ಮಾಪನ ದೋಷ: ಮೆಸ್ಕಾಂ ಗ್ರಾಹಕರಿಗೆ ಹಿಂಬಾಕಿ ಶಾಕ್! ಅಧಿಕಾರಿಗಳು ಹೇಳುವುದೇನು?
Team Udayavani, Nov 5, 2022, 11:44 AM IST
ಉಡುಪಿ : ವಿದ್ಯುತ್ ಮೀಟರ್‌ನ ಮಾಪನ ದೋಷದಿಂದ ಗ್ರಾಹಕರಿಗೆ ಹಿಂಬಾಕಿ ಪಾವತಿಸಲು 30 ದಿನಗಳ ಗಡುವು ನೀಡುವ ಮೂಲಕ ಮೆಸ್ಕಾಂ ಶಾಕ್ ನೀಡಿದೆ.
ಪ್ರತೀ ತಿಂಗಳು ವಿದ್ಯುತ್ ಬಿಲ್ ಬರುತ್ತದೆ. ಅದರಂತೆ ನಿರ್ದಿಷ್ಟ ದಿನಾಂಕದೊಳಗೆ ಬಿಲ್ ಪಾವತಿ ಮಾಡುತ್ತಿದ್ದೇವೆ. ಆದರೂ ಮೆಸ್ಕಾಂ ಹೊಸದಾಗಿ ನೋಟಿಸ್ ನೀಡಿ, ಹಿಂಬಾಕಿ ಪಾವತಿಸುವಂತೆ ಗಡುವು ನೀಡಿರುವುದು ಆತಂಕ ಸೃಷ್ಟಿಸಿದೆ. ಪ್ರತೀ ತಿಂಗಳು ಸರಿಯಾದ ಸಮಯಕ್ಕೆ ವಿದ್ಯುತ್ ಬಿಲ್ ನೀಡಿ ಹೋಗುತ್ತಾರೆ. ಅದೇ ತಿಂಗಳು ಪಾವತಿಸುತ್ತೇವೆ. ಪಾವತಿ ಎರಡು ತಿಂಗಳು ವಿಳಂಬವಾದರೂ ವಿದ್ಯುತ್ ಕಡಿತ ಮಾಡುತ್ತಾರೆ. ಪಾವತಿಸುವ ವರೆಗೂ ಮರಳಿ ಸಂಪರ್ಕ ನೀಡುವುದಿಲ್ಲ. ಮಳೆ, ಗಾಳಿ ಇತ್ಯಾದಿ ಸಂದರ್ಭದಲ್ಲಿ ಅನಿರ್ದಿಷ್ಟಾವಧಿ ವಿದ್ಯುತ್ ಇಲ್ಲದಿದ್ದರೂ ಬಿಲ್ ಮಾತ್ರ ಸರಾಸರಿಯಲ್ಲೇ ಬರುತ್ತದೆ. ಬಿಲ್ ಪಾವತಿಸದ ಅನಂತರದಲ್ಲೂ ಇಂತಹ ನೋಟಿಸ್ ನೀಡಿ, ಹೆಚ್ಚುವರಿ ಹಣ ವಸೂಲಿಗೆ ಮುಂದಾಗಿರುವುದು ಸರಿಯಲ್ಲ ಎಂದು ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ.
ಮಾಪನ ದೋಷಪೂರಿತವಾಗಿರುವುದರಿಂದ ಆ ಅವಧಿಯ (ಜುಲೈಯಿಂದ ಸೆಪ್ಟಂಬರ್) ಬಿಲ್ ಅನ್ನು ನೀವು ಬಳಸಿರುವ ವಿದ್ಯುತ್ ಯುನಿಟ್‌ನ ಸರಾಸರಿ ಆಧಾರದಲ್ಲಿ ಪರಿಷ್ಕರಿಸಲಾಗಿದೆ. ಹಿಂಬಾಕಿಯ ಮೊತ್ತ ಪಾವತಿಸಬೇಕಾಗಿದೆ. 30 ದಿನದೊಳಗೆ ಪಾವತಿಸಬೇಕು ಎಂದು ಹಲವು ಗ್ರಾಹಕರಿಗೆ ಮೆಸ್ಕಾಂ ಪತ್ರ ಕಳುಹಿಸಿದೆ. ವಿದ್ಯುತ್ ಯುನಿಟ್ ಬಳಕೆಯ ಆಧಾರದಲ್ಲಿ ಕೆಲವರಿಗೆ 2 ಸಾವಿರ, ಇನ್ನು ಕೆಲವರಿಗೆ 3ರಿಂದ 4 ಸಾವಿರ ರೂ. ಹೀಗೆ ಒಂದೊಂದು ರೀತಿಯಲ್ಲಿ ಹಿಂಬಾಕಿ ಪಾವತಿಗೆ ಪತ್ರ ಕಳುಹಿಸಲಾಗಿದೆ. ಹಾಗೆಯೇ ಆಕ್ಷೇಪಣೆಗಳು ಇದ್ದಲ್ಲಿ ಪತ್ರ ತಲುಪಿದ 15 ದಿನದೊಳಗೆ ಲಿಖೀತ ರೂಪದಲ್ಲಿ ಸಲ್ಲಿಸಬಹುದು ಎಂದೂ ತಿಳಿಸಿದೆ.
