ವಿದೇಶಕ್ಕೆ ದಲಿತ ಆದಿವಾಸಿ ಸಂಸ್ಕೃತಿ ಪರಿಚಯ

ಅಂತಾರಾಷ್ಟ್ರೀಯ ವೆಬ್‌ಸೈಟ್‌ನಲ್ಲಿ ಪ್ರಚಾರ ಮಾಡಲು ಈ ಕಾರ್ಯಾಗಾರ ಸಹಕಾರಿ

Team Udayavani, Nov 4, 2022, 5:58 PM IST

ವಿದೇಶಕ್ಕೆ ದಲಿತ ಆದಿವಾಸಿ ಸಂಸ್ಕೃತಿ ಪರಿಚಯ

ಕೋಲಾರ: ದಲಿತ ಆದಿವಾಸಿಗಳ ಸಂಸ್ಕೃತಿಗಳಲ್ಲಿರುವ ವಿಚಾರಗಳು ಮತ್ತು ಒಳನೋಟಗಳನ್ನು ಪಾಶ್ಚಿಮಾತ್ಯ ಯುರೋಪ್‌ ದೇಶಗಳಿಗೊ ಪರಿಚಯಿಸಲಾಗುತ್ತಿದೆ ಎಂದು ಫ್ರಾನ್ಸಿನ ಫಾಲ್‌ ವ್ಯಾಲರಿ ವಿವಿ ಆಂಗ್ಲ ಪ್ರಾಧ್ಯಾಪಕಿ ಡಾ.ಜುಡಿತ್‌ ಮಿಸ್ರಾಹಿ- ಬರಾಕ್‌ ಹೇಳಿದರು.

ಆದಿಮ ಸಾಂಸ್ಕೃತಿಕ ಕೇಂದ್ರ, ಆರ್ಟ್ಸ್ ಅಂಡ್‌ ಹ್ಯೂಮಾನಿಟಿಸ್‌ ರಿಸರ್ಚ್‌ ಸೆಂಟರ್‌ ನಾಟಿಂಗ್‌ ಹ್ಯಾಂ ಟ್ರೆಂಟ್‌ ಯೂನಿವರ್ಸಿಟಿ ಯುಕೆ, ಫಾಲ್‌ ವ್ಯಾಲರಿ ವಿಶ್ವವಿದ್ಯಾಲಯ, ಫ್ರಾನ್ಸ್‌ ಸಹಭಾಗಿತ್ವದಲ್ಲಿ ಆದಿಮ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ದಲಿತ ಆದಿವಾಸಿ ಸಾಹಿತ್ಯ ಮತ್ತು ಪ್ರದರ್ಶನ ಕಲೆ ಉತ್ಸವ ಒಂದು ದಿನದ ಅಂತಾರಾಷ್ಟ್ರೀಯ ಕಾರ್ಯಾಗಾರವನ್ನು ಚರ್ಮವಾದ್ಯ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಪ್ರಪಂಚದ ಪರಿವರ್ತನೆಗೆ ಕಾರಣವಾಗಿರುವ ದಲಿತ ಆದಿವಾಸಿಗಳ ವಿವಿಧ ಸಂಸ್ಕೃತಿ, ಸಾಂಸ್ಕೃತಿಕ ಕಲಾ ಪ್ರಕಾರಗಳನ್ನು ನಮ್ಮ ವೆಬ್‌ ಸೆ„ಟ್‌ ನಲ್ಲಿ ದಾಖ ಲಿಸುವ ಮೂಲಕ ವಿಶ್ವ ಸಾಂಸ್ಕೃತಿಕ ಲೋಕಕ್ಕೆ ಪರಿಚಯಿಸಲಾಗುತ್ತಿದೆ. ಆದ್ದರಿಂದ ಪ್ರಪಂಚದ ಯಾವುದೇ ಭಾಷೆಯ ಸಾಹಿತ್ಯ ಸಂಶೋಧನೆಗೆ ಅನುಕೂಲವಾಗುವ ದೃಷ್ಟಿಯಿಂದ ಅನುವಾದ ಆಗಲೇಬೇಕಿದೆ. ಈ ಕಾರ್ಯಕ್ರಮಕ್ಕೆ ಆದಿಮ ಕೇಂದ್ರ ಹೇಳಿಮಾಡಿಸಿ ದಂತಿದೆಯೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, 7 ವರ್ಷಗಳಿಂದ ಭಾರತ, ಇಂಗ್ಲೆಂಡ್‌ ಮತ್ತು ಫ್ರಾನ್ಸ್‌ ಈ ಮೂರು ದೇಶಗಳಲ್ಲಿ ದಲಿತ ಆದಿವಾಸಿಗಳಿಗೆ ಸಂಬಂಧ ಪಟ್ಟ ಕಲೆ, ಸಾಹಿತ್ಯವನ್ನು ವಿನಿಮಯ ಮಾಡಿಕೊಂಡು “ಇಲ್ಲಿನವರನ್ನು ಅಲ್ಲಿಗೆ, ಅಲ್ಲಿನವರನ್ನು ಇಲ್ಲಿಗೆ’ ಕರೆಸಿಕೊಳ್ಳಲಾಗುತ್ತಿದೆ. ಭಾರತದಲ್ಲಿನ ದೆಹಲಿಯಿಂದ ತೆಮಿಳುನಾಡು ಕನ್ಯಾಕುಮಾರಿವರೆಗೂ ದಲಿತ ಆದಿವಾಸಿಗಳ ಸಾಹಿತ್ಯ, ಪ್ರದರ್ಶನ ಕಲಾ ಪ್ರಕಾರಗಳನ್ನು ಅಂತಾರಾಷ್ಟ್ರೀಯ ವೆಬ್‌ಸೈಟ್‌ನಲ್ಲಿ ಪ್ರಚಾರ ಮಾಡಲು ಈ ಕಾರ್ಯಾಗಾರ ಸಹಕಾರಿ ಎಂದರು.

