ಸವದತ್ತಿ ಯಲ್ಲಮ್ಮ ದೇವಸ್ಥಾನ:100ಕ್ಕೂ ಅಧಿಕ ಅನಧಿಕೃತ ಅಂಗಡಿ ತೆರವು
ಗೋಳಾಡಿದ ವ್ಯಾಪಾಸ್ಥರು, ಪಟ್ಟು ಬಿಡದ ಅಧಿಕಾರಿಗಳು
Team Udayavani, Nov 3, 2022, 9:27 PM IST
ಸವದತ್ತಿ : ತಾಲೂಕಿನ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿರುವ 100 ಮೀ ಸುತ್ತಲಿನ ಅನಧಿಕೃತ ಬೀದಿ ಬದಿಯ ಸುಮಾರು ನೂರಕ್ಕೂ ಅಧಿಕ ಅಂಗಡಿಗಳ ತೆರವು ಕಾರ್ಯಾಚರಣೆ ನಡೆದಿದೆ.
ತೆರವು ಕಾರ್ಯಾಚರಣೆಯಿಂದ ವ್ಯಾಪಾರಿಗಳು ಮುಂದುವರೆಸದಂತೆ ಬುಧವಾರ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿ ಪ್ರಯೋಜನವಾಗದಿದ್ದಾಗ ಕೆಲ ಮುಖಂಡರುಗಳ ಮೊರೆ ಹೋದರೂ ಫಲಕಾರಿಯಾಗಲಿಲ್ಲ. ಗುರುವಾರ ಮುಂಜಾನೆಯಿಂದಲೇ ಕಾರ್ಯಚರಣೆ ಮುಂದುವರೆಸಲೆತ್ನಿಸಿದರು. ಅಧಿಕಾರಿಗಳ ಜೊತೆ ವ್ಯಾಪಾಸ್ಥರು ಕೆಲ ಸುತ್ತಿನ ಮಾತುಕತೆ ನಡೆದರೂ ಪ್ರಯೋಜನವಾಗಲಿಲ್ಲ.
ಕಾರ್ಯಾಚರಣೆ ನಿಲ್ಲಿಸಲು ವ್ಯಾಪಾರಿಗಳು ಎಲ್ಲಿಲ್ಲದ ಪ್ರಯತ್ನದೊಂದಿಗೆ ಕಾರ್ಯಾಚರಣೆಗೆ ಅಡ್ಡಿಪಡಿಸಿದರು. ಗುಂಪುಗೂಡಿದ ಜನರನ್ನು ಮತ್ತು ಅಂಗಡಿಕಾರರನ್ನು ನಿಯಂತ್ರಿಸಲು ಪೊಲೀಸ ಇಲಾಖೆಯ ಸಹಾಯ ಪಡೆಯಲಾಯಿತು. ಅಧಿಕಾರಿಗಳು ಎಷ್ಟೇ ಮುಂದುವರೆದರೂ ಅಂಗಡಿಕಾರರು ಜಾಗ ಬಿಟ್ಟು ಕದಲಲಿಲ್ಲ. ಈ ವೇಳೆ ವ್ಯಾಪಾರಿಯೋರ್ವ ವಿಷ ಸೇವಿಸಲು ಮುಂದಾದ ಘಟನೆಯೂ ನಡೆಯಿತು.
ಕಾರ್ಯಾಚರಣೆ ಮುಂದುವರೆಸಲು ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಜೀರಗಾಳ ಧ್ವನಿವರ್ಧಕ ಮೂಲಕ, ಸ್ವಯಂ ಪ್ರೇರಿತರಾಗಿ ಅನಧಿಕೃತವಾದವುಗಳನ್ನು ತೆರವುಗೊಳಿಸಿ. ಇಲ್ಲವಾದರೆ ಜೆಸಿಬಿಯಿಂದ ಬಲವಂತವಾಗಿ ತೆರವುಗೊಳಿಸಲಾಗುವದೆಂದು ಎಚ್ಚರಿಸಿದರು.ಇಷ್ಟಾದರೂ ವ್ಯಾಪಾರಿಗಳು ಸರಿದಾಡದೇ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು.
ಪಟ್ಟು ಬಿಡದ ಅಧಿಕಾರಿ ಜೀರಗಾಳ, ಜಿಲ್ಲಾಧಿಕಾರಿ ಸೂಚಿಸಿದರೆ ಮಾತ್ರ ಕಾರ್ಯಾಚರಣೆ ಸ್ಥಗಿತಗೊಳಿಸಲಾಗುವದೆಂದು ಮತ್ತೆ ತೆರುವಿಗೆ ಮುಂದಾದರು. ಆಗ ವ್ಯಾಪಾರಸ್ಥರನ್ನು ಉದ್ದೇಶಿಸಿ ಮಾತನಾಡಿ, ವ್ಯಾಪಾಸ್ಥರನ್ನು ಬೀದಿಗೆ ತಳ್ಳುವ ಪ್ರಮೇಯವೆ ನಮಗಿಲ್ಲ. ಅನಧಿಕೃತ ಅಂಗಡಿಗಳ ತೆರವು ಅನಿವಾರ್ಯ. ಪರ್ಯಾಯವಾಗಿ ವಾಹನ ನಿಲುಗಡೆಯಲ್ಲಿ ಅಂಗಡಿ ಹಾಕಲು ವ್ಯವಸ್ಥೆ ಕಲ್ಪಿಸಿಕೊಡಲಾಗುವದು. ಸಧ್ಯ ಈ ಸ್ಥಳದಲ್ಲಿ ಕ್ಯೂಲೈನ್ ವ್ಯವಸ್ಥೆ ಮಾಡಲಾಗುವುದು. ಮುಖ್ಯ ದ್ವಾರದತ್ತಿರ ಲಗ್ಗೇಜ ವ್ಯವಸ್ಥೆ ನೀಡಲಾಗುವದು. ವ್ಯಾಪಾರ ಮಾತ್ರ ಆಚೆ ನಡೆಯಲಿ. ಭಕ್ತರು ಸಮಸ್ಯೆ ಎದುರಿಸದೆ ದೇವಿಯ ದರ್ಶನ ಪqಯುವಂತಾಗಲಿ. ಅಭಿವೃದ್ಧಿಗೆ ಸಹಕರಿಸಿರೆಂದರು.
