ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಿ : ರೈತ ಸಂಘ ಒತ್ತಾಯ


Team Udayavani, Nov 3, 2022, 3:09 PM IST

ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಿ : ರೈತ ಸಂಘ ಒತ್ತಾಯ

ಕುರುಗೋಡು : ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು ಹಾಗೂ ಕೆಲಸದ ದಿನಗಳು ಮತ್ತು ಕೂಲಿ ಹೆಚ್ಚಿಸಬೇಕು ಜೊತೆಗೆ ಮೇಟಿಗಳಿಗೆ ಸರ್ಕಾರ ಆದೇಶಿಸಿರುವ ಸಹಾಯಧನ ಕೂಡಲೇ ಅವರ ಖಾತೆಗಳಿಗೆ ಜಮಾ ಮಾಡುವಂತೆ ಒತ್ತಾಯಿಸಿ ಪಟ್ಟಣದ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಿರ್ಮಲಾ ಅವರಿಗೆ ಮನವಿ ಸಲ್ಲಿಸಿದರು.

ಇದೆ ವೇಳೆ ಸಂಘದ ಸದಸ್ಯರು ಮಾತನಾಡಿ, ರಾಜ್ಯದಲ್ಲಿ ಕೂಲಿಕಾರರ ತಲಾ ಆದಾಯವು ಸರ್ಕಾರಗಳ ನೀತಿಗಳಿಂದ ದಿನೇ ದಿನೇ ಕಡಿಮೆಯಾಗುತ್ತಿದ್ದು, ಇದರಿಂದ ಕುಟುಂಬ ನಿರ್ವಹಣೆ ಮಾಡಲಾಗದೆ ಗ್ರಾಮವನ್ನು ತೊರೆದು ನಗರ ಪ್ರದೇಶಗಳಿಗೆ ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಗಳ ಲೆಕ್ಕ ದಾಖಲೆಯ ಪ್ರಕಾರ ಕೂಲಿಕಾರರ ತಲಾ ಆದಾಯವು 20 ರೂಪಾಯಿ ಮಾತ್ರ ಆಗಿದೆ ಇಂತಹ ಸಂದರ್ಭದಲ್ಲಿ ಸರ್ಕಾರವು ಕೂಲಿಕಾರ ಕುಟುಂಬದ ಆದಾಯವನ್ನು ಹೆಚ್ಚಿಸಲು ಘನತೆಯ ಜೀವನ ನೆಡೆಸಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು ಎಂದು ಅಗ್ರಹಿಸಿದರು.

ಅಲ್ಲದೆ ಗ್ರಾಮೀಣ ಭಾಗದಲ್ಲಿ ನರೇಗಾ ಕೆಲ ಕೆಲಸಕ್ಕೆ ಯಂತ್ರೋಪಕರಣಗಳನ್ನು ಬಳಕೆ ಮಾಡುತ್ತಿದ್ದು ಇದರಿಂದ ಕೂಲಿಕಾರರಿಗೆ ಕೆಲಸ ಸಿಗದಂತಾಗಿದೆ. ಕೂಲಿಕಾರರಿಗೆ ಮಹತ್ವಾಕಾಂಕ್ಷೆ ಯೋಜನೆಯಾಗಿರುವಂತ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿಯೂ ಸಹ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಸರಾಸರಿ 20 ರಿಂದ 25 ದಿನಗಳ ಕೆಲಸ ಮಾತ್ರ ಸಿಗುತ್ತಿದೆ ಇದರ ಪರಿಣಾಮ ಬಹುತೇಕ ಕೂಲಿಕಾರ ಕುಟುಂಬಗಳು ನಗರ ಪ್ರದೇಶಗಳಿಗೆ ಗುಳೇ ಹೋಗಿ ಅಲ್ಲಿಯೇ ಕೆಲಸ ಮಾಡುತ್ತಾ ತಮ್ಮ ಗ್ರಾಮಗಳ ಹಬ್ಬ ಹರಿದಿನಗಳಲ್ಲಿ ಮಾತ್ರ ಕೆಲವು ಕುಟುಂಬಗಳು ಊರುಗಳಿಗೆ ಬಂದು ಮತ್ತೆ ಮರಳಿ ನಗರಕ್ಕೆ ಹೋಗುವಂತ ಅನಿವಾರ್ಯತೆಗಳು ಬಂದೋಗಿವೆ.

