ಕಿನ್ನಿಗೋಳಿ: ಪರಿಹಾರವಾಗದ ಪಾರ್ಕಿಂಗ್, ಟ್ರಾಫಿಕ್ ಸಮಸ್ಯೆ
Team Udayavani, Nov 11, 2022, 12:24 PM IST
ಕಿನ್ನಿಗೋಳಿ: ಕಿನ್ನಿಗೋಳಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ. ಇಲ್ಲಿ 15 ಕ್ಕೂ ಮಿಕ್ಕಿ ರಾಷ್ಟ್ರೀಕೃತ ಬ್ಯಾಂಕ್ ಗಳು ತಮ್ಮ ಶಾಖೆಗಳನ್ನು ಹೊಂದಿದ್ದು, ದೊಡ್ಡ ಮಟ್ಟದ ಮಾಲ್‌ಗಳು, ಅಂಗಡಿ ಮುಂಗಟ್ಟುಗಳು ನಿರ್ಮಾಣಗೊಂಡಿವೆ. ಅನೇಕ ದೊಡ್ಡ ಮನೆಗಳ ಪ್ಲಾಟ್, ಸಂಕೀìಣ ನಿರ್ಮಾಣಗೊಂಡಿದ್ದು, ಹಲವಾರು ಶಿಕ್ಷಣ ಸಂಸ್ಥೆಗಳು ಇದೆ ಆದರೇ ಬಸ್ ನಿಲ್ದಾಣದ ಪರಿಸರದಲ್ಲಿ, ಮಾರ್ಕೆಟ್‌ಬಳಿ ಪಾರ್ಕಿಂಗ್ ಹಾಗೂ ಟ್ರಾಫಿಕ್ ನಿಯಂತ್ರಣದ ದೊಡ್ಡ ಸಮಸ್ಯೆ ಎದುರಾಗಿದೆ.
ಕಿನ್ನಿಗೋಳಿ ಪೇಟೆಯಲ್ಲಿ 20 ವರ್ಷಗಳ ಹಿಂದೆ ಇದ್ದ ರಸ್ತೆ ಇಂದು ಅದೇ ಸ್ಥಿತಿಯಲ್ಲಿದೆ. ಆದರೇ ವಾಹನಗಳ ಸಂಖ್ಯೆ ಹತ್ತು ಪಟ್ಟು ಹೆಚ್ಚಿದೆ. ಅದರ ನಡುವೆ ಮಾರುಕಟ್ಟೆಗೆ, ಕಚೇರಿಗೆ ಮತ್ತಿತರ ದಿನನಿತ್ಯದ ಕೆಲಸಗಳಿಗೆ ಬರುವರ ವಾಹನಗಳು ರಸ್ತೆ ಬದಿಯಲ್ಲಿ ನಿಲುಗಡೆ, ಅಂಗಡಿಗಳಿಗೆ ಬರುವ ಸರಕು ಸಾಗಾಟಗಳ ಲಾರಿಗಳು ನಿಂತರೆ, ಮುಖ್ಯ ರಸ್ತೆಯಲ್ಲಿ ಎರಡು ವಾಹನ ಸಂಚಾರಕ್ಕೆ ಜಾಗವಿಲ್ಲ, ರವಿವಾರ ಹಾಗೂ ಸೀಸನ್ ಸಮಯದಲ್ಲಿ ಮುಖ್ಯ ರಸ್ತೆಯ ಚರ್ಚ್ ಕಟ್ಟಡದಿಂದ ಬಸ್ ನಿಲ್ದಾಣ, ಗಣೇಶ ಕಟ್ಟೆಯ ತನಕ ರಸ್ತೆಯ ಬದಿಯಲ್ಲಿ ಪಾರ್ಕಿಂಗ್ ಇರುತ್ತದೆ. ಇದರಿಂದ ಪದೇ ಪದೇ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ.
ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ದೊಡ್ಡ ತಲೆನೋವಾಗಿದೆ
ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ 200 ಕ್ಕೂ ಮಿಕ್ಕಿ ಸರ್ವಿಸ್ ಬಸ್‌ಗಳು ಬಂದು ಹೋಗುತ್ತಿವೆ. ಬಸ್ ನಿಲ್ದಾಣದ ಪಕ್ಕದಿಂದ ಗೋಳಿಜೋರ ಹಾಗೂ ಗುತ್ತಕಾಡು ಶಿಮಂತೂರು ಹಾದು ಹೋಗುವ ಸರ್ವಿಸ್ ರಸ್ತೆ ಇರುವುದರಿಂದ ಒಂದು ಬದಿಯಲ್ಲಿ ಬಸ್ ನಿಲ್ಲುವುದು ಮತ್ತೂಂದು ಬದಿಯಲ್ಲಿ ಸರ್ವಿಸ್ ರಸ್ತೆ. ಈ ಮಧ್ಯದಲ್ಲಿ ದ್ವಿಚಕ್ರ, ಕಾರು ಮುಂತಾದ ವಾಹನಗಳ ಪಾರ್ಕಿಂಗ್. ಇದರಿಂದ ದಿನ ನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆಯಾಗಿದೆ. ಈ ಹಿಂದೆ ಬಸ್ ನಿಲ್ದಾಣದ ಪಾರ್ಕಿಂಗ್ ಗೆ ಸ್ಥಳ ನಿಗದಿಪಡಿಸಲಾಗಿತ್ತು. ಕೆಲವು ಸಮಯ ಸರಿಯಾಗಿ ಪಾಲಿಸಲಾಯಿತು. ಬೆಳಗ್ಗೆ, ಸಂಜೆಯ ಸಮಯದಲ್ಲಿ ಶಾಲೆ, ಕಾಲೇಜುಗಳ ಮಕ್ಕಳು ಬಸ್ ನಿಲ್ದಾಣದ ತಂಗುದಾಣದಲ್ಲಿ ನಿಲ್ಲಲು ಜಾಗವಿಲ್ಲದೇ ಅಂಗಡಿಗಳಿಲ್ಲಿ ಸಾಲು ಗಟ್ಟಿ ನಿಲ್ಲುತ್ತಾರೆ. ಬಸ್ ನಿಲ್ದಾಣದಲ್ಲಿ ಈ ಹಿಂದೆ ಪೋಲಿಸ್ ಹೋರಠಾಣೆಯ ಕೋಣೆ ಇತ್ತು, ಈಗಿನ ಹೊಸ ಬಸ್ ನಿಲ್ದಾಣದಲ್ಲಿ ಅವಕಾಶ ಇಲ್ಲವಾಗಿದೆ. ಇಂತಹ ಜಟಿಲ ಸಮಸ್ಯೆಗೆ ಪರಿಹಾರ ಅಗತ್ಯವಾಗಿ ಕಂಡುಕೊಳ್ಳಬೇಕಾಗಿದೆ.
