ಮುಖ ಮುದಿಯಾದರೇನು? ಮನ ಎಳತು, ನಗು ಹೊಸತು…
Team Udayavani, Oct 30, 2022, 6:20 AM IST
“ನನ್ನ ಹಲ್ಲು ಕೃತಕ (ಸೆಟ್), ಆದರೆ ನನ್ನ ನಗು ಮಾತ್ರ ಸಹಜ. ಕೆಲವರದು ಹಲ್ಲು ಸಹಜ, ನಗು ಮಾತ್ರ ಕೃತಕ’ – “ಉದಯವಾಣಿ’ಯ ಉಡುಪಿಯ ಆರಂಭಿಕ ವರದಿಗಾರ ದಿ| ಗಣಪತಿ ಭಟ್ (ಜೀಬಿ) ಅವರ ಬತ್ತಳಿಕೆಯಲ್ಲಿರುತ್ತಿದ್ದ ಪುಂಖಾನುಪುಂಖ ಹಾಸ್ಯ ಚಟಾಕಿಗಳಲ್ಲಿ ಇದೂ ಒಂದು. ಈ ಕಥಾನಕದ ಪಾಪಮ್ಮ ಒಂದು ಶತಮಾನದ ಹಿಂದೆ ಚಿಕ್ಕಬಳ್ಳಾಪುರದಲ್ಲಿದ್ದರು. ಇವರ ಬಾಯಲ್ಲಿ ಬರುವ ಮಾತೆಲ್ಲವೂ ಸವಿ. ಆಕೆಯ ಮೊಗ (ಮುಖ) ಮುದಿಯಾದರೇನಂತೆ? ಮನ ಎಳೆಯದು, ನಗು ಹೊಸದು…
ಅಕ್ಕಸಾಲಿಗ ಸಮುದಾಯದ ಪಾಪಮ್ಮ ಹತ್ತು ಮಕ್ಕಳನ್ನು ಹೆತ್ತು, ಕೆಲಸ ಮಾಡಿ ಮಾಡಿ ಹಣ್ಣಾದ, “ಹಂಗಿನ ಕೂಳು ನಂಜು’ ಎಂದು ಆಗಾಗ ಕೂಗುರಾಗದಲ್ಲಿ ಗುಂಯ್‌ಗುಟ್ಟುವ ಮುದುಕಿ. ಕೋಳಿ ಕೂಗುವುದಕ್ಕೆ ಮುನ್ನವೇ ದಿನಗೆಲಸಗಳಲ್ಲಿ ತೊಡಗುತ್ತಿದ್ದ ಇವರನ್ನು “ಅಯ್ಯೋ ಮುದುಕಿ, ಯಾರಿಗಾಗಿ ಹೀಗೆ ಮೈಮರೆತು ಹಗಲು ರಾತ್ರಿ ದುಡಿಯುತ್ತಿದ್ದೀಯೆ? ಹೆಣ್ಣುಮಕ್ಕಳು ಮದುವೆಯಾಗಿ ನೆಮ್ಮದಿಯಾಗಿದ್ದಾರೆ. ಯಾಕಮ್ಮ ನಿನಗೆ ಈ ದುಡಿತ?’ ಎಂದು ಕೇಳುವವರಿದ್ದರು.
ಆಕೆಯ ಉತ್ತರ ನೋಡಿ: “ಯಾರಿಗಾಗಿ ಏಕೆ? ಕೆಲಸ ಮಾಡಬೇಕು? ಮಾಡುತ್ತೇನೆ. ಕೆಲಸದಿಂದ ನನಗೇನಾಗಬೇಕಾಗಿದೆ? ನನಗೆ ಬೇಕಾದ್ದು ಕೆಲಸ. ಕೆಲಸ ಮಾಡುವುದರಿಂದ ಬೇಸರವೆನ್ನುವೆಯಲ್ಲ? 70 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನನಗೇನಾಗಿದೆ? ಶರೀರಕ್ಕೆ ಆಯಾಸವಿಲ್ಲ. ಮನಸ್ಸಿಗೆ ಬೇಸರವಿಲ್ಲ. ಜೋಯಿಸ್ರೇ, ಇಷ್ಟು ವರ್ಷಗಳಿಂದ ನನ್ನನ್ನು ನೋಡುತ್ತಿದ್ದೀರಲ್ಲ? ಚಳಿ- ಜ್ವರ, ತಲೆನೋವು- ಮೂಗು ನೋವೆಂದು ನಾನು ಮಲಗಿದ್ದನ್ನು ನೋಡಿದ್ದೀರಾ? ಕೆಲಸ ಮಾಡುವುದು ಮನುಷ್ಯನಿಗೆ ಸಹಜ. ಅದು ಧರ್ಮವೆಂದು ತಿಳಿದುಕೊಂಡಿದ್ದೇನೆ. ಕೆಲಸ ಮಾಡುತ್ತಿದ್ದರೆ ಮನಸ್ಸಿಗೆ ಇತರ ಯೋಚನೆ ಬರುವುದಿಲ್ಲ. ಸುಖವೂ ಇಲ್ಲ, ದುಃಖವೂ ಇಲ್ಲ. ಏನೂ ಇಲ್ಲದೆ ಮನಸ್ಸು ಹಾಯಾಗಿ ಆನಂದವಾಗಿರುತ್ತದೆ. ಹಸುಗಳ ಸೇವೆ ಮಾಡಿದರೆ ಒಂದು ರೀತಿ ಸಮಾಧಾನ.