ಇನ್ನೂ ಕೆಲ ಕುಟುಂಬಗಳು ವಯಸ್ಸಾದ ತಂದೆ, ತಾಯಿ ಮತ್ತು ಸಣ್ಣ ಮಕ್ಕಳನ್ನು ನೋಡಲು ಕೂಡ ಊರುಗಳಿಗೆ ಬಂದು ಮತ್ತೆ ಮರಳಿ ನಗರಕ್ಕೆ ಹೋಗುತ್ತಾರೆ.

ಇದನ್ನೂ ಓದಿ : ರೈತರಿಗೆ ಬೇಕಾಬಿಟ್ಟಿ ಬೆಳೆ ಪರಿಹಾರ ವಿತರಣೆ: ಬಿ.ಆರ್.ಪಾಟೀಲ್ ಆಕ್ರೋಶ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೆಲಸ ನೀಡುವ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಹಲವಾರು ತೊಡಕುಗಳನ್ನು ಸೃಷ್ಟಿ ಮಾಡಿದೆ, ಎನ್. ಎಂ. ಎಂ. ಎಸ್. ಹಾಜರಾತಿ ಹಾಕಬೇಕು. ಮಧ್ಯಾಹ್ನದವರೆಗೆ ಅಲ್ಲೇ ಇರಬೇಕು ಎಂದು ಹೇಳುವುದಾದರೆ ಕೆಲಸದ ಸ್ಥಳದಲ್ಲಿ ನೆರಳಿನ ವ್ಯವಸ್ಥೆ ಮಾಡದಿರುವುದು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡದೇ ತಾವೇ ತಮ್ಮ ಮನೆಯಿಂದ ತಂದುಕೊಳ್ಳಿ ಎಂದು ಹೇಳುತ್ತಾರೆ. ಅಲ್ಲದೆ ಮಹಿಳೆಯರಿಗೆ ತಾತ್ಕಾಲಿಕ ಶೌಚಾಲಯ ನಿರ್ಮಾಣ ಮಾಡದಿರುವುದು ಇಂತಹ ಯಾವುದೇ ಮೂಲ ಸೌಲಭ್ಯಗಳನ್ನು ಕಲ್ಪಿಸದೇ ಕೂಲಿಕಾರರನ್ನ ಹಿಂಸಿಸಿ ಕೆಲಸಕ್ಕೆ ಬಾರದಂತೆ ನೋಡಿಕೊಂಡು ತಮ್ಮ ಮನಸೋ ಇಚ್ಛೆ ಅಧಿಕಾರ ಚಲಾಯಿಸಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಆಶಯಗಳನ್ನ ಗಾಳಿಗೆ ತೂರಿ ಜನಗಳಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಆದ ಕಾರಣ ನರೇಗಾ ಯೋಜನೆಯನ್ನು ಸರಳೀಕರಿಸಿ ಜನಗಳಿಗೆ ಅನುಕೂಲವಾಗುವಂತೆ ಕ್ರಮ ವಹಿಸಬೇಕು ಎಂದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿಕಾರರಿಗೆ ನೀಡುತ್ತಿರುವ 100 ದಿನಗಳ ಖಾತರಿ ಕೆಲಸದಲ್ಲಿ 100 ದಿನಗಳ ಕೆಲಸ ನೀಡದಿರುವ ಕೂಲಿಕಾರ ಕುಟುಂಬಗಳಿಗೆ ಇನ್ನುಳಿದ ದಿನಗಳಿಗೆ ನಿರುದ್ಯೋಗ ಭತ್ಯೆ ನೀಡುವಂತೆ ಕ್ರಮ ವಹಿಸಬೇಕು.

