ಸವದತ್ತಿ: ಸ್ವಾದಿಮಠದ ಶಿವಬಸವ ಶ್ರೀಗಳು ವಿಧಿವಶ

ಸೋಮವಾರ ಬೆಳಗ್ಗೆ 11 ಕ್ಕೆ ಸ್ವಗ್ರಾಮ ಕುದರಿ ಸಾಲವಾಡಗಿಯಲ್ಲಿ ಅಂತಿಮ ವಿಧಿ

Team Udayavani, Nov 6, 2022, 8:57 PM IST

1-ASAsaS

ಸವದತ್ತಿ: ಇಲ್ಲಿನ ಸ್ವಾದಿಮಠದ ಶಿವಬಸವ ಶ್ರೀಗಳು ರವಿವಾರ ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳು ಚಿಕಿತ್ಸೆ ಫಲಿಸದೇ ರವಿವಾರ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ.

ಶ್ರೀಗಳ ಪಾರ್ಥೀವ ಶರೀರವನ್ನು ಆಂಬ್ಯುಲೆನ್ಸ್ ಮೂಲಕ ಸವದತ್ತಿ ಪಟ್ಟಣಕ್ಕೆ ತರಲಾಗಿದೆ. ಮಠದಲ್ಲಿ ಮೃತರ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ಮಠದ ಭಕ್ತರು, ಶ್ರೀಗಳ ಆಪ್ತರು, ಸಾರ್ವಜನಿಕರು ಅಂತಿಮ ದರ್ಶನ ಪಡೆದರು.

ರಾಣೆ ಬೆನ್ನೂರಿನ ಶ್ರೀಗಳು, ಹಾವೇರಿಯ ಸಿಂದಗಿ ಮಠದ ಶ್ರೀಗಳು, ಇನಾಮಹೊಂಗಲದ ಶ್ರೀಗಳು, ಹಿಡಕಲ್‍ನ ಶ್ರೀಗಳ ನೇತೃತ್ವದಲ್ಲಿ ಲಿಂಗಾಯತ ಶ್ರೀಮಠದ ಸಂಪ್ರದಾಯದಂತೆ ಪೂಜಾ ವಿಧಿವಿಧಾನ ನೆರವೇರಿಸಲಾಯಿತು. ಮುಂಜಾನೆಯಿಂದ ಸಂಜೆವರೆಗೂ ಭಕ್ತರಿಗೆ ಅಂತಿಮ ದರ್ಶನ ಕಲ್ಪಿಸಲಾಗಿತ್ತು. ಸಂಜೆ ವೇಳೆ ಸ್ವಾಧಿಮಠದಿಂದ ಆರಂಭವಾದ ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ಎಸ್‍ಎಲ್‍ಎಓ ಕ್ರಾಸ್, ಗಾಂಧೀ ಚೌಕ, ಆನಿ ಅಗಸಿ, ಕಟಕೋಳ ಬ್ಯಾಂಕ್ ವೃತ್ತ, ಎಪಿಎಮ್ಸಿ ತಲುಪಿತು.

ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಕೊನೆಗೆ ವಿಜಯಪುರ ಜಿಲ್ಲೆಯ ಕುದರಿ ಸಾಲವಾಡಗಿ ಗ್ರಾಮಕ್ಕೆ ಬಿಳ್ಕೊಡಲಾಯಿತು. ಅಂತಿಮ ಯಾತ್ರೆಗೆ ಹೊರಟ ಶ್ರೀಗಳ ಯಾತ್ರೆಗೆ ದಾರಿಯುದ್ದಕ್ಕೂ ನೀರು ಹರಿಸಿ ನಿರ್ಮಲಗೊಳಿಲಾಯಿತು. ಸೋಮವಾರ ಮುಂಜಾನೆ 11 ಗಂಟೆಗೆ ಶ್ರೀಗಳ ಸ್ವಗ್ರಾಮ ಕುದರಿ ಸಾಲವಾಡಗಿ ಗ್ರಾಮದ ಮಹಾದೇವ ತಾತಯ್ಯನವರ ಮಠದಲ್ಲಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಠದ ಭಕ್ತರು ತಿಳಿಸಿದ್ದಾರೆ.

