ಅಮೆಜಾನ್ ಕಂಪ್ಯೂಟರ್ ಸೈನ್ಸ್ ಶಿಕ್ಷಣದಿಂದ 4.5 ಲಕ್ಷ ವಿದ್ಯಾರ್ಥಿಗಳಿಗೆ ನೆರವು
Team Udayavani, Nov 10, 2022, 2:11 PM IST
ಬೆಂಗಳೂರು: ಅಮೆಜಾನ್‌ನ ಕಂಪ್ಯೂಟರ್ ಸೈನ್ಸ್ ಎಜುಕೇಶನ್ ಪ್ರೋಗ್ರಾಮ್ ಅಮೆಜಾನ್ ಫ್ಯೂಚರ್ ಇಂಜಿನಿಯರ್ (ಎಎಫ್‌ಇ) ಭಾರತದಲ್ಲಿ ಒಂದು ವರ್ಷವನ್ನು ಪೂರೈಸಿದ್ದು, ಸರ್ಕಾರಿ ಶಾಲೆಗಳ 4.5 ಲಕ್ಷ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿದೆ.
ಇಂಟರಾಕ್ಟಿವ್ ಡಿಜಿಟಲ್ ಮತ್ತು ಮೌಖಿಕ ಕಲಿಕೆ ಮೂಲಕ ಕಂಪ್ಯೂಟರ್ ಸೈನ್ಸ್ ಅನ್ನು ಕಲಿಯಲು 11 ರಾಜ್ಯಗಳ 3000 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ 4.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅಮೆಜಾನ್ ಬೆಂಬಲ ನೀಡಿದೆ. 3 ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಈ ನೆರವು ನೀಡಲಾಗಿದೆ ಮತ್ತು ಇವರು ಕಡಿಮೆ ಆದಾಯ ಹೊಂದಿರುವ ಮತ್ತು ಸಂಪನ್ಮೂಲ ಕೊರತೆ ಹೊಂದಿರುವ ಕುಟುಂಬಗಳಾಗಿವೆ. ಮೊದಲ ವರ್ಷದಲ್ಲಿ, ಕಡಿಮೆ ಆದಾಯದ ಕುಟುಂಬಗಳ ಹೆಣ್ಣುಮಕ್ಕಳಿಗೆ ಕಾರ್ಯಕ್ರಮ ಬೆಂಬಲ ನೀಡಿದೆ. ಇವರಿಗೆ ಕಂಪ್ಯೂಟರ್ ಸೈನ್ಸ್ ಶಿಕ್ಷಣವನ್ನು ಪಡೆಯಲು ವಿದ್ಯಾರ್ಥಿವೇತನಗಳನ್ನು ನೀಡಲಾಗಿತ್ತು.
ಅಮೆಜಾನ್‌ನ ಬೆಂಬಲದಿಂದ ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ ಕಲಿಕೆ ಪಯಣವನ್ನು ಇಂಟರ್‍ಯಾಕ್ಟಿವ್ ಮತ್ತು ಪ್ರಾಯೋಗಿಕ ಕಂಟೆಂಟ್‌ನೊಂದಿಗೆ ಆರಂಭಿಸಿದ್ದಾರೆ. ಇದನ್ನು ಎಎಫ್‌ಇ ಲಾಭ ರಹಿತ ಪಾಲುದಾರರು ತಮ್ಮ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಒದಗಿಸಿದ್ದಾರೆ. ಎಎಫ್‍ಇ 70 ಲ್ಯಾಬ್‌ಗಳನ್ನು ಸ್ಥಾಪಿಸಿದೆ. ಇದರಲ್ಲಿ ವಿದ್ಯಾರ್ಥಿಗಳು ಕೋಡಿಂಗ್ ಮಾಡಲು ಕಲಿತಿದ್ದಾರೆ ಮತ್ತು ರಾಸ್ಪ್‌ಬೆರಿ ಪಿಐ ಮತ್ತು ಸೆನ್ಸರ್‌ಗಳಂತಹ ಭೌತಿಕ ಕಂಪ್ಯೂಟಿಂಗ್ ಕಾಂಪೊನೆಂಟ್‌ಗಳನ್ನು ಬಳಸಿಕೊಂಡು ಲೈವ್ ಪ್ರಾಜೆಕ್ಟ್‌ಗಳನ್ನು ನಿರ್ಮಿಸಿದ್ದಾರೆ. ಡಿಜಿಟಲ್ ಅಸೆಟ್‌ಗಳ ಜೊತೆಗೆ ಈ ಲ್ಯಾಬ್‌ಗಳು ತಮ್ಮ ವಿದ್ಯಾರ್ಥಿಗಳಿಗೆ ಸಮಗ್ರ ಕಲಿಕೆ ಅನುಭವವನ್ನು ಒದಗಿಸಲು ಮತ್ತು ಕಂಪ್ಯೂಟರ್‌ಗಳು ಹಾಗೂ ತಂತ್ರಜ್ಞಾನವನ್ನು ಬಳಸಿ ಪ್ರಯೋಗ ನಡೆಸಲು ಶಾಲೆಗಳಿಗೆ ಅನುವು ಮಾಡಿವೆ. ಎಎಫ್‌ಇ ಸ್ಕಾಲರ್‌ಗಳಿಗಾಗಿ ಅಮೆಜಾನ್ ಪ್ರತಿ ವಿದ್ಯಾರ್ಥಿಗೂ 1.6 ಲಕ್ಷ ಮೊತ್ತವನ್ನು ನಾಲ್ಕು ವರ್ಷಗಳವರೆಗೆ ಒದಗಿಸಲಿದೆ. ಜೊತೆಗೆ ಅಮೆಜಾನಿಯನ್ನರಿಂದ ಮೆಂಟರ್‌ಶಿಪ್ ಮತ್ತು ಬೂಟ್‌ಕ್ಯಾಂಪ್ ಸ್ಟೈಲ್ ಕೋರ್ಸ್‌ಗಳನ್ನು ಒದಗಿಸಲಿದೆ.