ಹೋರಾಟಗಾರ್ತಿ, ಕಲಾವಿದೆ ದು.ಸರಸ್ವತಿ ಅವರು ಕಾರ್ಯಾಗಾರದ ಮುಖ್ಯ ಉದ್ದೇಶ ಹಾಗೂ ಗುರಿಯ ಬಗ್ಗೆ ಬಹಳ ಸಂಕ್ಷಿಪ್ತವಾಗಿ ಹೇಳುತ್ತಾ ಕಾರ್ಯಾಗಾರಕ್ಕೆ ಉತ್ಸಾಹದ ಚಾಲನೆ ನೀಡಿದರು. ಕವಿಗೋಷ್ಠಿಯಲ್ಲಿ ಆರು ಮಂದಿ ಕವಿಗಳು ತಲಾ ಎರಡು ಮೂರು ಕವಿತೆಗಳನ್ನು ಮೂಲ ಭಾಷೆಯಲ್ಲಿ ವಾಚನ ಮಾಡಿದರು. ಇಂಗ್ಲಿಷ್‌ ಗೆ ಅನುವಾದಿಸಿದ ಕವನಗಳನ್ನು ಡಾ. ಜುಡಿತ್‌ ಮತ್ತು ವಂಶಿ, ಬೆಂಗಳೂರು ವಾಚಿಸಿದರು.

ಆದಿಮ ಕಾರ್ಯದರ್ಶಿ ಕೊಮ್ಮಣ್ಣ ಮಾತನಾಡಿದರು. ಆದಿಮ ಕಲಾವಿದೆಯರಾದ ಅಂಜುಲ ಹಾಗೂ ಚಂದ್ರಮ್ಮ, ಹರೀಶ್‌ ಕುಮಾರ್‌, ಆದಿಮ, ನಾಯಕ್‌ ಅಮಾಸ ಆದಿವಾಸಿ ಕಲೆಯನ್ನು ಪ್ರದರ್ಶಿಸಿದರು. ಅಂತಿಮವಾಗಿ ಪ್ರದರ್ಶನಗೊಂಡ ನಾಟಕ “ಸೂತ ಶಬರ’ ಪ್ರದರ್ಶನ ಕುರಿತು, ಕಲಾವಿದರ ಕುರಿತು ದು. ಸರಸ್ವತಿ ಪರಿಚಯಿಸಿದರು. ಗೇಬ್ರಿಯಲ್‌ ಮ್ಯಾಕ್‌ ಕ್ಯಾಮ್ಲೆ- ಲಾಂಜರ್‌ ಇಡೀ ಕಾರ್ಯಕ್ರಮವನ್ನು ದಾಖ ಲೀಕರಣ ಮಾಡಿದರು. ಚಲಪತಿ, ಕರ್ನಾಟಕ ರಾಜ್ಯ ಮಹಿಳಾ ವಿವಿ ನಿವೃತ್ತ ರಿಜಿಸ್ಟ್ರಾರ್‌ ಆರ್‌. ಸುನಂದಮ್ಮ, ನವೋದಯ ಶಾಲಾ ಶಿಕ್ಷಕ ಗಣೇಶ್‌, ಡಾ.ಶಿವಪ್ಪ ಅರಿವು, ಪ್ರಾಧ್ಯಾಪಕ ಗುಂಡಪ್ಪ ದೇವಿಕೇರಿ, ಪ್ರಾಧ್ಯಾಪಕ ಮುರಳಿ, ಆದಿಮ ನೀಲಕಂಠೇಗೌಡರು, ಆದಿಮ ಎನ್‌.ಗೋವಿಂದಪ್ಪ, ಜನಾರ್ಧನ್‌ ಮತ್ತು ಜಗದೀಶ್‌ ನಾಯಕ್‌ ಕೆಜಿಎಫ್‌ ಸಮುದಾಯ ತಂಡ. ಕಡತೂರ್‌ ಮಂಜು, ಟೀಚರ್‌ ಡಿ,ನಾರಾಯಣಸ್ವಾಮಿ. ಗಾಯಕ ಚಂದ್ರಶೇಖರ್‌ ಇದ್ದರು.

ಟಾಪ್ ನ್ಯೂಸ್

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ರಾಜ್ಯಸಭೆ ಬಹುಮತದತ್ತ ಬಿಜೆಪಿ ಚಿತ್ತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

Kolar

Air Force Emergency: ಬಂಗಾರಪೇಟೆ ಬಳಿ ವಾಯುಪಡೆ ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

Police

Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ

Suside-Boy

Putturu: ಬಡಗನ್ನೂರು: ನೇಣು ಬಿಗಿದು ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.