ನೊರೆಹಾಲನ್ನು ನಾಲ್ಕು ಮನೆ ಮಕ್ಕಳಿಗೆರೆದಾಗ ಹೇಳಲಾಗದ ಆನಂದ. ಅನುಭವಿಸಬೇಕಾದ್ದನ್ನು ಆಡಿ ಫಲವೇನು? ಬಾಯಾರಿ ಬಂದವರಿಗೆ ಮಜ್ಜಿಗೆ ಕೊಡುತ್ತೇನೆ. ಅವರು ತೃಪ್ತರಾಗಿ ಕೃತಜ್ಞತೆ ತೋರಿಸುವಾಗ ನನ್ನ ಮನಸ್ಸಿನ ಮೇಲಾಗುವ ಆ ಸುಖ ಸಂವೇದನೆಯನ್ನು ನಾನು ಹೇಗೆ ವರ್ಣಿಸಲಿ? ಕರುಗಳಿಗೆ ಮೇವುಣಿಸುವಾಗ ಆಗುವ ಸಂತೋಷ ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳ ಯೋಗಕ್ಷೇಮ ಹಚ್ಚಿಕೊಂಡಾಗ ಆಗಲಿಲ್ಲ. ಜೋಯಿಸ್ರೆ, ಮಾಡೋ ಕೆಲಸವೆಲ್ಲ ದೇವರಿಗಾಗಿ ಅಲ್ಲವೆ? ಕೆಲಸ ಮಾಡಿಸುವವನೂ ದೇವರೇ ಅಲ್ಲವೆ? ಮಕ್ಕಳು- ಮರಿಗಳೂ ದೇವರೆ? ದನಕರುಗಳೂ ದೇವರೆ! ನರೆ -ಹೊರೆ, ಊರು-ಕೇರಿ ಎಲ್ಲ ದೇವರೆ…’.
ಪಾಪಮ್ಮನಿಗೆ ಓದು ಇಲ್ಲವಾದರೂ ಮಾತುಗಳೊಂದೊಂದರಲ್ಲೂ ಸಾವಿರಾರು ವರ್ಷ ಜನ ನಡೆಸಿದ ಸಾರ್ಥಕ ಜೀವನದ ಅನುಭವಸಾರ ತುಂಬಿರುತ್ತಿತ್ತು. ಅವಳ ಹೃದಯದ ಆಳ ಅಳೆದವರಿಲ್ಲ ಎನ್ನುತ್ತಾರೆ “ನನ್ನ ಜೀವನ ಮತ್ತು ಧ್ಯೇಯ’ ಕೃತಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಪತ್ರಿಕಾರಂಗದ ಭೀಷ್ಮ ಅಂತಿದ್ದ ತಿ.ತಾ. ಶರ್ಮ.
ಪಾಪಮ್ಮನಿಗಿಂತ ಪಂಚಾಂಗ ಓದುವ ಜೋಯಿಸರು ಹತ್ತು ವರ್ಷ ಹಿರಿಯರು, ವಿದ್ವಾಂಸರು. ಪಾಪಮ್ಮನನ್ನು ಉದ್ದೇಶಿಸಿ “ಯಾರೇ ನಿನಗೆ ಈ ಹೆಸರಿಟ್ಟರು’ ಎಂದು ಕೇಳಿದರು. ತವರು ಮನೆಯಲ್ಲಿ “ಪಾಪ, ಪಾಪ’ ಎಂದು ಕರೆಯುತ್ತಿದ್ದರು. ಅತ್ತೆ ಮನೆಗೆ ಬಂದಾಗ “ಪಾಪಮ್ಮ’ ಎಂದು ಕರೆದರು ಎಂದುತ್ತರವಾಗಿತ್ತು.
