ಬುಧವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ
Team Udayavani, Oct 26, 2022, 8:02 AM IST
ಮೇಷ: ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ. ಹಠಮಾರಿತನದ ಪ್ರವೃತ್ತಿಯಿಂದ ನಷ್ಟ ಸಾಧ್ಯತೆ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಆರೋಗ್ಯ ಗಮನಿಸಿ. ಪರೋಪಕಾರ ಮಾಡುವಾಗ ತಿಳಿದು ಮಾಡಿ. ಆತುರದ ನಿರ್ಣಯ ಮಾಡದಿರಿ.
ವೃಷಭ: ವಸ್ತ್ರ, ಆಭರಣ, ಆಹಾರ ಹೈನುಗಾರಿಕೆ ವ್ಯವಹಾರಸ್ಥರಿಗೆ ಅನುಕೂಲ. ವಿವಾಹ ವಿಚಾರದಲ್ಲಿ ಪ್ರಗತಿ. ಸಹೋದರಾದಿ ವರ್ಗದವರಿಗೆ ಅಭಿವೃದ್ಧಿ. ಆರೋಗ್ಯದಲ್ಲಿ ಚೇತರಿಕೆ. ಜವಾಬ್ದಾರಿಯುತ ಕಾರ್ಯದಿಂದ ಶ್ರೇಯ.
ಮಿಥುನ: ವಿದ್ಯೆ ಜ್ಞಾನ ವಿಚಾರದಲ್ಲಿ ಪ್ರಗತಿ. ತಿಳಿದು ತಿಳಿಸಲಿಚ್ಛಿಸುವ ಪ್ರವೃತ್ತಿಯಲ್ಲಿ ಸಾಧನೆ. ಗುರುಹಿರಿಯರೊಂದಿಗೆ ಉತ್ತಮ ಭಾಂಧವ್ಯ. ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯ. ದೂರದ ಬಂಧುಗಳಿಂದ ಸಂತೋಷದ ವಾರ್ತೆ ಸಹಕಾರ.
ಕರ್ಕ: ದೀರ್ಘ ಪ್ರಯಾಣ. ದೇವತಾ ಸ್ಥಳ ಸಂದರ್ಶನ. ನಿಮ್ಮ ಶ್ರೇಯಸ್ಸಿಗಾಗಿ ಗುರುಹಿರಿಯರಿಂದ ಶ್ರಮದ ಕಾರ್ಯಗಳು. ವಿದ್ಯಾರ್ಥಿಗಳಿಗೆ ಉತ್ತಮ ಸ್ಥಾನ ಸುಖ. ದಾಂಪತ್ಯ ಸುಖ ವೃದ್ಧಿ. ಜಲೋತ್ಪನ್ನ ವಸ್ತುಗಳ ಕ್ರಯವಿಕ್ರಯದಲ್ಲಿ ಪ್ರಗತಿ.
ಸಿಂಹ: ನಿರೀಕ್ಷಿತ ಸ್ಥಾನಮಾನ ಪ್ರಾಪ್ತಿ. ರಾಜಕೀಯ ಸರಕಾರೀ ವ್ಯವಹಾರಗಳಲ್ಲಿ ಅಭಿವೃದ್ಧಿ. ಲೋಕಪ್ರೀಯತೆ ಜನಮನ್ನಣೆ. ನಿರೀಕ್ಷಿತ ಧನ ಸಂಪತ್ತು ವೃದ್ಧಿ. ಪರೋಪಕಾರದಿಂದ ಅಪವಾದ ತೊಂದರೆ ಸಂಭವ. ವಿಚಾರ ಮಾಡಿ ತೀರ್ಮಾನಿಸಿದರೆ ನೆಮ್ಮದಿ.
ಕನ್ಯಾ: ಸ್ತ್ರೀಯರಿಂದ ಅನಿರೀಕ್ಷಿತ ಲಾಭ. ಆರೋಗ್ಯ ವೃದ್ಧಿ. ಪಾಲುದಾರಿಕಾ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ. ನಿರೀಕ್ಷಿತ ಸ್ಥಾನ ಗೌರವ ಪ್ರಾಪ್ತಿ. ಪರದೇಶದ ವ್ಯವಹಾರದಲ್ಲಿ ಪ್ರಗತಿ. ವಿದ್ಯಾರ್ಥಿಗಳು ಅಧಿಕ ಶ್ರಮ ವಹಿಸಿ.
