![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 5, 2022, 10:05 AM IST
ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಜೋಡೋ ಯಾತ್ರೆಯಲ್ಲಿ ಕೆಜಿಎಫ್- 2 ಚಿತ್ರದ ಹಾಡು ಹಕ್ಕುಸ್ವಾಮ್ಯ ಪಡೆಯದೇ ದುರ್ಬಳಕೆ ಮಾಡಿರುವ ಆರೋಪದಡಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಮೂವರ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ:ನಾಳಿನ ಪಂದ್ಯಕ್ಕೆ ಮಳೆ ಬಂದರೆ? ಒಂದು ವೇಳೆ ದ.ಆಫ್ರಿಕಾ ಸೋತರೆ? ಹೇಗಿದೆ ‘ಸೆಮಿ’ ಲೆಕ್ಕಾಚಾರ
ರಾಹುಲ್ ಗಾಂಧಿ, ಸಂಸದ ಜಯರಾಂ ರಮೇಶ್, ಸುಪ್ರೀಯಾ ಶ್ರೀನಾಥೆ ಎಂಬುವವರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಎಮ್ ಆರ್‌ಟಿ ಮ್ಯೂಸಿಕ್ ಕೆಜಿಎಫ್ 2 ಹಿಂದಿ ಚಿತ್ರಗೀತೆಗಳ ಹಕ್ಕುಸ್ವಾಮ್ಯ ಹೊಂದಿದೆ.
ಭಾರತ ಜೋಡೊ ಯಾತ್ರೆಯಲ್ಲಿ ಕೆಜಿಎಫ್ 2 ಹಿಂದಿ ಚಿತ್ರದ ಗೀತೆ ಸುಲ್ತಾನ್ ಹಾಡನ್ನು ಬಳಸಿಕೊಳ್ಳಲು ಎಮ್ ಆರ್‌ಟಿ ಮ್ಯೂಸಿಕ್‌ನಿಂದ ಹಕ್ಕುಸ್ವಾಮ್ಯ ಪಡೆಯದೆ ಬಳಸಲಾಗಿತ್ತು. ಆ ವಿಡಿಯೋಗಳನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ಸೋಷಿಯಲ್ ಮೀಡಿಯಾ ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್ ಹಾಗೂ ಯಾತ್ರೆಯಲ್ಲೂ ಬಳಸಲಾಗಿತ್ತು.
ಹೀಗಾಗಿ ಸಂಸ್ಥೆಯ ಅನುಮತಿ ಪಡೆಯದೇ ಹಾಡು ಬಳಸಿರುವ ಹಿನ್ನೆಲೆಯಲ್ಲಿ ಎಮ್ ಆರ್‌ಟಿ ಸಂಸ್ಥೆಯ ನವೀನ್‌ಕುಮಾರ್ ಎಂಬುವವರು ಯಶವಂತಪುರ
ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.