![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Nov 4, 2022, 3:17 PM IST
ಯಲಬುರ್ಗಾ: ಪತ್ನಿಯನ್ನು ಅಗಳಕೇರಾ ಹತ್ತಿರದ ತುಂಬಿ ಹರಿಯುತ್ತಿರುವ ಕಾಲುವೆಗೆ ನೂಕಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ತಾಲೂಕಿನ ಕಲಭಾವಿ ಗ್ರಾಮದ ಪೊಲೀಸ್ ಪೇದೆ ಹನುಮೇಶ ಮೇಟಿಯನ್ನು ಭಾನಾಪುರ ಕ್ರಾಸ್ ಬಳಿ ಗುರುವಾರ ಬೆಳಗ್ಗಿನ ಜಾವ ಬಂಧಿಸಿದ್ದಾರೆ.
ತನ್ನ ಪುತ್ರಿ ರೇಷ್ಮಾಳಿಗೆ ವರದಕ್ಷಿಣೆ ಕಿರುಕುಳ ನೀಡಿ ಶಿವಪುರ ಕೆರೆಗೆ ನೂಕಿದ್ದಾರೆ ಎಂದು ಮೃತಳ ತಂದೆ ನ. 1ರಂದು ತಾಲೂಕಿನ ಬೇವೂರು ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ನ. 3ರಂದು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಪೊಲೀಸ್ ಪೇದೆ ಹನುಮೇಶ ಮೇಟಿಯನ್ನು ಬಂ ಧಿಸಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೆ ಕಳುಹಿಸಿದ್ದಾರೆ.
ಫೆಬ್ರವರಿ 2022ರಲ್ಲಿ ಪೊಲೀಸ್ ಪೇದೆ ಹನುಮೇಶ ಮೇಟಿ ಜತೆ ರೇಷ್ಮಾಳ ವಿವಾಹ ಆಗಿತ್ತು. ಮದುವೆ ವೇಳೆ 11 ತೊಲೆ ಚಿನ್ನ, 2.5 ಲಕ್ಷ ವರದಕ್ಷಿಣೆ ನೀಡಿ, ಇನ್ನೂ ಒಂದು ಲಕ್ಷ ಹಣ ಬಾಕಿ ಉಳಿಸಿಕೊಂಡಿದ್ದರು. ವರದಕ್ಷಿಣೆ ಹಣ ಬಾಕಿ ಇದ್ದಿದ್ದರಿಂದ ಹನುಮೇಶ ಹಾಗು ಆತನ ಸಂಬಂಧಿಗಳು ರೇಷ್ಮಾಳಿಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೇ ದೀಪಾವಳಿ ಹಬ್ಬಕ್ಕೆ ಆಕೆಯನ್ನು ತವರು ಮನೆಗೆ ಕರೆಯಲು ಬಂದರೆ ಕಳುಹಿಸಿ ಕೊಡದೆ ಅ. 22ರಂದು ರಾತ್ರಿ ಹತ್ತು ಗಂಟೆಯಿಂದ ಅ. 23 ಬೆಳಗಿನ ಜಾವ 7:30ರವೆರೆಗೆ ಯಾವುದೋ ಜಾಗದಲ್ಲಿ ಕೂಡಿ ಹಾಕಿ ವರದಕ್ಷಿಣೆ ಹಾಗೂ ಚಿನ್ನ ತರುವಂತೆ ಕಿರುಕುಳ ಕೊಟ್ಟು, ಹೊಡಿದ್ದಾರೆ. ಅಲ್ಲದೇ ನ.1ರಂದು ಶಿವಪುರ ಕೆರೆಯಲ್ಲಿ ಹಾಕಿ ಕೊಲೆ ಮಾಡಿದ್ದಾರೆ ಎಂದು ಮೇತಳ ತಂದೆ ದೂರು ದಾಖಲಿಸಿದ್ದರು.
ಎರಡು ದಿನದೊಳಗೆ ಕೊಲೆಗಾರರನ್ನು ಬಂಧಿ ಸಿದ್ದಕ್ಕೆ ಎಸ್ಪಿ ಅರುಣಾಂಗ್ಷು ಗಿರಿ ಪೊಲೀಸ್ ಅಧಿಕಾರಿಗಳಿಗೆ ಹಾಗು ಸಿಬ್ಬಂದಿ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.