ಬೆಂಡೆಕಾಯಿ ಬಾಯಿಗಷ್ಟೇ ರುಚಿಯಲ್ಲ …ಆರೋಗ್ಯಕ್ಕೂ ಒಳ್ಳೆಯದು…
ಬೆಂಡೆಕಾಯಿ ಉಪಯೋಗ ಕೇಳಿದ್ರೆ ಇಂದಿನಿಂದಲೇ ತಿನ್ನಲು ಶುರು ಮಾಡ್ತೀರಾ!
ಶ್ರೀರಾಮ್ ನಾಯಕ್, Nov 11, 2022, 5:50 PM IST
ಬೆಂಡೆಕಾಯಿ ಬಾಯಿಗಷ್ಟೇ ರುಚಿಯಲ್ಲ .ಆರೋಗ್ಯಕ್ಕೂ ಒಳ್ಳೆಯದು . ಇದರ ಸೇವನೆಯಿಂದ ದೊಡ್ಡ ಕರುಳಿನ ಕ್ಯಾನ್ಸರ್, ಮಲಬದ್ಧತೆ ದೂರವಾಗುತ್ತದೆ ಹಾಗೂ ಜೀರ್ಣಕ್ರಿಯೆ ಸುಲಭವಾಗುತ್ತದೆ. ಅಲ್ಲದೆ ಹಿಮೋಗ್ಲೋಬಿನ್ ಅಂಶ ಹೆಚ್ಚಾಗಿ ರಕ್ತಹೀನತೆ ದೂರವಾಗುತ್ತದೆ. ಮಾತ್ರವಲ್ಲದೇ ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಬೆಂಡೆಕಾಯಿ ಹೇಳಿ ಮಾಡಿಸಿದ ತರಕಾರಿಯಾಗಿದೆ.
ಬೆಂಡೆಕಾಯಿಂದ ಪಲ್ಯ, ಫ್ರೈ , ಕರಿ, ಸಾಂಬಾರು, ಬೆಂಡೆಕಾಯಿ ಹುಳಿ,ಗೊಜ್ಜು ಹೀಗೆ ನಾನಾ ರೀತಿಯ ಅಡುಗೆಯನ್ನು ಮಾಡಬಹುದು.ಆದರೆ ನಾವು ಇಂದು ನಿಮಗಾಗಿ ಬೆಂಡೆಕಾಯಿ ಮಸಾಲ ಫ್ರೈ ಮತ್ತು ಬೆಂಡೆ ಪಲ್ಯವನ್ನು ಮಾಡುವ ವಿಧಾನವನ್ನು ತಿಳಿಸುತ್ತಿದ್ದೇವೆ.
ಬೆಂಡೆಕಾಯಿ ಮಸಾಲ ಫ್ರೈ
ಬೇಕಾಗುವ ಸಾಮಗ್ರಿಗಳು
ಬೆಂಡೆಕಾಯಿ-10ರಿಂದ 15, ಕೊತ್ತಂಬರಿ ಪುಡಿ-1ಚಮಚ, ಜೀರಿಗೆ ಪುಡಿ-ಅರ್ಧ ಚಮಚ, ಖಾರದ ಪುಡಿ-1ಚಮಚ, ಜೀರಿಗೆ ಪುಡಿ-ಸ್ವಲ್ಪ, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಮೊದಲಿಗೆ ಬೆಂಡೆಕಾಯಿಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ,ಒರೆಸಿ ಅದರಲ್ಲಿ ನೀರಿನಂಶ ಇದ್ದರೆ ತೆಗೆಯಿರಿ. ತದನಂತರ ಅದನ್ನು ಉದ್ದವಾಗಿ ಎರಡು ಭಾಗವಾಗಿ ಕಟ್ ಮಾಡಿ ಒಂದು ಬೌಲ್ ಗೆ ಹಾಕಿರಿ. ಆಮೇಲೆ ಇದಕ್ಕೆ ಜೀರಿಗೆ ಪುಡಿ, ಖಾರದ ಪುಡಿ, ಕೊತ್ತಂಬರಿ ಪುಡಿ, ಒಂದು ಚಮಚ ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ, ಕಾದನಂತರ ಮಿಶ್ರಣಮಾಡಿಟ್ಟ ಬೆಂಡೆಕಾಯಿಯನ್ನು ಹಾಕಿ ಎಣ್ಣೆಯಲ್ಲಿ ಕರಿಯಿರಿ.ಚಿಪ್ಸ್ ತರ ಗರಿಗರಿಯಾಗಿ ಕರಿದರೆ ರುಚಿಕರವಾದ ಬೆಂಡೆ ಮಸಾಲ ಫ್ರೈ ಸವಿಯಲು ಸಿದ್ಧ.
ಬೆಂಡೆಕಾಯಿ ಪಲ್ಯ
ಬೇಕಾಗುವ ಸಾಮಗ್ರಿಗಳು
ಬೆಂಡೆಕಾಯಿ-20ರಿಂದ 25, ಸಾಸಿವೆ-1ಚಮಚ, ಜೀರಿಗೆ-ಅರ್ಧ ಚಮಚ, ಟೊಮೆಟೋ -1, ಅರಿಶಿನ ಪುಡಿ-ಸ್ವಲ್ಪ, ಗರಂ ಮಸಾಲ-ಅರ್ಧ ಚಮಚ, ಖಾರದ ಪುಡಿ-2ಚಮಚ, ಈರುಳ್ಳಿ -1, ಶುಂಠಿ-ಬೆಳ್ಳುಳ್ಳಿ ಪೇಸ್ಟ್-1ಚಮಚ, ಎಣ್ಣೆ-3 ಚಮಚ, ಕಸೂರಿ ಮೇಥಿ-ಸ್ವಲ್ಪ ಮತ್ತು ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಮೊದಲಿಗೆ ಬೆಂಡೆಕಾಯಿಯನ್ನು ತೊಳೆದು ಸಣ್ಣದಾಗಿ ಹೆಚ್ಚಿರಿ. ನಂತರ ಒಂದು ಬಾಣಲೆಗೆ 2ಚಮಚ ಎಣ್ಣೆಯನ್ನು ಹಾಕಿ ಕಟ್ ಮಾಡಿಟ್ಟ ಬೆಂಡೆಕಾಯಿಯನ್ನು ಹಾಕಿ 2ರಿಂದ 3 ನಿಮಿಷಗಳ ಕಾಲ ಹುರಿದಿಟ್ಟುಕೊಳ್ಳಿ. ತದನಂತರ ಒಂದು ಪಾತ್ರೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ,ಈರುಳ್ಳಿ,ಟೊಮೆಟೋ,ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಬೇಯಿಸಿರಿ.ನಂತರ ಅರಿಶಿನ ಪುಡಿ,ಖಾರದ ಪುಡಿ,ಕಸೂರಿ ಮೇಥಿ,ಗರಂ ಮಸಾಲ ಪುಡಿ ಹಾಗೂ ಹುರಿದಿಟ್ಟ ಬೆಂಡೆಕಾಯಿ ಹಾಕಿ ಸರಿಯಾಗಿ ಮಿಶ್ರಣ ಮಾಡಿ ಬೇಯಿಸಿದರೆ ಬೆಂಡೆಕಾಯಿ ಪಲ್ಯ ಸವಿಯಲು ಸಿದ್ಧ. ಇದು ಚಪಾತಿ ಹಾಗೂ ಅನ್ನದ ಜೊತೆಗೆ ಚೆನ್ನಾಗಿ ಹೊಂದುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.