ಕುಷ್ಟಗಿ: ಕನ್ನಡ ಭಾಷೆಯ ಅಭಿಮಾನ ಮರೆಯದೇ ಮೆರೆಯಬೇಕು; ಶಾಸಕ ಅಮರೇಗೌಡ ಪಾಟೀಲ
Team Udayavani, Nov 1, 2022, 11:29 AM IST
ಕುಷ್ಟಗಿ: ಕನ್ನಡ ಭಾಷಾಭಿಮಾನದ ಜೊತೆಗೆ ಬದುಕು ಕಟ್ಟಿಕೊಳ್ಳುವುದು ನಮ್ಮ ಮಕ್ಕಳಿಗೆ ಕಲಿಸೋಣ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಕರೆ ನೀಡಿದರು.
ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ 67ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉದ್ಯೋಗಕ್ಕೆ ಬದುಕುವುದಕ್ಕೆ ಅನ್ಯ ಭಾಷೆಗಳನ್ನು ಗೌರವಿಸುವುದರ ಜೊತೆಗೆ ನಮ್ಮ ಭಾಷೆಯ ಅಭಿಮಾನ ಮರೆಯದೇ ಮೆರೆಯಬೇಕು. ನಮ್ಮ ಮಾತೃ ಭಾಷೆ ಮರೆತರೆ ಮಾತೃ ದ್ರೋಹವಾದಂತೆ ಎಂದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಶಿಲ್ದಾರ ಗುರುರಾಜ್ ಎಂ. ಚಲವಾದಿ, ಈ ಒಂದು ರಾಜ್ಯದಲ್ಲಿ ಹಲವು ಜಗತ್ತುಗಳಿವೆ. ನಮ್ಮ ರಾಜ್ಯದಲ್ಲಿ ಚಿನ್ನ, ಖನಿಜ, ಸಂಪತ್ತು, ಶ್ರೀಗಂಧ, ಸಾಗರ, ನದಿ ಸರೋವರಗಳು ಸೇರಿದಂತೆ ಹಲವು ಜಗತ್ತಿನ ವಿಶೇಷತೆಗಳು ಇಲ್ಲಿವೆ ಎಂದರು.
ಬಿ.ಆರ್.ಪಿ. ಶರಣಪ್ಪ ತೆಮ್ಮಿನಾಳ ಮಾತನಾಡಿ, ಕರ್ನಾಟಕ ಏಕೀಕರಣವಾದರೂ ನೂರಾರು ಸಮಸ್ಯೆಗಳಿವೆ. ಬೆಳಗಾವಿ, ಕಾಸರಗೋಡ, ಮಡಕಶಿರಾ ಗಡಿ ಸಮಸ್ಯೆ ಹೀಗೆ ನೂರಾರು ಸಮಸ್ಯೆಗಳ ಮದ್ಯೆ ಕನ್ನಡ ರಾಜ್ಯೋತ್ಸವ ಆಚರಿಸುವಂತಾಗಿದೆ ಎಂದರು.
ತಾ.ಪಂ. ಇಓ ಶಿವಪ್ಪ ಸುಭೇದಾರ, ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸೈ ಮೌನೇಶ್ ರಾಠೋಡ್, ಸಮಾಜ ಕಲ್ಯಾಣ ಅಧಿಕಾರಿ ಬಾಲಚಂದ್ರ ಸಂಗನಾಳ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ದುರ್ಗಾ ಪ್ರಸಾದ್, ಕಸಾಪ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್, ರಾಜ್ಯೋತ್ಸವ ಪುರಸ್ಕೃತ ಶರಣಪ್ಪ ವಡಿಗೇರಿ,ಸಿಡಿಪಿಓ ವೀರಭದ್ರಯ್ಯ ಹಿರೇಮಠ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ, ಕಳಕನಗೌಡ ಪಾಟೀಲ, ಶಿರೇಸ್ತೇದಾರ ಸತೀಶ್, ಧರ್ಮರಾಜ ಕಂಬಳಿ ಇದ್ದರು.
ಸಭಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
ಗಂಗಾವತಿ: ಹಳ್ಳದ ಬದಿ ಹೊಸ್ಕೇರಾ-ಡಗ್ಗಿ ದಲಿತರ ಶವ ಸಂಸ್ಕಾರ- ಅಸ್ಪ್ರಶ್ಯತೆ ಇನ್ನೂ ಜೀವಂತ!
Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
ದೋಟಿಹಾಳ: ಅನುದಾನವಿಲ್ಲದೆ ಮುಚ್ಚುವ ಹಂತಕ್ಕೆ ತಾಂಡಾ ನಿಗಮದ ಗ್ರಂಥಾಲಯಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.