ಎಎಫ್‌ಇ ಆರಂಭವಾದಂದಿನಿಂದಲೂ, ಹಲವು ರಾಜ್ಯಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಸೈನ್ಸ್ ಶಿಕ್ಷಣವನ್ನು ವ್ಯವಸ್ಥಿಕವಾಗಿ ಅಳವಡಿಸಿಕೊಳ್ಳುವುದನ್ನು ಬೆಂಬಲಿಸಲು ನಮ್ಮ ಪಾಲುದಾರ ಸಂಸ್ಥೆಗಳ ಜೊತೆಗೆ ನಾವು ಶ್ರಮಿಸುತ್ತಿದ್ದೇವೆ” ಎಂದು ಕಮ್ಯೂನಿಟಿ, ಸಿಎಸ್ಆರ್ ಇಂಡಿಯಾ ಮತ್ತು ಎಪಿಎಸಿ ವಿಭಾಗದ ಅಮೆಜಾನ್ ಮುಖ್ಯಸ್ಥೆ ಅನಿತಾ ಕುಮಾರ್ ಹೇಳಿದ್ದಾರೆ.
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಮಾತನಾಡಿ, ಮುಂದಿನ ದಶಕವು ಭಾರತಕ್ಕೆ ಟೆಕ್‌ಏಡ್ ಆಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಊಹಿಸಿದ್ದಾರೆ. ಅಮೆಜಾನ್ ಇಂಡಿಯಾದ ಫ್ಯೂಚರ್ ಇಂಜಿನಿಯರ್ಸ್ ಪ್ರೋಗ್ರಾಮ್ ಹಿಂದುಳಿದ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ಮತ್ತು ಕೌಶಲ್ಯಗಳನ್ನು ಒದಗಿಸುತ್ತದೆ ಎಂದು ನಾನು ಭಾವಿಸಿದ್ದೇನೆ. ಈ ಕಾರ್ಯಕ್ರಮದಲ್ಲಿ ಮುಂದುವರಿಯುತ್ತಿರುವ ಎಲ್ಲರಿಗೂ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನವ ಭಾರತ ಮತ್ತು ಸಬ್‌ಕಾ ಸಾಥ್, ಸಬ್‌ಕಾ ವಿಕಾಸ, ಸಬ್‌ಕಾ ವಿಶ್ವಾಸ, ಸಬ್‌ಕಾ ಪ್ರಯಾಸ್ ಅನ್ನು ಸಬಲಗೊಳಿಸುತ್ತಿರುವುದಕ್ಕೆ ನಾನು ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ : ಪ್ರತಿ ದಿನ ಒಂದು ತಾಸು ಹೆಚ್ಚು ಕೆಲಸ ಮಾಡಿ: ಸರ್ಕಾರಿ ನೌಕರರಿಗೆ ಸಿಎಂ ಬೊಮ್ಮಾಯಿ ಕರೆ
ಅಮೆಜಾನ್ ಈಗ 2023 ಸ್ಕಾಲರ್‌ಶಿಪ್‌ಗೆ ನೋಂದಣಿ: ಎರಡನೇ ವರ್ಷದಲ್ಲಿ ಸ್ಕಾಲರ್‌ಶಿಪ್‌ಗಳ ಸಂಖ್ಯೆ 500 ಕ್ಕೆ ಹೆಚ್ಚಳವಾಗಿದ್ದು, ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸುವ ಕೊನೆಯ ದಿನ 31 ಡಿಸೆಂಬರ್ 2022 ಆಗಿದೆ. ಕೇಂದ್ರ ಅಥವಾ ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆಯ ಮೂಲಕ ಇಂಜಿನಿಯರಿಂಗ್ ಕಾಲೇಜಿಗೆ ಈಗಾಗಲೇ ಅಡ್ಮಿಶನ್ ಪಡೆದ ಹೆಣ್ಣುಮಕ್ಕಳು ಮತ್ತು ಒಟ್ಟು ಕೌಟುಂಬಿಕ ವಾರ್ಷಿಕ ಆದಾಯ ರೂ. 3 ಲಕ್ಷ ಅಥವಾ ಅದಕ್ಕೂ ಕಡಿಮೆ ಇರುವವರು ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ಭಾರತವನ್ನು ಹೊರತುಪಡಿಸಿ, ಯುಎಸ್‌ಎ, ಯುಕೆ, ಫ್ರಾನ್ಸ್ ಮತ್ತು ಕೆನಡಾದಲ್ಲಿನ ಹಿಂದುಳಿದ ಸಮುದಾಯಗಳ ಕೋಟ್ಯಂತರ ಮಕ್ಕಳು ಮತ್ತು ಹದಿಹರೆಯದವರಿಗೆ ಕಂಪ್ಯೂಟರ್ ಸೈನ್ಸ್ ಶಿಕ್ಷಣವನ್ನು ಒದಗಿಸಲು ಅಮೆಜಾನ್ ಬೆಂಬಲಿಸುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.