@anandmahindra) October 24, 2022
ಮಹೀಂದ್ರಾ ಅವರ ಈ ಪೋಸ್ಟ್ 14.3k ಗೂ ಹೆಚ್ಚು ರಿಟ್ವೀಟ್‌ಗಳು, 917 ಕ್ಕೂ ಹೆಚ್ಚು ಕೋಟ್ ಟ್ವೀಟ್‌ಗಳು ಮತ್ತು 93.7k ಲೈಕ್‌ಗಳನ್ನು ಗಳಿಸಿದೆ. ಜನಪ್ರಿಯ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರ ಇಂತಹ ಮಾಹಿತಿಯುತ, ಪ್ರಶಂಸನಾರ್ಹ, ಹಾಸ್ಯದ ಮತ್ತು ವ್ಯಂಗ್ಯ ಸಂದೇಶಗಳು ಯಾವಾಗಲೂ ನೆಟ್ಟಿಗರ ಹೃದಯವನ್ನು ಗೆಲ್ಲುತ್ತವೆ.
ರಿಷಿ ಸುನಕ್ ಪೂರ್ವ ಆಫ್ರಿಕಾದಿಂದ ಬ್ರಿಟನ್‌ಗೆ ವಲಸೆ ಬಂದ ಭಾರತೀಯ ಮೂಲದ ಪೋಷಕರಿಗೆ ಸೌತಾಂಪ್ಟನ್ ಎಂಬಲ್ಲಿ ಸುನಕ್ ಜನಿಸಿದರು. ಸುನಕ್ ಅವರು ಇನ್ಫೋಸಿಸ್ ,ಬಿಲಿಯನೇರ್ ಉದ್ಯಮಿ ಎನ್‌ಆರ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿ ಅಳಿಯ (ಪುತ್ರಿ ಅಕ್ಷತಾ ಮೂರ್ತಿಜತೆ ವಿವಾಹ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.