ಅಪ್ಪಟ ಗ್ರಾಮೀಣ ಯುವಪ್ರತಿಭೆ; ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆಗೆ ಆಯ್ಕೆಯಾದ ಹೊನ್ನಪ್ಪ
Team Udayavani, Oct 27, 2022, 8:52 PM IST
ಮಹಾಲಿಂಗಪುರ: ಸಾಧಿಸಿಬೇಕೆಂಬ ಛಲ, ಕಠಿಣ ಪರಿಶ್ರಮವಿದ್ದವರಿಗೆ ವಯಸ್ಸು, ಪ್ರದೇಶ, ಅನುಭವಗಳ ಹಂಗಿಲ್ಲದೇ ಕಡಿಮೆ ಅವಧಿತಲ್ಲಿಯೇ ಯಾವ ಕ್ಷೇತ್ರದಲ್ಲಾದರೂ ಸಾಧಿಸಬಲ್ಲರೂ ಎಂಬುದಕ್ಕೆ ಉತ್ತಮ ಮಾದರಿಯಾದವನೇ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪೂರ ಸಮೀಪದ ಮಾರಾಪೂರ ಎಂಬ ಪುಟ್ಟ ಗ್ರಾಮದ ಯುವಪ್ರತಿಭೆ ಉದಯೋನ್ಮುಖ ಸೈಕ್ಲಿಂಗ್ ಕ್ರೀಡಾಪಟು ಹೊನ್ನಪ್ಪ ಚಿದಾನಂದ ಧರ್ಮಟ್ಟಿ.
ಹೌದು ಸಮೀಪದ ಮಾರಾಪೂರ ಗ್ರಾಮದ ಉದಯೋನ್ಮುಖ ಸೈಕ್ಲಿಂಗ್ ಕ್ರೀಡಾಪಟು ಹೊನ್ನಪ್ಪ ಚಿದಾನಂದ ಧರ್ಮಟ್ಟಿ ಅವರು ಇತ್ತಿಚಿಗೆ ಮೈಸೂರಿನಲ್ಲಿ ನಡೆದ 13ನೇ ರಾಜ್ಯ ಸೈಕ್ಲಿಂಗ್ ಚಾಂಪಿಯನ್‍ಷಿಪ್‍ನಲ್ಲಿ 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡು ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಬರುವ ಡಿಸೆಂಬರ್ ತಿಂಗಳಲ್ಲಿ ಪುಣೆ ಅಥವಾ ಮುಂಬೈನಲ್ಲಿ ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆಗಳು ನಡೆಯಲಿವೆ.
ಅಪ್ಪಟ ಗ್ರಾಮೀಣ ಪ್ರತಿಭೆ :
ಬಾಗಲಕೋಟೆ ಜಿಲ್ಲೆಯ ಗಡಿಗ್ರಾಮವಾದ ಮಾರಾಪೂರದ ಮಧ್ಯಮ ಕುಟುಂಬದ ಚಿದಾನಂದ ಮತ್ತು ಶಾಂತಾ ಧರ್ಮಟ್ಟಿ ದಂಪತಿಗಳ ಪುತ್ರನಾದ ಹೊನ್ನಪ್ಪ ಸದ್ಯ 8ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ. ಅಪ್ಪಟ ಗ್ರಾಮೀಣ ಭಾಗದ ಯುವಪ್ರತಿಭೆಯಾಗಿರುವ ಹೊನ್ನಪ್ಪ 1 ರಿಂದ 5ನೇ ತರಗತಿವರೆಗೆ ಸೈದಾಪೂರ-ಸಮೀರವಾಡಿಯ ಸೋಮೈಯಾ ಸಿಬಿಎಸ್‍ಸಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದಾರೆ. ನಂತರ 6ನೇ ತರಗತಿಯಿಂದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಲ್ಯಾಣ ಚಂದರಗಿಯ ಕ್ರೀಡಾ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಮೊದಲಿನಿಂದಲೂ ಬ್ಯಾಟ್ಮಿಟನ್ ಆಟದಲ್ಲಿ ಆಸಕ್ತಿ ಹೊಂದಿದ್ದರೂ ಕೂಡಾ ಕೋವಿಡ್ ಕಾರಣ ಎರಡು ವರ್ಷ ಯಾವುದೇ ಸ್ಪರ್ಧೆಗಳು ನಡೆಯದಿರುವುದು ಹಾಗೂ ಸರಿಯಾದ ಕೋಚ್ ಸಿಗದ ಕಾರಣ ಅನಿವಾರ್ಯವಾಗಿ ಕಳೆದ ಮೂರು ತಿಂಗಳ ಹಿಂದೆಯಿಂದ ಸೈಕ್ಲಿಂಗ್ ತರಬೇತಿಯನ್ನು ಪಡೆಯುತ್ತಿದ್ದಾನೆ.