ಜನವರಿ, ಫೆಬ್ರುವರಿ ತಿಂಗಳಲ್ಲಿ ಬನದ ಮತ್ತು ಭರತ ಹುಣ್ಣಿಮೆಗಳಿವೆ. ವರ್ಷಪೂರ್ತಿಯ ವ್ಯಾಪಾರ ಇವುಗಳಲ್ಲಿ ಮಾತ್ರ ನಡೆಯುತ್ತದೆ. ತುತ್ತಿನ ಚೀಲ ತುಂಬಿಸಿಕೊಳ್ಳಲುವ ಅನುವು ಮಾಡಿಕೊಡಿ. ಜಾತ್ರೆ ಮುಗಿದ ನಂತರ ಅಂಗಡಿಗಳನ್ನು ಸ್ವಯಂ ಪ್ರೇರಿತರಾಗಿ ತೆರವು ಮಾಡಿಕೊಳ್ಳುತ್ತೇವೆಂದು ಅಧಿಕಾರಿಗಳಿಗೆ ಪರಿಪರಿಯಾಗಿ ಕೇಳಿಕೊಂಡರು. ಎರಡು ದಿನಗಳ ಮಟ್ಟಿಗಾದರೂ ತೆರವು ಸ್ಥಗಿತಗೊಳಿಸಿರಿ. ಜಿಲ್ಲಾಧಿಕಾರಿಗೆ ಮನವೊಲಿಸಲು ಪ್ರಯತ್ನಿಸುತ್ತೇವೆ ಎಂದರು.
ಕೊನೆಯಲ್ಲಿ ಒಲ್ಲದ ಮನಸ್ಸಿನಿಂದ ಅಂಗಡಿ ತೆರವಿಗೆ ಮುಂದಾದರು. ಅಲ್ಲಿನ ವಸ್ತಗಳನ್ನು ಟ್ರ್ಯಾಕ್ಟರ್ ಮೂಲಕ ಪಾರ್ಕಿಂಗ್ ಸ್ಥಳಕ್ಕೆ ಸಾಗಿಸಲಾಯಿತು. ಡಿವೈಎಸ್ಪಿ ರಾಮನಗೌಡ ಹಟ್ಟಿ, ಪಿಐ ಕರುಣೇಶಗೌಡ ಜೆ. ಪಿಎಸೈ ಪ್ರವೀಣ ಗಂಗೊಳ್ಳಿ ಭದ್ರತೆಯಿರಿಸಿದ್ದರು.
ಯಲ್ಲಮ್ಮ ಒಳ್ಳೆಯದು ಮಾಡುವದಿಲ್ಲರೀ ಸರ್
‘ಅಂಗಡಿಗಳನ್ನು ಕಿತ್ತು ಹೊಟ್ಟೆ ಮೇಲೆ ಹೊಡಿಬ್ಯಾಡ್ರಿ ಸರ್. ಇದರಲ್ಲೇ ಬದುಕು ನಡೆದಿದೆ. ಹುಣ್ಣಿಮೆ ಜಾತ್ರೆ ನಂತರ ನಾವೇ ಹೊರಹೋಗುತ್ತೇವೆ. ಅವಕಾಶ ನೀಡಿ. ಹೊಟ್ಟೆ ಮೇಲೆ ಹೊಡೆದರೆ ತಾಯಿ ಯಲ್ಲಮ್ಮ ಒಳ್ಳೆಯದು ಮಾಡುವದಿಲ್ಲರೀ ಸರ್ ಎಂದು ತೆರವಿನ ವೇಳೆ ವ್ಯಾಪಾರಿಯೋರ್ವಳು ಗೋಗರೆದಳು.
ವ್ಯಾಪಾಸ್ಥರನ್ನು ಬೀದಿಗೆ ತಳ್ಳುವ ಪ್ರಮೇಯವೆ ನಮಗಿಲ್ಲ. ಅನಧಿಕೃತವಾದವುಗಳ ತೆರವು ಅನಿವಾರ್ಯ. ಪರ್ಯಾಯವಾಗಿ ವಾಹನ ನಿಲುಗಡೆಯಲ್ಲಿ ವ್ಯವಸ್ಥೆ ಕಲ್ಪಿಸಿಕೊಡಲಾಗುವದು. ಅಭಿವೃದ್ಧಿಗೆ ಕೈಜೋಡಿಸಿ ಸಹಕರಿಸಿರೆಂದು ಯಲ್ಲಮ್ಮ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜ ಜೀರಗಾಳ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.