ತುಲಾ: ಅನಿರೀಕ್ಷಿತ ಭಾಗ್ಯ ವೃದ್ಧಿ. ಗುರು ಹಿರಿಯರ ಪ್ರೋತ್ಸಾಹ ಸಹಕಾರ ಪ್ರಾಪ್ತಿ. ಹೆಚ್ಚಿದ ಸಂತೋಷ. ಭೂಮಿ ಆಸ್ತಿ ವಾಹನ ವಿಚಾರಗಳಲ್ಲಿ ಪ್ರಗತಿ. ಮಿತ್ರರಿಂದ ಸಂತೋಷ ವಾರ್ತೆ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ.
ವೃಶ್ಚಿಕ: ಅನಿರೀಕ್ಷಿತ ಅಧಿಕಾರ ಪ್ರಾಪ್ತಿ. ಗುರು ಹಿರಿಯರ ಮೇಲಧಿಕಾರಿಗಳ ಪ್ರೀತಿ ವಿಶ್ವಾಸ ಗಳಿಕೆ. ಉತ್ತಮ ಧನಾರ್ಜನೆ. ಅಧ್ಯಯನಶೀಲರಿಗೆ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ದಾಂಪತ್ಯ ಸುಖ ಅಭಿವೃದ್ಧಿ. ಉದಾರತೆ, ದೈರ್ಯ, ನಿಷ್ಠೆ, ಚತುರತೆಗೆ ಜಯ.
ಧನು: ಉದ್ಯೋಗ ವ್ಯವಹಾರ ಕೆಲಸ ಕಾರ್ಯಗಳಲ್ಲಿ ತನ್ಮಯತೆ. ನಿರೀಕ್ಷಿತ ಫಲ ಲಭಿಸಿದ ತೃಪ್ತಿ. ಸ್ಥಾನಮಾನ ಗೌರವ ಪ್ರಾಪ್ತಿ. ಮಕ್ಕಳಿಂದ ಸಂತೋಷ. ವಿದ್ಯೆ ಜ್ಞಾನ ಪ್ರಗತಿ. ಕೀರ್ತಿ ಸಂಪಾದನೆ. ಅನಿರೀಕ್ಷಿತ ಧನ ಸಂಚಯನ.
ಮಕರ: ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಸಮಯ ಸಂದರ್ಭಕ್ಕೆ ಸರಿಯಾಗಿ ನಿಪುಣತೆ ಪ್ರದರ್ಶನ. ಬಂಧು ಮಿತ್ರರ ಸಹಕಾರ
ಸಂತೋಷ. ದಂಪತಿಗಳಲ್ಲಿ ಅನ್ಯೂನ್ಯತೆಗೆ ಕೊರತೆಯಾಗ ದಂತೆ ವ್ಯವಹರಿಸಿ. ಮಕ್ಕಳ ಸಂತೋಷ ವೃದ್ಧಿ.
ಕುಂಭ: ಮಾನಸಿಕ ನೆಮ್ಮದಿ. ಚುರುಕುತನ
ದಿಂದ ಕೂಡಿದ ಕಾರ್ಯವೈಖರಿ. ವಿದ್ಯೆ ಜ್ಞಾನ ಸಂಬಂಧೀ ವಿಚಾರಗಳಲ್ಲಿ ಪ್ರಗತಿ. ದಾಂಪತ್ಯ ತೃಪ್ತಿಕರ. ಆರೋಗ್ಯ ಸುಧಾರಣೆ. ಗೃಹದಲ್ಲಿ ಸಂತಸದ ವಾತಾವರಣ ವಸ್ತುಗಳಿಗಾಗಿ ಧನ ವ್ಯಯ. ದಾಂಪತ್ಯ ತೃಪ್ತಿದಾಯಕ.
ಮೀನ: ಮಾನಸಿಕ ಆರೋಗ್ಯ ಉತ್ತಮ. ದೈಹಿಕ ಆರೋಗ್ಯ ಗಮನಹರಿಸಿ. ದೇವತಾ ಕಾರ್ಯದಲ್ಲಿ ಭಾಗಿ. ಸಾಹಸದಿಂದ ಧನಾರ್ಜನೆ ವೃದ್ಧಿ. ದೂರ ಪ್ರಯಾಣದಿಂದ ಸಫಲತೆ. ಕಾರ್ಮಿಕರು ಸಹೋದರರಲ್ಲಿ ತಾಳ್ಮೆ, ಪ್ರೀತಿಯಿಂದಲೂ ಕಾರ್ಯ ನಿರ್ವಹಿಸಿ ಪ್ರಗತಿ ಗಳಿಸಿ. ಗೃಹದಲ್ಲಿ ಸಂತಸ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.