ಮೂರು ತಿಂಗಳ ಸೈಕ್ಲಿಂಗ್ ಸಾಧನೆ:
8ನೇ ತರಗತಿಯಲ್ಲಿ ಓದುತ್ತಾ ಕಳೆದ ಮೂರು ತಿಂಗಳಿನಿಂದ ಚಂದರಗಿ ಕ್ರೀಡಾವಸತಿ ಶಾಲೆಯ ಸೈಕ್ಲಿಂಗ್ ಕೋಚ್ ಭೀಮಶಿ ವಿಜಯನಗರ ಅವರ ಮಾರ್ಗದರ್ಶನದಲ್ಲಿ ದಿನನಿತ್ಯ ಮುಂಜಾನೆ-ಸಂಜೆ ಸೇರಿ ನಿತ್ಯ 4 ಗಂಟೆಗಳ ಕಠಿಣ ಅಭ್ಯಾಸದ ಫಲವಾಗಿ ಇಂದು ರಾಜ್ಯಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನಗಳಿಸಿ ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾನೆ. ಈ ಕ್ರೀಡಾಸಾಧನೆಗೆ ಕೇವಲ ಮೂರು ತಿಂಗಳ ಅವಿರತ ಪರಿಶ್ರಮ ಮತ್ತು ಹೊನ್ನಪ್ಪನಲ್ಲಿರುವ ಕ್ರೀಡಾಸಕ್ತಿಯೇ ಕಾರಣ ಎಂಬುವದು ವಿಶೇಷ.
ಹೊನ್ನಪ್ಪನಿಗೆ ಉತ್ತಮ ಭವಿಷ್ಯವಿದೆ: ಹೊನ್ನಪ್ಪ ಕಳೆದ ಮೂರು ವರ್ಷಗಳಿಂದ ನಮ್ಮ ಶಾಲೆಯ ವಿದ್ಯಾರ್ಥಿ. ಕಳೆದ ಮೂರು ತಿಂಗಳಿನಿಂದ ಸೈಕ್ಲಿಂಗ್ ಕ್ರೀಡೆಯಲ್ಲಿ ಆತ ತೊಡಗಿಸುಕೊಂಡಿರುವ ಆಸಕ್ತಿ, ಸಾಧಿಸಬೇಕೆಂಬ ಛಲ, ಕಠಿಣ ಪರಿಶ್ರಮ, ನಿರಂತರ ಅಭ್ಯಾಸ, ಶಾಲೆ ಮತ್ತು ಇವರ ತಂದೆಯವರ ಪ್ರೋತ್ಸಾಹ-ಸಹಕಾರದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ತರಬೇತಿ ಪಡೆದ ಕ್ರೀಡಾಪಟುಗಳೊಂದಿಗೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ, ಇಂದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಉತ್ತಮ ಭವಿಷ್ಯವಿರುವ ಹೊನ್ನಪ್ಪ 12 ತರಗತಿ ಮುಗಿಯುವರೆಗೆ ನಮ್ಮ ಶಾಲೆಯಲ್ಲಿಯೇ ಇರುವದರಿಂದ, ಪಿಯುಸಿ ಮುಗಿಯುವದರೊಳಗೆ ಇಂಡಿಯಾ ಬೆಸ್ಟ್ ಸೈಕ್ಲಿಂಗ್ ರೈಡರ್ ಆಗುತ್ತಾನೆ ಎಂಬ ವಿಶ್ವಾಸವಿದೆ. -ಭೀಮಶಿ ವಿಜಯನಗರ, ಸೈಕ್ಲಿಂಗ್ ತರಬೇತಿದಾರರು, ಕ್ರೀಡಾ ವಸತಿ ಶಾಲೆ, ಕೆ.ಚಂದರಗಿ.
ಮಗನ ಕ್ರೀಡಾಸಕ್ತಿಗೆ ಪ್ರೋತ್ಸಾಹ ನಮ್ಮ ಕರ್ತವ್ಯ: ಮೊದಲ ಗಂಡು ಮಗನಾದ ಹೊನ್ನಪ್ಪ ಸೈಕ್ಲಿಂಗ್ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಅವರ ಅಭಿರುಚಿ, ಕ್ರೀಡಾಸಕ್ತಿಗೆ ಪೋಷಕರಾಗಿ ಬೆಂಬಲಿಸುತ್ತಿದ್ದೇವೆ. ಇಂದು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು ನಮಗೆ ಮತ್ತು ನಮ್ಮ ಗ್ರಾಮಕ್ಕೆ ಹೆಮ್ಮೆಯ ಸಂಗತಿ. ಭವಿಷ್ಯದ ಅವನ ಕ್ರೀಡಾ ಜೀವನಕ್ಕೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡಲು, ಪಾಲಕರಾಗಿ ನಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ. – ಶಾಂತಾ ಮತ್ತು ಚಿದಾನಂದ ಧರ್ಮಟ್ಟಿ, ಹೊನ್ನಪ್ಪನ ಹೆತ್ತವರು
–ಚಂದ್ರಶೇಖರ ಮೋರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.