ಪಟ್ಟಣದಲ್ಲಿರುವ ಐದು ಮಠಗಳಲ್ಲಿ ಒಂದಾದ ಸ್ವಾದಿಮಠವು ಮೂಲತಃ ಸ್ವಾದಿ ಅವರ ಮನೆತನಕ್ಕೆ ಸೇರಿದೆ. ಇದೇ ಮನೆತನದವರೇ ಮಠಾಧೀಶರಾಗುವ ಪರಂಪರೆಯು ರೂಢಿಯಲ್ಲಿತ್ತು. ಮಹಾಂತಯ್ಯ ಸ್ವಾಮಿಗಳ ನಂತರ ಅವರ ಪುತ್ರ ಚನ್ನವೀರಯ್ಯನನ್ನು ಮಠದ ಸ್ವಾಮಿಗಳು ಎಂದು ನೇಮಸಲು ತಿರ್ಮಾನಿಸಲಾಗಿತ್ತು. ಆದರೆ ಅವರು ಸಂಸಾರಿಗಳಾಗಿದ್ದರಿಂದ ಇದೇ ಮನೆತನದ ಮುರಿಗೆಪ್ಪ ಮಠವನ್ನು ಮುಂದುವರೆದರು. ಸ್ವಾದಿ ಮುಂದೆ ಹೂಲಿಕಟ್ಟಿ ಮನೆತನ ಎಂದು ಬದಲಾಯಿತು. ಮಠದ ಪೂಜಾಧಿಕೈಂಕರ್ಯಗಳನ್ನು ಇದೇ ಮನೆತನದವರು ನಿರ್ವಹಿಸುತ್ತಾರೆ.

ಶಿವಬಸವ ಶ್ರೀಗಳು ಮಠ ಮೊದಲನೆಯ ಪೀಠಾಧಿಕಾರಿಗಳೆಂದು ನೇಮಿಸಲಾಯಿತು. ಮೂಲತಃ ವಿಜಯಪೂರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕುದರಿ ಸಾಲವಾಡಗಿ ಗ್ರಾಮದವರು. 1957 ರಲ್ಲಿ ವೀರಯ್ಯ ವಿರಕ್ತಮಠ ಮತ್ತು ಗುರುಬಸವ್ವ ದಂಪತಿಗಳ ಮಗನಾಗಿ ಜನಿಸಿದರು. ಕುದರಿಸಾಲವಾಡಗಿ ಮತ್ತು ಶಿವಯೋಗ ಮಂದಿರದಲ್ಲಿ ವಿದ್ಯಾಭ್ಯಾಸ ಪಡೆದುಕೊಂಡ ಇವರು ಶಿವಯೋಗ ಮಂದಿರದಲ್ಲಿ ಹಲವು ವರ್ಷ ಸಂಸ್ಕøತ ಬೋಧಕರಾಗಿ ಕಾರ್ಯ ನಿರ್ವಹಿಸಿದ್ದರು. 1986-87 ರಲ್ಲಿ ಸವದತ್ತಿಯ ಸ್ವಾದಿಮಠದ ಪ್ರಥಮ ಪೂಜ್ಯರಾಗಿ ಬಂದ ಅವರು, ಇಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದರು.

ಅನುಭಾವ ಪಥ ಎಂಬ ಶರಣರ ಜೀವನ ದರ್ಶನ ಸಾರುವ ಪತ್ರಿಕೆ ನಡೆಸಿದರು. ಅಲ್ಲದೇ ಕುದರಿ ಸಾಲವಾಡಗಿಯ ಮಹಾದೇವಪ್ಪನ ಮಠದ ಮಠಾಧಿಪತಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ. ಕುದರಿ ಸಾಲವಾಡಗಿಯಲ್ಲಿರುವ ಮಠ ಬೆಳೆಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ. ಸ್ವಾದಿಮಠದ ಅಧಿಕಾರ ವಹಿಸಿಕೊಂಡ ಬಳಿಕ ಮಠದ ಕಟ್ಟಡ ಹೊಸದಾಗಿಸಿದರು. ಪೂಜ್ಯರು ಸದಾ ಶಿವಚಿಂತನೆಯಲ್ಲಿಯೇ ಹೆಚ್ಚು ಇರ ಬಯಸಿದ್ದರು.

ಟಾಪ್ ನ್ಯೂಸ್

Farmers: ವಂಚನೆ ದೂರು ನೀಡುವ ರೈತರಿಗೆ 1 ಲಕ್ಷ ರೂ.ನಗದು ಬಹುಮಾನ – ಸಚಿವ ಶಿವಾನಂದ ಪಾಟೀಲ

Farmers: ವಂಚನೆ ದೂರು ನೀಡುವ ರೈತರಿಗೆ 1 ಲಕ್ಷ ರೂ.ನಗದು ಬಹುಮಾನ – ಸಚಿವ ಶಿವಾನಂದ ಪಾಟೀಲ

1-dinnu

Karnataka; ಸಿಸೇರಿಯನ್ ಹೆರಿಗೆ ತಡೆಯಲು ಹೊಸ ಕಾರ್ಯಕ್ರಮ ಘೋಷಿಸುತ್ತೇವೆ

highcourt

Amazon,Flipkart ವಿರುದ್ಧ ತನಿಖೆ: ಸುಪ್ರೀಂನಿಂದ ಎಲ್ಲಾ ಪ್ರಕರಣಗಳು ಕರ್ನಾಟಕ ಹೈಕೋರ್ಟ್‌ಗೆ

1-viji

Waqf; ವಿಜಯೇಂದ್ರ ವಿರುದ್ಧ ಲಂಚ ಆರೋಪ: ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯ

Anura Kumara Dissanayake

Sri Lanka; ಭಾರತದ ವಿರುದ್ದ ನಮ್ಮ ಭೂಮಿಯನ್ನು ಬಳಸಲು ಬಿಡೆವು: ಲಂಕಾ ಅಧ್ಯಕ್ಷ ಡಿಸಾನಾಯಕೆ

Constitution Debate:ಸಚಿವೆ ನಿರ್ಮಲಾ Balraj,Sultanpuri ಬಂಧನ ಘಟನೆ ಉಲ್ಲೇಖಿಸಿದ್ದೇಕೆ?

