ಯೋಚಿಸಿ ಹೆಜ್ಜೆ ಇರಿಸಬೇಕಾಗಿದೆ ಬ್ರಿಟನ್‌ ಪ್ರಧಾನಿ ಸುನಕ್‌


Team Udayavani, Nov 2, 2022, 6:40 AM IST

ಯೋಚಿಸಿ ಹೆಜ್ಜೆ ಇರಿಸಬೇಕಾಗಿದೆ ಬ್ರಿಟನ್‌ ಪ್ರಧಾನಿ ಸುನಕ್‌

ಹಿಸ್ಟರಿ ರಿಪೀಟ್ಸ್‌ ಇಟ್‌ ಸೆಲ್ಫ್ (ಇತಿಹಾಸ ಪುನರಾವರ್ತನೆಯಾಗುತ್ತದೆ). ಬ್ರಿಟನ್‌ ವಿಚಾರದಲ್ಲಿ ಅದು ಸತ್ಯವೇ ಆಗಿದೆ. ಹೀಗೆ ಉಲ್ಲೇಖಿಸುವುದಕ್ಕೆ ಕಾರಣವೂ ಇದೆ. ಅ.25ರಂದು ಇನ್ಫೋಸಿಸ್‌ ಸಂಸ್ಥಾಪಕ ಡಾ| ಎನ್‌. ಆರ್‌. ನಾರಾಯಣಮೂರ್ತಿ ಅವರ ಅಳಿಯ, ಭಾರತೀಯ ಮೂಲದ ರಿಷಿ ಸುನಕ್‌ ಬ್ರಿಟನ್‌ನ 57ನೇ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ.

1757ರಿಂದ 1947ರ ವರೆಗೆ ಬ್ರಿಟಿಷರು ನಮ್ಮ ದೇಶವನ್ನು ಪ್ಯತ್ಯಕ್ಷ ಮತ್ತು ಪರೋಕ್ಷವಾಗಿ 200 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದರು. ಅದಕ್ಕೆ ಪೂರಕವಾಗಿ ಸೂರ್ಯ ಮುಳುಗದ ನಾಡು ಎಂದು ಒಂದು ಕಾಲದಲ್ಲಿ ಹೆಸರು ಪಡೆದಿದ್ದ ಯುನೈಟೆಡ್‌ ಕಿಂಗ್‌ಡಮ್‌ಗೆ ಭಾರತೀಯ ಮೂಲದ ಹಾಗೂ ಮೊದಲ ಹಿಂದೂ ಮೂಲದ ರಿಷಿ ಸುನಕ್‌ ಅವರು ಪ್ರಧಾನಿಯಾಗಿದ್ದಾರೆ.

ಹಾಗಿದ್ದರೆ ಅವರಿಗೆ ಮುಂದಿನ ಎರಡು ವರ್ಷಗಳ ಕಾಲ ಸುಗಮವಾಗಿ ಆಡಳಿತ ನಡೆಸಲು ಸಾಧ್ಯವೇ ಎಂಬ ಚರ್ಚೆಗಳು ಶುರುವಾಗಿವೆ. ಬೋರಿಸ್‌ ಜಾನ್ಸನ್‌ ಪ್ರಧಾನಿಯಾಗಿದ್ದ ವೇಳೆ ಅವರು ವಿತ್ತ ಸಚಿವರಾಗಿದ್ದರು. ಆಗ ಕೈಗೊಂಡಿದ್ದ ಕಾರ್ಯ ಕ್ರಮಗಳು ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿದ್ದವು. ಆಗಿನ ಸಂದರ್ಭ ಮತ್ತು ಈಗಿನ ವಿಚಾರ ಬೇರೆ ಎನ್ನುವುದನ್ನು ಗಮನಿಸಬೇಕಾದ ಅಂಶ.