ಮೀಟರ್ ದೋಷ ಮಾಹಿತಿಯೇ ನೀಡಿಲ್ಲ
3 ತಿಂಗಳಿಂದ ಮೀಟರ್ ದೋಷ ಇದೆ ಎಂದಾದರೆ ಬಿಲ್ ನೀಡಲು ಬರುತ್ತಿದ್ದ ಮೆಸ್ಕಾಂ ಸಿಬಂದಿ ಈ ಬಗ್ಗೆ ಮಾಹಿತಿ ನೀಡಿಲ್ಲ ಏಕೆ? ಮೀಟರ್ ಸರಿಯಾಗಿಲ್ಲ. ಬದಲಾವಣೆ ಮಾಡಬೇಕು ಅಥವಾ ವಿದ್ಯುತ್ ಯುನಿಟ್ ಬಳಿಕೆಯನ್ನು ಸರಿಯಾಗಿ ತೋರಿಸುತ್ತಿಲ್ಲ ಎಂಬಿತ್ಯಾದಿ ಯಾವುದೇ ಸೂಚನೆಯನ್ನು ನೀಡದೇ ಏಕಾಏಕಿ ಬಾಕಿ ಹಣ ಪಾವತಿಸಬೇಕು ಎಂದು ಗಡುವು ನೀಡಿರುವುದು ಸರಿಯಲ್ಲ ಎಂದು ಗ್ರಾಹಕರು ತಿಳಿಸಿದ್ದಾರೆ.
ಅಧಿಕಾರಿಗಳು ಹೇಳುವುದೇನು?
ಅನೇಕ ಮನೆಗಳಲ್ಲಿ ಮೀಟರ್ ದೋಷ ಪೂರಿತವಾಗಿ ಹೊಸ ಮೀಟರ್ ಅಳವಡಿಸಲು ಈಗಾಗಲೇ ಇಲಾಖೆಗೆ ಪತ್ರ ಬರೆದಿದ್ದೇವೆ. ಇನ್ನೂ ಮೀಟರ್ ಪೂರೈಕೆಯಾಗಿಲ್ಲ. ಸಾವಿರಕ್ಕೂ ಅಧಿಕ ಮೀಟರ್ ಬರಬೇಕಿದೆ. ಹೀಗಾಗಿ ಕಳೆದ 3 ತಿಂಗಳಲ್ಲಿ ಮೀಟರ್ ಮಾಪನ ದೋಷದಿಂದ ಕೆಲವರು ಹೆಚ್ಚುವರಿಯಾಗಿ ಬಿಲ್ ಪಾವತಿಸಬೇಕಾಗಿದೆ. ಈ ಬಗ್ಗೆ ಪತ್ರವನ್ನು ಕಳುಹಿಸಿದ್ದೇವೆ. ಅವರು ಬಳಕೆ ಮಾಡಿರುವ ಒಟ್ಟಾರೆ ವಿದ್ಯುತ್‌ನ ಯುನಿಟ್ ಆಧಾರದಲ್ಲಿ ಸರಾಸರಿ ತೆಗೆದು ಪರಿಷ್ಕರಿಸಿ, ಹಿಂಬಾಕಿ ಪಾವತಿಗೆ ತಿಳಿಸಿದ್ದೇವೆ. ಹೊಸ ಮೀಟರ್ ಬರುವವರೆಗೂ ಈ ರೀತಿಯ ಸಮಸ್ಯೆ ಎದುರಾಗಬಹುದು. ಎಲ್ಲರಿಗೂ ಹೀಗೆ ಆಗುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಇದನ್ನೂ ಓದಿ : ಒಂದು ಸಾವಿರ ರೂ. ದರದಲ್ಲಿ ಉತ್ತಮ ಇಯರ್ ಬಡ್: ಯಾವುದಿದು?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.