ಶೇ.10 ಮೀಸಲಾತಿ ಸಮಾನತೆಗೆ ಇಡುವ ಮತ್ತೊಂದು ಹೆಜ್ಜೆ
Team Udayavani, Nov 8, 2022, 6:00 AM IST
ಈವರೆಗೂ ಮೀಸಲಾತಿ ಸೌಲಭ್ಯವೇ ಸಿಗದ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇ. 10ರಷ್ಟು ಮೀಸಲಾತಿ ನೀಡುವ ಕೇಂದ್ರ ಸರಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಸಮ್ಮತಿ ನೀಡಿದೆ.
ಈ ಸಂಬಂಧ 2019ರಲ್ಲಿ ಸಂವಿಧಾನಕ್ಕೆ ಮಾಡಲಾಗಿದ್ದ 103ನೇ ವಿಧಿಯ ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿತ್ತು. ಈ ನಿಟ್ಟಿನಲ್ಲಿ ಸತತ ಏಳು ದಿನಗಳ ಕಾಲ ವಿಚಾರಣೆ ನಡೆದು ಸುಪ್ರೀಂಕೋರ್ಟಿನ ನ್ಯಾಯಪೀಠ ಸೋಮವಾರ ತೀರ್ಪು ಪ್ರಕಟಿಸಿದೆ. ಇದರೊಂದಿಗೆ ಈವರೆಗೆ ಮೀಸಲಾತಿಯನ್ನೇ ಕಾಣದೆ ಸಾಮಾಜಿಕ ನ್ಯಾಯ ದಿಂದ ವಂಚಿತರಾಗಿದ್ದ ವರ್ಗಗಳಿಗೆ ನ್ಯಾಯ ಸಿಕ್ಕಂತಾಗಿದೆ.
ಈವರೆಗೆ ಮೀಸಲಾತಿ ಎನ್ನುವುದು ಜಾತಿ, ವರ್ಗಗಳ ಆಧಾರದಲ್ಲಿತ್ತು. 2019ರಲ್ಲಿ ಪ್ರಧಾನಿ ಮೋದಿ ಸರಕಾರ ಮೇಲ್ವರ್ಗ ಎಂದು ಕರೆಯಿಸಿ ಕೊಳ್ಳುವ ಸಮುದಾಯದಲ್ಲೂ ಅವಕಾಶ ವಂಚಿತರಿದ್ದಾರೆ ಎಂಬುದನ್ನು ಮನಗಂಡು ಆರ್ಥಿಕತೆಯ ಮಾನದಂಡದಲ್ಲಿ ಮೀಸಲಾತಿ ನೀಡುವ ನಿರ್ಧಾರಕ್ಕೆ ಬಂದಿತ್ತು. ಅಂದರೆ ಈವರೆಗೆ ಸಾಮಾನ್ಯ ವರ್ಗದಲ್ಲಿದ್ದ ಜನರ ಆರ್ಥಿಕತೆಯನ್ನು ಪರಿಗಣಿಸಿ ಅವರಿಗೂ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ. 10ರಷ್ಟು ಮೀಸಲಾತಿ ನೀಡಲು ಸಂವಿಧಾನಕ್ಕೆ ತಿದ್ದುಪಡಿ ತರಲಾಗಿತ್ತು. ಹೀಗೆ ಮಾಡುವುದರಿಂದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಅವಕಾಶ ಕಡಿತವಾಗುತ್ತದೆ ಎಂಬ ವಾದವೂ ಕೇಳಿಬಂದಿತ್ತು. ಆದರೆ ಆ ವಾದಗಳನ್ನು ಐದು ಜನರ ನ್ಯಾಯಪೀಠದಲ್ಲಿದ್ದ ಮೂವರು ನ್ಯಾಯಮೂರ್ತಿಗಳು ತಿರಸ್ಕರಿಸಿದ್ದು, ಇದರಿಂದ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ.
ಈ ಮೀಸಲಾತಿ ಖಾಸಗಿ ಶಿಕ್ಷಣ ಸಂಸ್ಥೆಯ ಪ್ರವೇಶಕ್ಕೂ ಅನ್ವಯವಾಗು ವಂತೆ ತಿದ್ದುಪಡಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ವಾರ್ಷಿಕ ಎಂಟು ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಜನರಲ್ ಕೆಟಗರಿಯ ಜನ ಈ ಮೀಸಲಾತಿಯನ್ನು ಪಡೆದುಕೊಳ್ಳಲು ಅವಕಾಶ ಇದೆ.