ಇನ್ನೂ ಬಹುತೇಕ ಪಂಚಾಯಿತಿಗಳು ಮೇಟಿಗಳ ಮೇಲೆ ಅವಲಂಬಿತವಾಗಿ ಕೆಲಸ ಹುಡುಕುವುದು, ಕ್ರಿಯ ಯೋಜನೆ ತಯಾರಿ ಮಾಡುವುದು (ಜಿಪಿಎಸ್ ) ಫೋಟೋ ತೆಗೆಯುವುದು ಕೂಲಿಕಾರರು ಮನೆಗಳಿಗೆ ಹೋಗಿ ಫಾರಂ 6 ತುಂಬಿಸಿ ಪಂಚಾಯಿತಿಗೆ ಸಲ್ಲಿಸುವುದು ಕೆಲಸ ಕೇಳಲು ಪಂಚಾಯಿತಿಗೆ ಅಲೆಯುವುದು ಕೆಲಸ ನೀಡಿದಾಗ ಕೂಲಿಕಾರರಿಗೆ ಕೆಲಸದ ಪ್ರಮಾಣ ನಿಗದಿ ಮಾಡಲು ಅಳತೆ ಮಾಡುವುದು ಎನ್.ಎಂ. ಎಂ.ಎಸ್.(ಆಫ್) ಹಾಜರಾತಿ ಹಾಕುವುದು ಎನ್. ಎಂ.ಆರ್. ಹಾಜರಾತಿ ಹಾಕುವುದು ಪ್ರತಿ ದಿನ ಪಂಚಾಯಿತಿಗೆ ಹೋಗಿ ಹಾಜರಾತಿ ಲೆಕ್ಕ ಒಪ್ಪಿ‌ಸುವುದು ಹೀಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಒಟ್ಟಾರೆ ಕೆಲಸವು ಮೇಟಿಗಳನ್ನ ಅವಲಂಬಿಸಿದೆ ಮೇಟಿಗಳನ್ನ ಜೀತದಾಳುಗಳಂತೆ ದುಡಿಸಿ ಕೊಳ್ಳದೇ ಅವರಿಗೆ ಈ ಕೂಲಿಯ ಜೊತೆಗೆ ಪ್ರತ್ಯೇಕ ಕೂಲಿ ನೀಡಬೇಕು. ಜೊತೆಗೆ ಅಳತೆ ಮಾಡಲು 1 ಟೇಪ್ ಮತ್ತು ಪುಸ್ತಕ, ಪೆನ್ನು ಎಲ್ಲಾ ಸಾಮಾನುಗಳನ್ನೊಳಗೊಂಡ ಸಲಕರಣಾ ಕಿಟ್ ನೀಡಿ ಮೇಟಿಗಳು ಉತ್ಸಾಹದಿಂದ ಕೆಲಸ ಮಾಡಲು ಪ್ರೋತ್ಸಾಹಿಸಬೇಕು ಹಾಗೂ ಈಗಾಲೇ ರಾಜ್ಯ ಸರ್ಕಾರ ಮೇಟಿಗಳಿಗೆ ಸಹಾಯಧನ ನೀಡಲು ಆದೇಶಿಸಿದೆ ಈ ಆದೇಶವು ರಾಜ್ಯದ ಬಹುತೇಕ ಪಂಚಾಯಿತಿಗಳಲ್ಲಿ ಜಾರಿ ಮಾಡಲಾಗಿಲ್ಲ ಕೂಡಲೇ ಜಾರಿಯಾದಾಗಿನಿಂದ ಮೇಟಿಗಳ ಖಾತೆಗಳಿಗೆ ಸಹಾಯಧನ ಜಮೆಯಾಗುವಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಒತ್ತಾಯಿಸಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ದಿನಗಳನ್ನು 200 ದಿನಗಳಿಗೆ ಕೂಲಿ 750 ಗೆ ಹೆಚ್ಚಿಸಬೇಕು.

