ಮಸ್ಕ್ ತೆಕ್ಕೆಗೆ ಟ್ವಿಟರ್; 3.62 ಲಕ್ಷ ಕೋಟಿ ರೂ.ಗಳಿಗೆ ಖರೀದಿ ; ನಾಲ್ಕು ಅಧಿಕಾರಿಗಳ ವಜಾ
Team Udayavani, Oct 29, 2022, 7:15 AM IST
ನ್ಯೂಯಾರ್ಕ್: ಕೊನೆಗೂ ಮೈಕ್ರೋಬ್ಲಾಗಿಂಗ್ ಜಾಲತಾಣ ಟ್ವಿಟರ್, ಟೆಸ್ಲಾ ಸಂಸ್ಥಾಪಕ ಎಲ್ಲನ್ ಮಸ್ಕ್ ಅವರ ತೆಕ್ಕೆಗೆ ಬಿದ್ದಿದೆ. ಬರೋಬ್ಬರಿ 3.62 ಲಕ್ಷ ಕೋಟಿ ರೂ. (44 ಬಿಲಿಯನ್ ಅಮೆರಿಕನ್ ಡಾಲರ್) ಮೊತ್ತಕ್ಕೆ ಟ್ವಿಟರ್ ಖರೀದಿ ಪ್ರಕ್ರಿಯೆ ಪೂರ್ಣ ಗೊಂಡಿದೆ. ಟ್ವಿಟರ್ ಖರೀದಿಯಿಂದ ಮಸ್ಕ್ ಹಿಂದೆ ಸರಿದಿದ್ದಾರೆ, ಪ್ರಕ್ರಿಯೆ ರದ್ದಾಗಿದೆ ಇತ್ಯಾದಿ ಗಾಳಿ ಸುದ್ದಿಗಳಿಗೆ ಈ ಮೂಲಕ ತೆರೆಬಿದ್ದಿದೆ.
ಅತ್ತ ಟ್ವಿಟರ್ ಮಸ್ಕ್ ಮಡಿಲಿಗೆ ಬೀಳುತ್ತಿದ್ದಂತೆ, ಇತ್ತ ಟ್ವಿಟರ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದ ಭಾರತ ಮೂಲದ ಅಧಿಕಾರಿಗಳಾದ ಸಿಇಒ ಪರಾಗ್ ಅಗರ್ವಾಲ್, ಕಾನೂನು ಸಲಹೆಗಾರ್ತಿ ವಿಜಯ ಗದ್ದೆ ಮಾತ್ರವಲ್ಲದೇ, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್, ಸೆಯಾನ್ ಇಡೆjಟ್ ಅವರನ್ನು ವಜಾ ಮಾಡ ಲಾಗಿದೆ. ಜತೆಗೆ, ಹೊಸ ಮಾಲೀಕ ಮಸ್ಕ್ ಅವರು “ದ ಬರ್ಡ್ ಈಸ್ ಫ್ರೀ’ (ಹಕ್ಕಿ ಈಗ ಸ್ವತಂತ್ರಗೊಂಡಿದೆ) ಎಂದು ಮೊದಲ ಟ್ವೀಟ್ ಮಾಡಿದ್ದಾರೆ.
ನಾಲ್ವರು ಹಿರಿಯ ಅಧಿಕಾರಿಗಳನ್ನು ವಜಾ ಮಾಡುವ ಮೂಲಕ ಜಾಲತಾಣವನ್ನು ಸ್ವತ್ಛಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿರುವುದಾಗಿ ಮಸ್ಕ್ ಹೇಳಿ ಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಒಟ್ಟಾರೆ ಪ್ರಕ್ರಿಯೆ ಬಗ್ಗೆ ಟ್ವಿಟರ್ ಆಗಲೀ, ಮಸ್ಕ್ ಆಗಲೀ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜತೆಗೆ, ಸಂಸ್ಥೆಯನ್ನು ಮುಂದಿನ ದಿನಗಳಲ್ಲಿ ಹೇಗೆ ನಿರ್ವ ಹಿಸಲಿದ್ದಾರೆ ಎಂಬ ಬಗ್ಗೆ ವಿವರಣೆಯನ್ನೂ ನೀಡಿಲ್ಲ.
