ಕೊಟ್ಟದ್ದು ಸರಿ; ಜಾರಿ ಮಾಡುವುದು ಹೇಗೆ?


Team Udayavani, Nov 8, 2022, 7:50 AM IST

ಕೊಟ್ಟದ್ದು ಸರಿ; ಜಾರಿ ಮಾಡುವುದು ಹೇಗೆ?

ಇದುವರೆಗೆ ಮೀಸಲಾತಿಯನ್ನೇ ಪಡೆಯದ, ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ನೀಡುವುದಕ್ಕೆ ಸುಪ್ರೀಂ ಕೋರ್ಟ್‌ ಅಧಿಕೃತ ಮುದ್ರೆ ಒತ್ತಿದೆ. 2019ರಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿದ್ದ ಈ ಕಾಯ್ದೆಯನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದವು. ಈ ಬಗ್ಗೆ ವಿಚಾರಣೆ ನಡೆಸಿದ್ದ ಸಂವಿಧಾನ ಪೀಠ ಮೀಸಲಾತಿಗೆ ಸಮ್ಮತಿ ಸೂಚಿಸಿದೆ.

ಪ್ರತ್ಯೇಕ ಕೆಟಗೆರಿ ಸರಿಯಾದ ಕ್ರಮ
ಬಿ.ವಿ. ಆಚಾರ್ಯ, ಮಾಜಿ ಅಡ್ವೋಕೇಟ್‌ ಜನರಲ್‌
ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸಲು ಸಂವಿಧಾನಕ್ಕೆ 103ನೇ ತಿದ್ದುಪಡಿ ತಂದಿರುವುದು ಬಹುಮತದ ತೀರ್ಪು ಎತ್ತಿ ಹಿಡಿದೆ. ಅದನ್ನು ನಾನು ಸ್ವಾಗತಿಸುತ್ತೇನೆ. ಅತ್ಯಂತ ಕಡು ಬಡವರಿಗೆ ಪ್ರತ್ಯೇಕ ಕೆಟಗರಿ ಮಾಡಿ ಮೀಸಲಾತಿ ಕೊಟ್ಟಿರುವುದು ಸರಿಯಾಗಿದೆ. ನನ್ನ ಅಭಿಪ್ರಾಯದಲ್ಲಿ ಶೇ.50ರ ಮೀತಿ ಇಲ್ಲ ಅನ್ವಯವಾಗಲ್ಲ. ಯಾವುದೇ ಮೀಸಲಾತಿ ಪಡೆಯಲಾದ, ಸೌಲಭ್ಯಗಳ ಯಾವುದೇ ಪಟ್ಟಿಯಲ್ಲಿ ಇಲ್ಲದವರಿಗೆ ನ್ಯಾಯ ಕೊಡುವುದಾಗಿ. ಶೇ.50 ಮೀಸಲಾತಿಯಲ್ಲಿ ಇದ್ದವರಿಗೆ ಇದರಿಂದ ಯಾವುದೇ ಸಮಸ್ಯೆ ಅಥವಾ ತೊಂದರೆ ಆಗುವುದಿಲ್ಲ. ಜನರಲ್‌ ಕೆಟಗರಿಯಲ್ಲಿ ಬರುವ ಬಡವರನ್ನು ಜಾತಿ ಆಧರಿಸಿ ಅಲ್ಲ, ಆರ್ಥಿಕ ಸ್ಥಿತಿಗತಿ ಪರಿಗಣಿಸಿ ಮೀಸಲಾತಿ ನೀಡಲಾಗುತ್ತಿದೆ.

