ಬ್ಯಾಂಕ್ಗಳಿಗೆ ಐತಿಹಾಸಿಕ 59,000 ಕೋಟಿ ರೂ. ಲಾಭ
Team Udayavani, Nov 9, 2022, 7:25 AM IST
ಮುಂಬೈ: ದೇಶದ ಬ್ಯಾಂಕುಗಳೆಲ್ಲ ಅತ್ಯಂತ ಸಂತೋಷದಲ್ಲಿವೆ. ಕಾರಣ ಈ ವರ್ಷದ ಸೆಪ್ಟೆಂಬರ್ಗೆ ಅಂತ್ಯವಾದ ತ್ತೈಮಾಸಿಕದಲ್ಲಿ ಬ್ಯಾಂಕುಗಳು 59,000 ಕೋಟಿ ರೂ. ನಿವ್ವಳ ಲಾಭ ಗಳಿಸಿರುವುದು!
ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಲಾಭದಲ್ಲಿ ಶೇ.57 ಹೆಚ್ಚಳವಾಗಿದೆ. ಆಗ ಬ್ಯಾಂಕುಗಳಿಗೆ 37,567 ಕೋಟಿ ರೂ. ಲಾಭ ಲಭಿಸಿತ್ತು. ಇತಿಹಾಸದಲ್ಲೇ ಯಾವುದೇ ತ್ತೈಮಾಸಿಕದಲ್ಲಿ ಈ ಪರಿಯ ಲಾಭ ಸಿಕ್ಕಿರಲಿಲ್ಲ, ಹೀಗಾಗಿ ಇದೊಂದು ದೊಡ್ಡ ಸಾಧನೆಯಾಗಿ ದಾಖಲಾಗಿದೆ.
ಪ್ರಮುಖ ಬ್ಯಾಂಕುಗಳು ಕಳೆದ ಶನಿವಾರವೇ ತಮ್ಮ ಆದಾಯ-ಲಾಭವನ್ನು ಘೋಷಿಸಿವೆ. ಹಾಗಾಗಿ ಸೋಮವಾರ ಬ್ಯಾಂಕ್ಗಳ ನಿಫ್ಟಿ ಸೂಚ್ಯಂಕ 41,779ಕ್ಕೆ ಏರಿತ್ತು. ಇದೊಂದು ದಾಖಲೆಯೂ ಹೌದು.
ಖಾಸಗಿ ಬ್ಯಾಂಕುಗಳಿಗೆ 33,165 ಕೋಟಿ ರೂ. ನಿವ್ವಳ ಲಾಭ ದೊರೆತಿದೆ. ಕಳೆದ ವಿತ್ತೀಯವರ್ಷದ ಇದೇ ಅವಧಿಗೆ ಹೋಲಿಸಿದರೆ ಲಾಭದಲ್ಲಿ ಶೇ.67 (19,868 ಕೋ.ರೂ.) ಹೆಚ್ಚಳವಾಗಿದೆ. ಇನ್ನು ಸರ್ಕಾರಿ ವಲಯದ ಬ್ಯಾಂಕುಗಳು 25,685 ಕೋ.ರೂ. ಲಾಭ ಗಳಿಸಿವೆ. ಹಿಂದಿನ ವಿತ್ತೀಯ ವರ್ಷಕ್ಕೆ ಹೋಲಿಸಿದರೆ ಇಲ್ಲಿ ಶೇ.50 (17,123 ಕೋ.ರೂ.) ಲಾಭ ಏರಿದೆ. ಸರ್ಕಾರಿ ಬ್ಯಾಂಕ್ಗಳ ಪೈಕಿ ಎಸ್ಬಿಐ (13,256 ಕೋ.ರೂ.), ಖಾಸಗಿ ಬ್ಯಾಂಕ್ಗಳ ಪೈಕಿ ಎಚ್ಡಿಎಫ್ಸಿ (10,605 ಕೋ.ರೂ.) ಗರಿಷ್ಠ ಲಾಭ ಗಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.