ಬುಧವಾರವೇ ಆಗಮನ: ಕುತೂಹಲಕಾರಿ ಅಂಶ ವೆಂದರೆ, ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ಟ್ವಿಟರ್ ಪ್ರಧಾನ ಕಚೇರಿಗೆ ಬುಧವಾರವೇ ಆಗಮಿಸಿದ್ದ ಮಸ್ಕ್, ಸಂಸ್ತೆಯ ಎಂಜಿನಿಯರ್‌ಗಳು, ಜಾಹೀರಾತು ವಿಭಾಗದ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿ ದ್ದರು. ಏಪ್ರಿಲ್‌ನಲ್ಲೇ ಟ್ವಿಟರ್ ಖರೀದಿ ಇಚ್ಛೆಯನ್ನು ಮಸ್ಕ್ ಪ್ರಕಟಿಸಿದ್ದರೂ, ನಂತರ ಅದರಿಂದ ದೂರ ಸರಿಯುವ ಮಾತನಾಡಿದ್ದರು. ಅನಪೇಕ್ಷಿತ ಖಾತೆಗಳು, ದ್ವೇಷಪೂರಿತ ಭಾವನೆಗಳಿಗೆ ಕುಮ್ಮಕ್ಕು ನೀಡುವಂಥ ವಿಚಾರಗಳ ಬಗ್ಗೆ ಟ್ವಿಟರ್‌ನ ಆಡಳಿತ ಮಂಡಳಿ ಸ್ಪಷ್ಟನೆ ನೀಡಿಲ್ಲ ಎಂದು ಅವರು ಆರೋಪಿಸಿದ್ದರು.
ಉದ್ಯೋಗ ಕಡಿತ ಇಲ್ಲ?: ಎಲ್ಲನ್ ಮಸ್ಕ್ ವಶಕ್ಕೆ ಟ್ವಿಟರ್ ಬರುತ್ತಲೇ ಶೇ.75ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಉಂಟಾಗಿತ್ತು. ಸದ್ಯದ ಮಾಹಿತಿ ಪ್ರಕಾರ ನಾಲ್ವರು ಹಿರಿಯ ಅಧಿಕಾರಿಗಳನ್ನು ವಜಾ ಮಾಡಿದರೂ, ಉಳಿದ ಶ್ರೇಣಿಯ ಅಧಿಕಾರಿ ಗಳು, ಉದ್ಯೋಗಿಗಳಿಗೆ ವಜಾಗೊಳ್ಳುವ ಭೀತಿ ಇಲ್ಲವೆನ್ನಲಾಗಿದೆ.
ಸಿಬಂದಿ ಜತೆಗೂಡಿ ಹೊರ ನಡೆದರು: ಖರೀದಿ ಪ್ರಕ್ರಿಯೆ ವೇಳೆ ವಜಾಗೊಂಡ ಅಗರ್ವಾಲ್ ಸಹಿತ ಎಲ್ಲ ನಾಲ್ವರು ಅಧಿಕಾರಿಗಳೂ ಟ್ವಿಟರ್‌ನ ಪ್ರಧಾನ ಕಚೇರಿ ಯಲ್ಲಿಯೇ ಇದ್ದರು. ಪ್ರಕ್ರಿಯೆ ಮುಗಿದಾಗ ಅಗರ್ವಾಲ್, ಸೆಗಾಲ್‌ರನ್ನು ವಜಾಗೊಳಿಸಲಾಗಿದೆ ಎನ್ನುವುದು ಖಚಿತವಾಗುತ್ತಿದ್ದಂತೆಯೇ ಭದ್ರತಾ ಸಿಬಂದಿ ಜತೆಗೂಡಿ ಅವರಿಬ್ಬರನ್ನು ಕಚೇರಿಯ ಮುಖ್ಯ ದ್ವಾರದವರೆಗೆ ಕಳುಹಿಸಿಕೊಡಲಾಯಿತು.
ಪರಾಗ್‌ಗೆ 321 ಕೋಟಿ ರೂ.
ಟ್ವಿಟರ್ ಸಿಇಒ ಹುದ್ದೆಯಿಂದ ವಜಾಗೊಂಡಿರುವ ಪರಾಗ್ ಅಗರ್ವಾಲ್ ಅವರಿಗೆ 321 ಕೋಟಿ ರೂ. ಪರಿಹಾರ ಸಿಗಲಿದೆ. ಅವರ ಮೂಲ ವೇತನ, ಈಕ್ವಿಟಿ ಪಾವತಿ ಸೇರಿದಂತೆ ನೀಡಬೇಕಾಗಿರುವ ಎಲ್ಲÉ ಭತ್ಯೆ ಗಳು ಇದರಲ್ಲಿ ಒಳಗೊಂಡಿವೆ ಎಂದು ಸಂಶೋಧನ ಸಂಸ್ಥೆ ಈಕ್ವಿಲರ್ ನಡೆಸಿದ ಅಧ್ಯಯನದಲ್ಲಿ ಉಲ್ಲೇಖೀ ಸಲಾಗಿದೆ. ಪರಾಗ್ ಅಗರ್ವಾಲ್ ಅವರು ಐಐಟಿ ಬಾಂಬೆ ಮತ್ತು ಸ್ಟಾನ್‌ಫೋರ್ಡ್ ವಿ.ವಿ.ಯ ಹಳೆ ವಿದ್ಯಾರ್ಥಿ. ದಶಕದ ಹಿಂದೆ ಅವರು ಟ್ವಿಟರ್‌ಗೆ ಸೇರ್ಪಡೆಯಾಗಿದ್ದರು.