ತೀರ್ಪು ನಿರೀಕ್ಷೆ ಮಾಡಿರಲಿಲ್ಲ
ಡಾ| ಸಿ.ಎಸ್‌. ದ್ವಾರಕನಾಥ್‌, ಮಾಜಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ.
ಮುಖ್ಯವಾಗಿ ಈ ತೀರ್ಪನ್ನು ನಾವ್ಯಾರೂ ನಿರೀಕ್ಷೆ ಮಾಡಿರಲಿಲ್ಲ. ಪ್ರಕರಣದ ವಾದ-ವಿವಾದಗಳನ್ನು ನಾನು ಆರಂಭದಿಂದಲೂ ಗಮನಿ ಸುತ್ತಾ ಬಂದಿದೆ. ಯಾವ ರೀತಿ ಶೇ.10ರಷ್ಟು ಮೀಸಲಾತಿ ಸಾಂವಿಧಾ ನಿಕವಾಗಿ ತಪ್ಪು ಅನ್ನುವುದನ್ನು ಬಹಳ ಸ್ಪಷ್ಟವಾಗಿ ಹೇಳುತ್ತಿದ್ದರೆ ಒಂದು ರೀತಿಯಲ್ಲಿ ಸಮರ್ಥನೆ ಮಾಡಿಕೊಳ್ಳುವುದೇ ಎದುರಾಳಿಗಳಿಗೆ ಬಹಳ ಕಷ್ಟ ಆಗುತ್ತಿತ್ತು. ಹೀಗಿದ್ದಾಗ ಈ ರೀತಿ ಜಡ್ಜ್ಮೆಂಟ್‌ ಬರುತ್ತೆ ಅಂತ ನಾನು ನಿರೀಕ್ಷೆ ಮಾಡಿರಲಿಲ್ಲ. ಈಗ 5 ಜನ 3 ಎತ್ತಿ ಹಿಡಿದಿದ್ದಾರೆ ಸಿಜೆ ಹಾಗೂ ಮತ್ತೂಬ್ಬರು ಜಡ್ಜ್ ಭಿನ್ನ ತೀರ್ಪು ನೀಡಿದ್ದಾರೆ. ಈಗ ಏನೇ ಆದರೂ ಬಹಮತದ ಆಧಾರದಲ್ಲಿ ಮೀಸಲಾತಿ ಅನುಷ್ಠಾನಕ್ಕೆ ಬರುತ್ತದೆ. ಆದರೆ ನಮ್ಮ ಮುಂದಿರುವ ಪ್ರಶ್ನೆಗಳು ಸಂವಿಧಾನದ ಆಶಯ ಏನಿದೆ ಅದಕ್ಕೆ ವಿರುದ್ಧ ಅಲ್ವಾ ಅನ್ನೋದು ಒಬ್ಬ ವಕೀಲನಾಗಿ ನನ್ನ ಪ್ರಶ್ನೆ. ಯಾಕೆಂದರೆ ಸಂವಿಧಾನದಲ್ಲಿ ಬಹಳ ಸ್ಪಷ್ಟವಾಗಿ ಇರುವುದು ಮೀಸಲಾತಿ ಶೈಕ್ಷಣಿಕ ಮತ್ತು ಔದ್ಯೋಗಿಕ ಹಿಂದುಳಿವಿಕೆಗೆಂದು. ಎಲ್ಲೂ ಕೂಡ ಆರ್ಥಿಕ ವಿಷಯ ಬರುವುದೇ ಇಲ್ಲ. ಹಾಗಾಗಿ ಆರ್ಥಿಕ ಹಿಂದುಳಿವಿಕೆಯನ್ನು ಯಾವ ರೀತಿ ಪರಿಭಾಷಿಸಿದ್ದಾರೆ ಅನ್ನುವುದು ಪೂರ್ತಿ ಜಡ್ಜ್ಮೆಂಟ್‌ ಓದಿದ ಮೇಲೆ ನನಗೆ ಗೊತ್ತಾಗುತ್ತದೆ. ಈಗ ಮೇಲ್ನೋಟಕ್ಕೆ ತಿಳಿದಿರುವ ಆಧಾರದಲ್ಲಿ ನಾನು ಮಾತನಾಡುತ್ತಿದ್ದೇನೆ.

