ಪೊಲೀಸ್ ಅಧಿಕಾರಿ ಬ್ಯಾಂಕ್ ಖಾತೆಗೆ ಸಂಬಳದೊಂದಿಗೆ 10 ಕೋಟಿ ರೂ. ಕ್ರೆಡಿಟ್: ಮುಂದೆನಾಯ್ತು?
ಕೆಲವು ಸಾವಿರ ರೂ. ಬಿಟ್ಟರೆ ಇಷ್ಟು ದೊಡ್ಡ ಮೊತ್ತ ಯಾವತ್ತೂ ನನ್ನ ಬಳಿ ಇರಲಿಲ್ಲ
Team Udayavani, Nov 7, 2022, 5:03 PM IST
ಕರಾಚಿ: ನಮ್ಮ ಕಿಸೆಯಲ್ಲಿ ಕೆಲವೊಮ್ಮೆ ನೆನಪಿಲ್ಲದೇ 10,20 ರೂ. ನೋಟುಗಳನ್ನು ಇಟ್ಟಿರುತ್ತೇವೆ. ಅದು ಒಂದು ದಿನ ಅಚಾನಕ್ಕಾಗಿ ನಮಗೆ ಸಿಕ್ಕರೆ ತುಂಬಾ ಖುಷಿಯಾಗುತ್ತದೆ. ಒಮ್ಮೆ ಊಹೆ ಮಾಡಿಕೊಳ್ಳಿ ಒಂದು ವೇಳೆ ಇವತ್ತು ನಿಮ್ಮ ಖಾತೆಗೆ ಎಲ್ಲಿಂದಲೂ 50 ಸಾವಿರ ಕ್ರೆಡಿಟ್ ಆದರೆ ಏನಾಗಬಹುದು?
ಇಂಥದ್ದೇ ಒಂದು ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ. ಪೊಲೀಸ್ ಅಧಿಕಾರಿ ಅಮೀರ್ ಗೋಪಾಂಗ್ ರಾತ್ರೋ ರಾತ್ರಿ ಕೋಟ್ಯಧಿಪತಿ ಆಗಿದ್ದಾರೆ.!
ಇತ್ತೀಚೆಗೆ ಅಮೀರ್ ಗೋಪಾಂಗ್ ಅವರ ಖಾತೆಗೆ, ಸಂಬಳದೊಂದಿಗೆ 10 ಕೋಟಿ ರೂ. ಹಣ ಕ್ರೆಡಿಟ್ ಆಗಿದೆ. ಜೀವನವಿಡೀ ದುಡಿದರೂ ಇಷ್ಟು ಹಣ ಬರುವುದಿಲ್ಲ ಎನ್ನುವ ಯೋಚನೆಯಲ್ಲೇ, ನಾನು ನಿಜಕ್ಕೂ ಶಾಕ್ ಗೆ ಒಳಗಾದೆ. ಕಾರಣ ನನ್ನ ಖಾತೆಯಲ್ಲಿ ಇದುವರೆಗೂ ಕೆಲವು ಸಾವಿರ ರೂ. ಬಿಟ್ಟರೆ ಇಷ್ಟು ದೊಡ್ಡ ಮೊತ್ತ ಯಾವತ್ತೂ ನನ್ನ ಬಳಿ ಇರಲಿಲ್ಲ ಅಮೀರ್ ಗೋಪಾಂಗ್ ಎಂದು ಹೇಳುತ್ತಾರೆ.
ಅಮೀರ್ ಗೋಪಾಂಗ್ ಹಣವನ್ನು ತೆಗೆಯುವ ಮುನ್ನ ಬ್ಯಾಂಕ್ ಅಧಿಕಾರಿಗಳು ಅವರ ಬ್ಯಾಂಕ್ ಖಾತೆ ಹಾಗೂ ಎಟಿಎಂನ್ನು ಬ್ಲಾಕ್ ಮಾಡಿದ್ದಾರೆ. ಪೊಲೀಸರು ಇಷ್ಟು ದೊಡ್ಡ ಮೊತ್ತ ಹೇಗೆ ಬಂತೆಂದು ತನಿಖೆಯನ್ನು ಆರಂಭಿಸಿದ್ದಾರೆ. ಈ ಹಿಂದೆ ಪಾಕಿಸ್ತಾನದ ಲರ್ಕಾನಾ ಮತ್ತು ಸುಕ್ಕೂರ್ ನಲ್ಲಿ ಕೆಲ ಪೊಲೀಸ್ ಅಧಿಕಾರಿಗಳ ಖಾತೆಗೆ ಇಂಥ ದೊಡ್ಡ ಮೊತ್ತದ ಹಣ ಕ್ರೆಡಿಟ್ ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.