ಮಾಜಿ ಪತ್ನಿ ಜತೆ ಮರು ವಿವಾಹ…88ನೇ ಬಾರಿ ಮದುವೆಯಾಗಲು ಹೊರಟ 61ರ ವೃದ್ಧ!
ಇಂಡೋನೇಷ್ಯಾದ 61 ವರ್ಷದ ರೈತನೊಬ್ಬ ಮದುವೆಯಾಗಲು ಹೊರಟಿದ್ದಾರೆ.
Team Udayavani, Nov 2, 2022, 6:37 PM IST
ಇಂಡೋನೇಷ್ಯಾ: ನಿಯಮದ ಪ್ರಕಾರ ಒಂದು ಮದುವೆಯಾಗುವುದು ರೂಢಿ. ಆದರೆ ಕೆಲವರು ಮೂರು, ನಾಲ್ಕು ವಿವಾಹವಾಗಿರುವುದು ಓದಿರುತ್ತೀರಿ. ಆದರೆ ಇಲ್ಲೊಬ್ಬ ವ್ಯಕ್ತಿ ಎಷ್ಟು ಬಾರಿ ಮದುವೆಯಾಗಿದ್ದಾನೆ ಎನ್ನುವುದನ್ನು ಕೇಳಿದರೆ ಒಮ್ಮೆ ದಂಗಾಗಿ ಬಿಡುತ್ತೀರಿ.
ಇಂಡೋನೇಷ್ಯಾದ 61 ವರ್ಷದ ರೈತನೊಬ್ಬ ಮದುವೆಯಾಗಲು ಹೊರಟಿದ್ದಾರೆ. ಮೊಮ್ಮಕ್ಕಳೊಂದಿಗೆ ಆಟವಾಡುತ್ತಿರಬೇಕಾದ ಕಾನ್ ಎಂಬ ವ್ಯಕ್ತಿ 88ನೇ ಮದುವೆಯಾಗಲು ಹೊರಟಿದ್ದಾರೆ.!
ಅಚ್ಚರಿಯಾದರು ಇದು ಸತ್ಯ. ಇಂಡೋನೇಷ್ಯಾದ ಪಶ್ಚಿಮ ಜಾವಾದಲ್ಲಿ ಮಜಲೆಂಗ್ಕಾದ ಕಾನ್ 88ನೇ ಮದುವೆಯಾಗಲು ಸಿದ್ದರಾಗಿದ್ದಾರೆ. ವಿಶೇಷವೆಂದರೆ ಈ ಬಾರಿ ಮದುವೆಯಾಗಲಿರುವುದು ಹೊಸ ಹುಡುಗಿಯನ್ನಲ್ಲ. ಈ ಹಿಂದೆ 86ನೇ ಮದುವೆಯಾಗಿ ವಿಚ್ಚೇದನ ನೀಡಿದ ಅದೇ ಮಾಜಿ ಪತ್ನಿಯನ್ನು ಮತ್ತೊಮ್ಮೆ 88ನೇ ಪತ್ನಿಯಾಗಿ ವರಿಸಲಿದ್ದಾರೆ.
ಈ ಬಗ್ಗೆ ಮಾತನಾಡಿದ ಕಾನ್ ನಾನು ಮೊದಲ ಬಾರಿ ಮದುವೆ ಆದದ್ದು ನನ್ನ 14ನೇ ವರ್ಷದಲ್ಲಿ. ನನ್ನ ಹೆಂಡತಿ ನನಗಿಂತ ಎರಡು ವರ್ಷ ದೊಡ್ಡವಳಿದ್ದಳು. ನನ್ನ ವರ್ತನೆ ಅವಳಿಗೆ ಇಷ್ಟವಾಗಲಿಲ್ಲ. ಆ ಕಾರಣದಿಂದ ಅವಳು ನನ್ನಿಂದ ವಿಚ್ಚೇದನ ಪಡೆದುಕೊಂಡಳು” ಎಂದು ತಿಳಿಸಿದ್ದಾರೆ.
ಇದಾದ ಬಳಿಕ ನಾನು ಮಹಿಳೆಯರು ತನ್ನೆಡೆಗೆ ಬರಲು, ಪ್ರೀತಿಸುವಂತೆ ಮಾಡಲು ನಾನು ‘ಆಧ್ಯಾತ್ಮಿಕ’ ಜ್ಞಾನʼವನ್ನು ಪಡೆದುಕೊಂಡೆ. ಯಾವ ಹೆಂಗಸು ನನ್ನನು ನೋಡಿದರೆ ಪ್ರೀತಿಸುವಂತೆ ಆಯಿತು. ಆದರೆ ನಾನು ಮಹಿಳೆಯರಿಗೆ ಕೆಟ್ಟದ್ದನ್ನು ಬಯಸಿಲ್ಲ. ಅವರ ಭಾವನೆಯೊಂದಿಗೆ ಆಡಲು ಇಷ್ಟಪಡಲಿಲ್ಲ. ಅವರೊಂದಿಗೆ ಅನೈತಿಕತೆ ಮಾಡುವ ಬದಲು ಅವರನ್ನು ಮದುವೆಯಾಗುವುದೇ ಉತ್ತಮವೆಂದು ನಾನು ಮದುವೆಯಾಗುತ್ತ ಬಂದೆ ಎನ್ನುತ್ತಾರೆ.
ಮಾಜಿ ಪತ್ನಿಯನ್ನು ವರಿಸುವ ಬಗ್ಗೆ ಮಾತಾನಾಡುವ ಕಾನ್ , ನಾವು ದೂರವಾಗಿರಬಹುದು. ಆದರೆ ನಮ್ಮ ನಡುವಿನ ಪ್ರೀತಿ ಇನ್ನು ಗಟ್ಟಿಯಾಗಿಯೇ ಇದೆ ಎನ್ನುತ್ತಾರೆ. ಆದರೆ ಇದುವರೆಗೆ ಕಾನ್ ಅವರಿಗೆ ಎಷ್ಟು ಮಕ್ಕಳಿದ್ದಾರೆ ಎನ್ನುವುದು ಮಾತ್ರ ತಿಳಿದು ಬಂದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.