ಬ್ರಿಟನ್‌ ಪ್ರಧಾನಿಯಾಗಿ ನೇಮಕಗೊಂಡ ದಿನ ಅವರು ಮಾಡಿದ ಭಾಷಣದಲ್ಲಿನ ಅಂಶಗಳನ್ನು ಗಮನಿ ಸೋಣ. ನಿಕಟ ಪೂರ್ವ ಪ್ರಧಾನಿ ಲಿಜ್‌ ಟ್ರಸ್‌ ಕೈಗೊಂಡಿದ್ದ ಕೆಲವೊಂದು ತಪ್ಪು ನಿರ್ಧಾರ  ಗಳನ್ನು ಸರಿಪಡಿಸಬೇಕಾಗಿದೆ. ಯುನೈಟೆಡ್‌ ಕಿಂಗ್‌ಡಮ್‌ಗೆ ಸದ್ಯ ಅತ್ಯಂತ ಕಠಿನ ಆರ್ಥಿಕ ಪರಿಸ್ಥಿತಿ ಇದೆ. ಅದನ್ನು ನಿವಾರಿಸಬೇಕಾಗಿದ್ದರೆ ಕಠಿನ ನಿಲುವು ಗಳನ್ನು ತೆಗೆದುಕೊಳ್ಳಬೇಕಾಗಬಹುದು ಎಂದೂ ಹೇಳಿದ್ದರು.

ಇನ್ನು 2019ರಲ್ಲಿ ನಡೆದಿದ್ದ ಚುನಾವಣೆ ವೇಳೆ ಬ್ರೆಕ್ಸಿಟ್‌ ಅನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ   ಗೊಳಿ ಸುತ್ತೇವೆ ಎಂದು ಆ ಸಂದರ್ಭದಲ್ಲಿ ಪ್ರಧಾನಿ ಯಾಗಿದ್ದ ಬೋರಿಸ್‌ ಜಾನ್ಸನ್‌ ಪ್ರಣಾಳಿಕೆಯಲ್ಲಿ ವಾಗ್ಧಾನ ಮಾಡಿದ್ದರು. ಅದನ್ನು ಈಗ ಮುಂದಿನ 2 ವರ್ಷಗಳಲ್ಲಿ ರಿಷಿ ಸುನಕ್‌ ಕಾರ್ಯಗತಗೊಳಿಸಬೇಕಾಗಿದೆ.

ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸುವುದು, ಅದರಲ್ಲಿ ವೈದ್ಯರು, ದಾದಿಯರು ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರ ಸಂಬಳ ಹೆಚ್ಚಳ ಮಾಡುವುದು, ಹಾಲಿ ಇರುವ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿ ಸು ವುದು, ಹೊಸ ಆಸ್ಪತ್ರೆಗಳ ನಿರ್ಮಾಣ, ಶಾಲೆಗಳ ನಿರ್ಮಾಣ, ಸದೃಢವಾಗಿರುವ ಅರ್ಥ ವ್ಯವಸ್ಥೆ, ಅದರಲ್ಲಿ ಉದ್ಯೋಗಸ್ಥರಿಗೆ ತೆರಿಗೆ ಪ್ರಮಾಣ ಕಡಿತಗೊಳಿ ಸುವುದು, ನಿವೃತ್ತ ಉದ್ಯೋಗಿಗಳಿಗೆ ಪಿಂಚಣಿ ನೀಡು ವುದನ್ನು ಮುಂದುವರಿಸುವುದು, ಸರಕಾರದಲ್ಲಿ ಇರುವ ಉದ್ಯೋಗಿಗಳ ಕೌಶಲ ವೃದ್ಧಿಸಿ ಮತ್ತಷ್ಟು ಹೆಚ್ಚಿನ ವರ್ಷಗಳ ಕಾಲ ಅವರು ಉದ್ಯೋಗದಲ್ಲಿ ಮುಂದು ವರಿಯುವಂತೆ ಮಾಡುವುದು, ಅಕ್ರಮವಾಗಿ ಬ್ರಿಟನ್‌ಗೆ ವಲಸೆ ಬರುತ್ತಿರುವವರ ಮೇಲೆ ನಿಯಂತ್ರಣದ ಬಗ್ಗೆ ವಾಗ್ಧಾನ ಮಾಡಲಾಗಿತ್ತು. ಈ ಭರವಸೆಗಳ ಈಡೇರಿಕೆಗೆ ಹಿಂದಿನ ಪ್ರಧಾನಿಗಳು ನಿರೀಕ್ಷೆ ಮಾಡಿದಷ್ಟು ಗಮನ ನೀಡಲು ಹಲವು ಕಾರಣಗಳಿಂದ ಸಾಧ್ಯವಾಗಿಲ್ಲ.

