“ಮಲೆಗಳಲ್ಲಿ ಮದುಮಗಳು’ ಬರಿಯ ಪುಸ್ತಕವಲ್ಲ…ಕುವೆಂಪು ಅವರು ಸೃಷ್ಟಿಸಿದ ಮಾಯಾಲೋಕ

ಬಾಹ್ಯ ಪ್ರಪಂಚಬಿಟ್ಟು ನಾವು ಬೇರೊಂದು ಕಲ್ಪನಾ ಲೋಕದಲ್ಲಿ ತೇಲುತ್ತೇವೆ.

Team Udayavani, Oct 29, 2022, 10:18 AM IST

“ಮಲೆಗಳಲ್ಲಿ ಮದುಮಗಳು’ ಬರಿಯ ಪುಸ್ತಕವಲ್ಲ…ಕುವೆಂಪು ಅವರು ಸೃಷ್ಟಿಸಿದ ಮಾಯಾಲೋಕ

ಕುವೆಂಪು ಅವರನ್ನು “ರಸಋಷಿ’ ಎಂದು ಕರೆದರು ಎಂಬುದಕ್ಕೆ ಬಹುಶಃ “ಮಲೆಗಳಲ್ಲಿ ಮದುಮಗಳು’ ಕಾದಂಬರಿ ನಿಮಗೆ ಸಾಕ್ಷಿಯನ್ನು ಒದಗಿಸಬಲ್ಲುದು. ಅಧುನಿಕ ಕನ್ನಡ ಸಾಹಿತ್ಯವನ್ನು ನವೋದಯ, ನವ್ಯ, ಬಂಡಾಯ, ಪ್ರಗತಿಪರವೆಂದು ವಿಂಗಡಿಸುವುದಾದರೆ ಕುವೆಂಪು ಅವರ ಸಾಹಿತ್ಯವನ್ನು ಯಾವುದೇ ಒಂದು ಪ್ರಕಾರಕ್ಕೆ ಸೀಮಿತಗೊಳಿಸಲಾಗದು.

“ಮಲೆಗಳಲ್ಲಿ ಮದುಮ ಗಳು’ ಬರಿಯ ಪುಸ್ತಕವಲ್ಲ. ಕುವೆಂಪು ಅವರು ಸೃಷ್ಟಿಸಿದ ಮಾಯಾಲೋಕ. ಇಲ್ಲಿನ ಪಾತ್ರಗಳು, ವರ್ಣನೆಗಳು ಬರಿಯ ಸಾಲುಗಳಾಗಿರದೆ ಅವರ ಕಲಾ ಸೃಷ್ಟಿಗೆ ಹಿಡಿದ ಕನ್ನಡಿಗಳಾಗಿವೆ.

ಮಲೆನಾಡ ಸೌಂದರ್ಯ, ಜಾತಿ ಪದ್ಧತಿ ವ್ಯವಸ್ಥೆ, ವರ್ಣ ಶ್ರೇಣಿ ವ್ಯವಸ್ಥೆ, ಪುರುಷ ಪ್ರಧಾನ ಸಮಾಜದ ಘೋರ ಮುಖಗಳು, ಮತಾಂತರದ ಕಪ್ಪು ಛಾಯೆ, ಆಗ ತಾನೇ ಹೊಸ ಪುಟಕ್ಕೆ ತೆರೆದುಕೊಳ್ಳುತಿದ್ದ ಜನಜೀವನ ಮತ್ತು ಇವೆಲ್ಲದರ ನಡುವೆ ಮಾನವ ಸಹಜ ಪ್ರೀತಿ, ಪ್ರೇಮಗಳ ತಲ್ಲಣ, ದಾಂಪತ್ಯ ಜೀವನದ ಸಿಹಿ ಕಹಿಗಳು, ಮನುಷ್ಯ ಮತ್ತು ಪ್ರಾಣಿ (ಗುತ್ತಿ-ಹುಲಿಯ) ಪ್ರೀತಿಯ ಆಳ, ಪ್ರಕೃತಿಯ ರಮ್ಯ ಮನೋ ಹರ ಚಿತ್ರಣದ ಜತೆ ಅದರ ವ್ಯಾಘ್ರ ಸ್ವಭಾವ‌ – ಇವೆಲ್ಲವನ್ನು ಕುವೆಂಪು ನಮ್ಮ ಕಲ್ಪನಾ ಶಕ್ತಿಗೆ ಸವಾಲು ಹಾಕುವಂತೆ ವಿವರಿಸುತ್ತಾರೆ.