“ನಾನು ವ್ಯಾಕರಣ ಓದಿ ಕೆಟ್ಟೆ. ಪಾಪ-ಪುಣ್ಯ ಈ ನಿಘಂಟು ಶಬ್ದಗಳು ನನ್ನ ಮನಸ್ಸಿನಲ್ಲಿ ಮನೆ ಮಾಡಿಬಿಟ್ಟಿವೆ. “ಪಾಪ’ ಅಂದರೆ ದೇವರ ಸಮಾನವಾದ, ಪಾಪ ಪುಣ್ಯಗಳ ಲೇಪವಿಲ್ಲದ “ಮಗು’ ಎಂದು ನನಗೆ ಹೊಳೆಯಬೇಡವೆ?’ ಎಂದು ತಲೆ ಚಚ್ಚಿಕೊಂಡ ಜೋಯಿಸರು, “ನಿಜ, ನಿಜ. ಪಾಪನಾಗಿ ತವರು ಮನೆ ಬೆಳಗಿದೆ. ಅಮ್ಮನಾಗಿ ಗಂಡನ ಮನೆ ಉದ್ಧರಿಸಿದೆ. ಪಾಪಮ್ಮನಾಗಿ ಊರಿಗೆ ಕೀರ್ತಿ ತಂದೆ- ತರುತ್ತಿದ್ದೀಯೆ…’ ಅಂದರು. ಇವರಿಬ್ಬರ ನಿರ್ಮಲ ಅಂತಃಕರಣ ನೋಡಿ ಪ್ರಕೃತಿದೇವಿ ಚಲಿಸದೆ ನಿಂತುಬಿಟ್ಟಳು ಎಂದು ಬಣ್ಣಿಸುತ್ತಾರೆ ತಿ.ತಾ. ಶರ್ಮ.
ರಾಜ್ಯಪಾಲರಾಗಿ ಸೇವೆ ಸಲ್ಲಿಸಿದವರೊಬ್ಬರು ಸ್ವಾತಂತ್ರ್ಯ ಹೋರಾಟಗಾರರಿಗಿದ್ದ ಪಿಂಚಣಿ ಪಡೆಯುತ್ತಿದ್ದರು. ಬೆಳಗಾವಿ ಜಿಲ್ಲೆಯ ಸೌಂದತ್ತಿ ಹಳ್ಳಿಯ ದೇವದಾಸಿ ಸಮುದಾಯದ ಪಾರಜ್ಜಿ ಸ್ವಾತಂತ್ರ್ಯ ಹೋರಾಟ ನಡೆಸಿ ಜೈಲುವಾಸ ಅನುಭವಿಸಿಯೂ ಪಿಂಚಣಿ ಪಡೆಯುತ್ತಿರಲಿಲ್ಲ. “ಅಜ್ಜಿ, ನೀನೇಕೆ ಪಿಂಚಣಿ ಪಡೆದಿಲ್ಲ’ ಎಂದು ಅವರನ್ನು ಭೇಟಿ ಮಾಡಿದ ಶಿಕ್ಷಣ ಕ್ಷೇತ್ರದ ಸಂತ ಎಂದು ಹೆಸರಾದ ಬೆಳಗೆರೆ ಕೃಷ್ಣ ಶಾಸಿŒಗಳು ಕೇಳಿದಾಗ “ಸರಕಾರದಿಂದ ಹಣ ಕೇಳಲಿಕ್ಕೆ ಆ ದಿನ ನಾನು ಕೂಲಿಗೆ ಹೋಗಿದೆ°àನು?’ ಎಂಬ ತಿರಸ್ಕಾರ, ಬೇಸರ, ಸಿಟ್ಟುಮಿಶ್ರಿತ ಉತ್ತರವನ್ನು ನೀಡಿದ್ದರು. “ನನಗೆ ಈ ಪಾರಜ್ಜಿ ದೊಡ್ಡ ವ್ಯಕ್ತಿಯಾಗಿ ಕಾಣುತ್ತಾರೆ’ ಎಂದು ಕೃಷ್ಣಶಾಸ್ತ್ರಿ ನುಡಿಯುತ್ತಾರೆ.
