ಇಂದು-ನಾಳೆ “ವೈದೇಹಿ ಜಗತ್ತು’ ವಿಚಾರ ಸಂಕಿರಣ


Team Udayavani, Nov 11, 2022, 5:00 AM IST

tdy-30

ಮಣಿಪಾಲ: ಮಾಹೆ ವಿ.ವಿ.ಯ ಗಾಂಧಿಯನ್‌ ಸೆಂಟರ್‌ ಫಾರ್‌ ಫಿಲಾಸಫಿಕಲ್‌ ಆರ್ಟ್ಸ್ ಅಂಡ್‌ ಸೈನ್ಸಸ್‌ (ಜಿಸಿಪಿಎಎಸ್‌) ಆಶ್ರಯದಲ್ಲಿ “ವೈದೇಹಿ ಜಗತ್ತು’- ಕನ್ನಡದ ಖ್ಯಾತ ಲೇಖಕಿ ವೈದೇಹಿಯವರ ಸಾಹಿತ್ಯದ ಕುರಿತ ವಿಚಾರ ಸಂಕಿರಣ ನ. 11 ಮತ್ತು 12ರಂದು ಮಣಿಪಾಲದ ಪ್ಲಾನಿಟೇರಿಯಂ ಸಭಾಂಗಣದಲ್ಲಿ ನಡೆಯಲಿದೆ.

ವೈದೇಹಿಯವರ ವಿವಿಧ ಸಣ್ಣಕಥೆ, ಕವನ ಮತ್ತು ಕಾದಂಬರಿಗಳ ಮೇಲೆ ಮಾತುಕತೆ, ವಿದ್ಯಾರ್ಥಿಗಳ ವಿಚಾರ ಮಂಡನೆ, ಚಿತ್ರ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವೈದೇಹಿಯವರ ಸಾಹಿತ್ಯವನ್ನು ವಿದ್ಯಾರ್ಥಿಗಳತ್ತ ಕೊಂಡೊಯ್ಯುವ ಹಾಗೂ ಸಾಹಿತ್ಯದ ಉದ್ದೇಶ ಅರಿಯುವ ಪ್ರಯತ್ನ ಇದಾಗಿದೆ.

ಗಣಕ ಲಿಪಿ ತಜ್ಞ ಪ್ರೊ| ಕೆ.ಪಿ. ರಾವ್‌ ಅವರು ನ. 11ರ ಬೆಳಗ್ಗೆ 9.30ಕ್ಕೆ ಉದ್ಘಾಟಿಸಲಿದ್ದಾರೆ. ಅನಂತರ ವೈದೇಹಿ ಅವರ ಸಣ್ಣ ಕಥೆಗಳ ಕುರಿತು ಪ್ರೊ| ರಾಜೇಂದ್ರ ಚೆನ್ನಿ, ಮಧ್ಯಾಹ್ನ ವೈದೇಹಿ ಕಾವ್ಯದ ಕುರಿತು ಪ್ರೊ| ಆಶಾದೇವಿ ಮಾತನಾಡಲಿದ್ದಾರೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ನ. 12ರ ಬೆಳಗ್ಗೆ ಪ್ರೊ| ಎನ್‌. ಮನು ಚಕ್ರವರ್ತಿ ಅವರು ವೈದೇಹಿ ಅವರ ಕಾದಂಬರಿ – “ಅಸ್ಪೃಶ್ಯರು’ (ಇಂಗ್ಲಿಷ್‌ನಲ್ಲಿ “ವಾಸುದೇವಾಸ್‌ ಫ್ಯಾಮಿಲಿ’) ಕುರಿತು ವಿಚಾರ ಮಂಡಿಸಲಿದ್ದಾರೆ. ಮಧ್ಯಾಹ್ನ ವೈದೇಹಿಯವರ ಕಥೆ ಆಧಾರಿತ “ಅಮ್ಮಚ್ಚಿ ಎಂಬ ನೆನಪು’ ಚಲನಚಿತ್ರ ಪ್ರದರ್ಶನ ಮತ್ತು ನಿರ್ದೇಶಕಿ ಚಂಪಾ ಶೆಟ್ಟಿ ಹಾಗೂ ತಂಡದಿಂದ ಸಂವಾದ ನಡೆಯಲಿದೆ. ಸಂಜೆ 4.45ಕ್ಕೆ ಲೇಖಕಿ ವೈದೇಹಿಯವರು ವಿದ್ಯಾರ್ಥಿಗಳೊಂದಿಗೆ ವಿಶೇಷ ಸಂವಾದ ನಡೆಸಲಿದ್ದಾರೆ. ಅನಂತರ ನಡೆಯುವ ಸಮಾರೋಪದ ಅಧ್ಯಕ್ಷತೆಯನ್ನು ಮಾಹೆಯ ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ವಹಿಸಲಿದ್ದಾರೆ. ಕೆಎಸ್‌ಡಿಎಸ್‌ಯುನ ವಿಶ್ರಾಂತ ಕುಲಪತಿ ಪ್ರೊ| ನೀಲಿಮಾ ಸಿನ್ಹಾ ಭಾಗವಹಿಸಲಿದ್ದಾರೆ. ವೈದೇಹಿಯವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ವೈದೇಹಿಯಂತಹ ಪ್ರಮುಖ ಲೇಖಕಿಯ ಬರಹಗಳ ಮೇಲೆ ಬೆಳಕು ಚೆಲ್ಲುವ ಸಲುವಾಗಿ ಹಾಗೂ ಕನ್ನಡೇತರ ಓದುಗರಿಗೆ ಇಂಗ್ಲಿಷ್‌ನಲ್ಲಿ ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಜಿಸಿಪಿಎಎಸ್‌ ಮುಖ್ಯಸ್ಥ ಪ್ರೊ| ವರದೇಶ್‌ ಹಿರೇಗಂಗೆ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-lll