ಎರಡನೆಯದಾಗಿ ಶೇ.50 ಮೀಸಲಾತಿ ಮಿತಿ ದಾಟುವುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಅನ್ನುವುದು ನನಗೆ ಗೊತ್ತಾಗುತ್ತಿಲ್ಲ. ಏಕೆಂದರೆ ಅದೂ ಕೂಡ ಸಾಂವಿಧಾನಿಕ ತೀರ್ಪು. ಈ ತೀರ್ಪನ್ನು ಹೇಗೆ ಇವರು ಮೀರುತ್ತಾರೆ ಅಲ್ಲಗಳೆಯುತ್ತಾರೆ ಎಂಬುದು ನನಗೆ ಈವರೆಗೆ ಅರ್ಥ ಆಗುತ್ತಿಲ್ಲ. ಇದನ್ನೆಲ್ಲ ನೋಡಿದಾಗ ಈ ತರಹದ ತೀರ್ಪುಗಳು ಸಂವಿಧಾನದ ಆಶಯಕ್ಕೆ ವಿರುದ್ಧವಾದದ್ದು ಎಂದು ನನಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಮೇಲಿನ ನ್ಯಾಯಾಂಗದಲ್ಲಿ ದುರ್ಬಲ ವರ್ಗಗಳಿಗೆ ಮೀಸಲಾತಿ ದೊರಕದ ಹೊರತು ನ್ಯಾಯ ಸಿಗುವುದಿಲ್ಲ ಎಂಬುದು ನನ್ನ ಅಭಿಪ್ರಾಯ.

ಬೇರೆಯವರಿಗೆ ತೊಂದರೆಯಾಗುವುದಿಲ್ಲ
ಅಶೋಕ ಹಾರನಹಳ್ಳಿ, ಮಾಜಿ ಅಡ್ವೋಕೇಟ್‌ ಜನರಲ್‌.
ಮೀಸಲಾತಿ ಕಲ್ಪಿಸುವ ಸಂವಿಧಾನದ ಅವಕಾಶಗಳಲ್ಲಿ, ಯಾರಿಗೆ ಮೀಸಲಾತಿ ಸಿಗುವುದಿಲ್ಲವೂ ಅಂತಹವರಿಗೆ ಮುಂಚೆಯಿಂದಲೂ ಸಂವಿಧಾನದಲ್ಲಿ ಯಾವುದೇ ಅನುಕೂಲಗಳು ಇಲ್ಲ. ಆದ್ದರಿಂದ ಈ ಮೇಲ್ವರ್ಗ ಅಂತ ಕರೆಯ ಲಾಗುವ ವರ್ಗಗಳಲ್ಲಿ ಆರ್ಥಿಕವಾಗಿ ದುರ್ಬಲ ರಾಗಿದ್ದವರಿಗೆ ಯಾವುದೇ ಅನುಕೂಲತೆಗಳು ಇಲ್ಲ. ಹಾಗಾಗಿ ಈ ಉದ್ದೇಶದಿಂದ ಆರ್ಥಿಕವಾಗಿ ಹಿಂದು ಳಿದ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿಯನ್ನು ಕಲ್ಪಿಸಿ ಸಂವಿಧಾನದಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಶೇ.10ರಷ್ಟು ಮೀಸಲಾತಿ ಕಲ್ಪಿಸುವುದರಿಂದ ಯಾರಿಗೂ ಏನೂ ತೊಂದರೆ ಆಗುವುದಿಲ್ಲ. ಯಾಕೆಂದರೆ ಮೀಸಲಾತಿ ಇದ್ದವರಿಗೆ ಕಿತ್ತುಕೊಂಡು ಕೊಡುತ್ತಿಲ್ಲ. ಈ ಮೀಸಲಾತಿ ಜಾರಿಗೆ ಬಂದರೆ ಮೇಲ್ವರ್ಗದ ಶ್ರೀಮಂತರಿಗೆ ತೊಂದರೆ ಆಗಬಹುದೇ ಹೊರತು, ಇನ್ನಾéರಿಗೂ ತೊಂದರೆ ಆಗುವುದಿಲ್ಲ. ಈಗಾಗಲೇ ಮೀಸಲಾತಿ ಪಡೆದುಕೊಳ್ಳುತ್ತಿರುವವರು ಜನರಲ್‌ ಕೆಟಗರಿಯಲ್ಲೂ ಸೌಲಭ್ಯ ಪಡೆದುಕೊಳ್ಳಬಹುದು. ಮೀಸಲಾತಿ ಕೆಟಗರಿ ಇದ್ದೇ ಇರುತ್ತದೆ. ಆದರೆ ಯಾರಿಗೆ ಮೀಸಲಾತಿ ಇಲ್ಲವೂ ಆ ವರ್ಗಗಳ ಆರ್ಥಿಕ ದುರ್ಬಲ ವರ್ಗಗಳಿಗೆ ಯಾವುದೇ ಅನುಕೂಲ ಅಥವಾ ಮೀಸಲಾತಿ ಇಲ್ಲ ಎಂಬುದನ್ನು ಪರಿಗಣಿಸಬೇಕಾಗುತ್ತದೆ.