ಇನ್ನು ಬ್ರಿಟನ್‌ನ ಅರ್ಥ ವ್ಯವಸ್ಥೆ ಹೀನಾಯ ಸ್ಥಿತಿ ಯತ್ತ ಹೊರಳಿಕೊಳ್ಳಲು ಆರಂಭಿಸಿದ್ದು ಹಾಲಿ ಪ್ರಧಾನಿ ರಿಷಿ ಸುನಕ್‌ ಕಾಲದಲ್ಲಿ ಅಲ್ಲ. ಅವರು ಪೂರ್ಣ ಪ್ರಮಾಣದಲ್ಲಿ ರಾಜಕೀಯ ಪ್ರವೇಶ ಮಾಡಿ, 2015ರಲ್ಲಿ ಮೊದಲ ಬಾರಿಗೆ ಸಂಸದರಾಗು ವುದಕ್ಕೆ ಮುನ್ನವೇ ಸಂಕಷ್ಟಗಳು ಶುರುವಾಗಿದ್ದವು. 2019ರಲ್ಲಿ ಶುರುವಾಗಿದ್ದ ಕೊರೊನಾ ಮತ್ತು ಫೆ.24ರಿಂದ ರಷ್ಯಾ ಸೇನೆಯಿಂದ ಉಕ್ರೇನ್‌ ಮೇಲೆ ದಾಳಿ ಪರಿಸ್ಥಿತಿಯನ್ನು ಮತ್ತಷ್ಟು ಕೈಮೀರುವಂತೆ ಮಾಡಿವೆ ಎನ್ನುವುದು ಹಗಲಿನಷ್ಟೇ ಸತ್ಯ. ಐರೋಪ್ಯ ಒಕ್ಕೂಟದಲ್ಲಿ ಇದ್ದ ಬ್ರಿಟನ್‌ ಅಲ್ಲಿಂದ ತೊರೆಯುವ ಬಗ್ಗೆ ನಿರ್ಧಾರ ಕೈಗೊಂಡು, ಬೃಹತ್‌ ಪ್ರಮಾಣದಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ಅದರಲ್ಲಿ ತಾತ್ವಿಕವಾಗಿ ಯಶಸ್ಸು ಸಿಕ್ಕಿದರೂ ಸರಿಯಾದ ದೃಷ್ಟಿಕೋನದಿಂದ ಯೋಚನೆ ಮಾಡಿದರೆ ಅದರಿಂದ ಹೆಚ್ಚು ನಷ್ಟ ಅನುಭವಿಸುತ್ತಾ ಇರುವುದು ಬ್ರಿಟನ್‌.

ಹಾಲಿ ಪ್ರಧಾನಿ ರಿಷಿ ಸುನಕ್‌ ಮುಂದೆ ಇರುವುದು ಬ್ರಿಟನ್‌ನ ಹಳಿ ತಪ್ಪಿದ ಅರ್ಥ ವ್ಯವಸ್ಥೆಯನ್ನು ಮತ್ತೆ ಸುಧಾರಿಸಿಕೊಂಡು ಮತ್ತೆ ಯಥಾಸ್ಥಿತಿಗೆ ತರುವುದೇ ಆಗಿದೆ. ಕೊರೊನಾ ಮತ್ತು ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎರಡು ವರ್ಷಗಳ ಅವಧಿಯಲ್ಲಿ ಜಾರಿಗೆ ತಂದಿದ್ದ ಲಾಕ್‌ಡೌನ್‌ನಿಂದಾಗಿ ಸರಕಾರಕ್ಕೆ ಬರುವ ಆದಾಯ ಮತ್ತು ವೆಚ್ಚದ ನಡುವಿನ ವ್ಯತ್ಯಾಸ ಶೇ.11ಕ್ಕಿಂತ ಅಧಿಕ ವಾಗಿದೆ ಎಂದು ಇನ್‌ಸ್ಟಿಟ್ಯೂಟ್‌ ಆಫ್‌ ಫಿಸ್ಕಲ್‌ ಸ್ಟಡೀಸ್‌ನ ವರದಿಯಲ್ಲಿ ಉಲ್ಲೇಖೀಸಲಾಗಿದೆ. 2018- 19ನೇ ಸಾಲಿನಲ್ಲಿ ಸರಕಾರಕ್ಕೆ ಬಂದಿದ್ದ ಆದಾಯ ಅಗತ್ಯ ಇರುವ ವೆಚ್ಚಗಳನ್ನು ಸರಿದೂಗಿಸಲು ಅಲ್ಲಿಂದಲ್ಲಿಗೆ ಸಮವಾಗುತ್ತಿತ್ತು.