ಏನೂ ಮಾಡಬಹುದು
- -ಮುಖ್ಯರಸ್ತೆಯಲ್ಲಿನ ರಿಕ್ಷಾ ಪಾರ್ಕ್ ಸ್ಥಳಾಂತರಿಸಿದರೇ ಉತ್ತಮ, ಅಥವಾ ಕನಿಷ್ಟ ಐದು ರಿಕ್ಷಾಗಳಿಗೆ ಅವಕಾಶ
- -ಮುಖ್ಯ ರಸ್ತೆಯ ಇಕ್ಕಲೆಗಳಲ್ಲಿ ಫುಟ್‌ಪಾತ್ ನಿರ್ಮಾಣ .
- -ಮುಖ್ಯರಸ್ತೆಯಲ್ಲಿ ಬಸ್ ನಿಲ್ದಾಣಬಳಿ ಹಾಗೂ ಮಾರ್ಕೆಟ್ ಹತ್ತಿರ ವಾಹನ ದಟ್ಟಣೆಯನ್ನು ಟ್ರಾಫಿಕ್ ಪೊಲೀಸ್ ನಿಯುಕ್ತಿಗೊಳಿಸಬೇಕು.
- -ಗ್ರಾಹಕರಿಗೆ ಪೇಟೆಗ ಬರುವ ಗ್ರಾಹಕರ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ನಿಲ್ದಾಣ ಅಗತ್ಯವಿದೆ.
- -ಪಾದಚಾರಿಗಳಿಗೆ ರಸ್ತೆ ದಾಟಲು ನಿಗದಿತ ಝೀಬ್ರಾ ಕ್ರಾಸಿಂಗ್ ಅಗತ್ಯವಿದೆ.
- -ಅನುಗ್ರಹ ಸಭಾಭವನದ ಮುಂದುಗಡೆ ಮಂಗಳೂರು ಹಾಗೂ ಮೂಲ್ಕಿ ಹೋಗುವ ಬಸ್‌ಗಳು ನಿಲುಗಡೆಗೆ ಅವಕಾಶ ಕೊಟ್ಟರು ಸಮಯದ ಮಿತಿಯಲ್ಲಿ ಇರಬೇಕು.
- -ಪಟ್ಟಣ ಪಂಚಾಯತ್ ಆಗಿ ಪರಿವರ್ತನೆ ಗೊಂಡ ಬಳಿಕ ಸಂಚಾರ ಠಾಣೆಯ ಅಧಿಕಾರಿಗಳು ಗ್ರಾಮಸ್ಥರ ಸೇರುವಿಕೆಯಲ್ಲಿ ಸಭೆ ನಡೆದು ವ್ಯವಸ್ಥೆಯ ಬಗ್ಗೆ ಪೇಟೆಯಲ್ಲಿ ಪರಿಶೀಲನೆ ಮಾಡಲಾಯಿತು. ಆದರೇ ಕಾರ್ಯಗತವಾಗಿಲ್ಲ.
ಶಾಸಕರ ಜತೆ ಸಭೆ ನಡೆಸಿ ತಿರ್ಮಾನ: ಕೆಲವೊಂದು ಫಲಕ ಹಾಕಲು ಹಾಗೂ ನೋ ಪಾರ್ಕಿಂಗ್ ಮಾಡಲು ಜಿಲ್ಲಾಧಿಕಾರಿಗಳ ಅನುಮತಿ ಹಾಗೂ ತಾಂತ್ರಿಕ ಸಮಸ್ಯೆ ಇದ್ದು ಸದ್ರಿ ಕಿನ್ನಿಗೋಳಿ ಮುಖ್ಯರಸ್ತೆಯಲ್ಲಿ ರಿಕ್ಷಾ ಪಾರ್ಕ್ ಮಾರುಕಟ್ಟೆಯ ಬಳಿ ಸ್ಥಳಾಂತರ ಮಾಡಲಾಗಿದ್ದು ಗುರುತು ಮಾಡಿ ಕೊಡಲಾಗಿದೆ. ಇನ್ನು ಅನುಗ್ರಹ ಸಭಾಗೃಹದದ ಮುಂದೆ ರಿಕ್ಷಾ ಪಾರ್ಕ್ ಮಾಡುವಲ್ಲಿ ಹಾಗೂ ಇನ್ನಿತರ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಶಾಸಕರ ಮೂಲಕ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗಿದೆ. – ಸಾಯೀಶ್ ಚೌಟ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯತ್, ಕಿನ್ನಿಗೋಳಿ
-ರಘುನಾಥ ಕಾಮತ್ ಕೆಂಚನಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.