ವಿಕಾಸ್ ಸೂಪರ್ ರೈಡ್ ಬೆಂಗಳೂರು ಬುಲ್ಸ್ ಅಗ್ರಸ್ಥಾನ ಗಟ್ಟಿ
Team Udayavani, Oct 30, 2022, 11:02 PM IST
ಪುಣೆ: ವಿಕಾಸ್ ಕಂಡೋಲ ಅವರ ಅಮೋಘ ಸೂಪರ್ ರೈಡ್ ಪರಾಕ್ರಮದಿಂದ ಬೆಂಗಳೂರು ಬುಲ್ಸ್ 9ನೇ ಪ್ರೊ ಕಬಡ್ಡಿ ಸೀಸನ್‌ನಲ್ಲಿ 6ನೇ ವಿಜಯೋತ್ಸವ ಆಚರಿಸಿದೆ. ರವಿವಾರದ ಮೊದಲ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ ವಿರುದ್ಧ 37-31 ಅಂತರದ ಗೆಲುವು ಸಾಧಿಸಿ ತನ್ನ ಅಗ್ರಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿದೆ.
ಕೊನೆಯ ಹಂತದಲ್ಲಿ ಎರಡೂ ತಂಡಗಳು 30-30 ಸಮಬಲದಲ್ಲಿದ್ದವು. ಪಂದ್ಯ ಟೈಗೊಳ್ಳುವ ಹಂತದಲ್ಲಿ ವಿಕಾಸ್ ಕಂಡೋಲ ಸೂಪರ್ ರೈಡ್ ಮೂಲಕ ಜೈಪುರವನ್ನು ಆಲೌಟ್ ಮಾಡಿ 5 ಅಂಕ ಗಳಿಸಿಕೊಟ್ಟರು. ಇದರೊಂದಿಗೆ ಬೆಂಗಳೂರು ರೋಚಕ ಗೆಲುವು ಸಾಧಿಸಿತು. ಕಂಡೋಲ ಗಳಿಕೆ 9 ಅಂಕ.
ಬುಲ್ಸ್ ಪರ ಭರತ್ ಅತ್ಯಧಿಕ 10 ಅಂಕ ತಂದಿತ್ತರು. ಇದರೊಂದಿಗೆ ಪ್ರಸಕ್ತ ಸೀಸನ್‌ನಲ್ಲಿ 100 ಅಂಕಗಳ ಗಡಿ ದಾಟಿದ ಹೆಗ್ಗಳಿಕೆಗೆ ಪಾತ್ರರಾದರು. ರೈಡರ್ ನೀರಜ್ ನರ್ವಾಲ್ ಕೂಡ ಅತ್ಯುತ್ತಮ ಪ್ರದರ್ಶನವಿತ್ತರು (5 ಅಂಕ). ಇದರಲ್ಲಿ 3 ಅಂಕ ಟ್ಯಾಕಲ್ ಮೂಲಕ ಬಂದದ್ದು ವಿಶೇಷ.
17ನೇ ನಿಮಿಷದಲ್ಲಿ ಜೈಪುರ್ ತಂಡದ ಭವಾನಿ ರಜಪೂತ್ ಸೂಪರ್ ರೈಡ್ ಮೂಲಕ ಅಂಕಗಳ ಅಂತರವನ್ನು ಕಡಿಮೆ ಮಾಡಿದರೂ ಲಾಭವಾಗಲಿಲ್ಲ. ಜೈಪುರ್ ಪರ ಅರ್ಜುನ್ ದೇಶ್ವಾಲ್ ಅತ್ಯಧಿಕ 10 ಅಂಕ, ನಾಯಕ ಸುನೀಲ್ ಕುಮಾರ್ 5 ಅಂಕ ಗಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.