ಕಾನೂನು ಪಾಲಿಸಲೇಬೇಕು
ಟ್ವಿಟರ್‌ನ ಮಾಲಕರು ಯಾರೇ ಆದರೂ ನಮ್ಮ ನಿಯಮಗಳಲ್ಲಿ ಬದಲಾವಣೆ ಆಗುವುದಿಲ್ಲ. ಭಾರತದ ಕಾನೂನುಗಳನ್ನು ಎಲ್ಲರೂ ಪಾಲಿಸಲೇಬೇಕು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ ಹೇಳಿ ದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರು ಟ್ವೀಟ್ ಮಾಡಿ, “ಟ್ವಿಟರ್ ಸಂಸ್ಥೆಯು ದ್ವೇಷಭಾಷಣದ ವಿರುದ್ಧ ಕ್ರಮ ಕೈಗೊಳ್ಳಲಿ’ ಎಂದಿದ್ದಾರೆ.
ವಜಾ ನಿರ್ಧಾರದ ಹಿಂದೆ
ಪರಾಗ್ ಅಗರ್ವಾಲ್ ಮತ್ತು ಮಸ್ಕ್ ನಡುವೆ ಹಲವು ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯವಿತ್ತು. ಟ್ವಿಟರ್‌ನ ಫೇಕ್ ಖಾತೆಗಳ ಬಗ್ಗೆ ಪರಾಗ್ ಮಾಹಿತಿ ಮುಚ್ಚಿಟ್ಟಿದ್ದಾರೆ ಎಂದು ಈ ಹಿಂದೆ ಮಸ್ಕ್ ಆರೋಪಿಸಿದ್ದರು. ಇದಕ್ಕೆ ಅಗರ್ವಾಲ್ ಅವರು ಅಂಕಿಅಂಶಗಳೊಂದಿಗೆ ವಿವರಣೆ ನೀಡಿ ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಮಸ್ಕ್ “ಮಲ’ದ ಇಮೋಜಿಯನ್ನು ಅಪ್‌ಲೋಡ್ ಮಾಡಿದ್ದರು. ಇನ್ನು, ಕಾನೂನು ವಿಭಾಗದ ಅಧಿಕಾರಿ, ಭಾರತ ಮೂಲದ ವಿಜಯ ಗದ್ದೆ ಬಗ್ಗೆ ಕೂಡ ಮಸ್ಕ್ ಒಲವು ಹೊಂದೀರಲಿಲ್ಲ. ಅಮೆರಿಕದ ಕ್ಯಾಪಿಟಲ್ ಹಿಲ್‌ನಲ್ಲಿ ದಂಗೆಗೆ ಕಾರಣರಾಗಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಜೀವನ ಪರ್ಯಂತ ಟ್ವಿಟರ್‌ನಲ್ಲಿ ನಿಷೇಧ ಹೇರುವ ನಿರ್ಧಾರವನ್ನು ತೆಗೆದುಕೊಂಡಿದ್ದು ವಿಜಯ ಗದ್ದೆ. ಅವರ ನಿರ್ಧಾರದ ಬಗ್ಗೆಯೂ ಮಸ್ಕ್ ಸಹಮತ ಹೊಂದಿರಲಿಲ್ಲ. ಜತೆಗೆ, “ಬ್ರಾಹ್ಮಣಶಾಹಿ ಅಧಿಪತ್ಯವನ್ನು ಕೊನೆಗೊಳಿಸಿ’ ಎಂಬ ಅಭಿ ಯಾನಕ್ಕೆ ಬೆಂಬಲ ನೀಡುವ ಮೂಲಕ ವಿಜಯ ಗದ್ದೆ ಅವರು ಎಡಪಂಥೀಯರ ಪರ ಎಂಬ ಆರೋಪವನ್ನು ಎದುರಿಸಿದ್ದರು. ಇದು ಕೂಡ ಮಸ್ಕ್ ಅವರ ಆಕ್ರೋಶಕ್ಕೆ ಕಾರಣವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.