2008ರಲ್ಲಿ ಜಗತ್ತಿಗೆ ಕಾಡಿದ್ದ ಆರ್ಥಿಕ ಹಿಂಜರಿತದ ಅನಂತರ ಬ್ರಿಟನ್‌ನ ಅರ್ಥ ವ್ಯವಸ್ಥೆಯಲ್ಲಿ ದೊಡ್ಡ ಧನಾತ್ಮಕ ಬದಲಾವಣೆ ಆಗಿಲ್ಲ. ಐರೋಪ್ಯ ಒಕ್ಕೂಟದ ಜತೆಗೆ ವ್ಯಾಪಾರ ವಹಿವಾಟುಗಳನ್ನು ಸುಸೂ ತ್ರ ವಾಗಿ ನಡೆಸಿಕೊಂಡು ಹೋಗಲು ಕಷ್ಟ ವಾಗಿತ್ತು. ಹೀಗಾಗಿಯೇ ಪ್ರಸಕ್ತ ವರ್ಷದ 2ನೇ ತ್ತೈ ಮಾ ಸಿ ಕದಲ್ಲಿ ಜಿಡಿಪಿ ಪ್ರಮಾಣ ಶೇ.0.2ಕ್ಕೆ ಕುಸಿ ಯಿತು. 2021ರ 2ನೇ ತ್ತೈಮಾಸಿಕದಲ್ಲಿ ಜಿಡಿಪಿ ಪ್ರಮಾಣ ಶೇ.6.5 ಆಗಿತ್ತು. ಅದನ್ನು ನಿವಾರಿಸಲು ತತ್‌ಕ್ಷ ಣವೇ ಸರಕಾರದ ವತಿಯಿಂದ ಹೆಚ್ಚಿನ ರೀತಿ ಯಲ್ಲಿ ಖರ್ಚು ಮಾಡುವ ಬಗ್ಗೆ ಕ್ರಮಗಳು, ವಿತ್ತೀಯ ಪರಿಸ್ಥಿತಿಯನ್ನು ಪುನರುತ್ಥಾನಗೈಯಲು ತೆಗೆದು ಕೊಳ್ಳುವ ಕ್ರಮಗಳಿಂದ ಎಲ್ಲವೂ ನಿರ್ಧಾರವಾಗಲಿದೆ.

ಬ್ರಿಟನ್‌ ನಲ್ಲಿ ಒಂದು ವರ್ಷದ ಅವಧಿಯನ್ನು ಪರಿ ಗಣಿಸಿದರೆ, ಸೆಪ್ಟಂಬರ್‌ನಲ್ಲಿ ಹಣದುಬ್ಬರ ಪ್ರಮಾಣ ಶೇ.10.1ರ ವರೆಗೆ ಏರಿಕೆಯಾಗಿದೆ. ಅದ ರಲ್ಲಿ ಆಹಾರ ವಸ್ತುಗಳ ಬೆಲೆ ಏರಿಕೆಯೇ ಪ್ರಧಾನ. ಇಂಧನ ಬೆಲೆ ಶೇ.26.5ರಷ್ಟು ಹೆಚ್ಚಾಗಿದೆ.

ಅದನ್ನು ನಿವಾರಿಸುವಲ್ಲಿ ಸುನಕ್‌ ಸರಕಾರ ಮುತುವರ್ಜಿ ವಹಿಸಬೇಕಾಗಿದೆ. ಯು.ಕೆ.ಜನರ ಕೈಯ್ಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೌಂಡ್‌ ಸ್ಟರ್ಲಿಂಗ್‌ ಒಡಾಡುವಂತೆ ಮಾಡಿ, ಕೊಳ್ಳುವ ಸಾಮರ್ಥ್ಯ ಹೆಚ್ಚುವಂತೆ ಮಾಡಬೇಕಾಗಿದೆ.
ಯು.ಕೆ. ಷೇರು ಪೇಟೆ ಸತತವಾಗಿ ಪತನ ಗೊಳ್ಳುತ್ತಿದೆ. ಅದಕ್ಕೆ ಪೂರಕವಾಗಿ ಅಮೆರಿಕದ ಡಾಲರ್‌ ವಿರುದ್ಧ ಪೌಂಡ್‌ ಸ್ಟರ್ಲಿಂಗ್‌ ಕುಸಿತಗೊಳ್ಳು ತ್ತಲೇ ಇದೆ. ರಿಷಿ ಸುನಕ್‌ ದೇಶದ ಮುಂದಿನ ಪ್ರಧಾನಿ ಎಂದು ಘೋಷಣೆ ಆಗುತ್ತಿದ್ದಂತೆಯೇ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ಪೌಂಡ್‌ನ‌ ಮೌಲ್ಯ ಕೊಂಚ ಏರಿಕೆಯಾಗಿದೆ.

