ಶಾಲಾ ಕಲೋತ್ಸವ; ಮತ್ತೆ ಕನ್ನಡದ ವಿದ್ಯಾರ್ಥಿ ಪ್ರತಿಭೆಗಳಿಗೆ ಅನ್ಯಾಯ
Team Udayavani, Nov 2, 2022, 6:10 AM IST
ಕಾಸರಗೋಡು: ಮಕ್ಕಳಲ್ಲಿ ಸುಪ್ತ ವಾಗಿರುವ ಪ್ರತಿಭೆಯನ್ನು ಅನಾವರಣ ಗೊಳಿಸುವ ಉದ್ದೇಶದಿಂದ ವರ್ಷಗಳಿಂದ ನಡೆಸಿ ಕೊಂಡು ಬರುತ್ತಿರುವ ಶಾಲಾ ಕಲೋತ್ಸವದಲ್ಲಿ ಕನ್ನಡದ ವಿದ್ಯಾರ್ಥಿ ಪ್ರತಿಭೆಗಳಿಗೆ ಮತ್ತೆ ಅನ್ಯಾಯವಾಗುತ್ತಿದೆ.
ಹಿಂದಿನ ವರ್ಷಗಳಲ್ಲಿ ಶಾಲಾ ಮಟ್ಟದಲ್ಲಿ, ಆ ಬಳಿಕ ಉಪಜಿಲ್ಲಾ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಕನ್ನಡ ವಿದ್ಯಾರ್ಥಿಗಳಿಗೆ ಸ್ಪರ್ಧಿಸುವ ಅವಕಾಶವಿತ್ತು. ಆದರೆ ಈ ಬಾರಿ ಕನ್ನಡ ವಿದ್ಯಾರ್ಥಿಗಳು ಉಪಜಿಲ್ಲಾ ಮಟ್ಟದ ಅನಂತರ ಸ್ಪರ್ಧೆಯಲ್ಲಿ ಭಾಗವಹಿಸು ವಂತಿಲ್ಲ. ಜಿಲ್ಲಾ ಮಟ್ಟದಲ್ಲಿ ಈ ಹಿಂದೆ ನಡೆಸುತ್ತಿದ್ದ ಸ್ಪರ್ಧೆಗಳನ್ನು ಕೈಬಿಡಲಾಗಿದೆ. ಈ ಕಾರಣದಿಂದ ಕನ್ನಡದ ವಿದ್ಯಾರ್ಥಿಗಳಿಗೆ ಉಪಜಿಲ್ಲಾ ಮಟ್ಟದಲ್ಲಿ ಮಾತ್ರವೇ ಸ್ಪರ್ಧಿಸುವ ಅವಕಾಶ ಲಭಿಸಲಿದೆ.
ಸರಕಾರದ ವಿವರಣೆ ಪತ್ರದಲ್ಲಿ ಸೇರ್ಪಡೆಗೊಳಿಸ ದಿರುವುದರಿಂದ ಸ್ಪರ್ಧೆಗಳನ್ನು ನಡೆಸದಿರಲು ಜಿಲ್ಲಾ
ಮಟ್ಟದಲ್ಲಿ ತೀರ್ಮಾನಿಸಲಾಗಿದೆ. ಉಪ ಜಿಲ್ಲಾ ಮಟ್ಟದಲ್ಲಿ ಕನ್ನಡ ವಿದ್ಯಾರ್ಥಿಗಳಿಗೆ ಕೇವಲ 11 ವಿಭಾಗದ ಸ್ಪರ್ಧೆಗಳು ಮಾತ್ರವೇ ನಡೆಯತ್ತವೆ ಎಂದು ಎಇಒ ಅಗಸ್ಟಿನ್ ಬರ್ನಾಡ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು, ಕನ್ನಡದ ಸ್ಪರ್ಧೆಗಳು ಉಪ ಜಿಲ್ಲಾ ಮಟ್ಟದಲ್ಲಿ ಮಾತ್ರವೇ ನಡೆಯುತ್ತದೆ ಎಂದಿದ್ದಾರೆ.
ಮನವಿ ಸಲ್ಲಿಕೆ
ಈ ಹಿಂದಿನಂತೆಯೇ ಕನ್ನಡದ ವಿದ್ಯಾರ್ಥಿಗಳಿಗೆ ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ಶಾಲಾ ಕಲೋತ್ಸವ ಸ್ಪರ್ಧೆಗಳನ್ನು ಏರ್ಪಡಿಸಬೇಕೆಂದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಡಿಡಿಇ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದೆ. ಅಲ್ಲದೆ ಮಾನವ ಹಕ್ಕು ಆಯೋಗಕ್ಕೂ ಕೂಡ ಮನವಿ ಸಲ್ಲಿಸಿ ಸ್ಪರ್ಧೆಯನ್ನು ಕೈಬಿಡದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಶಾಸಕರಿಗೆ ಮನವಿ
ಶಾಲಾ ಕಲೋತ್ಸವದ ಸಂದರ್ಭ ಕನ್ನಡದ ಸ್ಪರ್ಧೆಗಳನ್ನು ಆನ್‌ಲೈನ್‌ನಲ್ಲಿ ಇಲ್ಲದಿದ್ದರೂ ಆಫ್‌ಲೈನ್ ಮೂಲಕ ಇಲ್ಲಿಯವರೆಗೆ ಉಪಜಿಲ್ಲಾ ಹಾಗೂ ಜಿಲ್ಲಾಮಟ್ಟದಲ್ಲೂ ಕನ್ನಡ ಕಲೋತ್ಸವ ಹೆಸರಿನಲ್ಲಿ ಸ್ಪರ್ಧೆಗಳು ನಡೆಯುತ್ತಿದ್ದವು. ಆದರೆ ಈ ವರ್ಷ ಕೆಲವು ಉಪಜಿಲ್ಲೆಗಳಲ್ಲೂ, ಜಿಲ್ಲಾ ಮಟ್ಟದಲ್ಲೂ ಕನ್ನಡದ ವಿವಿಧ ಸ್ಪರ್ಧೆಗಳನ್ನು ಕೈಬಿಟ್ಟಿರುವುದರಿಂದ ಆ ಸ್ಪರ್ಧೆಗಳನ್ನು ಈ ಮೊದಲು ನಡೆಸಿದಂತೆ ಜಿಲ್ಲಾ ಮಟ್ಟದಲ್ಲಿ ನಡೆಸಬೇಕೆಂಬ ಮನವಿಯನ್ನು ಕೇರಳ ಪ್ರದೇಶ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್ ಕುಂಬಳೆ ಉಪಜಿಲ್ಲಾ ಘಟಕವು ಶಾಸಕರಾದ ಎನ್.ಎ. ನೆಲ್ಲಿಕುನ್ನು ಅವರಲ್ಲಿ ವಿನಂತಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.