ಭಿನ್ನ ತೀರ್ಪು ನೀಡಿದ ನ್ಯಾಯಮೂರ್ತಿಗಳು ಇದರಿಂದ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ಬರುತ್ತದೆ ಎಂದು ಹೇಳಿದ್ದಾರೆ. ನನ್ನ ಪ್ರಕಾರ ಅದು ಸರಿಯಲ್ಲ. ಮೀಸಲಾತಿ ತೆಗೆದುಬಿಡಬೇಕು ಎಂಬ ಮಾತೂ ಬಂದಿದೆ. ಆದರೆ ಈಗಿನ ವ್ಯವಸ್ಥೆಯಲ್ಲಿ ಮೀಸಲಾತಿ ತೆಗೆದುಹಾಕುವುದು ಸಾಧ್ಯವಿಲ್ಲ. ನಮ್ಮ ಮುಂದಿರುವ ಪ್ರಶ್ನೆ ಏನೆಂದರೆ ಅವಕಾಶ ವಂಚಿತ ಬಡವರಿಗೆ ಏನು ಅನುಕೂಲ ಮಾಡಿಕೊಡಬೇಕು ಎಂಬುದು. ಆ ದೃಷ್ಟಿಯಲ್ಲಿ ಶೇ.10ರ ಮೀಸಲಾತಿ ಎತ್ತಿ ಹಿಡಿದಿರುವುದು ಸೂಕ್ತವಾಗಿದೆ. ಈ ತೀರ್ಪಿನಿಂದ ಸಮಾಜದಲ್ಲಿ ಅಸಮಾನತೆ ಬರುತ್ತದೆ ಎಂದು ನಾನು ಭಾವಿಸುವುದಿಲ್ಲ.

ಮೀಸಲಾತಿ ಶೇ.50ರಷ್ಟು ದಾಟ ಬಾರದು ಎಂಬ ಸೂತ್ರ ಇಲ್ಲ ಅನ್ವಯವಾಗಲ್ಲ. ಏಕೆಂದರೆ ಶೇ.50ರಷ್ಟು ಮೀಸಲಾತಿಯ ಮಿತಿ ಇರುವುದು ಈಗಾಗಲೇ ಇರುವ ಮೀಸಲಾತಿಗೆ. ಶೇ.10ರ ಮೀಸಲಾತಿ ವ್ಯವಸ್ಥೆ ಮೀಸಲಾತಿ ಇಲ್ಲದ ವರ್ಗಗಳಿಗೆ ಕೆಲವು ಅನುಕೂಲತೆಗಳು (ಇನ್ಸನ್‌ಟೀವ್ಸ್‌) ಕೊಟ್ಟಂತೆ. ಹೇಗೆಂದರೆ ಮಹಿಳಾ ಮೀಸಲಾತಿ ಇದೆ. ಅದನ್ನು ಇದರ ಜತೆಗೆ ಹೋಲಿಕೆ ಮಾಡಲು ಆಗುವುದಿಲ್ಲ. ಅದಕ್ಕೆ ಸುಪ್ರೀಂ ಕೋರ್ಟ್‌ ಹಾರಿಜಂಟಲ್‌ ಮತ್ತು ವರ್ಟಿಕಲ್‌ ಮೀಸಲಾತಿ ಅಂತ ಅನೇಕ ತೀರ್ಪುಗಳಲ್ಲಿ ಹೇಳಿದೆ. ಆ ದೃಷ್ಟಿಯಲ್ಲಿ ಈ ಮೀಸಲಾತಿಯನ್ನು ಮೀಸಲಾತಿಯಾಗಿ ನೋಡದೇ ಅದನ್ನು ಒಂದು ಸೌಲಭ್ಯ ಅಂತ ನೋಡಬೇಕು. ಮೀಸಲಾತಿ ಪ್ರಮಾಣ ಹೆಚ್ಚಳದ ಬಗ್ಗೆ ತೀರ್ಪಿನಲ್ಲಿ ಏನು ಹೇಳಿದೆ ಅನ್ನುವ ಬಗ್ಗೆ ತೀರ್ಪು ಪೂರ್ಣವಾಗಿ ನೋಡಿದ ಮೇಲೆ ಹೇಳಬಹುದು.

ಏನಿದು 103ನೇ ವಿಧಿ ತಿದ್ದುಪಡಿ?
ಸರಳವಾಗಿ ಹೇಳುವುದಾದರೆ ಕೇಂದ್ರ ಸರಕಾರವು ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸುವ ಸಂಬಂಧ ಸಂವಿಧಾನದ 103ನೇ ವಿಧಿಗೆ ತಿದ್ದುಪಡಿ ತಂದಿತು. ಹಾಗೆಯೇ ಭಾರತೀಯ ಸಂವಿಧಾನದ ಅನುಚ್ಛೇದ 15 (ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುವುದು) ಮತ್ತು 16 (ಸಾರ್ವಜನಿಕ ಉದ್ಯೋಗದ ವಿಷಯಗಳಲ್ಲಿ ಅವಕಾಶದ ಸಮಾನತೆ) ಎರಡಕ್ಕೂ ಒಂದು ಹೆಚ್ಚುವರಿ ಕ್ಲಾಸ್‌ ಅನ್ನು ಸೇರಿಸಲಾಯಿತು.

ಇದರಲ್ಲಿ,
-ಕೇಂದ್ರ ಸರಕಾರವು ಆರ್ಥಿಕವಾಗಿ ಹಿಂದುಳಿದವರ ಉದ್ಧಾರಕ್ಕಾಗಿ ವಿಶೇಷ ಅವಕಾಶ ನೀಡುವುದು. ಇದರಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ನೀಡುವುದು ಸಹ ಸೇರಿದೆ.

-ಖಾಸಗಿ ಅಥವಾ ಅನುದಾನಿತ ಅಥವಾ ಅನು ದಾನ ರಹಿತ ಶಿಕ್ಷಣ ಸಂಸ್ಥೆಗಳಿಗೂ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸುವುದು.

-ಪರಿಚ್ಛೇದ 30(1)ರ ಅಡಿಯಲ್ಲಿ ಇರುವ ಅಲ್ಪಸಂಖ್ಯಾಕ‌ ಶಿಕ್ಷಣ ಸಂಸ್ಥೆಗಳಿಗೆ ಈ ಮೀಸಲಾತಿ ಅನ್ವಯವಾಗುವುದಿಲ್ಲ.

-ಈ ಮೀಸಲಾತಿಯ ಗರಿಷ್ಠ ಮಿತಿ ಶೇ.10. ಇತರೆ ಮೀಸಲಾತಿ ಜತೆಗೆ ಇದನ್ನು ನೀಡಬಹುದು.

ಅರ್ಜಿದಾರರ ವಾದವೇನಾಗಿತ್ತು?