ಸೌಲಭ್ಯ ಕೊಡುವಾಗ, ಪಡೆಯುವಾಗ…
ನೂರಿನ್ನೂರು ಏಕೆ, 60-70-80 ವರ್ಷಗಳ ಹಿಂದಿನ ಭಾರತದ ಜನಜೀವನ ಶೈಲಿಯನ್ನು ಕಥಾನಕದ ಘಟನೆಗಳು ತೋರಿಸುತ್ತವೆ. ಹೀಗೆ ಸ್ವಲಾಭಕ್ಕಾಗಿ ಕೆಲಸ ಮಾಡದವರಿಗೆ ನಮೋ ಎನ್ನಬೇಕಲ್ಲವೆ? ನಾವೂ ಈಗ ಕೆಲಸ ಮಾಡುತ್ತೇವೆ. ನಮಗಾರಿಗೂ ಇಂದು “ಪುರುಸೊತ್ತು’ ಇಲ್ಲವೇ ಇಲ್ಲ. ಅವರ ಕೆಲಸಗಳಿಗೂ ನಮ್ಮ ಕೆಲಸಗಳಿಗೂ ಇರುವ ವ್ಯತ್ಯಾಸವೇನು? ಹೆಚ್ಚು ಹೆಚ್ಚು ಕಲಿತಂತೆ ನಮ್ಮ ಎಲ್ಲ ಕೆಲಸಗಳಿಗೂ “ರೊಕ್ಕ’ದ್ದೇ ಚಿಂತೆ… ಉನ್ನತೋನ್ನತ ವಿದ್ಯಾಭ್ಯಾಸಕ್ಕೂ, ಹುದ್ದೆಗಳಿಗೂ, ರೊಕ್ಕಕ್ಕೂ, ಇದರ ಹಿನ್ನೆಲೆಯಲ್ಲಿ ಸೃಷ್ಟಿಯಾಗುವ ಕೃತಕ ಘನತೆಗೂ ಅವಿನಾಭಾವ ಸಂಬಂಧ ಕುದುರಿಸುವ ಸಾಮಾಜಿಕ ವ್ಯವಸ್ಥೆಯನ್ನು ರೂಪಿಸಿ ಅದರಲ್ಲೇ ಗಿರಕಿ ಹೊಡೆಯುತ್ತಿದ್ದೇವೆ. ರೊಕ್ಕವೇ ಆಗಲಿ, ಸಹಾಯ ಮಾಡುವುದೇ ಆಗಲಿ ಬೇರೆಯವರಿಗೆ ಕೊಡುವಾಗ ಕೈ, ಮನಸ್ಸು ಜಿಪುಣಾಗ್ರೇಸರವಾದರೆ, ಪಡೆಯುವಾಗ ಕೊಟ್ಟಷ್ಟೂ ಸಾಲದು ಎಂಬ ಭಾವ ಅಂಕುರಿಸುತ್ತದೆ. ಅದಕ್ಕೆ ಉದಾಹರಣೆ: ಒಮ್ಮೆ ಸಾಹಿತಿ ವೀ. ಸೀತಾರಾಮಯ್ಯನವರ ಮಕ್ಕಳು ಮನೆಗೆಲಸದವಳನ್ನು ಕೆಲಸಕ್ಕೆ ಬರುವುದು ಬೇಡವೆಂದರು. ಆಗ ವೀ.ಸೀ., “ಆಕೆ 15 ವರ್ಷಗಳಿಂದ ನಿಮಗೆ ಬೇಕಾದ ಎಲ್ಲ ಕೆಲಸಗಳನ್ನು ಮಾಡುತ್ತಿದ್ದಾಳೆ. ನಿಮ್ಮನ್ನು ಕಂಪೆನಿಯಿಂದ ಇದೇ ರೀತಿ ಹೊರಹೋಗಲು ಹೇಳಿದರೆ ನೀವು ಹೋಗುತ್ತೀರೇನೋ? ನಿಮಗೆ ಕೊಟ್ಟಷ್ಟು ಇಂಕ್ರಿಮೆಂಟ್ ಸಾಲದು? ವೇತನ ಸಾಲದು? ಸಿಎಲ್, ಇಎಲ್ ಎಷ್ಟಿದ್ದರೂ ಮತ್ತಷ್ಟು ಬೇಕು. ನೀವು ಮಾಡುವ ಮಹಾಕೆಲಸಕ್ಕೆ ಬೋನಸ್ ಬೇರೆ ಬೇಕು. ಈಕೆಗೆ ಎಷ್ಟು ರಜೆ ಕೊಟ್ಟಿದ್ದೀರಿ? ಏನು ಕೊಟ್ಟಿದ್ದೀರಿ’ ಎಂದು ಗದರಿಸಿದ್ದರು.
-ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.