![Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ](https://www.udayavani.com/wp-content/uploads/2024/12/noida-2-415x255.jpg)
116 ಯೋಜನೆಗಳಿಗೆ ಇತಿಶ್ರೀ? 1.26 ಲಕ್ಷ ಕೋ.ರೂ. ಮೌಲ್ಯದ ಯೋಜನೆ ಬಾಕಿ
Team Udayavani, Nov 8, 2022, 7:33 AM IST
![116 ಯೋಜನೆಗಳಿಗೆ ಇತಿಶ್ರೀ? 1.26 ಲಕ್ಷ ಕೋ.ರೂ. ಮೌಲ್ಯದ ಯೋಜನೆ ಬಾಕಿ](https://www.udayavani.com/wp-content/uploads/2022/11/ROAD-620x360.jpg)
ಹೊಸದಿಲ್ಲಿ: ದಶಕಗಳಿಂದ ನನೆಗುದಿಗೆ ಬಿದ್ದಿರುವ ಕರ್ನಾಟಕದ ಮೂರು ಯೋಜನೆಗಳ ಸಹಿತ ಒಟ್ಟು 116 ಯೋಜನೆಗಳನ್ನು ಶಾಶ್ವತವಾಗಿ ಕೈಬಿಡಲು ಕೇಂದ್ರ ಸರಕಾರ ಚಿಂತಿಸಿದೆ.
ಒಟ್ಟು 1.26 ಲಕ್ಷ ಕೋಟಿ ರೂ. ಮೌಲ್ಯದ ಈ ಯೋಜನೆಗಳು ಕಾರ್ಯಗತವಾಗುವ ಲಕ್ಷಣಗಳು ಕಾಣುತ್ತಿಲ್ಲ. ಕೆಲವು ಯೋಜನೆಗಳಿಗೆ ರಾಜ್ಯ ಸರಕಾರಗಳು ಸರಿಯಾಗಿ ಸ್ಪಂದಿಸಿಲ್ಲ, ಇನ್ನು ಕೆಲವು ಕಡೆ ಭೂಸ್ವಾಧೀನವೇ ದೊಡ್ಡ ಸಮಸ್ಯೆಯಾಗಿದೆ.
ಈಗಾಗಲೇ 20,311 ಕೋಟಿ ರೂ. ಖರ್ಚಾಗಿದೆ. ವಿಳಂಬವಾಗಿರುವುದರಿಂದ ವೆಚ್ಚ ಶೇ. 49ರಷ್ಟು ಏರಿದೆ. ಇಂತಹ ಯೋಜನೆಗಳಿಗಾಗಿ ಅನಗತ್ಯವಾಗಿ ಹಣ ಮೀಸಲಿಡುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆನ್ನುವುದು ಎಂಬುದು ಸರಕಾರದ ಆತಂಕ.
ರೈಲ್ವೇಗೆ ಸೇರಿದ 72 ಯೋಜನೆಗಳು ಸರಕಾರಕ್ಕೆ ಬಿಸಿತುಪ್ಪವಾಗಿವೆ. ಈ ಪೈಕಿ 15 ಯೋಜನೆಗಳಿಗೆ ಇನ್ನೂ ಅನುಮತಿಯೇ ಸಿಕ್ಕಿಲ್ಲ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗೆ ಸೇರಿದ 33 ಯೋಜನೆಗಳು ಅಮಾನ ತಾಗುವ ಸಾಧ್ಯತೆಯಿದೆ. ಸದ್ಯ ರೈಲ್ವೇ ಯೋಜನೆಗಳನ್ನು ಪೂರೈಸಲು 88,373 ಕೋಟಿ ರೂ. ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಯೋಜನೆಗಳಿಗೆ 26,291 ಕೋಟಿ ರೂ.ಗಳ ಅಗತ್ಯವಿದೆ.
ಇದೇ ರೀತಿ ನನೆಗುದಿಗೆ ಬಿದ್ದಿರುವ 6 ಕಲ್ಲಿದ್ದಲು ಯೋಜನೆಗಳಿಗೆ 5,764 ಕೋಟಿ ರೂ., ಪೆಟ್ರೋಲಿಯಂಗೆ ಸಂಬಂಧಿಸಿದ ಎರಡು ಯೋಜನೆಗಳಿಗೆ 2,183 ಕೋಟಿ ರೂ., ಇಂಧನಕ್ಕೆ ಸಂಬಂಧಿಸಿದ ಎರಡು ಯೋಜನೆಗಳಿಗೆ 3,112 ಕೋಟಿ ರೂ., ಹಾಗೂ ಒಂದು ನೀರಾವರಿ ಯೋಜನೆಗೆ 345 ಕೋಟಿ ರೂ.ಗಳ ಅಗತ್ಯವಿದೆ.
ರಾಜ್ಯವಾರು ನನೆಗುದಿಗೆ ಬಿದ್ದಿರುವ ಯೋಜನೆಗಳು
-ಬಹು ರಾಜ್ಯಗಳನ್ನು ಒಳಗೊಂಡ ಯೋಜನೆಗಳು 24
-ತಮಿಳುನಾಡು 14
-ಬಿಹಾರ 13
-ಮಹಾರಾಷ್ಟ್ರ , ಪಶ್ಚಿಮ ಬಂಗಾಲ 07
-ತೆಲಂಗಾಣ, ರಾಜಸ್ಥಾನ 06
-ಉತ್ತರ ಪ್ರದೇಶ 05
-ಆಂಧ್ರಪ್ರದೇಶ 04
-ಕರ್ನಾಟಕ, ಉತ್ತರಾಖಂಡ, ಕೇರಳ, ಅಸ್ಸಾಂ 03
ಟಾಪ್ ನ್ಯೂಸ್
![Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ](https://www.udayavani.com/wp-content/uploads/2024/12/noida-2-415x255.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ](https://www.udayavani.com/wp-content/uploads/2024/12/noida-2-150x92.jpg)
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
![Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು](https://www.udayavani.com/wp-content/uploads/2024/12/boat-2-150x83.jpg)
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
![Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು](https://www.udayavani.com/wp-content/uploads/2024/12/khalid-150x103.jpg)
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
![Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು](https://www.udayavani.com/wp-content/uploads/2024/12/Modi-9-150x83.jpg)
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
![Yasin Malik](https://www.udayavani.com/wp-content/uploads/2024/12/Yasin-Malik-150x81.jpg)
SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ
MUST WATCH
ಹೊಸ ಸೇರ್ಪಡೆ
![Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ](https://www.udayavani.com/wp-content/uploads/2024/12/noida-2-150x92.jpg)
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
![ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು](https://www.udayavani.com/wp-content/uploads/2024/12/CHIKKAMAGALURU-150x98.jpg)
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
![Mulabagil](https://www.udayavani.com/wp-content/uploads/2024/12/Mulabagil-150x90.jpg)
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
![Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್](https://www.udayavani.com/wp-content/uploads/2024/12/gpar-150x93.jpg)
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
![Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ](https://www.udayavani.com/wp-content/uploads/2024/12/pet-dog-150x84.jpg)
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.