ವಾದ 1
ಸಂವಿಧಾನ ಪೀಠದ ಮುಂದೆ ವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲರು, ಆರ್ಥಿಕವಾಗಿ ಹಿಂದುಳಿದವರಿಗೆ ನೀಡುವ ಮೀಸಲಾತಿಯಿಂದಾಗಿ ಅವರನ್ನು ಆರ್ಥಿಕವಾಗಿ ಸದೃಢ ಮಾಡಲು ಸಾಧ್ಯವಿಲ್ಲ ಎಂದೇ ವಾದಿಸಿದ್ದರು. ಅಂದರೆ ಶೇ.10ರ ಆರ್ಥಿಕವಾಗಿ ಹಿಂದುಳಿದವರಿಗೆ ನೀಡುವ ಕೋಟಾವು, ಈಗಿರುವ ಮೀಸಲಾತಿಯ ತಳಹದಿಯಲ್ಲಿ ಮಧ್ಯಪ್ರವೇಶ ಮಾಡುತ್ತದೆ ಎಂದಿದ್ದರು. ವಕೀಲರೊಬ್ಬರು ಸಂವಿಧಾನದ ಪರಿಚ್ಛೇದ 15 ಮತ್ತು 16ಗಳು ಯಾವುದೇ ರೀತಿಯ ಆರ್ಥಿಕ ಸಹಾಯ ಒದಗಿಸುವುದಿಲ್ಲ.

ವಾದ 2
ಮೀಸಲಾತಿಯನ್ನು ತಾರತಮ್ಯ ವಿರೋಧಿ ಆಧಾರದ ಮೇಲೆ ನೀಡಲಾಗುತ್ತದೆಯೇ ಹೊರತು ಅಭಾವ ಎದುರಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ನೀಡುವುದಲ್ಲ.

ವಾದ 3
ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತಲು ಬೇರೆಯೇ ಮಾರ್ಗಗಳಿವೆ. ಅಂದರೆ ಬಡವರಿಗೆ ಸಮಸ್ಯೆಗಳಿಗೆ ಎಂದರೆ ಆತನ ಸಮಸ್ಯೆ ಹೊಗಲಾಡಿಸಲು ಆತನಿಗೆ ಆರ್ಥಿಕ ನೆರವು ಅಥವಾ ಸ್ಕಾಲರ್‌ಶಿಪ್‌ ಕೊಡಿ. ಆದರೆ ಮೀಸಲಾತಿ ನೀಡುವ ಮೂಲಕ ಆರ್ಥಿಕವಾಗಿ ಹಿಂದುಳಿದವರ ಸಮಸ್ಯೆಗಳನ್ನು ಹೊಗಲಾಡಿಸಲು ಸಾಧ್ಯವಿಲ್ಲ.

ವಾದ 4
ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲು ಹೊರಟಿರುವುದು ಸಂವಿಧಾನ ವಿರೋಧಿ ಕ್ರಮ. ಈ ಆರ್ಥಿಕವಾಗಿ ಹಿಂದುಳಿದವರಿಗೆ ನೀಡುವ ಮೀಸಲಾತಿ ಪರಿಧಿಯಿಂದ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರನ್ನು ಹೊರಗಿಡಲಾಗಿದೆ. ಇದನ್ನು ಮುಂದುವರಿದವರಲ್ಲಿನ ಹಿಂದುಳಿದವರಿಗೆ ನೀಡಲು ತರಲಾಗಿದೆ. ಇದರಿಂದಾಗಿ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳ ಉಲ್ಲಂಘನೆಯಾಗಿದೆ. ಅಷ್ಟೇ ಅಲ್ಲ, ಸಂವಿಧಾನದ ಮೂಲ ಆಶಯಕ್ಕೇ ಧಕ್ಕೆ ತರುವಂಥದ್ದಾಗಿದೆ.

ವಾದ 5
ಆರ್ಥಿಕವಾಗಿ ಹಿಂದುಳಿದವರಿಗೆ ನೀಡುವ ಮೀಸಲಾತಿಯಲ್ಲಿ ಹಲವಾರು ಲೋಪಗಳಿವೆ. ಪ್ರಮುಖವಾದ ಸಮಸ್ಯೆ ಎಂದರೆ, ಇದಕ್ಕೆ ಯಾವುದೇ ರೀತಿಯ ಗಾರ್ಡ್‌ರೇಲ್‌ಗ‌ಳಿಲ್ಲ. ಆದರೆ, ಸಂವಿಧಾನದಲ್ಲಿ ನೀಡಲಾಗಿರುವ ಇತರೆ ಮೀಸಲಾತಿಯಲ್ಲಿ ಈ ರೀತಿಯ ಗಾರ್ಡ್‌ರೇಲ್‌ಗ‌ಳಿವೆ.

