![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Oct 25, 2022, 2:47 PM IST
ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿ ಎಂದು ಘೋಷಣೆ ಆಗುತ್ತಿರುವಂತೆಯೇ ಭಾರತದಲ್ಲಿ ಮೀಮ್‌ಗಳ ಹೊಳೆಯೇ ಹರಿದಿದೆ. ಈ ಅವಕಾಶವನ್ನು ಬಳಸಿಕೊಂಡ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸೃಜನಶೀಲತೆಯನ್ನು ಬಳಸಿಕೊಂಡು, ಹಾಸ್ಯದ ತುಣುಕುಗಳನ್ನು ಹರಿಬಿಟ್ಟಿದ್ದಾರೆ. ಸುನಕ್ ಅವರು ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಆಶಿಷ್ ನೆಹ್ರಾರನ್ನು ಹೋಲುವ ಕಾರಣ, ಅದನ್ನಿಟ್ಟುಕೊಂಡೇ ಟ್ವಿಟರ್‌ನಲ್ಲಿ ಅನೇಕರು ಮೀಮ್‌ಗಳನ್ನು ಹರಿಬಿಟ್ಟಿದ್ದಾರೆ. ಆ ಪೈಕಿ ಕೆಲವನ್ನು ಇಲ್ಲಿ ನೀಡಲಾಗಿದೆ:
ರಿಷಿ ಸುನಕ್ ಮತ್ತು ಆಶಿಷ್ ನೆಹ್ರಾ ವಾಸ್ತವದಲ್ಲಿ ಅಣ್ಣ-ತಮ್ಮ ಆಗಿರಬಹುದು. ಕುಂಭಮೇಳದಲ್ಲಿ ಅವರಿಬ್ಬರೂ ಕಳೆದು ಹೋಗಿದ್ದಿರಬಹುದು.
***
ಯುಕೆ ಪ್ರಧಾನಿಯಾಗಿ ನೇಮಕಗೊಂಡ ಆಶಿಷ್ ನೆಹ್ರಾರಿಗೆ ಅಭಿನಂದನೆಗಳು. ಈಗಲಾದರೂ “ಅದನ್ನು’ (ಕೊಹಿನೂರ್) ವಾಪಸ್ ತನ್ನಿ.
ರಿಷಿ ಸುನಕ್ ಪ್ರಧಾನಿಯಾಯ್ತು. ಈಗ ಕೊಹಿನೂರ್ ವಜ್ರ ವಾಪಸ್ ತರಲು ಒಳ್ಳೆ ಐಡಿಯಾ ಕೊಡುತ್ತೇನೆ.
1. ಮೊದಲು ಸುನಕ್‌ರನ್ನು ಭಾರತಕ್ಕೆ ಆಹ್ವಾನಿಸುವುದು.
2. ತಮ್ಮ ಮಾವನ ಮನೆಗೆ ಹೋಗುತ್ತಾ, ಬೆಂಗಳೂರು ಟ್ರಾಕ್‌ನಲ್ಲಿ ಸಿಕ್ಕಿಹಾಕಿಕೊಂಡಾಗ ಅವರನ್ನು ಕಿಡ್ನ್ಯಾಪ್ ಮಾಡುವುದು.
3. ಆಶಿಷ್ ನೆಹ್ರಾರನ್ನು ಯುಕೆ ಪ್ರಧಾನಿ ಎಂದು ಹೇಳಿ ಬ್ರಿಟನ್‌ಗೆ ಕಳುಹಿಸುವುದು.
4. ಕೊಹಿನೂರ್ ಅನ್ನು ಭಾರತಕ್ಕೆ ವಾಪಸ್ ಕೊಡುವ ಬಗ್ಗೆ ವಿಧೇಯಕವನ್ನು ಅಂಗೀಕರಿಸುವುದು. (ಇದಕ್ಕೆ ಪ್ಲ್ರಾನ್ “ಬಿ’ ಅಗತ್ಯವಿಲ್ಲ)
***
ಆಶಿಷ್ ನೆಹ್ರಾರಿಗೆ ಅಭಿನಂದನೆಗಳು. 2003ರಲ್ಲಿ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ 6 ವಿಕೆಟ್‌ಗಳನ್ನು ಪಡೆಯುವುದರಿಂದ ಹಿಡಿದು ಈಗ ಇಂಗ್ಲೆಂಡ್‌ನ ಪ್ರಧಾನಿಯಾಗುವವರೆಗೆ… ಎಂಥಾ ಅದ್ಭುತ
ಪಯಣ.
***
ಇಮ್ರಾನ್ ಖಾನ್ ಬಳಿಕ ದೇಶವೊಂದರ ಪ್ರಧಾನಿ ಪಟ್ಟಕ್ಕೆ ಏರಿರುವ 2ನೇ ಕ್ರಿಕೆಟರ್ ಆಶಿಷ್ ನೆಹ್ರಾ. ಅಭಿನಂದನೆಗಳು
***
ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿರುವ ಕಾರಣ, ಆಶಿಷ್ ನೆಹ್ರಾರ ಭದ್ರತೆಯನ್ನು ಹೆಚ್ಚಿಸಬೇಕಾಗಿ ವಿನಂತಿ.
You seem to have an Ad Blocker on.
To continue reading, please turn it off or whitelist Udayavani.