ಪರಿಸರ ರಕ್ಷಣೆ ಆಧಾರಿತ ‘ಅಡವಿ’ ಚಿತ್ರಕ್ಕೆ ಚಾಲನೆ ನೀಡಿದ ಸಿದ್ದರಬೆಟ್ಟ ಶ್ರೀ
ಅರಣ್ಯ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್
Team Udayavani, Nov 4, 2022, 10:24 PM IST
ಕೊರಟಗೆರೆ: ಸುಂದರ ಪ್ರಕೃತಿಯ ಸೊಬಗಿನಲ್ಲಿ ವಾಸಿಸುವ ಜನರ ಜೀವನ ಚರಿತ್ರೆ. ಪ್ರಕೃತಿಯಲ್ಲಿ ದೇವರನ್ನು ಕಾಣುವ ಕಾಡುಜನರ ನಂಬಿಕೆ. ಪರಿಸರ ರಕ್ಷಣೆಯ ಆಧಾರಿತ ”ಅಡವಿ” ಚಿತ್ರಕ್ಕೆ ಶ್ರೀಸಿದ್ದೇಶ್ವರ ಸ್ವಾಮಿಯ ಆರ್ಶಿವಾದ ಸದಾ ಇರಲಿದೆ ಎಂದು ಸಿದ್ದರಬೆಟ್ಟದ ಶ್ರೀಮಠದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ ಶುಭ ಹಾರೈಸಿದರು.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಬೂದಗವಿ ಗ್ರಾಪಂ ವ್ಯಾಪ್ತಿಯ ಸಿದ್ದರಬೆಟ್ಟ ಶ್ರೀಮಠದ ಆವರಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಅಡವಿ ಚಲನಚಿತ್ರದ ಪ್ರಕೃತಿಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ದೇಶದ ಜನರು ಕಾಡನ್ನು ದೇವರೆಂದು ಪೂಜಿಸುವ ಸಂಸ್ಕೃತಿ ಇನ್ನೂ ಜೀವಂತವಾಗಿದೆ. ವಿಶ್ವದಲ್ಲಿ ನಾಗರಿಕತೆ ಬೆಳೆದಂತೆ ಮಾನವನಿಂದ ಪ್ರಕೃತಿಯ ಮಹತ್ವವು ತಾನಾಗಿಯೇ ನಶಿಸುತ್ತಿದೆ. ಪ್ರಕೃತಿಯ ಜಾಗೃತಿ ಮೂಡಿಸುವ ಅಡವಿ ಚಲನಚಿತ್ರದ ಪ್ರಯತ್ನಕ್ಕೆ ಪ್ರಕೃತಿ ದೇವರ ಆರ್ಶಿವಾದ ಸದಾ ಇರಲಿದೆ. ಸಿದ್ದರಬೆಟ್ಟ ಪುಣ್ಯ ಕ್ಷೇತ್ರದಲ್ಲಿ ನಿರ್ಮಾಣ ಆಗುತ್ತೀರುವ ಅಡವಿ ಚಿತ್ರಕ್ಕೆ ಶುಭವಾಗಲಿ ಎಂದು ತಿಳಿಸಿದರು.
ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ ”ಕರುನಾಡಿನ ಸುಪ್ರಸಿದ್ದ ಸಸ್ಯ ಸಂಜೀವಿನಿ ಕ್ಷೇತ್ರ ಸಿದ್ದರಬೆಟ್ಟದ ಪ್ರಕೃತಿಯು ದೇವರು ನಮಗೆ ಕೊಟ್ಟಿರುವ ಬಹುದೊಡ್ಡ ಕಾಣಿಕೆ. ಸಾಧುಸಂತರು ನೆಲೆಸಿದ್ದ ಪ್ರಕೃತಿಯ ತಾಣದಲ್ಲಿ ವಿಶೇಷವಾದ ಶಕ್ತಿಯಿದೆ. ಪರಿಸರ ಆಧಾರ ಚಿತ್ರವು ಪ್ರಸ್ತುತ ಸಮಾಜಕ್ಕೆ ಅತಿಮುಖ್ಯ ಆಗಿದೆ. ನಮ್ಮೂರಿನ ಗೆಳೆಯ ನಾಗರಾಜು ನಿರ್ದೇಶನ ಅಡವಿ ಚಿತ್ರವು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ” ಎಂದರು.
ಮಧುಗಿರಿಯ ಬಿಎಎಸ್-ಫಿಲಂ ಸಾಧೀಕ್‌ಸಾಭ್ ನಿರ್ಮಾಣದ ಅಡವಿ ಚಲನಚಿತ್ರಕ್ಕೆ ಸ್ಥಳೀಯ ಕಲಾ ಪ್ರತಿಭೆಯಾದ ಟೈಗರ್‌ನಾಗ್ ನಿರ್ದೇಶನದ ಎರಡನೇ ಚಿತ್ರಕ್ಕೆ ಎ.ಆರ್.ಸಾಯಿರಾಮ್ ಸಂಭಾಷಣೆ ಮಾಡಿದ್ದಾರೆ. ಅಡವಿ ಚಿತ್ರವು ಆದಿವಾಸಿಗಳ ಜೀವನ ಚರಿತ್ರೆ ಮತ್ತು ಪ್ರಕೃತಿಯ ರಕ್ಷಣೆಯ ಕುರಿತಾದ ಕಥೆಯನ್ನು ಒಳಗೊಂಡಿದೆ.
ಕಾರ್ಯಕ್ರಮದಲ್ಲಿ ತಂಗನಹಳ್ಳಿ ಶ್ರೀಮಠದ ಬಸವ ಮಹಾಲಿಂಗ ಸ್ವಾಮೀಜಿ, ತುಮಕೂರು ನಗರಸಭಾ ಮಾಜಿ ಉಪಮೇಯರ್ ವಾಲೇಚಂದ್ರಯ್ಯ, ಬಿಜೆಪಿ ಮುಖಂಡ ಮುನಿಯಪ್ಪ, ಅಡವಿ ಛಾಯಗ್ರಾಹಕ ರವಿಕುಮಾರ್‌ಸನ್ನಾ, ಕೃಷಿ ಅಧಿಕಾರಿ ನಾಗರಾಜು, ಪಶು ಇಲಾಖೆಯ ಸಿದ್ದನಗೌಡ, ಅರಣ್ಯ ಅಧಿಕಾರಿ ಸುರೇಶ್ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.