ATM ಕಾರ್ಡ್ ಮರೆತು ಹೋಗಿದ್ದೀರಾ? ಯುಪಿಐ ನಂಬರ್ ಬಳಸಿಕೊಂಡು ಹಣ ತೆಗೆಯುವುದು ಹೇಗೆ?
Team Udayavani, Nov 7, 2022, 7:54 PM IST
ನವದೆಹಲಿ: ಬಹುತೇಕ ಎಲ್ಲರ ಬಳಿ ಇಂದು ಗೂಗಲ್ ಪೇ, ಫೋನ್ ಪೇ ಇದ್ದೇ ಇದೆ. ಯಾವಾಗ ಬೇಕೋ ಆವಾಗ ಹಣವನ್ನು ಒಂದೆರಡು ಕ್ಲಿಕ್ ಮೂಲಕ ವರ್ಗಾವಣೆ ಮಾಡಬಹುದು. ರೀಚಾರ್ಜ್, ವಾಟರ್ ಬಿಲ್, ಗ್ಯಾಸ್ ಆರ್ಡರ್ ಮುಂತಾದವನ್ನು ಮಾಡಬಹುದು.
ಕೆಲವೊಮ್ಮೆ ನಮಗೆ ಅರ್ಜೆಂಟ್ ಆಗಿ ಹಣ ಬೇಕಾಗುತ್ತದೆ. ಆದರೆ ನಾವು ಎಟಿಎಂ ಕಾರ್ಡ್ ನ್ನು ಮರೆತು ಬರುತ್ತೇವೆ. ಅಥವಾ ಎಟಿಎಂ ಕಾರ್ಡ್ ಆ ಸಮಯದಲ್ಲಿ ಕೆಲಸ ಮಾಡುವುದಿಲ್ಲವಾದರೆ ಹಣ ನಿಮಗೆ ಬೇಕಾಗಿದ್ದರೆ ನಿಮ್ಮ ಯುಪಿಐ ನಂಬರ್ ಬಳಿಸಿಕೊಂಡೇ ಎಟಿಎಂನಿಂದ ಹಣ ತೆಗೆಯಬಹುದು ಎನ್ನುವುದು ನಿಮಗೆ ಗೊತ್ತಾ ?
ಇಂಟರ್ ಆಪರೇಬಲ್ ಕಾರ್ಡ್ಲೆಸ್ ವಿತ್ ಡ್ರಾವಲ್ (Interoperable Card less Cash Withdrawal) ವ್ಯವಸ್ಥೆಯಿಂದ ಎಟಿಎಂ ಕಾರ್ಡ್ ಇಲ್ಲದೆಯೇ ಯುಪಿಐ ನಂಬರ್ ಬಳಸಿ ಎಟಿಎಂ ಕೇಂದ್ರದಿಂದ ಹಣ ತೆಗೆಯಬಹುದು. ಆರ್ ಬಿಐ ಈಗಾಗಲೇ ಕ್ಲೋನಿಂಗ್ (ನಕಲಿ ಕಾರ್ಡ್ ಮಾಡಿ ಹಣ ತೆಗೆಯುವುದು) ಸ್ಕಿಮ್ಮಿಂಗ್ ಮತ್ತು ಡಿವೈಸ್ ಟ್ಯಾಂಪರಿಂಗ್ ನಂತಹ ಅಪರಾಧ ಕೃತ್ಯವನ್ನು ತಡೆಯಲು ಇಂಟರ್ ಆಪರೇಬಲ್ ಕಾರ್ಡ್ಲೆಸ್ ವಿತ್ ಡ್ರಾವಲ್ ವ್ಯವಸ್ಥೆಯನ್ನು ಕಲ್ಪಿಸಿ ಎಂದು ಪ್ರಮುಖ ಬ್ಯಾಂಕ್ ಗಳಿಗೆ ಹೇಳಿದೆ.
ಎಟಿಎಂ ಕಾರ್ಡ್ ಇಲ್ಲದೆ ಎಟಿಎಂ ನಿಂದ ಯುಪಿಐ ನಂಬರ್ ಹಣ ತೆಗೆಯುವುದು ಹೇಗೆ? :
ಸ್ಟೆಪ್ 1 : ಯಾವುದೇ ಎಟಿಎಂ ಕೇಂದ್ರಕ್ಕೆ ಭೇಟಿ ನೀಡಿ, ಎಟಿಎಂ ಸ್ಕ್ರೀನ್ ಮೇಲೆ ವಿತ್ ಡ್ರಾ ಕ್ಯಾಶ್ ಆಯ್ಕೆಯನ್ನು ಒತ್ತಿ
ಸ್ಟೆಪ್ 2 : ಬಳಿಕ ಯುಪಿಐ ಆಯ್ಕೆಯನ್ನು ಒತ್ತಿ
ಸ್ಟೆಪ್ 3 : ಆಗ ಕ್ಯೂ ಆರ್ ಕೋಡ್ ಸ್ಕ್ರೀನ್ ಮೇಲೆ ಬರುತ್ತದೆ.
ಸ್ಪೆಪ್ 4: ಇದಾದ ಬಳಿಕ ನಿಮ್ಮ ಮೊಬೈಲ್ ನಲ್ಲಿ ಯುಪಿಐ ಆ್ಯಪ್ ಓಪನ್ ಮಾಡಿ ಸ್ಕ್ರೀನ್ ಮೇಲೆ ಬರುವ ಕ್ಯೂ ಆರ್ ಕೋಡ್ ಗೆ ಸ್ಕ್ಯಾನ್ ಮಾಡಿ
ಸ್ಟೆಪ್ 5 : ನಿಮಗೆ ಎಷ್ಟು ಹಣ ತೆಗೆಯಲು ಇದೆ ಅದನ್ನು ನಮೂದಿಸಿ
ಸ್ಟೆಪ್ 6 : ಯುಪಿಐ ಪಿನ್ ಹಾಕಿ, ಆ ಬಳಿಕ ಮುಂದುವರೆಯಿರಿ ( ʼHit Proceed’) ಬಟನ್ ಒತ್ತಿ
ಸ್ಟೆಪ್ 7 : ನಿಮ್ಮ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ.
ಈ ವ್ಯವಸ್ಥೆಯನ್ನು ಬಳಸಲು ಯಾವುದೇ ಹೆಚ್ಚುವರಿ ಶುಲ್ಕ ಬ್ಯಾಂಕ್ ನಿಂದ ಕಡಿತವಾಗುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp Pay: ಭಾರತದಲ್ಲಿ ವಾಟ್ಸ್ಆ್ಯಪ್ ಪೇ ಇನ್ನು ಎಲ್ಲರಿಗೂ ಲಭ್ಯ
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.