ಈ ಮಹತ್ವದ ತೀರ್ಪಿನೊಂದಿಗೆ ಒಟ್ಟು ಮೀಸಲಾತಿಯಲ್ಲಿ ಶೇ. 50 ಮಿತಿಯನ್ನು ಮೀರುವ ಅವಕಾಶ ಲಭ್ಯವಾಗಿರುವುದು ಹಲವು ರೀತಿಯ ಚರ್ಚೆಗಳಿಗೆ ಕಾರಣವಾಗಿದೆ. ಮೀಸಲಾತಿ ವಿಚಾರದಲ್ಲಿ ಶೇ. 50ರ ಮಿತಿ ಯನ್ನು ದಾಟಕೂಡದೆಂಬ ಅಭಿಪ್ರಾಯಕ್ಕೆ ತದ್ವಿರುದ್ಧವಾಗಿರುವ ಈ ತೀರ್ಪು ಮುಂದಿನ ದಿನಗಳಲ್ಲಿ ಮತ್ತಷ್ಟು ಮೀಸಲಾತಿ ಕೂಗಿಗೆ ಕಾರಣವಾ ಗಬಹುದು ಎಂಬ ಆತಂಕವೂ ಒಂದೆಡೆಯಾಗಿದೆ. ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಶೇ. 50ರ ಮಿತಿಯನ್ನು ದಾಟಲು ಅವಕಾಶ ಇದೆ ಎನ್ನುವ ಕೇಂದ್ರ ಸರಕಾರದ ವಾದವೂ ಇಲ್ಲಿ ಉಲ್ಲೇಖಾರ್ಹ.
ಆರ್ಥಿಕವಾಗಿ ಹಿಂದು ಳಿದ ವರ್ಗಕ್ಕೆ ಶೇ. 10ರಷ್ಟು ಮೀಸಲಾತಿ ನೀಡುವ ಕ್ರಮದಿಂದ ಈಗಾಗಲೇ ಮೀಸಲಾತಿ ವ್ಯಾಪ್ತಿಗೆ ಒಳಪಟ್ಟಿರುವ ವರ್ಗಕ್ಕೆ ಅನ್ಯಾಯವಾಗಲಿದೆ ಎಂಬ ವಾದವನ್ನು ಕೇಂದ್ರ ಸರಕಾರ ತಳ್ಳಿಹಾಕಿದೆ. ಅರ್ಹರಿಗೆ ಮೀಸಲಾತಿ ಸೌಲಭ್ಯ ವನ್ನು ನಿರಾಕರಿಸದೆ ಮತ್ತಷ್ಟು ಅರ್ಹರಿಗೆ ಸೌಲಭ್ಯವನ್ನು ವಿಸ್ತರಿಸುವ ಸದಾಶಯವನ್ನು ಈ ತಿದ್ದುಪಡಿ ಹೊಂದಿದ್ದು, ಪ್ರಸಕ್ತ ಸನ್ನಿವೇಶದಲ್ಲಿ ಇಂಥ ಕ್ರಮಗಳು ಅಗತ್ಯ ಮತ್ತು ಅನಿವಾರ್ಯ. ಜಾತಿ ಮತ್ತು ವರ್ಗದಿಂದಷ್ಟೇ ಅಸಮಾನತೆ ಸೃಷ್ಟಿಯಾಗುವುದಿಲ್ಲ. ಆರ್ಥಿಕತೆ ಕೂಡ ಅಸಮಾನತೆಗೆ ಕಾರಣವಾಗುವ ಅಂಶವೆನ್ನುವುದನ್ನು ಮರೆಯಲಾಗದು. ಈವರೆಗೆ ಈ ಮೀಸಲಾತಿ ಅನುಷ್ಠಾನಕ್ಕೆ ಇದ್ದ ಅಡೆತಡೆಗಳು ನಿವಾರಣೆಯಾಗಿರುವು ದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೆಚ್ಚು ವಿಳಂಬ ಧೋರಣೆ ತೋರದೆ ಇದನ್ನು ಜಾರಿಗೊಳಿಸಬೇಕು. ಇದರಿಂದ ಆರ್ಥಿಕ ಅಸಮಾನತೆ ಯಿಂದ ನಲುಗಿದ ಬಡವರ್ಗದ ಅರ್ಹರಿಗೆ ಅನುಕೂಲವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.