“ಮಲೆಗಳಲ್ಲಿ ಮದುಮಗಳು’ ಕಾದಂಬರಿ ಯನ್ನು ಓದಿದಾಗಲೇ ನನಗೂ ಅದರ ಪ್ರತ್ಯಕ್ಷ ಅನುಭವವಾದದ್ದು. ಕುವೆಂಪು ಹೆಣೆದಿರುವ ಈ ಕಾದಂಬರಿಯಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ಮತ್ತು ಅವುಗಳನ್ನು ವರ್ಣ ನಾತ್ಮಕವಾಗಿ ನಿರೂಪಿಸಿರುವ ಶೈಲಿ ನಿಜಕ್ಕೂ ಅದ್ಭುತ. ಈ ಕಥೆಯಲ್ಲಿ ಮಲೆನಾಡಿನ ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾ ಯಗಳು ಹಾಗೂ ಜೀವನಶೈಲಿಯ ಸ್ಥೂಲ ವಾದ ಪರಿಚಯವಿದೆ. ಮಲೆನಾಡಿನ ಮಲೆ ಗಳಲ್ಲಿ ವಾಸಿಸುವ ಶ್ರೀಮಂತ ಸಿಂಬಾವಿ ಹೆಗ್ಗಡೆಯವರ ಮನೆಯಾಳು ನಾಯಿಗುತ್ತಿ, ಬೆಟ್ಟಳ್ಳಿಯ ದೊಡ್ಡಬೀರನ ಮಗಳು ತಿಮ್ಮಿ ಯನ್ನು ಹಾರಿಸಿಕೊಂಡು ಬರಲು ಹೋಗುವ ಸನ್ನಿವೇಶದಿಂದ ಪ್ರಾರಂಭವಾಗುವ ಕಾದಂಬ ರಿಯು ಹೆಗ್ಗಡೆಯವರ ದೈನಂದಿನ ಜೀವನ, ಮನೆ ಜಗಳ, ಕುಟುಂಬದ ನಂಬುಗೆಗಳು, ಹೊಲೆಯಾಳುಗಳ ಸ್ಥಾನಮಾನ, ಬದುಕು ಕಟ್ಟಿಕೊಳ್ಳಲು ಅವರು ನಡೆಸುವ ಸಂಘರ್ಷ ಇತ್ಯಾದಿಗಳೆಲ್ಲವೂ ಕಥಾವಸ್ತುಗಳಾಗಿವೆ.

ಈ ಕಾದಂಬರಿಯನ್ನು ಓದುತ್ತಾ ಹೋದಂತೆ ನಮ್ಮ ಬಾಹ್ಯ ಪ್ರಪಂಚಬಿಟ್ಟು ನಾವು ಬೇರೊಂದು ಕಲ್ಪನಾ ಲೋಕದಲ್ಲಿ ತೇಲುತ್ತೇವೆ. ಕಣ್ಣುಗಳು ಅಕ್ಷರಗಳ ಮೇಲೆ ಇದ್ದರೂ ತಲೆಯಲ್ಲೊಂದು ದೃಶ್ಯ ಕಾವ್ಯ ಸಿನೆಮಾದ ರೀಲಿನಂತೆ ಓಡುತ್ತಿರುತ್ತದೆ. ಇದು ಕುವೆಂಪು ಅವರ ಬರವಣಿಗೆಯ ವೈಶಿಷ್ಟé. ನಮಗೆ ಗೊತ್ತಿರದ ನೂರಾರು ಶಬ್ದಗಳ ಪರಿಚಯವನ್ನು ಮಾಡಿಸುವುದರ ಜತೆಗೆ ಕುವೆಂಪು ಅವರೊಳಗಿನ ಒಬ್ಬ ಅದ್ಭುತ ಚಿತ್ರಕ ಥೆಗಾರನನ್ನು ಓದುಗರಿಗೆ ಪರಿಚ ಯಿಸುತ್ತದೆ. ಇದನ್ನು ಸಿನೆಮಾ ಮಾಡುವುದಾದರೆ ಮತ್ತೂಮ್ಮೆ ಚಿತ್ರಕಥೆಯನ್ನು ಬರೆ ಯುವ ಅಗತ್ಯವಿಲ್ಲ. ಕಾದಂಬರಿಯ ಮೂಲ ರೂಪವನ್ನು ತೆರೆಗೆ ತಂದರೆ ಸಾಕು ಎನ್ನುವಷ್ಟು ವಿವರವಾಗಿ ಸನ್ನಿವೇಶಗಳನ್ನು ಓದುಗರಿಗೆ ಕಟ್ಟಿಕೊಟ್ಟಿದ್ದಾರೆ.

