ಮನೆಯ ಕೀಲಿಕೈ ಸಿಗುತ್ತಲೇ ಕಣ್ಣೀರಿಟ್ಟ ಶಾಸಕ!
ಬಿಹಾರದ ಬಡ ಶಾಸಕನಿಗೆ 3 ಮಹಡಿಯ ಮನೆ ಹಂಚಿಕೆ; ನಾನಿದನ್ನು ಕನಸು ಮನಸಿನಲ್ಲೂ ಭಾವಿಸಿರಲಿಲ್ಲ ಎಂದ ಶಾಸಕ
Team Udayavani, Oct 30, 2022, 7:30 AM IST
ಪಾಟ್ನಾ: ಬಿಹಾರ ವಿಧಾನಸಭೆಯ ಅತ್ಯಂತ ಬಡ ಶಾಸಕ ಎಂದೇ ಹೆಸರಾಗಿರುವ ಆರ್ಜೆಡಿ ಶಾಸಕ ರಾಮ್ವೃಕ್ಷ್ ಸದಾ ಅವರಿಗೆ ಪಾಟ್ನಾದಲ್ಲಿ ಸರ್ಕಾರಿ ನಿವಾಸವೊಂದನ್ನು ನೀಡಲಾಯಿತು.
ಮನೆಯ ಕೀಲಿಕೈಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹಸ್ತಾಂತರ ಮಾಡುತ್ತಿದ್ದಂತೆ, ಶಾಸಕ ರಾಮ್ವೃಕ್ಷ್ ಭಾವುಕರಾಗಿದ್ದು, “ನಾನಿದನ್ನು ಕನಸು ಮನಸಿನಲ್ಲೂ ಭಾವಿಸಿರಲಿಲ್ಲ’ ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪುಟ್ಟ ಮನೆಯಲ್ಲಿ 12 ಮಂದಿ ವಾಸ:
ಅಲೌಲಿ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿರುವ ರಾಮ್ವೃಕ್ಷ್ ಅವರು ಈವರೆಗೆ ತಮ್ಮ ಗ್ರಾಮವಾದ ರೌನ್ನಲ್ಲಿ 2004ರಲ್ಲಿ ಇಂದಿರಾ ಆವಾಸ ಯೋಜನೆಯಡಿ ನಿರ್ಮಿಸಲಾಗಿದ್ದ 2 ಕೊಠಡಿಯಿರುವ ಪುಟ್ಟ ಮನೆಯಲ್ಲಿ ವಾಸವಿದ್ದರು. ವಿಶೇಷವೆಂದರೆ, ಅವರದ್ದು ಅವಿಭಕ್ತ ಕುಟುಂಬವಾಗಿದ್ದ ಕಾರಣ, ಇಷ್ಟು ಚಿಕ್ಕ ಮನೆಯಲ್ಲಿ 12 ಮಂದಿ ನೆಲೆಸಿದ್ದರು. ಪರಿಶಿಷ್ಟ ಜಾತಿಗೆ ಸೇರಿರುವ ರಾಮ್ವೃಕ್ಷ್ ಅವರಿಗೆ ಈಗ ಸರ್ಕಾರವು ಪಾಟ್ನಾದ ಬೀರ್ ಚಾಂದ್ ಪಟೇಲ್ ಪಥದಲ್ಲಿ ಮೂರು ಮಹಡಿಯ ದೊಡ್ಡ ಮನೆಯನ್ನು ಹಂಚಿಕೆ ಮಾಡಿದೆ. ಒಟ್ಟು 8 ಶಾಸಕರಿಗೆ ಈ ರೀತಿ ಮನೆಗಳನ್ನು ಹಂಚಿಕೆ ಮಾಡಲಾಗಿದ್ದು, ಆ ಪೈಕಿ ರಾಮ್ವೃಕ್ಷ್ ಕೂಡ ಒಬ್ಬರು.
“ಲಾಲು ಪ್ರಸಾದ್ ಯಾದವ್ ಅವರು ನನ್ನನ್ನು ನಾಯಕನ್ನಾಗಿ ಮತ್ತು ಶಾಸಕನನ್ನಾಗಿ ಮಾಡಿದರು. ನಾನು ಬಿಹಾರದ ಬಡ ಶಾಸಕ. ಬಡವನಿಗೆ ಏನು ಸಿಕ್ಕಿದರೂ ಅವನಿಗೆ ಅದುವೇ ದೀಪಾವಳಿ. ಇವತ್ತು ಸಿಎಂ ನಿತೀಶ್ ಕುಮಾರ್ ಅವರು ಮನೆಯ ಬೀಗದ ಕೀಯನ್ನು ನನಗೆ ಕೊಟ್ಟಿದ್ದಾರೆ. ಇಂಥ ಮನೆಯಲ್ಲಿ ವಾಸವಿರುತ್ತೇನೆ ಎಂದು ನಾನೆಂದೂ ಭಾವಿಸಿರಲಿಲ್ಲ’ ಎಂದಿದ್ದಾರೆ ರಾಮ್ವೃಕ್ಷ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ
Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್
Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್ಡಿಎ ಮೇಲುಗೈ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.