![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Oct 28, 2022, 11:01 PM IST
ಪುಣೆ: ಪುಣೆ ಆವೃತ್ತಿಯ ಪ್ರೊ ಕಬಡ್ಡಿ ಹಣಾಹಣಿಯಲ್ಲಿ ತಮಿಳ್ ತಲೈವಾಸ್ ದ್ವಿತೀಯ ಸ್ಥಾನಿ ಜೈಪುರ್ ಪಿಂಕ್ ಪ್ಯಾಂಥರ್ ವಿರುದ್ಧ ಅಮೋಘ ಗೆಲುವು ಸಾಧಿಸಿದೆ. ಶುಕ್ರವಾರದ ಮುಖಾಮುಖಿಯಲ್ಲಿ ಅದು 38-27 ಅಂತರದ ಮೇಲುಗೈ ಸಾಧಿಸಿತು.
ತಮಿಳ್ ತಲೈವಾಸ್‌ಗೆ 7 ಪಂದ್ಯಗಳಲ್ಲಿ ಒಲಿದ ಕೇವಲ 2ನೇ ಜಯ ಇದಾಗಿದೆ. ಇನ್ನೊಂದೆಡೆ ಜೈಪುರ್ 8ನೇ ಮುಖಾಮುಖಿಯಲ್ಲಿ 3ನೇ ಸೋಲುಂಡಿತು.
ತಮಿಳ್ ತಲೈವಾಸ್ ಗೆಲುವಿ ನಲ್ಲಿ ರೈಡರ್‌ಗಳಾದ ನರೇಂದರ್ ಮತ್ತು ಅಜಿಂಕ್ಯ ಪವಾರ್ ಪಾತ್ರ ಮಹತ್ವದ್ದಾಗಿತ್ತು. ನರೇಂದರ್ 13 ಅಂಕ ಗಳಿಸಿ ಕೊಟ್ಟರು. ಅಜಿಂಕ್ಯ 6 ಅಂಕ, ಲೆಫ್ಟ್ ಕಾರ್ನರ್ ಡಿಫೆಂಡರ್ ಹಿಮಾಂಶು 4 ಅಂಕ ತಂದಿತ್ತರು.
ಜೈಪುರ್ ಎಂದಿನ ಜೋಶ್ ಪ್ರದರ್ಶಿಸಲು ವಿಫಲವಾಯಿತು. ರೈಡರ್ ಭವಾನಿ ರಜಪೂತ್ (4), ಡಿಫೆಂಡರ್ ಅಂಕುಶ್ (4) ಹೊರತುಪ ಡಿಸಿ ಉಳಿದವರು ನಿರೀಕ್ಷಿತ ಯಶಸ್ಸು ಕಾಣಲಿಲ್ಲ.
ಹರ್ಯಾಣ-ಪುನೇರಿ ಟೈ
ಅತ್ಯಂತ ರೋಚಕವಾಗಿ ಸಾಗಿದ ಹರ್ಯಾಣ ಸ್ಟೀಲರ್-ಪುನೇರಿ ಪಲ್ಟಾನ್ ನಡುವಿನ ಮತ್ತೂಂದು ಪಂದ್ಯ 27-27 ಅಂತರದಿಂದ ಟೈ ಆಯಿತು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.