ಮೋಪಾ ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಿಸಿದ ಗೋವಾ ಸಿಎಂ: ಭೂಮಿ ಕಳೆದುಕೊಂಡವರಿಗೆ ಪರಿಹಾರ
Team Udayavani, Nov 5, 2022, 11:58 AM IST
ಪಣಜಿ: ಕಳೆದ ಹಲವು ದಿನಗಳಿಂದ ವಿವಿಧ ಕಾರಣಗಳಿಗಾಗಿ ಚರ್ಚೆಯಲ್ಲಿರುವ ಮೋಪಾ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶನಿವಾರ ಪರಿಶೀಲಿಸಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಮೋಪಾ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡವರಿಗೆ ಸರಕಾರ ಪರಿಹಾರ ನೀಡಲಿದೆ. ಆದ್ದರಿಂದ, ಅಂತಹ ನಾಗರಿಕರು ನಿಶ್ಚಿಂತರಾಗಿರಬೇಕು. ಯೋಜನೆಗೆ ವಿರೋಧ ವ್ಯಕ್ತಪಡಿಸಿದವರ ಬೇಡಿಕೆಗಳನ್ನೂ ಈಡೇರಿಸಲಾಗಿದೆ. ಹೀಗಾಗಿ ಈ ಯೋಜನೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.
ಮೋಪಾ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಅಲ್ಲದೆ ಶೇ.95ರಷ್ಟು ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಯನ್ನು ಡಿಸೆಂಬರ್ 8 ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಬ್ಯಾರಿಕೇಡ್ ಹಾಕಿ ತಡೆ…
ಮುಖ್ಯಮಂತ್ರಿಗಳು ಮೋಪಾ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆಗೆ ತೆರಳಿದಾಗ ಈ ಭೇಟಿಗೆ ಸ್ಥಳೀಯ ಶಾಸಕರಿಗೆ ಆಹ್ವಾನ ನೀಡಿಲ್ಲ ಎಂದು ಜಿಲ್ಲಾ ಪಂಚಾಯಿತಿ, ಪಂಚಾಯಿತಿ ಸದಸ್ಯರು ಪ್ರವೇಶ ದ್ವಾರಕ್ಕೆ ಬ್ಯಾರಿಕೇಡ್ ಹಾಕಿದರು. ಇದಾದ ಬಳಿಕ ನೇರವಾಗಿ ಶಾಸಕ ಪ್ರವೀಣ್ ಅರ್ಲೇಕರ್ ಅವರ ನಿವಾಸಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು, ಮಧ್ಯಾಹ್ನದ ವೇಳೆಗೆ ಶಾಸಕ ಪ್ರವೀಣ್ ಅರ್ಲೇಕರ್ ಅವರೊಂದಿಗೆ ಮುಖ್ಯಮಂತ್ರಿಗಳು ಮೋಪಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಇದನ್ನೂ ಓದಿ : ಮಾಪನ ದೋಷ: ಮೆಸ್ಕಾಂ ಗ್ರಾಹಕರಿಗೆ ಹಿಂಬಾಕಿ ಶಾಕ್! ಅಧಿಕಾರಿಗಳು ಹೇಳುವುದೇನು?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
UGC; ಪದವಿ ಕಲಿಕೆ ಅವಧಿ ನಿರ್ಧಾರ ಆಯ್ಕೆ ಶೀಘ್ರ: ಚೇರ್ಮನ್ ಹೇಳಿದ್ದೇನು?
Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Bullet train ದೇಶದಲ್ಲಿಯೇ ನಿರ್ಮಾಣ: ಸಂಸತ್ತಿಗೆ ಕೇಂದ್ರ ಮಾಹಿತಿ
Agriculture; ರಾಜ್ಯದ ರೈತರು, ಜನತೆಗೆ ಶುಭ ಸುದ್ದಿ: ಈ ಬಾರಿ ಬಂಪರ್ ಇಳುವರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.