Constitution Debate:ಸಚಿವೆ ನಿರ್ಮಲಾ Balraj,Sultanpuri ಬಂಧನ ಘಟನೆ ಉಲ್ಲೇಖಿಸಿದ್ದೇಕೆ?

Kiccha Sudeep: ಬಿಗ್‌ ಬಾಸ್‌ಗೆ ಗುಡ್‌ ಬೈ.. ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟ ಕಿಚ್ಚ

Kiccha Sudeep: ಬಿಗ್‌ ಬಾಸ್‌ಗೆ ಗುಡ್‌ ಬೈ.. ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟ ಕಿಚ್ಚ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Farmers: ವಂಚನೆ ದೂರು ನೀಡುವ ರೈತರಿಗೆ 1 ಲಕ್ಷ ರೂ.ನಗದು ಬಹುಮಾನ – ಸಚಿವ ಶಿವಾನಂದ ಪಾಟೀಲ

Farmers: ವಂಚನೆ ದೂರು ನೀಡುವ ರೈತರಿಗೆ 1 ಲಕ್ಷ ರೂ.ನಗದು ಬಹುಮಾನ – ಸಚಿವ ಶಿವಾನಂದ ಪಾಟೀಲ

Belagvi-Suvrana-Soudha

Winter Session: ಇಂದಿನಿಂದ “ಉತ್ತರ’ ಅಧಿವೇಶನ; 3 ದಿನ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆ

BGV-Mothr

Belagavi: ಎರಡು ತಿಂಗಳ ಹಸುಗೂಸನ್ನೇ ಕೆರೆಗೆ ಎಸೆದ ತಾಯಿ!; ಪ್ರಕರಣ ದಾಖಲು

15-gruhalaxmi

Gruha Lakshmi Scheme ಹಣ ಕೂಡಿಟ್ಟು ಬೋರ್ ವೆಲ್ ಕೊರೆಸಿದ ಅತ್ತೆ-ಸೊಸೆ: ಸಚಿವೆ ಶ್ಲಾಘನೆ

Belagavi: ಹೋರಾಟ ಅಸಂವಿಧಾನಿಕ ಎಂದು ಸಮಾಜಕ್ಕೆ ಅವಮಾನ ಮಾಡಿದ ಸಿಎಂ: ಕೂಡಲಸಂಗಮ ಶ್ರೀ

Belagavi: ಹೋರಾಟ ಅಸಂವಿಧಾನಿಕ ಎಂದು ಸಮಾಜಕ್ಕೆ ಅವಮಾನ ಮಾಡಿದ ಸಿಎಂ: ಕೂಡಲಸಂಗಮ ಶ್ರೀ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Farmers: ವಂಚನೆ ದೂರು ನೀಡುವ ರೈತರಿಗೆ 1 ಲಕ್ಷ ರೂ.ನಗದು ಬಹುಮಾನ – ಸಚಿವ ಶಿವಾನಂದ ಪಾಟೀಲ

Farmers: ವಂಚನೆ ದೂರು ನೀಡುವ ರೈತರಿಗೆ 1 ಲಕ್ಷ ರೂ.ನಗದು ಬಹುಮಾನ – ಸಚಿವ ಶಿವಾನಂದ ಪಾಟೀಲ

Hanuru: ಮಾದಪ್ಪನ ಬೆಟ್ಟದ ನಿಲ್ದಾಣಕ್ಕೆ ಬೇಕು ಮೂಲಸೌಕರ್ಯ

Hanuru: ಮಾದಪ್ಪನ ಬೆಟ್ಟದ ನಿಲ್ದಾಣಕ್ಕೆ ಬೇಕು ಮೂಲಸೌಕರ್ಯ

1-dinnu

Karnataka; ಸಿಸೇರಿಯನ್ ಹೆರಿಗೆ ತಡೆಯಲು ಹೊಸ ಕಾರ್ಯಕ್ರಮ ಘೋಷಿಸುತ್ತೇವೆ

highcourt

Amazon,Flipkart ವಿರುದ್ಧ ತನಿಖೆ: ಸುಪ್ರೀಂನಿಂದ ಎಲ್ಲಾ ಪ್ರಕರಣಗಳು ಕರ್ನಾಟಕ ಹೈಕೋರ್ಟ್‌ಗೆ

1-viji

Waqf; ವಿಜಯೇಂದ್ರ ವಿರುದ್ಧ ಲಂಚ ಆರೋಪ: ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.