ಇದನ್ನೂ ಓದಿ : ಕಾಂಗ್ರೆಸ್ ನಲ್ಲಿ ಮತ್ತೆ ಮೊಳಗಿದ ‘ಸಿದ್ದು ಸಿಎಂ’ ಘೋಷಣೆ

ಮೇಟಿ ಗಳಿಗೆ ಸರ್ಕಾರ ನಿಗದಿಪಡಿಸಿರುವ ಸಹಾಯಧನ ಕೂಡಲೇ ಅವರ ಖಾತೆಗಳಿಗೆ ಜಮಾ ಮಾಡಬೇಕು. ಮತ್ತು ಸಹಾಯಧನವನ್ನು 10 ರೂ ಗಳಿಗೆ ಹೆಚ್ಚಿಸಿ ಮತ್ತು ಪ್ರತ್ಯೇಕ ಕೂಲಿ ನೀಡಬೇಕು. ಎನ್. ಎಂ. ಎಂ.ಎಸ್ ಹಾಜರಾತಿ ಕೈ ಬಿಡಬೇಕು. ಇದರ ಹಾಜರಾತಿ ಗಾಗಿ ಕೂಲಿಕಾರರನ್ನು ಕೆಲಸದ ಸ್ಥಳದಲ್ಲಿ ತಡೆದಲ್ಲಿ ಶುದ್ಧ ಕುಡಿಯುವ ನೀರು ಮತ್ತು ನೆರಳು ಹಾಗೂ ಮಹಿಳೆಯರಿಗೆ ತಾತ್ಕಾಲಿಕ ಶೌಚಾಲಯ ನಿರ್ಮಾಣ ಮಾಡಬೇಕು. ವ್ಯವಸ್ಥೆ ಮಾಡದೆ ಅಧಿಕಾರಿಗಳು ಮೇಲೆ ಕಠಿಣ ಕಾನೂನೂ ಕ್ರಮ ಜರುಗಿಸಬೇಕು.

ಕರ್ನಾಟಕ ರಾಜ್ಯದಲ್ಲಿ ಕೃಷಿ ಕೂಲಿಕಾರರ ಕನಿಷ್ಠ ಕೂಲಿಯು 423 ರೂಪಾಯಿ ಜಾರಿಯಾದಾಗಿನಿಂದ ಕೂಲಿಕಾರರಿಗೆ ಅನ್ವಯವಾಗುವಂತೆ ಕೂಲಿಕಾರರು ಖಾತೆಗಳಿಗೆ ಜಮಾ ಆಗುವಂತೆ ಕ್ರಮ ಕೈಗೊಳ್ಳಬೇಕು.

100 ದಿನಗಳ ಕೆಲಸ ಕಡ್ಡಾಯವಾಗಿ ನೀಡಬೇಕು. 100 ದಿನಗಳ ಕೆಲಸ ನೀಡದಿರುವ ಕೂಲಿಕಾರ ಕುಟುಂಬಗಳಿಗೆ ಇನ್ನುಳಿದ ದಿನಗಳಿಗೆ ನಿರುದ್ಯೋಗ ಭತ್ಯೆ ನೀಡಬೇಕು.
ರಾಜ್ಯದ ಎಲ್ಲಾ ಪಂಚಾಯಿತಿಗಳಲ್ಲಿ ಕೂಲಿಕಾರರು ಗುಳೇ ಹೋಗದಂತೆ ತಡೆಯಬೇಕು.ತಡೆಯಲು ವಿಫಲವಾದಲ್ಲಿ ಗುಳೇ ಹೋದಂತಹ ಕೂಲಿಕಾರ ಕುಟುಂಬಗಳಿಗೆ ನಿರುದ್ಯೋಗ ಭತ್ಯೆ ನೀಡಬೇಕು.

ನೀರಾವರಿ ಪ್ರದೇಶಗಳಲ್ಲಿ ಕಾಲುವೆ ನಾಲೆ ಗಳೊಂದೇ ಅಲ್ಲದೇ ಆಯಾ ಪ್ರದೇಶದ ಮತ್ತು ಹತ್ತಿ ಮೆಣಸಿನಕಾಯಿ,ಜೋಳ,ಸಜ್ಜೆ ಇತರೆ ಎಲ್ಲಾ ಬೆಳೆಗಳನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸೇರ್ಪಡೆ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಮೀನ್ ಸಾಬ್, ಕಾರ್ಯದರ್ಶಿ ಗಾಳಿ ಬಸವರಾಜ, ಉಪಾಧ್ಯಕ್ಷರು. ಸಹ ಕಾರ್ಯದರ್ಶಿಗಳು, ಖಜಾಂಚಿ ಸೇರಿದಂತೆ ಇತರರು ಇದ್ದರು.

ಟಾಪ್ ನ್ಯೂಸ್

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.