ಬೆಂಗಳೂರು ಬುಲ್ಸ್ ಗೆ ಸೋಲು, ಪುನೇರಿ ಪಲ್ಟಾನ್ಸ್‌ಗೆ ಭರ್ಜರಿ ಜಯ
Team Udayavani, Nov 1, 2022, 10:55 PM IST
ಪುಣೆ: ಕಳೆದ ನಾಲ್ಕು ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿದ್ದ ಬೆಂಗಳೂರು ಬುಲ್ಸ್ ತಂಡವು ಮಂಗಳವಾರ ಹರಿಯಾಣ ಸ್ಟೀಲರ್ಸ್ ವಿರುದ್ಧ 29-27 ಅಂಕಗಳ ಅಂತರದಿಂದ ಸೋಲನುಭವಿಸಿತು.
ಆರಂಭದಿಂದಲೂ 2 ತಂಡಗಳು ಭಾರೀ ಹೋರಾಟವನ್ನೇ ನಡೆಸಿದವಾ ದರೂ, ಕಡೆಗೆ ಗೆಲುವಿನ ಮುಕುಟ ತೊಡುವಲ್ಲಿ ಹರಿಯಾಣ ಯಶಸ್ವಿಯಾ ಯಿತು. ಅದೂ ಕೇವಲ 2 ಅಂಕಗಳ ಅಂತರದಲ್ಲಿ ಈ ಪಂದ್ಯವನ್ನು ಗೆದ್ದಿತು. ಆದರೆ, ಇಡೀ ಪಂದ್ಯದಲ್ಲಿ ಬೆಂಗಳೂರಿಗೆ ಎಲ್ಲೂ ಮೇಲುಗೈ ಸಿಗಲಿಲ್ಲ ಎಂಬುದು ವಿಚಿತ್ರ.
ಹರಿಯಾಣ ಪರ ಮೀತು ಶರ್ಮ 9, ಬಸ್ತಾಮಿ 5 ಅಂಕ ಗಳಿಸಿ ಗೆಲುವಿಗೆ ನೆರವಾದರು. ಬೆಂಗಳೂರು ಪರ ಭರತ್ 10, ಸಚಿನ್ 5 ಅಂಕ ಗಳಿಸಿದರು. ಈ ಪಂದ್ಯದಲ್ಲಿ ಸೋತರೂ ಬುಲ್ಸ್ ತಂಡವು ಅಂಕಪಟ್ಟಿಯಲ್ಲಿ 35 ಅಂಕಗಳೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿದಿದ್ದರೆ, ಪುನೇರಿ ಪಲ್ಟಾನ್ 32 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರಿದೆ.
ಪುನೇರಿಗೆ ಭರ್ಜರಿ ಜಯ
ಮಂಗಳವಾರ ನಡೆದ ಮತ್ತೊಂದು ಪಂದ್ಯದಲ್ಲಿ ಪುನೇರಿ ಪಲ್ಟಾನ್ಸ್ ತಂಡವು ದಬಾಂಗ್ ಡೆಲ್ಲಿ ವಿರುದ್ಧ 43-38 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. ಪುನೇರಿ ಪರ ಆಕಾಶ್ ಶಿಂಧೆ ಮತ್ತು ಮೋಹಿತ್ ಗಯಾತ್ ತಲಾ 13 ಅಂಕ ಗಳಿಸಿದರು. ಡೆಲ್ಲಿ ಪರ ನವೀನ್ ಕುಮಾರ್ 16 ಅಂಕ, ಆಶು ಮಲಿಕ್ 8 ಅಂಕ ಗಳಿಸಿದರಾದರೂ, ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಆಗಲಿಲ್ಲ. ಪಂದ್ಯದ 5 ನಿಮಿಷದ ವರೆಗೆ ಇತ್ತಂಡಗಳು ಸಮಬಲ ಸಾಧಿಸಿದ್ದವು. ಅನಂತರದಲ್ಲಿ ಪುನೇರಿ ಅಂತರವನ್ನು ಏರಿಸುತ್ತ ಸಾಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.