ಹೈಕೋರ್ಟ್ ಸಿಬ್ಬಂದಿಗೆ ಹನಿಟ್ರ್ಯಾಪ್: ಮಹಿಳೆಯರು ಸೇರಿ 10 ಮಂದಿ ಬಂಧನ
Team Udayavani, Nov 6, 2022, 2:22 PM IST
ಬೆಂಗಳೂರು: ಹೈಕೋರ್ಟ್ ಸಿಬ್ಬಂದಿಯೊಬ್ಬರಿಗೆ ಹನಿಟ್ರ್ಯಾಪ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಇಬ್ಬರು ಮಹಿಳೆಯರು ಸೇರಿ 10 ಮಂದಿ ಕಾಮಾಕ್ಷಿಪಾಳ್ಯ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ದೊಡ್ಡಬಿದರಕಲ್ಲು ಶಿವಗಂಗಾ ಲೇಔಟ್ ನಿವಾಸಿ ಸಿದ್ದೇಶ್ ಅಲಿಯಾಸ್ ಸಿದ್ದು (26), ಗೊಲ್ಲರ ಹಟ್ಟಿಯ ಪೈಪ್‌ಲೈನ್ ರಸ್ತೆ ನಿವಾಸಿ ಅನು ಅಲಿಯಾಸ್ ಅನುರಾಧಾ (25), ಕಾಮಾಕ್ಷಿ ಪಾಳ್ಯದ ಗುಣ (23), ಇಂದಿರಾನಗರದ ಚೇತನ್ ಅಲಿಯಾಸ್ ಚೇತು (19), ಗಂಗೋನಹಳ್ಳಿಯ ರವಿಕುಮಾರ್ ಅಲಿ ಯಾಸ್ ಬಾಂಡ್ (25), ಶ್ರೀರಾಮಪುರದ ಪ್ರಶಾಂತ್ ಕುಮಾರ್ ಅಲಿಯಾಸ್ ಪ್ರಶಾಂತ್ (19), ಕಾಮಾಕ್ಷಿಪಾಳ್ಯದ ಕಾರ್ತೀಕ್ ಕುಮಾರ್ (22), ಅಂಧ್ರಹಳ್ಳಿ ಮುಖ್ಯ ರಸ್ತೆಯ ಉಮಾ ಶಂಕರ್, ಮೀನಾಕ್ಷಿ ನಗರದ ಸೂರ್ಯರಾಜ್ ಅರಸ್ ಅಲಿಯಾಸ್ ಸೂರ್ಯ (20) ಮತ್ತು ಮಲ್ಲತ ಹಳ್ಳಿಯ ವಿದ್ಯಾ ಅಲಿ ಯಾಸ್ ಕಾವ್ಯ (35) ಬಂಧಿತರು. ಆರೋಪಿ ಗಳಿಂದ ಮೊಬೈಲ್‌ಗಳು ಮತ್ತು ಒಂದೂವರೆ ಸಾವಿರ ರೂ. ನಗದು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳು ಹೈಕೋರ್ಟ್‌ನ ಜಮೆದಾರ್, ಯಶವಂತಪುರ ನಿವಾಸಿ ಜಯರಾಮ್(55) ಅವರಿಗೆ ಹನಿ ಟ್ರ್ಯಾಪ್ ಮಾಡಿದ್ದಾರೆ ಎಂದು ಪೊಲೀಸರು ಹೇಳಿದರು.