ಎಂತಹುದೇ ಸನ್ನಿವೇಶವಾದರೂ ಕೂಡ ಹದ ವಾದ ಭಾಷೆಯಿಂದ ನಯವಾಗಿ ಓದುಗರ ಹೃದ‌ಯಾಂತರಾಳಕ್ಕಿಳಿಸುವ ಕುವೆಂಪು ಅವರ ಭಾಷಾ ಬಳಕೆಯ ಛಾತಿ ಪ್ರಣಯದ ಸನ್ನಿವೇ ಶಗಳನ್ನೂ ಕೂಡ ಸಹಜವಾಗಿ ಕಟ್ಟಿಕೊಡುತ್ತವೆ. ಕುವೆಂಪು ಅವರ ಈ ಕಾದಂಬರಿಯು ಮಲೆನಾಡಿನ ಜನರ ಬದುಕಿನ ಕನ್ನಡಿಯಾಗಿದೆ. ಕವಿಯಾಗುವ ತುಡಿತವಿರುವ ಯುವ ಬರಹಗಾರರಿಗೆ ಹೊಸದೊಂದು ಬರವಣಿಗೆ ಶೈಲಿಯನ್ನು ಕಾದಂಬರಿ ಕಲಿಸಿಕೊಡುತ್ತದೆ.

-ಬಸವರಾಜ ಸಿದ್ದಣ್ಣವರ, ಧಾರವಾಡ

ಟಾಪ್ ನ್ಯೂಸ್

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kannada

Kannada: ಸರಕಾರಿ ಶಾಲೆಗಳೇ ಕನ್ನಡದ ಅಸ್ಮಿತೆ

raDK ಜಿಲ್ಲೆಯ ಗ್ರಾಮೀಣ ಅಭಿವೃದ್ಧಿ ಸಂಕಲ್ಪ: ಗುಂಡೂರಾವ್‌

DK ಜಿಲ್ಲೆಯ ಗ್ರಾಮೀಣ ಅಭಿವೃದ್ಧಿ ಸಂಕಲ್ಪ: ಗುಂಡೂರಾವ್‌

kannada

Kannada: ಗಡಿನಾಡ ಕನ್ನಡಿಗರಿಗಾಗಿ ತೋರಬೇಕಿದೆ ಮತ್ತಷ್ಟು ಕಾಳಜಿ

SIDDARAMAYYA IMP 2

ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಕೊಡಿಸಲು ಪಣ ತೊಡಿ: ಪೋಷಕರಿಗೆ ಮುಖ್ಯಮಂತ್ರಿ ಸಲಹೆ

Karnataka Rajyotsava;ಕುಂದಾನಗರಿಯಲ್ಲಿ ಕನ್ನಡ ಜಾತ್ರೆಯ ವೈಭವ ಸಂಭ್ರಮ

Karnataka Rajyotsava;ಕುಂದಾನಗರಿಯಲ್ಲಿ ಕನ್ನಡ ಜಾತ್ರೆಯ ವೈಭವ ಸಂಭ್ರಮ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

13-

Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

Waqf Protest: People will overthrow the state government: Protest in Davangere

Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.