ಅಂದರೆ
-ಮೀಸಲಾತಿ ಪಡೆಯುವವರು ಎಲ್ಲ ಕ್ಷೇತ್ರಗಳಲ್ಲೂ ಸೀಮಿತ ಪ್ರಾತಿನಿಧ್ಯವನ್ನು ಹೊಂದಿದ್ದರೆ ಅಂಥವರಿಗೆ ಮೀಸಲಾತಿ ನೀಡಿ ಅವರಿಗೆ ಆಗುತ್ತಿದ್ದ ಐತಿಹಾಸಿಕ ಅನ್ಯಾಯವನ್ನು ನಿವಾರಿಸಬಹುದು.

-ಅನ್ಯಾಯ ಎದುರಿಸುತ್ತಿದ್ದವರಿಗೂ ಮೀಸಲಾತಿ ನೀಡುವಾಗ ಶೇ.50ರ ಮಿತಿಯನ್ನು ಹಾಕಿಕೊಂಡೇ ಕೊಡಲಾಗಿತ್ತು. ಇದನ್ನು ಬಾಲಾಜಿ ವರ್ಸಸ್‌ ಮೈಸೂರ್‌ ಕೇಸ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.

-ಮೀಸಲಾತಿ ಮೂಲಕ ಆಡಳಿತದಲ್ಲಿ ಸಮರ್ಥತೆ ಮತ್ತು ಸಾಮಾಜಿಕ ನ್ಯಾಯ ಒದಗಿಸುವುದು.

ವಾದ 6
ಬಹುಮುಖ್ಯವಾದ ಪ್ರಶ್ನೆ ಎಂದರೆ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕಿಂತ ಹೆಚ್ಚು ಮಾಡಬಹುದೇ? ಆದರೆ ಈ ಮೀಸಲಾತಿ ನೀಡುವಾಗ ಇದನ್ನು ಸ್ಪಷ್ಟವಾಗಿ ಉಲ್ಲಂ ಸಲಾಗಿದೆ. ಕಾಯ್ದೆಯಲ್ಲಿ ಇರುವ ಮೀಸಲಾತಿ ಜತೆಯಲ್ಲಿ ಶೇ.10ರಷ್ಟು ಹೆಚ್ಚುವರಿ ಮೀಸಲಾತಿ ನೀಡಬಹುದು. ಇದು ಶೇ.50ರ ಮಿತಿಯ ಕಾನೂನನ್ನು ಮೀರುತ್ತದೆ. ಒಂದು ವೇಳೆ ಈಗಿರುವ ಶೇ.50ರ ಮಿತಿಯೊಳಗೇ ಇಡಬ್ಲೂéಎಸ್‌ ಮೀಸಲಾತಿ ನೀಡುವುದಾದರೆ ಒಪ್ಪಬಹುದು.

ಕೇಂದ್ರ ಸರಕಾರದ ವಾದವೇನಾಗಿತ್ತು?
ಕೇಂದ್ರ ಸರಕಾರದ ಪರವಾಗಿ ಆಗಿನ ಅಡೊºàಕೇಟ್‌ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅವರು ವಾದ ಮಂಡಿ ಸಿದ್ದರು. ಇವರು ಶೇ.10ರ ಮೀಸಲಾತಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು. ಕೇಂದ್ರದ ವಾದ ಹೀಗಿತ್ತು…

-ಸದ್ಯ ಮೀಸಲಾತಿಯಲ್ಲಿ ಪ್ರಮುಖವಾಗಿ ಮೂರು ಹಿಂದುಳಿದ ವರ್ಗಗಳಿಗೆ ಶೇ.50ರಷ್ಟನ್ನು ಹಂಚಿಕೆ ಮಾಡಲಾಗಿದೆ. ಇದಾದ ಬಳಿಕ ಮೀಸಲಾತಿ ರಹಿತ ಮತ್ತು ಸ್ವತಂತ್ರ ಕೆಟಗೆರಿಯನ್ನು ಮಾಡಿ ಇವರಿಗೆ ಶೇ.10ರಷ್ಟು ಮೀಸಲಾತಿ ನೀಡಲಾಗುತ್ತದೆ.

-ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಶೇ.50ರ ಮಿತಿಯನ್ನು ದಾಟಬಹುದು. ಹೀಗಾಗಿ ಇದು ಮಿತಿ ದಾಟಿದಂತೆ ಆಗುವುದಿಲ್ಲ. ಹಾಗೆಯೇ ಮೀಸಲಾ ತಿಯ ಮೂಲ ಆಶಯಕ್ಕೂ ಧಕ್ಕೆ ತರುವುದಿಲ್ಲ.

-ಸಂವಿಧಾನದ ಮೂಲಭೂತ ರಚನೆಯ ಉಲ್ಲಂಘನೆಯ ಆಧಾರದ ಮೇಲೆ ಮಾತ್ರ ಸಾಂವಿಧಾನಿಕ ತಿದ್ದುಪಡಿಗಳನ್ನು  ಪ್ರಶ್ನಿಸಬಹುದು. ಮೂಲಭೂತ ರಚನೆಯನ್ನು ರೂಪಿಸುವ ಸಲುವಾಗಿ, ಮೂಲ ಮಾರ್ಗದರ್ಶಿಯು ಪೀಠಿಕೆಯಾಗಿದೆ.

ಟೈಮ್‌ಲೈನ್‌
2019ರ ಜ.10: ಸಂವಿಧಾನದ 103ನೇ ವಿಧಿಯ ತಿದ್ದುಪಡಿ ಕಾಯ್ದೆ 2019ಕ್ಕೆ ಪಾರ್ಲಿಮೆಂಟ್‌ನಿಂದ ಒಪ್ಪಿಗೆ
2019ರ ಜನವರಿ: ಕೇಂದ್ರ ಸರಕಾರದ ಈ ತಿದ್ದುಪಡಿಗೆ ಸಾಂವಿಧಾನಿಕ ಮಾನ್ಯತೆ ಇದೆಯೇ ಎಂದು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ 50ಕ್ಕೂ ಅಧಿಕ ಅರ್ಜಿಗಳ ಸಲ್ಲಿಕೆ
2020ರ ಆ.5: ಆಗಿನ ಸಿಜೆಐ ಎಸ್‌.ಎ.ಬೊಬೆ, ನ್ಯಾಯಮೂರ್ತಿಗಳಾದ ಆರ್‌. ಸುಭಾಷ್‌ ರೆಡ್ಡಿ, ಬಿ.ಆರ್‌.ಗವಳಿ ಅವರಿಂದ ಸಂವಿಧಾನ ಪೀಠಕ್ಕೆ ಅರ್ಜಿಗಳ ವರ್ಗಾವಣೆ.
2022ರ ಸೆ.13: ಸಿಜೆಐ ಯುಯು ಲಲಿತ್‌, ನ್ಯಾಯಮೂರ್ತಿಗಳಾದ ದಿನೇಶ್‌ ಮಹೇಶ್ವರಿ, ರವೀಂದ್ರ ಭಟ್‌, ಬೇಲಾ ಎಂ.ತ್ರಿವೇದಿ ಮತ್ತು ಜೆ.ಬಿ.ಪರ್ದಿವಾಲ ಅವರುಳ್ಳ ಪಂಚ ಸದಸ್ಯರ ಸಂವಿಧಾನ ಪೀಠದಿಂದ ಅರ್ಜಿ ವಿಚಾರಣೆ ಆರಂಭ.
2022ರ ಸೆ.27: ಏಳು ದಿನಗಳ ಸತತ ವಿಚಾರಣೆ ಅನಂತರ ತೀರ್ಪು ಕಾಯ್ದಿರಿಸಿದ ಸಂವಿಧಾನ ಪೀಠ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.