ಹೈಕೋರ್ಟ್‌ನಲ್ಲಿ ಜಮೆದಾರ್ ಆಗಿರುವ ಜಯರಾಮ್‌ರನ್ನು 2 ವರ್ಷಗಳ ಹಿಂದೆ ಅನುರಾಧಾ ಪ್ರಕರಣವೊಂದರಲ್ಲಿ ಕೋರ್ಟ್‌ಗೆ ಬಂದಾಗ ಪರಿಚಯಿಸಿಕೊಂಡಿದ್ದಳು. ಇಬ್ಬರ ನಡುವೆ ಆತ್ಮೀಯತೆ ಇತ್ತು. ಹೀಗಾಗಿ ಆರು ತಿಂಗಳ ಹಿಂದೆ ಕೋರ್ಟ್ ಬಳಿ ಬಂದ ಅನುರಾಧಾ, ತಾವೆರೆಕೆರೆಯ ತಮ್ಮ ಮನೆಯಲ್ಲಿ ಶಾರ್ಟ್ ಸರ್ಕಿಟ್‌ನಿಂದ ಟೀವಿ ಫ್ರಿಡ್ಜ್ ಹಾಗೂ ಇತರೆ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಹೋಗಿವೆ ಎಂದು 10 ಸಾವಿರ ರೂ. ಪಡೆದುಕೊಂಡಿದ್ದಳು. ಕೆಲ ದಿನಗಳ ಬಳಿಕ ವಾಪಸ್ ನೀಡಿದ್ದರು. ಅ.25ರಂದು ಮತ್ತೂಮ್ಮೆ 5 ಸಾವಿರ ಸಾಲ ಕೇಳಿದ್ದಳು. ಆಗ ಜಯರಾಮ್ ಖುದ್ದು ಅ.30ರಂದು ಆಕೆಯ ಕಾಮಾಕ್ಷಿಪಾಳ್ಯ ಮನೆಗೆ ಹೋಗಿ ಕೊಟ್ಟಿದ್ದಾರೆ. ಹಣ ನೀಡಿ ವಾಪಸ್ ಹೊರಗೆ ಬಂದು ಬೈಕ್ ತೆಗೆಯುತ್ತಿದ್ದಂತೆ ಅಪರಿಚಿತ ನಾಲ್ವರು ಆರೋಪಿಗಳು ಜಯರಾಮ್‌ರ ಬೈಕ್ ಕೀ ಕಸಿದುಕೊಂಡು ಬಾಯಿ ಮುಚ್ಚಿ ಅನುರಾಧಾ ಮನೆಯೊಳಗೆ ಕರೆದೊಯ್ದಿದ್ದಾರೆ.
ನಂತರ ಜಯರಾಮ್ ತಲೆ, ಕಣ್ಣು ಮತ್ತು ಕಿವಿ ಭಾಗಕ್ಕೆ ಹೊಡೆದು, ಮಾಧ್ಯಮದವರನ್ನು ಕರೆಸುತ್ತೇನೆ ಕೂಡಲೇ 2 ಲಕ್ಷ ರೂ. ಕೊಡಬೇಕು ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಅಲ್ಲದೆ, ಜಯರಾಮ್ ಮೊಬೈಲ್‌ನಿಂದಲೇ ಪತ್ನಿಗೆ ಕರೆ ಮಾಡಿ, ನನ್ನ ಹೆಂಡತಿಯನ್ನು ಅತ್ಯಾಚಾರ ಮಾಡಲು ಬಂದಿದ್ದಾನೆ. ನೀವು ಕೂಡಲೇ ಬನ್ನಿ ಎಂದು ಹೇಳಿ, ಮತ್ತೂಮ್ಮೆ ತನ್ನ ಮೇಲೆ ಹಲ್ಲೆ ನಡೆಸಿದ್ದರು. ಆಗ ತಾನೂ ಪ್ರಜ್ಞೆ ಕಳೆದುಕೊಂಡಿದ್ದೇನೆ. ನಂತರ ಎಚ್ಚರಗೊಂಡ ಬಳಿಕ ತನ್ನ ಜೇಬಿನಲ್ಲಿದ್ದ ಐದು ಸಾವಿರ ರೂ. ಕಸಿದುಕೊಂಡು ಕಳುಹಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಖೆಡ್ಡಾಕ್ಕೆ ಕೆಡವಿದ್ದು ಹೇಗೆ?: ಆರೋಪಿಗಳ ಪೈಕಿ ಅನುರಾಧಾ ಕೋರ್ಟ್‌ನಲ್ಲಿ ಜಯರಾಮ್‌ರನ್ನು ಪರಿಚಯಿಸಿಕೊಂಡು ಫೋನ್‌ನಲ್ಲಿ ಮಾತನಾಡುತ್ತ ಆತ್ಮೀಯತೆ ಬೆಳೆಸಿಕೊಂಡಿದ್ದಾಳೆ. ನಂತರ ಪುಸಲಾಯಿಸಿ ಮನೆಗೆ ಕರೆಸಿಕೊಂಡು ಸಲುಗೆಯಿಂದ ಇದ್ದಳು. ಇದೇ ವೇಳೆ ಮತ್ತೂಬ್ಬ ಆರೋಪಿ ವಿದ್ಯಾ ಅಲಿಯಾಸ್ ಕಾವ್ಯಾ ಸೂಚನೆ ಮೇರೆಗೆ ಇತರೆ ಆರೋಪಿಗಳು ಅನು ಮನೆಗೆ ನುಗ್ಗಿ ಜಯರಾಮ್‌ರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿದ್ದಾರೆ. ಮತ್ತೂಂದೆಡೆ ಆರೋಪಿಗಳ ಪೈಕಿ ಸಿದ್ದೇಶ್ ಅಲಿಯಾಸ್ ಸಿದ್ದು ವಿರುದ್ಧ ಕ್ಯಾತಸಂದ್ರ, ಮಾದನಾಯಕನಹಳ್ಳಿ ಮತ್ತು ಬಾಗಲಗುಂಟೆ ಠಾಣೆಯಲ್ಲಿ ಹನಿಟ್ರ್ಯಾಪ್ ಪ್ರಕರಣಗಳು ದಾಖಲಾಗಿದ್ದು, ಜೈಲಿಗೂ ಹೋಗಿ ಬಂದಿದ್ದಾನೆ. ಈತನಿಗೆ ಹಲವು ವರ್ಷಗಳಿಂದ ಅನು ಮತ್ತು ವಿದ್ಯಾ ಪರಿಚಯವಿದ್ದು, ಇಬ್ಬರ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಅಲ್ಲದೆ, ಈ ಇಬ್ಬರು ಮಹಿಳೆಯರ ಜತೆ ಬೇರೆ ಯಾರಾದರೂ ದೈಹಿಕ ಸಂಪರ್ಕ ಬೆಳೆಸಲು ಬಂದಾಗ ಸಿದ್ದೇಶ್ ಸಂತ್ರಸ್ತೆಯರ ಪರಿಚಯಸ್ಥರ ಸೋಗಿನಲ್ಲಿ ಮನೆಗೆ ನುಗ್ಗಿ ಸುಲಿಗೆ ಮಾಡುತ್ತಿದ್ದ. ಈ ಪ್ರಕರಣದಲ್ಲಿ ಜೈಲು ಸೇರಿದ್ದ. ಹೀಗಾಗಿ ಇಬ್ಬರು ಮಹಿಳೆಯರನ್ನು ಮುಂದಿಟ್ಟು ಕೊಂಡು ಆರೋಪಿ ನಿರ್ದಿಷ್ಟ ವ್ಯಕ್ತಿಗಳಿಗೆ ಹನಿಟ್ರ್ಯಾಪ್ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭದ್ರಾವತಿಯ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ
Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ
Dinesh Gundu Rao; ಬಾಣಂತಿಯರ ಸಾ*ವು ಪ್ರಕರಣ ನ್ಯಾಯಾಂಗ ತನಿಖೆಗೆ
ರಾತ್ರಿಯಿಡೀ ಸಿ.ಟಿ. ರವಿಯನ್ನು ಸುತ್ತಾಡಿಸಿದ ಪೊಲೀಸರು: ಮಧ್ಯರಾತ್ರಿ ರಸ್ತೆಯಲ್ಲೇ ಪ್ರತಿಭಟನೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.