ಇದೆಲ್ಲದರ ಜತೆಗೆ ಬ್ರಿಟನ್‌ನಲ್ಲಿ ರಾಜಕೀಯ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಆದ್ಯತೆಯ ಕೆಲಸ ವಾಗಬೇಕಾಗಿದೆ. ಬೋರಿಸ್‌ ಜಾನ್ಸನ್‌ ಪ್ರಧಾನಿ ಯಾಗಿದ್ದ ವೇಳೆ ಅಧಿಕೃತ ನಿವಾಸದಲ್ಲಿ ಪಾರ್ಟಿ ಮಾಡಿ ಸಿಕ್ಕಿಬಿದ್ದದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆ ದೇಶದ ಮಾನ ಹೋಗುವಂತೆ ಮಾಡಿದೆ. ಆ ಕಳಂಕವನ್ನು ತೊಡೆದು ಹಾಕಿ ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ, ವಾಣಿಜ್ಯ ವಹಿವಾಟು ವೃದ್ಧಿಯಾಗುವಂತೆ ನೋಡಬೇಕಾಗಿದೆ.

ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಹೇಳಿಕೊಂಡಿರುವಂತೆ ನಾನು ಪಕ್ಷವನ್ನು ಹಾಗೂ ದೇಶವನ್ನು ಒಗ್ಗೂ ಡಿಸಿ ಮುಂದುವರಿಯಲು ಮುಂದಾಗಿದ್ದೇನೆ ಎಂದಿದ್ದಾರೆ. ಅದಕ್ಕೆ ಪೂರಕವಾಗಿ ನಿರ್ಧಾರಗಳನ್ನು ಕೈಗೊ ಳ್ಳು ವಲ್ಲಿ ತಪ್ಪಾಗದಂತೆ ಎಚ್ಚರವಹಿಸಿ. ಈ ಎಲ್ಲ ಅಂಶಗಳಿಗೆ ಪೂರಕ ವಾಗುವಂತೆ, 2025ರ ಜನವರಿಯಲ್ಲಿ ಬ್ರಿಟನ್‌ನಲ್ಲಿ ನಡೆಯಲಿರುವ ಸಂಸತ್‌ ಚುನಾವಣೆ ಬಗ್ಗೆಯೂ ಹಲವು ರೀತಿಯ ಚರ್ಚೆಗಳು ಶುರುವಾಗಿವೆ. ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿರುವ ಅಂಶವನ್ನು ಉಲ್ಲೇಖಿಸುವುದಾದರೆ ವಿಪಕ್ಷ ಲೇಬರ್‌ ಪಾರ್ಟಿ ಸದ್ಯ ಶೇ.17ರಷ್ಟು ಮುನ್ನಡೆಯನ್ನು ಕಾಯ್ದು ಕೊಂಡಿದೆ. ಲಿಜ್‌ಟ್ರಸ್‌ ನೇತೃತ್ವದ ಸರಕಾರದಲ್ಲಿ ವಿತ್ತ ಸಚಿವರಾಗಿದ್ದ ಕ್ವಾಸಿ ಕ್ವಾಟ್ರೆಂಗ್‌ ಅವರು ಮಂಡಿಸಿದ್ದ ತೆರಿಗೆ ವಿನಾಯಿತಿಯ ಬಗ್ಗೆ ಶೇ.19 ಮಂದಿ ಮಾತ್ರ ಬೆಂಬಲ ವ್ಯಕ್ತಪಡಿಸಿದ್ದರು.