UK ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ ರಾಜ್ಯದ ಅದಿಶ್ ರಜಿನಿಶ್ ವಾಲಿ

BBK-11: ಬಿಗ್ ಬಾಸ್ ಮನೆಗೆ ನಟಿ ಹಂಸಾ, ಮಾನಸಾ ಎಂಟ್ರಿ: ಯಾರಿವರು

BBK-11: ಬಿಗ್ ಬಾಸ್ ಮನೆಗೆ ನಟಿ ಹಂಸಾ, ಮಾನಸಾ ಎಂಟ್ರಿ: ಯಾರಿವರು

1-PT

PT Usha ತಿರುಗೇಟು; ಸ್ವಾರ್ಥ ಮತ್ತು ವಿತ್ತೀಯ ಲಾಭದ ಮೇಲೆ ಹೆಚ್ಚು ಗಮನ

BBK-11: ಬಿಗ್ ಬಾಸ್ ಮನೆಯೊಳಗೆ ಜತೆಯಾಗಿ ಹೋದ ಕಿರುತೆರೆ ಸ್ನೇಹಿತರು

BBK-11: ಬಿಗ್ ಬಾಸ್ ಮನೆಯೊಳಗೆ ಜತೆಯಾಗಿ ಹೋದ ಕಿರುತೆರೆ ಸ್ನೇಹಿತರು

Electric

Belagavi: ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ, ಮಗ ಸೇರಿ ಮೂವರು ದುರ್ಮರಣ

BBK-11: ಬಿಗ್ ಬಾಸ್‌ ಮನೆಗೆ ಬಂದ್ರು ಖಡಕ್ ‘ವಕೀಲ್ ಸಾಬ್’

BBK-11: ಬಿಗ್ ಬಾಸ್‌ ಮನೆಗೆ ಬಂದ್ರು ಖಡಕ್ ‘ವಕೀಲ್ ಸಾಬ್’

1-bahga

K.S.Bhagawan ವಿವಾದ;ಮಾನ ಮರ್ಯಾದೆ ಇದ್ದರೆ ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಬೇಕು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Udupi: ಸ್ಕೂಟರ್‌ ಮೇಲೆ ವಿದ್ಯುತ್‌ ತಂತಿ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವು

12

Manipal:ಪರ್ಕಳದ ಸಾಮಾನ್ಯ ತಂತ್ರಜ್ಞ ಆರ್‌. ಮನೋಹರ್‌ ಅಸಾಮಾನ್ಯ ಸಂಶೋಧಕರಾದ ಕುತೂಹಲಕಾರಿ ಕಥೆ

Yadhu

Udupi: ಚಾಮುಂಡಿ ಬೆಟ್ಟದ ಮೇಲೆ ಮಹಿಷ ದಸರಾ ಸರಿಯಲ್ಲ: ಸಂಸದ ಯದುವೀರ್‌

12-udupi

Yaduveer Wadiyar: ಉಡುಪಿ ಶ್ರೀಕೃಷ್ಣಮಠಕ್ಕೆ‌ ಸಂಸದ ಯದುವೀರ್‌‌ ಭೇಟಿ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-lll

UK ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ ರಾಜ್ಯದ ಅದಿಶ್ ರಜಿನಿಶ್ ವಾಲಿ

BBK-11: ಬಿಗ್ ಬಾಸ್ ಮನೆಗೆ ನಟಿ ಹಂಸಾ, ಮಾನಸಾ ಎಂಟ್ರಿ: ಯಾರಿವರು

BBK-11: ಬಿಗ್ ಬಾಸ್ ಮನೆಗೆ ನಟಿ ಹಂಸಾ, ಮಾನಸಾ ಎಂಟ್ರಿ: ಯಾರಿವರು

1-PT

PT Usha ತಿರುಗೇಟು; ಸ್ವಾರ್ಥ ಮತ್ತು ವಿತ್ತೀಯ ಲಾಭದ ಮೇಲೆ ಹೆಚ್ಚು ಗಮನ

arest

Puttur: ವಂಚನೆ ಪ್ರಕರಣದ ಆರೋಪಿ ತೆಲಂಗಾಣದಲ್ಲಿ ಬಂಧನ

accident

Kundapura: ಬೈಕ್‌ಗಳ ಮುಖಾಮುಖೀ ಢಿಕ್ಕಿ ಒಬ್ಬ ಸಾವು, ಇಬ್ಬರು ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.