2016ರಿಂದ 2022ರ ವರೆಗೆ ಕನ್ಸರ್ವೇಟಿವ್‌ ಪಕ್ಷದಿಂದಲೇ ಐವರು ಪ್ರಧಾನಮಂತ್ರಿಗಳಾಗಿದ್ದಾರೆ. ಡೇವಿಡ್‌ ಕ್ಯಾಮರೂನ್‌ ಅವರು 2010 ಮೇ- 2016ರ ವರೆಗೆ, ಥೆರೆಸಾ ಮೇ ಅವರು 2016 ಜುಲೈನಿಂದ 2019 ಜುಲೈ, ಬೋರಿಸ್‌ ಜಾನ್ಸನ್‌ ಅವರು 2019 ಜುಲೈನಿಂದ 2022ರ ಸೆಪ್ಟಂಬರ್‌, ಲಿಜ್‌ ಟ್ರಸ್‌ ಅವರು ಸೆಪ್ಟಂಬರ್‌ನಿಂದ ಅಕ್ಟೋಬರ್‌ವರೆಗೆ ಅಂದರೆ 45 ದಿನಗಳ ವರೆಗೆ, ಪ್ರಕೃತ ರಿಷಿ ಸುನಕ್‌ ಅವರು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಮುಂದಿನ ಚುನಾವಣೆಯ ಲೆಕ್ಕಾಚಾರವನ್ನೇ ನೋಡುವುದಿದ್ದರೆ, ಪ್ರಸಕ್ತ ವರ್ಷದ ಆ.7ರ ಬಳಿಕ ಆಡಳಿತ ಪಕ್ಷ ಕನ್ಸರ್ವೇಟಿವ್‌ ಪಾರ್ಟಿ ಮತ್ತು ವಿಪಕ್ಷ ಲೇಬರ್‌ ಪಾರ್ಟಿಯ ಜನಪ್ರಿಯತೆಯ ಗ್ರಾಫ್‌ ನಲ್ಲಿ ಅಂತರ ಭಾರಿ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತಾ ಬರುತ್ತಿರುವುದು ಕಂಡುಬರುತ್ತಿದೆ. ಆಡಳಿತ ಪಕ್ಷದ ಜನಪ್ರಿಯತೆಯ ಗ್ರಾಫ್‌ ಶೇ.33, (ಕನ್ಸರ್ವೇಟಿವ್‌ ಪಾರ್ಟಿ), ವಿಪಕ್ಷ ಶೇ. 39 (ಲೇಬರ್‌ ಪಾರ್ಟಿ) ಇದ್ದದ್ದು, ಅ.26ರ ವೇಳೆಗೆ ಆಡಳಿತ ಪಕ್ಷಕ್ಕೆ ಶೇ.23, ವಿಪಕ್ಷಕ್ಕೆ ಶೇ.59ಕ್ಕೆ ಜನಪ್ರಿಯತೆಯ ಗ್ರಾಫ್‌ ವ್ಯತ್ಯಾಸವಾಗಿದೆ.

ಲೆಕ್ಕಾಚಾರ ಹಾಕಿದರೆ 2025ರ ಚುನಾವಣೆಗೆ ಇನ್ನೂ ಖಡಕ್‌ ಆಗಿ 2 ವರ್ಷಗಳು ಇವೆ. ಎಲ್ಲವೂ ಸುಲ ಲಿತವಾಗಿ ನಡೆದುಹೋದರೆ ಮತ್ತೂಮ್ಮೆ ಹಾಲಿ ಪಕ್ಷವೇ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಬಹುದು. ಆದರೆ ಹಾಲಿ ಪ್ರಧಾನಿ ರಿಷಿ ಸುನಕ್‌ ಯಾವ ರೀತಿಯಲ್ಲಿ ಸದ್ಯ ಉಂಟಾ ಗಿರುವ ವಿತ್ತೀಯ ಬಿಕ್ಕಟ್ಟು ಪರಿಹಾರ ಮಾಡು ವಲ್ಲಿ, ಮುಂದೆ ಬರಲಿದೆ ಎಂದು ಹೇಳ ಲಾಗುತ್ತಿರುವ ಆರ್ಥಿಕ ಹಿಂಜರಿತವನ್ನು ಯಾವ ನಿಭಾಯಿಸಲಿದ್ದಾರೆ ಎಂಬುದು ಅವರ ರಾಜಕೀಯ ನೈಪುಣ್ಯತೆಯನ್ನು ಒರೆಗೆ ಹಿಡಿಯಲಿದೆ.

-ಸದಾಶಿವ ಕೆ.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.